Home Crime ಮಹಿಳೆ ಜೊತೆ ಫೋನಿನಲ್ಲೇ ರೊಮ್ಯಾನ್ಸ್..!! ಫೋನಲ್ಲೇ ಕಿಸ್ ಪಡೆದ ಕಿಸ್ ಕಿಂಗ್ ಅಧಿಕಾರಿ..?!

ಮಹಿಳೆ ಜೊತೆ ಫೋನಿನಲ್ಲೇ ರೊಮ್ಯಾನ್ಸ್..!! ಫೋನಲ್ಲೇ ಕಿಸ್ ಪಡೆದ ಕಿಸ್ ಕಿಂಗ್ ಅಧಿಕಾರಿ..?!

460
0
SHARE

ಸರ್ಕಾರ ಜನರ ಒಳಿತಿಗೆ ಅಂತ ಯೋಜನೆಗಳನ್ನು ರೂಪಿಸಿದ್ರೆ, ಆ ಯೋಜನೆಗಳ ನೀಡೋ ನೆಪದಲ್ಲಿ ಕೆಲ ಅಧಿಕಾರಿಗಳು ತಮ್ಮ‌ ಕಾಮ ತೃಷೆ ತೀರಿಸಿಕೊಳ್ತಿದ್ದಾರೆ. ಇಂತಹುದೇ ಘನಾಂದಾರಿ ಕೆಲಸವೊಂದನ್ನು ಗದಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಾಡಿರೋ ಆರೋಪವೀಗ ಕೇಳಿಬಂದಿದ್ದು, ಅವರ ಸಂಭಾಷಣೆಯೀಗ, ಫುಲ್ ವೈರಲ್ ಆಗಿದೆ. ಆದ್ರೆ ಈಗ ಮಹಿಳೆ ಮತ್ತು ಸಹಾಯಕ ನಿರ್ದೇಶಕ ಇಬ್ರೂ ಆ ವಾಯ್ಸ್ ನಮ್ದಲ್ವೇ ಅಲ್ಲ ಅಂತಿದ್ದಾರೆ.

ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತಾಡ್ತಿರೋ ಸರ್ಕಾರಿ ಅಧಿಕಾರಿ… ಯೋಜನೆ ಕೊಡಿಸೋದಾಗಿ ಆಮೀಷವೊಡ್ಡಿ ಮಹಿಳೆಯನ್ನು ಬಲೆಗೆ ಬೀಳಿಸಿಕೊಂಡಿರೋ ಕಾಮುಕ……ಮೊಬೈಲ್ ನಲ್ಲೇ ಕಿಸ್ ಪಡೆದ ಕಿಸ್ಸೇಶ್ವರ…..ಎಸ್ ಇದನ್ನೆಲ್ಲಾ ಮಾಡಿರೋದು ಜವಾಬ್ದಾರಿಯುತ ಸ್ಥಾನದಲ್ಲಿರೋ ಸರ್ಕಾರಿ ಅಧಿಕಾರಿ….ಗದಗ ಜಿಲ್ಲೆಯ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಮೇಲೆ ಇಂತದ್ದೊಂದು ಗಂಭೀರ ಆರೋಪ ಕೇಳಿ ಬಂದಿದೆ.

ಅಧಿಕಾರ ದುರ್ಬಳಕೆ ಮಾಡಿಕೊಂಡಿರೋ ಶರಣು ಗೋಗೇರಿ ಸರ್ಕಾರದ ಕೆಲ ಯೋಜನೆಯ ಅನುಕೂಲಗಳನ್ನು ಕೊಡಿಸ್ತೀನಿ ಅಂತೇಳಿ ಮಹಿಳೆಯೊಬ್ಬಳನ್ನು ಬಲೆಗೆ ಕೆಡವಿಕೊಂಡಿದ್ದಾನೆ ಎನ್ನೋ ಆರೋಪವೀಗ ಕೇಳಿಬಂದಿದೆ. ಇದಕ್ಕೆ ಸಾಕ್ಷಿಯೆನ್ನೋವಂತೆ ಮಾತಾಡಿರೋ ಆಡಿಯೋ ಸಹ ವೈರಲ್ ಆಗಿದೆ. ಅಲ್ದೆ ಆಕೆಯೊಂದಿಗೆ ಗದಗ ನಗರದಲ್ಲಿನ ಕನ್ನಡ ಸಾಹಿತ್ಯ ಭವನದ ಕಟ್ಟಡದಲ್ಲಿಯೇ ಕಾಮಕೇಳಿ‌ ನಡೆಸಿದ್ದಾನೆ ಎನ್ನಲಾಗಿದೆ.

ಇನ್ನು ಡಯಟ್ ನಲ್ಲಿ ಜ್ಯೂನಿಯರ್ ಲೆಕ್ಚರರ್ ಆಗಿ ಕೆಲಸ ಮಾಡ್ತಿರೋ ಶರಣು ಗೋಗೇರಿಗೆ ಗದಗ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕನ ಹುದ್ದೆಯನ್ನು ಬಳುವಳಿಯಾಗಿ ನೀಡಿದೆ. ಸಾಲದ್ದಕ್ಕೆ ಈತ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷನೂ ಹೌದು ಇಷ್ಟೆಲ್ಲಾ ಜವಾಬ್ದಾರಿಯುತ ಸ್ಥಾನದಲ್ಲಿರೋ ಈ ಗೋಗೇರಿ, ಆ ಸ್ಥಾನಗಳಿಗಾದ್ರೂ ಬೆಲೆ ನೀಡೋ ಹಾಗೆ ನಡೆದುಕೊಳ್ಳಬೇಕಿತ್ತು ಅನ್ನೋ ಮಾತುಗಳು ಕೇಳಿಬರ್ತಿದೆ.

ಇನ್ನು ಈ ಕಾಮಪುರಾಣದ ಬಗ್ಗೆ ಪ್ರತಿಕ್ರಿಯೆ ಪಡೆಯೋಣ ಅಂದ್ರೆ ಮಹಾಶಯರು ಕೈಗೆ ಸಿಗುತ್ತಿಲ್ಲ. ಅಲ್ಲದೆ ಆ ವಾಯ್ಸ್ ತಮ್ಮದಲ್ಲ ಅಂತ ಆಪ್ತರ ಬಳಿ ಹೇಳಿಕೆ ಕೊಟ್ಟಿದ್ದಾರಂತೆ.ಒಟ್ಟಾರೆ ಇವರು ಮಾತಾಡಿರೋದು ನಿಜವೋ ಸುಳ್ಳೋ ಗೊತ್ತಿಲ್ಲ. ಆದ್ರೆ ಅವರ ಹೆಸರಲ್ಲಿ ಆಡಿಯೋ ವೈರಲ್ ಆಗಿರೋದಂತೂ ಸತ್ಯ. ಒಟ್ಟಾರೆ ಇದರಲ್ಲಿ ಸತ್ಯವೆಷ್ಟು ಸುಳ್ಳೆಷ್ಟು ಅನ್ನೋದನ್ನು ಆ ಇಬ್ಬರೇ ತಿಳಿಸಬೇಕಾಗಿದ್ದು, ಅವರಿಬ್ರೂ ಈಗ ತಮ್ಮದೇನೂ ತಪ್ಪಿಲ್ಲ ಎನ್ನುತ್ತಾ ಒಡಾಡ್ತಿದ್ದಾರೆ.

LEAVE A REPLY

Please enter your comment!
Please enter your name here