Home Cinema ಮಲಯಾಳಂ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಎಂಟ್ರಿ..!

ಮಲಯಾಳಂ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಎಂಟ್ರಿ..!

362
0
SHARE

ಅಭಿನಯ ಚಕ್ರವರ್ತಿ ಬಹುಭಾಷಾ ಚಿತ್ರ ನಟ ಕಿಚ್ಚ ಸುದೀಪ್ ಅಧಿಕೃತವಾಗಿ ಮಲಯಾಳಂ ಚಿತ್ರರಂಗ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಎಂದು ಗುರುತಿಸಿಕೊಂಡಿರುವ ಸುದೀಪ್ ಹಿಂದೆ ರಾಜಮೌಳಿ ನಿರ್ದೇಶನದ ಈಗ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪರಭಾಷೆಯಲ್ಲಿ ನಟಿಸಿದ ಮೊದಲ ಚಿತ್ರ ಎಂಬ ಖ್ಯಾತಿಗೆ ಒಳಗಾದರು. BIG ‘ಬಿ’ ಬಚ್ಚನ್ ಜೊತೆ ಹಿಂದಿ ಚಿತ್ರರಂಗದಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಿದ ಸುದೀಪ್. ಕಬ್ಜಾ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಭಾರತ ಚಿತ್ರರಂಗದ ಚಿತ್ರ ಎಂದುಕೊಂಡಿದ್ದ ಬಾಹುಬಲಿ ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ನಿರ್ವಹಿಸಿ ಬಹುಭಾಷಾ ನಟ ಎಂಬ ಖ್ಯಾತಿಗೆ ಸುದೀಪ್ ಒಳಗಾದರು. ಅಮಿತಾಬ್ ಬಚ್ಚನ್ ಜೊತೆ ನಟಿಸಿ ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಸುದೀಪ್ ನಂತರ ದಬಾಂಗ್ ಸರಣಿಯ ಮೂರನೇ ಅವತರಣಿಕೆಯಲ್ಲಿ ಸಲ್ಮಾನ್ ಖಾನ್ ವಿರುದ್ಧ ಪವರ್ಫುಲ್ ಖಳನಟನಾಗಿ ನಟಿಸಿ ಹಿಂದಿ ಚಿತ್ರರಂಗದಲ್ಲೂ ಸೈ ಎನಿಸಿಕೊಂಡರು.

ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುದೀಪ್. ತಮ್ಮ ಅದ್ಭುತ ನಟನೆಯ ಮೂಲಕ ಪರಭಾಷೆಯಲ್ಲೂ ಅಭಿಮಾನಿಗಳ ಮಹಾಪೂರ ಗಳಿಸಿದರು. ನಟನೆಯಲ್ಲಿ ರಾಕ್ಷಸ ಎನಿಸಿಕೊಂಡಿರುವ ಅಭಿನಯ. ಚಕ್ರವರ್ತಿ ತಮ್ಮ ಸ್ವಸಾಮರ್ಥ್ಯದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡು ಮೇಲೆತ್ತರಕ್ಕೆ ಏರಿದವರು. ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶ್ರದ್ಧೆಯಿಂದ ಚಿತ್ರ ಕರಣದಲ್ಲಿ ಭಾಗವಹಿಸುವುದರಿಂದ ಸುದೀಪ್ ಭಾರತದ ಎಲ್ಲಾ ಭಾಷೆಗಳಲ್ಲೂ ನಿರ್ದೇಶಕರು ಹಾಗೂ ನಿರ್ಮಾಪಕರಾಗಿ ಡಾರ್ಲಿಂಗ್ ಕೊಂಡಿದ್ದಾರೆ.

ದಬಾಂಗ್ 3 ಸುದೀಪ್ ಬ್ರೇಕ್ ಕೊಟ್ಟ ಚಿತ್ರ ಇದಾದನಂತರ ಸುದೀಪ್ ಫ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಕ್ರಂತ್ ರೋಣ ಸುದೀಪ್ ರವರ ಬಹುನಿರೀಕ್ಷಿತ ಬಹುಭಾಷಾ ಚಿತ್ರ. ?ಕೋಟಿಗೊಬ್ಬ 3 ಕೂಡ ಸುದೀಪ್ ರವರ ಬಹುನಿರೀಕ್ಷಿತ ಚಿತ್ರ. ಕನ್ನಡ, ತೆಲುಗು, ತಮಿಳು, ಹಿಂದಿ, ಚಿತ್ರರಂಗದಲ್ಲಿ ನಟಿಸಿದ್ದಾರೆ. ಆದರೆ ಇದುವರೆಗೂ ಕೂಡ ಮಲಯಾಳಂ ಚಿತ್ರದಲ್ಲಿ ಸುದೀಪ್ ನಟಿಸುವ ಅವಕಾಶ ದೊರೆತಿರಲಿಲ್ಲ ಈಗ ಅವಕಾಶ ಕನ್ನಡದ ಉಪೇಂದ್ರ ನಟಿಸುತ್ತಿರುವ ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರದ ಮೂಲಕ ಸುದೀಪ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸುದೀಪ್ ರವರ ಪತ್ನಿ ಪ್ರಿಯಾ ಮೂಲತಹ ಕೇರಳದವರು.ಸುದೀಪ್ ರವರು ಮಲಯಾಳಂ ಚಿತ್ರರಂಗದಲ್ಲಿ ನಟಿಸಬೇಕು ಎನ್ನುವುದು ಬಹಳ ದಿನಗಳ ಆಸೆಯಾಗಿತ್ತು. ಪತ್ನಿ ಪ್ರಿಯಾ ರವರ ಆಸೆಯನ್ನ ಸುದೀಪ್ ಅವರ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಕನ್ನಡ, ಮಲಯಾಳಂ, ತೆಲುಗು-ತಮಿಳಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜಾ ಚಿತ್ರದ ಮೂಲಕ ಸುದೀಪ್ ಕೂಡ ಮಲಯಾಳಂ ಚಿತ್ರಕ್ಕೆ ಎಂಟ್ರಿ ಕೊಟ್ಟಂತಾಯಿತು.

ಮುಕುಂದ ಮುರಾರಿ ಚಿತ್ರದ ನಂತರ ಉಪೇಂದ್ರ ಹಾಗೂ ಸುದೀಪ್ ಈಗ ಕಬ್ಜಾ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಕಬ್ಜಾ ಚಿತ್ರದ ನಿರ್ದೇಶಕ ಆರ್ ಚಂದ್ರು ರವರ ಮನವಿಯ ಮೇರೆಗೆ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡ ಮತ್ತೆ ರಿಯಲ್ ಸ್ಟಾರ್ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಬ್ಜಾ ಚಿತ್ರದ ಮೇಕಿಂಗ್ ವಿಡಿಯೋವನ್ನು ನೋಡಿ ಫಿದಾ ಆಗಿರುವ ಸುದೀಪ್ ಚಂದ್ರುರವರ ಮನವಿಗೆ ಓಗೊಟ್ಟು ಕಬ್ಜಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here