Home District ಮಲ್ಲಿಕಾರ್ಜುನ ಖರ್ಗೆ ಮಾಸ್ಟರ್ ಸ್ಟ್ರೋಕ್ ಗೆ ಉಮೇಶ್ ಜಾಧವ್ ತತ್ತರ..ಮಾಜಿ MLC ಕೆ.ಬಿ ಶಾಣಪ್ಪ BJPಗೆ...

ಮಲ್ಲಿಕಾರ್ಜುನ ಖರ್ಗೆ ಮಾಸ್ಟರ್ ಸ್ಟ್ರೋಕ್ ಗೆ ಉಮೇಶ್ ಜಾಧವ್ ತತ್ತರ..ಮಾಜಿ MLC ಕೆ.ಬಿ ಶಾಣಪ್ಪ BJPಗೆ ಗುಡ್ ಬೈ.!

3058
0
SHARE

ಮಾಜಿ ಸಚಿವ ಕೆ.ಬಿ.ಶಾಣಪ್ಪ ಬಿಜೆಪಿಗೆ ಗುಡ್ ಬೈಹೇಳಿದ್ದಾರೆ. ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್‌ರನ್ನ ಘೋಷಿಸಿದಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಯಲ್ಲಿ ಮಾತನಾಡಿದ ಅವರು, ಹಿರಿಯನಾದ ನನ್ನ ಜೊತೆ ಚರ್ಚಿಸದೆ ಜಾಧವ್‌ರನ್ನ ಅಭ್ಯರ್ಥಿಯಾಗಿ ಘೋಷಿಸಿರುವುದು ನನಗೆ ತೀವ್ರ ಬೇಸರ ತಂದಿದೆ. ಬಿ.ಎಸ್‌.ಯಡಿಯೂರಪ್ಪನವರು ಪಕ್ಷವನ್ನ ಕಟ್ಟಿದ್ದಾರೆ.

ಆದರೆ ಅವರ ನಡವಳಿಕೆಗಳು ನನಗೆ ಹಿಡಿಸುತ್ತಿಲ್ಲ, ಅವರ ನಡವಳಿಕೆಯಿಂದ ನನಗೆ ಉಸಿರುಗಟ್ಟೋ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ನನಗೆ ಪಕ್ಷದಲ್ಲಿ ಇರೋದಕ್ಕೆ ಸಾಧ್ಯವಿಲ್ಲವೆಂದರು. ಪ್ರಧಾನಿಯವರಾಗಲಿ ಅಥವಾ ಯಡಿಯೂರಪ್ಪನವರಾಗಲಿ ಜಾಧವ್‌ರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿಲ್ಲ.

ಆದರೆ ಉಮೇಶ್ ಜಾಧವ್ ತಾವೇ ಸ್ವತಃ ಅಭ್ಯರ್ಥಿಯನ್ನಾಗಿ ಹೇಳಿಕೊಳ್ಳುತ್ತಿದ್ದು, ಈ ಥರ ಬೆಳವಣಿಗೆ ಎಲ್ಲೂ ನೋಡಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ನಾನು ಬಿಜೆಪಿ ಬಿಡುತ್ತಿದ್ದೇನೆ ಅಷ್ಟೆ, ಸಧ್ಯಕ್ಕೆ ಯಾವುದೇ ಪಕ್ಷಕ್ಕೆ ಹೋಗಲ್ಲ ಅಂತಾ ಸ್ಪಷ್ಟಪಡಿಸಿದರು.ಯಾರಿಗೂ ಕೇಳದೆ ಕಲಬುರಗಿ ಲೋಕಸಭಾ ಕ್ಷೇತ್ರದ ಟಿಕೆಟ್ ನ್ನು ಡಾ.ಉಮೇಶ್ ಜಾಧವ್ ಗೆ ನೀಡ್ತಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ನಿನ್ನೆಯಷ್ಟೇ ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಸೇರ್ತಾರೆ ಅಂತಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು.

LEAVE A REPLY

Please enter your comment!
Please enter your name here