Home Cinema “ಮಹಿಳಾ ದಿನಾಚರಣೆ” ದಿನ,“ಅಪ್ಪು” ಕೊಟ್ಟಿದ್ದೇನು ಪತ್ನಿಗೆ..? ಹೊಡಿರಿ ಶಿಳ್ಳೆ ನಯಾ “ಅತಿಥಿ” ಬಂದ್ಳು “ಪುನೀತ್” ಮನೆಗೆ..!

“ಮಹಿಳಾ ದಿನಾಚರಣೆ” ದಿನ,“ಅಪ್ಪು” ಕೊಟ್ಟಿದ್ದೇನು ಪತ್ನಿಗೆ..? ಹೊಡಿರಿ ಶಿಳ್ಳೆ ನಯಾ “ಅತಿಥಿ” ಬಂದ್ಳು “ಪುನೀತ್” ಮನೆಗೆ..!

479
0
SHARE

ಪುನೀತ್ ರಾಜ್‌ಕುಮಾರ್… ನಟಸಾರ್ವಭೌಮ ಸಕ್ಸಸ್ ಜೋಷಿನಲ್ಲಿರುವ ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ನಟ. ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅಪ್ಪು ತಮ್ಮ ಬಹುದಿನದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾರೆ.

ಮಹಿಳಾ ದಿನದಂದೇ ನಯಾ ಅತಿಥಿಯನ್ನು ಬ್ಯೂಟಿಫುಲ್ ಸ್ಮೈಲ್ ನೊಂದಿಗೆ ಪುನೀತ್ & ಪತ್ನಿ ಅಶ್ವಿನಿ ಜೊತೆ ಸೇರಿ ವೆಲ್ ಕಂ ಮಾಡಿಕೊಂಡಿದ್ದಾರೆ.ಯಸ್.. ಪುನೀತ್ ರಾಜ್‌ಕುಮಾರ್, ಪತ್ನಿ ಅಶ್ವಿನಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಬ್ಯೂಟಿಫುಲ್ ಕಾಸ್ಟ್ಲೀ ಗಿಫ್ಟೋಂದನ್ನು ನೀಡಿದ್ದಾರೆ. ಅದು ಅಂತಿಥ ಕಾಸ್ಟೀ ಗಿಫ್ಟ್ ಅಲ್ಲ.. ೫ ಕೋಟಿ ಬೆಲೆಬಾಳುವ ನೀಲಿ ಬಣ್ಣದ ಸುಂದರ ಲ್ಯಾಂಬೋರ್ಗಿನಿ ಕಾರನ್ನು ಪತ್ನಿ ಅಶ್ವಿನಿಗೆ ಪುನೀತ್ ಉಡುಗೋರೆಯಾಗಿ ನೀಡಿದ್ದಾರೆ.

ಹಾಗಾಗಿನೇ ಸದಾಶಿವನಗರದಲ್ಲಿರುವ ಅಪ್ಪು ಮನೆಗೆ ನೀಲಿ ಸುಂದರಿಯೊಬ್ಬಳು ಎಂಟ್ರಿಕೊಟ್ಟಿದ್ದು. ಅಪ್ಪು ಮನಸ್ಸಿನಲ್ಲಿದ್ದ ಬಹುದಿನಗಳ ಆಸೆಯೊಂದು ಈಡೇರಿಸಿದ್ದಾಳೆ.ಚಿಕ್ಕಂದಿನಿಂದ್ಲೂ ಬೈಕ್ ಹಾಗೂ ಕಾರ್ ಬಗ್ಗೆ ಅಪ್ಪು ಎಲ್ಲಿಲ್ಲದ ಕ್ರೇಜ್‌ನ್ನು ಇಟ್ಟುಕೊಂಡಿದ್ದಾರೆ. ಸದಾ ಹೊಸತನವನ್ನು ಬಯಸುವ ಅಪ್ಪು ಸದ್ಯ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ತಮ್ಮ ಮನೆಗೆ ಪ್ರೀತಿಯಿಂದ ಬರ ಮಾಡಿಕೊಂಡಿದ್ದು. ಪತ್ನಿ ಜೊತೆಗೆ ಒಂದು ರೈಡ್ ಹೋಗಿಬಂದಿದ್ದಾರೆ.

ಇನ್ನು ಅಪ್ಪು ಮನೆಗೆ ನೀಲಿ ಲ್ಯಾಂಬೋರ್ಗಿನಿ ಕಾರು ಬಂದಿಳಿದಿದ್ದೇ ತಡ ದೊಡ್ಮನೆಯಲ್ಲಿಯೂ ಸಂಭ್ರಮ ಮನೆ ಮಾಡಿದೆ. ಸದಾ ಹೆಣ್ಣನ್ನು ದೇವರಂತೆ ಕಾಣುವ ದೊಡ್ಮನೆಯಲ್ಲಿ ಮಹಿಳಾ ದಿನದ ಅಂಗವಾಗಿ, ಅಪ್ಪು ಪತ್ನಿಗೆ ನೀಡಿರುವ ಗಿಫ್ಟ್ ಕಂಡು ಸಂತಸಗೊಂಡಿದ್ದು. ಕಾರ್ ನೋಡಿ ಸಂಭ್ರಮವನ್ನು ಹೆಚ್ಚಿಸಿಕೊಂಡಿದ್ಧಾರೆ.ಈಗಾಗಲ್ಲೇ ಪವರ್ ಸ್ಟಾರ್ ಬಳಿ ಜಾಗ್ವಾರ್, ಆಡಿ ಹಾಗೂ ಮಿನಿ ಕೂಪರ್‌ನಂತಹ ಐಶಾರಾಮಿ ಕಾರುಗಳ ಒಡೆಯನಾಗಿರುವ ಅಪ್ಪು, ತಮ್ಮ ಕಾರ್ ಲಿಸ್ಟ್‌ನಲ್ಲಿ ಲ್ಯಾಂಬೋರ್ಗಿನಿ ಕಾರ್ ಸೇರಿಕೊಂಡಿದ್ದು.

ಇದೀಗ ತಮ್ಮ ಬಹುದಿನದ ಕನಸ್ಸಿನ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸುವ ಮೂಲಕ ತಮ್ಮ ಕಾರ್ ಡ್ರೀಮ್‌ನ್ನು ಫುಲ್‌ಫಿಲ್ ಮಾಡಿಕೊಂಡಿದ್ದಾರೆ. ತಮ್ಮ ಪ್ರೀತಿಯ ಮಡದಿಗೆ ಗೀಫ್ಟಾಗಿ ನೀಡುವ ಮೂಲಕ ಸಂತಸಗೊಂಡಿದ್ದಾರೆ. ಅಪ್ಪು ಅವರ ಪತ್ನಿ ಅಶ್ವಿನಿ ಅವರಿಗೆ ಈ ಕಾರು ಖರೀದಿಸಬೇಕೆಂಬ ಮೊದಲಿಂದ್ಲೂ ಇತ್ತಂತೆ. ಹಾಗಾಗಿನೇ ಮಹಿಳಾ ದಿನದ ಸ್ಪೆಷಲ್ ಆಗಿ ಅಪ್ಪು ೫ ಕೋಟಿ ಬೆಲೆಯ ಕಾರನ್ನು ಪತ್ನಿಗೆ ಗಿಫ್ಟಾಗಿ ನೀಡುವ ಮೂಲಕ ಸದಾಶಿವನಗರದ ದೊಡ್ಮನೆಗೆ ಈಗ ಲ್ಯಾಂಬೋರ್ಗಿನಿ ಎಂಟ್ರಿಕೊಟ್ಟಿರೋದು ಅಪ್ಪು ಫ್ಯಾನ್ಸ್ ಬಳಗದಲ್ಲಿ ಸಂತಸ ಮನೆ ಮಾಡಿದೆ.ಇನ್ನು ಈಗಾಗಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿ ಲ್ಯಾಂಬೋರ್ಗಿನಿ ಎಂಬ ಕಾಸ್ಟ್ರೀ ಕಾರ್‌ಗಳ ಒಡೆಯರಾಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಬಳಿ ನೀಲಿ ಮತ್ತು ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಕಾರುಗಳ ಕೆಲೆಕ್ಷನ್ ಇದ್ದು. ಒಂದೇ ಕಂಪನಿಯ ಎರಡು ಕಾರ್‌ಗಳು ಬೇರೆ ಬೇರೆ ಫೀಚರ‍್ಸ್‌ಗಳನ್ನು ಹೊಂದಿದೆ. ಚಾಲೆಂಜಿಂಗ್ ಸ್ಟಾರ್‌ಗೆ ನೀಲಿ ಬಣ್ಣದ ಲ್ಯಾಂಬೋರ್ಗಿಯನ್ನು ಪತ್ನಿ ವಿಜಯ್ ಲಕ್ಷ್ಮಿ ಬರ್ತ್‌ಡೇ ಪ್ರಮುಖ ನೀಡುವ ಮೂಲಕ ದಾಸನ ದಿಲ್ ಇಂಪ್ರೆಸ್ ಮಾಡಿದ್ರು. ಇತ್ತೀಚೆಗೆ ದಚ್ಚು ವೈಟ್ ಬಣ್ಣದ ಕಾರನ್ನು ರಾಜರಾಜೇಶ್ವರಿ ನಗರಕ್ಕೆ ಪ್ರೀತಿಯಿಂದ ಬರಮಾಡಿಕೊಂಡಿದ್ರು. ಮೈಸೂರು ಬೆಂಗಳೂರು ರೋಡ್‌ನಲ್ಲಿ ತಮ್ಮ ಪ್ರೀತಿಯ ಕಾರಿನಲ್ಲಿ ಒಡಾಟ ನಡೆಸಿ ಅಭಿಮಾನಿಗಳಿಗೆ ದರ್ಶನ ನೀಡಿದ್ರು.

ಅಷ್ಟೇ ಅಲ್ಲದೆ. ಸಿಎಂ ಪುತ್ರರಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ಬಳಿ ಕೂಡ ಆರೆಂಜ್ ಬಣ್ಣದ ಲ್ಯಾಂಬೋರ್ಗಿ ಲ್ಯಾಂಬೋರ್ಗಿನಿ ಕಾರು ಇದ್ದು. ಬೆಂಗಳೂರಿನ ಪ್ರಮುಖ ರೋಡ್‌ನಲ್ಲಿ ಜೂಮ್‌ನಲ್ಲಿ ನಿಖಿಲ್ ಲ್ಯಾಂಬೋರ್ಗಿಯ ಜೊತೆಗೆ ಒಡಾಟ ಮಾಡಿದ್ದಾರೆ. ಕಾಸ್ಟ್ರಿ ಕಾರ್ ನೋಡಿದ ಕೆಲವರ ಕಾರ್ ಪ್ರಿಯರ್ ಕಾರು ನೋಡಿ ವಿಡಿಯೋ ಮತ್ತು ಪೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್ ಸ್ಟಾರ್‌ಗಳಲ್ಲಿ ಮೂವರು ಈ ಕಾಸ್ಟ್ಲೀ ಕಾರು ಒಡೆಯರಾಗುವ ಮೂಲಕ ತಮ್ಮ ಕಾಸ್ಟ್ಲೀ ಕಾರ್ ಕ್ರೇಜ್‌ನಿಂದ ಅಭಿಮಾನಿಗಳ ಚಿತ್ತ ಕದಿಯುತ್ತಿದ್ದಾರೆ.

ಅದೇನೇ ಇದ್ರು.. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿಗೆ ದುಬಾರಿ ಕಾರನ್ನು ಗಿಫ್ಟ್ ನೀಡುವ ಮೂಲಕ ಮುದ್ದಿನ ಹೆಂಡತಿಯ ಜೊತೆಗೆ ಅರ್ಥಪೂರ್ಣ ಮಹಿಳಾ ದಿನಾಚರಣೆಯನ್ನು ಅಪ್ಪು ಆಚರಿಸಿಕೊಂಡಿದ್ದಾರೆ. ಈ ಮೂಲಕ ಸಾಕಷ್ಟು ದಿನಗಳ ತಮ್ಮ ಆಸೆಯೊಂದನ್ನು ಅಪ್ಪು ಡ್ರೀಂ ಕಂ ಟ್ರೂ ಮಾಡಿಕೊಂಡಿದ್ದಾರೆ. ಇದಲ್ವ ಪವರ್ ಸ್ಟಾರ್ ಅಸಲಿ ಪವರ್ ಅಂದ್ರೆ.

LEAVE A REPLY

Please enter your comment!
Please enter your name here