Home Crime ಮಹಿಳೆಯ ಜಡೆಗೆ ಕೈ ಹಾಕಿದ ಭೂಪ, ಜೇಬಲ್ಲಿದ್ದ ಕತ್ತರಿ ತಗೊಂಡು ಕೂದಲರ್ಧ ಕಟ್..!! ಬಸ್‌ನಲ್ಲೇ ಧರ್ಮದೇಟು...

ಮಹಿಳೆಯ ಜಡೆಗೆ ಕೈ ಹಾಕಿದ ಭೂಪ, ಜೇಬಲ್ಲಿದ್ದ ಕತ್ತರಿ ತಗೊಂಡು ಕೂದಲರ್ಧ ಕಟ್..!! ಬಸ್‌ನಲ್ಲೇ ಧರ್ಮದೇಟು ತಿಂದ ಭೂಪ…

367
0
SHARE

ಸಿಲಿಕಾನ್ ಸಿಟಿ ಹೆಣ್ಮಕ್ಳೇ ನೀವು ದಿನ ನಿತ್ಯ ಬಿಎಂಟಿಸಿ ಬಸ್ನಲ್ಲಿ ಓಡಾಡ್ತೀರಾ… ಹಾಗಾದ್ರೆ ಇನ್ಮುಂದೆ ಸ್ವಲ್ಪ ಹುಷಾರಾಗಿರಿ.. ಬಸ್ನಲ್ಲಿ ಸ್ವಲ್ಪ ಯಾಮಾರಿದ್ರೆ, ನಿಮ್ಮ ಅರಿವಿಗೇ ಬಾರದೆ ಖತರ್ನಾಕ್ ಆಸಾಮಿಗಳು ನಿಮ್ಮ ತಲೆ ಕೂದಲಿಗೆ ಕತ್ತರಿ ಹಾಕಿರ್ತಾರೆ. ಅಂತದ್ದೊಂದು ಘಟನೆ ನಗರದಲ್ಲಿ ನಡೆದಿದ್ದು, ಆತನ ನಸೀಬು ಕೆಟ್ಟಿ ಸಖತ್ತಾಗಿಯೇ ಒದೆ ತಿಂದಿದ್ದಾನೆ.

ಹೆಸ್ರು ರಾಜು. ಶ್ರೀನಿವಾಸ ನಗರದ ಡಾ, ರಾಜ್ ರೋಡ್ ರಸ್ತೆಯಲ್ಲಿ ವಾಸವಾಗಿದ್ದಾನೆ.. ಇನ್ನು ಇವ್ನು ಒದೆ ತಿನ್ನೋ ಕಾರಣ ಕೇಳಿದ್ರೆ, ನೀವು ಶಾಕ್ ಆಗೋದು ಗ್ಯಾರಂಟಿ.. ಅಷ್ಟಕ್ಕೂ ಇವ್ನೇನು ಸರ ಕದ್ದಿಲ್ಲ  ಜೇಬಿಗೆ ಕತ್ತರಿ ಹಾಕಿಲ್ಲ .. ಮಹಿಳೆಯರ ಬಳಿ ಅಸಭ್ಯವಾಗಿ ನಡೆದುಕೊಂಡಿಲ್ಲ… ಆದ್ರೆ ಮಹಿಳೆಯೊಬ್ಬರ ತಲೆ ಕೂದಲಿಗೆ ಕತ್ತರಿ ಹಾಕೋಕೆ ಹೋಗಿ ತಗಲಾಕ್ಕೊಂಡು, ಸಖತ್ತಾಗಿ ಒದೆ ತಿಂದಿದ್ದಾನೆ.

ಯಸ್, ನೆನ್ನೆ ಸಂಜೆ ಮೆಜೆಸ್ಟಿಕ್ ಕಡೆಯಿಂದ ಕತ್ರಿಗುಪ್ಪೆ ಮಾರ್ಗವಾಗಿ ಬಿಎಂಟಿಸಿ ಬಸ್ ಹೊರಟಿತ್ತು.. ಈ ನಡುವೆ ಕತ್ರಿಗುಪ್ಪೆ ಕಡೆ ಹೊರಟಿದ್ದ ಮಹಿಳೆಯರು ಕುಳಿತಿದ್ದ ಹಿಂಬದಿ ಸೀಟ್ನಲ್ಲೇ ಆಸಾಮಿ ರಾಜು ಕುಳಿತಿದ್ದಾನೆ.. ಹಾಗೇ ಮಹಿಳೆಯ ಜಡೆಗೆ ಕೈ ಹಾಕಿದ್ದ ಭೂಪ , ಜೇಬಲ್ಲಿದ್ದ ಕತ್ತರಿ ತಗೊಂಡು ಕೂದಲರ್ಧ ಕಟ್ ಮಾಡಿದ್ದಾನೆ..

ಈ ನಡುವೆಯೇ ಅವರ ಪಕ್ಕದಲ್ಲಿದ್ದ ಮಹಿಳೆಯ ಸಂಬಂಧಿಕರು ನೋಡಿ ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಬಳಿಕ ಹನುಮಂತನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.. ಮೊದಲೇ ಒದೆ ತಿಂದು ಸುಸ್ತಾಗಿದ್ದ ರಾಜು ಸ್ಥಿತಿ ನೋಡಿ ಬೈದು ಕಳಿಸಿದ್ದಾರೆ..

ಇನ್ನು ಪತ್ಯಕ್ಷದರ್ಶಿಗಳು ಹೇಳೋ ಪ್ರಕಾರ ಕತ್ತಿನಲ್ಲಿದ್ದ ಸರ ಕದಿಯಲು ಹೋಗಿ , ಕೂದಲು ಕತ್ತರಿಸರಬಹುದು ಅಂತಾರೆ.. ಅದೇನೇ ಇರಲಿ ಬಸ್ ಹತ್ತಿದಾಗ ಸ್ವಲ್ಪ ಎಚ್ಚರಿಕೆಯಲ್ಲಿದ್ರೆ ಒಳ್ಳೇದು ಅನ್ನೋದೆ ನಮ್ಮ ಅಭಿಪ್ರಾಯ..

LEAVE A REPLY

Please enter your comment!
Please enter your name here