Home District ಮಳೆಯ ಆರ್ಭಟಕ್ಕೆ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಚಾಲಕ..?! ರಾತ್ರಿಯಿಡೀ ಈಜಿ ಸಾವು ಗೆದ್ದು ಬಂದ...

ಮಳೆಯ ಆರ್ಭಟಕ್ಕೆ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಚಾಲಕ..?! ರಾತ್ರಿಯಿಡೀ ಈಜಿ ಸಾವು ಗೆದ್ದು ಬಂದ ಧೀರ..!!

861
0
SHARE

ಉತ್ತರ ಕರ್ನಾಟಕದ ಭಾಗದಲ್ಲಿ ಮಳೆರಾಯ ಅವಾಂತರ ಸೃಷ್ಠಿಸಿದ್ದಾನೆ. ಮಳೆಯಿಂದಾಗಿ ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ. ಇತ್ತ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಮಳೆಯ ಆರ್ಭಟಕ್ಕೆ ಟ್ರಾಕ್ಟರ್ ಸಮೇತ ಚಾಲಕನೊರ್ವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದವನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗದಗ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಮುಂಡರಗಿಯ ನಾಗರಳ್ಳಿ ಬಳಿ ಉಕ್ಕಿ ಹರಿಯುತ್ತಿರುವ ಹಿರೇಹಳ್ಳದ ಸೇತುವೆ ದಾಟಲು ಹೋಗಿ ಟ್ರ್ಯಾಕ್ಟರ್ ಸಮೇತ ಸಹೋದರರಿಬ್ಬರು ಕೊಚ್ಚಿ ಹೋಗಿದ್ದರು. ಸಹೋದರರಲ್ಲಿ ಹಿರಿಯವನಾದ ಅಣ್ಣ ವಿಜಯಕುಮಾರ್ ರಾತ್ರಿಯೇ ಈಜಿ ದಡ ಸೇರಿದ್ರೆ, ತಮ್ಮ ಶಿವಕುಮಾರ್ ನೀರಲ್ಲಿ ಕೊಚ್ಚಿ ಹೋಗಿದ್ದ.

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಚಾಲಕ ಶಿವಕುಮಾರನಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರೊಂದಿಗೆ ಶೋಧಕಾರ್ಯ ನಡಸಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಕ್ರೇನ್ ತರಿಸಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಟ್ರಾಕ್ಟರ್ ಮೇಲೆತ್ತುವ ಕಾರ್ಯ ಮಾಡಿದ್ರು. ಆದ್ರೆ ಚಾಲಕ ಶಿವಕುಮಾರ್ ಪವಾಡ ಎಂಬಂತೆ ಸಾವನ್ನೆ ಗೆದ್ದು ಬಂದಿದ್ದಾನೆ. ರಾತ್ರಿಯಿಡೀ ಕತ್ತಲಲ್ಲಿ ಈಜಿ ದಡ ಸೇರಿದ್ದಾನೆ.

ರಾತ್ರಿ ಹಳ್ಳದಲ್ಲಿ ಟ್ರ್ಯಾಕ್ಟರ್ ಉರುಳುತ್ತಿದ್ದಂತೆ ಚಾಲಕ ಶಿವಕುಮಾರ್ ಸುಮಾರು ಮೂರು ಕಿಲೋ ಮೀಟರ್ ಈಜಿ ಪ್ರಾಣ ಉಳಿಸಿಕೊಂಡಿದ್ದಾನೆ. ಮೂರು ಕಿಲೋಮೀಟರ್ ಈಜಿದ್ದರಿಂದ ಸುಸ್ತಾದ ಶಿವಕುಮಾರ ಅಲ್ಲಿಯೇ ಮಲಗಿದ್ದನಂತೆ. ಆದ್ರೆ, ಶಿವಕುಮಾರ ನೀರಲ್ಲಿ ಕೊಚ್ಚಿ ಹೋಗಿದ್ದಾನೆ ಅಂತ ಇಡೀ ಕುಟುಂಬ ಗಾಬರಿಯಾಗಿತ್ತು.

ಅಷ್ಟೆ ಅಲ್ಲ ವಿಜಯದಶಮಿ ಹಬ್ಬದ ಸಡಗರ ಮಾಯವಾಗಿತ್ತು. ಚಾಲಕ ಶಿವಕುಮಾರ್ ಸಿಕ್ಕಿದ್ದರಿಂದ ಮನೆ ಮಂದಿಯೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ.ಇನ್ನು ಚಾಲಕ ಶಿವಕುಮಾರ ಕೊಪ್ಪಳ ತಾಲೂಕಿನ ಹೈದರ್ ನಗರ ತಾಂಡಾ ನಿವಾಸಿಯಾಗಿದ್ದು, ಸುಮಾರು ಮೂರು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ ಟ್ರ್ಯಾಕ್ಟರ್ ಹೊರತೆಗೆದಿದ್ದಾರೆ. ಏನೇ ಇರಲಿ ಬದುಕಿ ಬಂತಲ್ಲಾ ಬಡ ಜೀವ ಅಂತ ಎಲ್ಲರೂ ಖುಷಿ ಪಟ್ಟಿದ್ದಾರೆ.

 

LEAVE A REPLY

Please enter your comment!
Please enter your name here