Home Crime ಮಸೀದಿ ಲೆಕ್ಕ ಕೇಳಿದ್ದಕ್ಕೆ ಸಹೋದರರ ಮೇಲೆ ಅಟ್ಯಾಕ್..! RTEಯಲ್ಲಿ ಮಾಹಿತಿ ಕೋರಿದ್ದಕ್ಕೆ ತಲೆಯೇ ಓಪನ್..!

ಮಸೀದಿ ಲೆಕ್ಕ ಕೇಳಿದ್ದಕ್ಕೆ ಸಹೋದರರ ಮೇಲೆ ಅಟ್ಯಾಕ್..! RTEಯಲ್ಲಿ ಮಾಹಿತಿ ಕೋರಿದ್ದಕ್ಕೆ ತಲೆಯೇ ಓಪನ್..!

605
0
SHARE

ಮಸೀದಿ ಅಂದ್ರೆ ಅದು ಮುಸಲ್ಮಾನರ ಪುಣ್ಯ ಸ್ಥಳ.. ಇಂತಹ ಪುಣ್ಯ ಸ್ಥಳದಲ್ಲಿ ಅನ್ಯಾಯ ಅಕ್ರಮ ನಡೀತಿದ್ಯಲ್ಲಪ್ಪ ಅಂತ ಇಬ್ಬರು ಈ ಬಗ್ಗೆ ಆರ್ ಟಿ ಐಗೆ ಪತ್ರ ಬರೆದಿದ್ರು.. ಅದಕ್ಕೆ ಕೋಪಗೊಂಡ ಕೆಲ ಖದೀಮರು ಪತ್ರ ಬರೆದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಹೀಗೆ ಈ ಒಬ್ಬರು ಕೂಡ ನಾಗವಾರದಲ್ಲಿರುವ ಉಮರ್ ಬಿನ್ ರತಾಬ್ ಎಂಬ ಮಸೀದಿಯಲ್ಲಿ ಆಗುತ್ತಿದ್ದ ಅನ್ಯಾಯವನ್ನು ಕಂಡಿದ್ರು.. ಇದರ ಬಗ್ಗೆ ಮಾಹಿತಿ ಪಡೆದು ನಂತರ ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ ಅಂತ ನಿರ್ಧಾರ ಮಾಡಿದ್ರು.. ಇದೇ ಕಾರಣಕ್ಕೆ ಕಳೆದ ತಿಂಗಳು ಮಸೀದಿಯ ಬಗ್ಗೆ ಆರ್ ಟಿ ಐ ಗೆ ಪತ್ರ ಬರೆದಿದ್ದಾರೆ.

ಅಷ್ಟಕ್ಕೆ ಅಲ್ಲಿನ ಆಡಳಿತ ಮಂಡಳಿಯವ್ರು ಆರ್ ಟಿಐಗೆ ಪತ್ರ ಬರೆದು ನೀವೇನು ಮಾಹಿತಿ ಪಡೆಯೋದು ನಾವೇ ಮಾಹಿತಿ ಕೊಡ್ತೀವಿ ಅಂತ ಮಾರಾಕಾಸ್ತ್ರಗಳಿಂದ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.ಹೀಗೆ.. ಕಳೆದ ತಿಂಗಳ 28 ನೇ ತಾರೀಖಿನಂದು ಜವಾದ್ ಹಾಗೂ ಇಲಿಯಾಸ್ ತಮ್ಮ ಕೆಲಸ ಮುಗುಸಿಕೊಂಡು ರಾತ್ರಿ ನಾಗವಾರದಲ್ಲಿರುವ ಉಮರ್ ನಗರದಿಂದ ತಮ್ಮ ಮನೆಗೆ ತೆರಳ್ತಾಯಿರ್ತಾರೆ.. ಇದೇ ಸಮಯಕ್ಕೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ಐದರಿಂದ ಆರು ಜನರ ಗ್ಯಾಂಗ್ ಈ ಇಬ್ಬರನ್ನು ತಮ್ಮತ್ತ ಕರೆದಿದೆ..

ಪರಿಚಯಸ್ಥರಲ್ವ ಅಂತ ಜವಾದ್ ಹಾಗೂ ಇಲಿಯಾಸ್ ಆ ಗ್ಯಾಂಗ್ ಬಳಿ ತೆರಳಿದ್ದಾರೆ.. ಆಗ ಈ ಗ್ಯಾಂಗ್ ಅವಾಶ್ಯ ಶಬ್ಧಗಳಿಂದ ನಿಂದಿಸಿದಲ್ಲದೇ, ತಮ್ಮ ಕೈನಲ್ಲಿದ್ದ ಮಾರಕಾಸ್ತ್ರಗಳಿಂದ ತಲೆ ಸೇರಿದಂತೆ ಕೈ ಮೈ ಭಾಗಕ್ಕೆಲ್ಲ ಹಲ್ಲೆ ಮಾಡಿದ್ದಾರೆ.ಹಲ್ಲೆಯ ತೀವ್ರತೆಯಿಂದ ಇಬ್ಬರು ಕೂಡ ಅಲ್ಲಿಯೇ ಕುಸಿದು ಬಿದ್ದಿದ್ದಾರೆ, ನಂತರ ಅಲ್ಲಿನ ಸ್ಥಳೀಯರ ಸಹಾಯದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ..

ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ‌ ಕಾರಣ ಸದ್ಯ ಇಬ್ಬರನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ..ಇನ್ನು ಈ ಬಗ್ಗೆ ಹಲ್ಲೆ ಮಾಡಿದವರ ಮೇಲೆ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆಬಿಸಿದ್ದಾರೆ. ಒಟ್ನಲ್ಲಿ ಮಸೀದಿಯ ನಿರ್ವಹಣೆಯ ಮಾಹಿತಿ ಪಾರದರ್ಶಕವಾಗಿರಲಿ ಅಂತಾ ಕೇಳಿದ್ದಕ್ಕೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿರೋದು ಮಾತ್ರ ವಿಪರ್ಯಾಸ.

LEAVE A REPLY

Please enter your comment!
Please enter your name here