Home Crime ಮಹಿಳೆ ಮೊದಲ ಗಂಡನನ್ನ ಬಿಟ್ಟು ಫೇಸ್ಬುಕ್ ಪ್ರೀತಿಯನ್ನ ನಂಬಿ ಹೋಗಿದ್ದಕ್ಕೆ, ಇಂದು ಸೆಲ್ಫಿ ಸೂಸೈಡ್….!

ಮಹಿಳೆ ಮೊದಲ ಗಂಡನನ್ನ ಬಿಟ್ಟು ಫೇಸ್ಬುಕ್ ಪ್ರೀತಿಯನ್ನ ನಂಬಿ ಹೋಗಿದ್ದಕ್ಕೆ, ಇಂದು ಸೆಲ್ಫಿ ಸೂಸೈಡ್….!

1027
0
SHARE

ಜೀವನದಲ್ಲಿ ತೆಗೆದುಕೊಳ್ಳೊ ಎಲ್ಲಾ ಸಣ್ಣ ನಿರ್ಧಾರಗಳು ಕೂಡ ಜೀವನವನ್ನ ಬದಲಿಸತ್ತೆ… ಅಂತಾದ್ರಲ್ಲಿ ಮದುವೆಯೆಂಬ ದೊಡ್ಡ ವಿಚಾರದಲ್ಲಿ ತೆಗೆದುಕೊಳ್ಳು ನಿರ್ಧಾರ ಬಹಳ ಪ್ರಮುಖವಾಗಿರತ್ತೆ… ಇಲ್ಲೂ ಒಬ್ಬ ಮಹಿಳೆ ಮೊದಲ ಗಂಡನನ್ನ ಬಿಟ್ಟು ಪೇಸ್ ಬುಕ್ ಪ್ರೀತಿಯನ್ನ ನಂಬಿ ಹೋಗಿದ್ದಕ್ಕೆ, ಇಂದು ಸೆಲ್ಫಿ ಸೂಸೈಡ್ ಮಾಡಿಕೊಂಡಿದ್ದಾಳೆ.

ಬದುಕಿ ಬಾಳೋ ವಯಸ್ಸು, ಜೀವನದಲ್ಲಿ ನೋಡಲು ಕಟ್ಟಿದ ಸಾಕಷ್ಟು ಕನಸ್ಸುಗಳು ಹಾಗೇ ಇದ್ವು. ಆದ್ರೆ ಜೀವನದಲ್ಲಿ ಈಕೆ ತೆಗೆದುಕೊಂಡಿದ್ದ ಒಂದು ತಪ್ಪು ನಿರ್ಧಾರ ಈಕೆಯನ್ನ ಸೆಲ್ಫಿ ಸೂಸೈಡ್ ಮಾಡಿಕೊಳ್ಳುವಂತೆ ಮಾಡ್ಬಿಟ್ಟಿತು. ಕಳೆದ ಐದು ವರ್ಷಗಳ ಹಿಂದೆ ಪುರಣ್ ಎಂಬಾತನನ್ನ ಮದುವೆಯಾಗಿದ್ದ ಅಂಕಿತ, ಮೂರು ವರ್ಷದ ಹಿಂದೆ ಮಗುವಿಗೂ ಜನ್ಮ ನೀಡಿದ್ಲು.

ಆದ್ರೆ ಮೊದಲ ಗಂಡ ಪ್ರತಿನಿತ್ಯ ನೀಡ್ತಿದ್ದ ಹಿಂಸೆ ತಾಳಲಾರದೇ, ಆತನಿಂದ ದೂರಾಗಿ ಫೇಸ್ಬುಕ್ ನಲ್ಲಿ ಪರಿಚಿತನಾತ ಸೋನಂ ಎಂಬಾತನನ್ನ ಮದುವೆಯಾಗಿದ್ಳು. ಮನೆಯವರ ವಿರೋಧದ ನಡುವೆಯೂ ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಸೋನಂ, ಸಾಕಷ್ಟು ಕನಸು ಕಟ್ಟಿದ್ಳು. ಆದ್ರೆ ಎರಡನೇ ಮದುವೆಯಾದ ಸೋನಂ ಕೂಡ ಕೆಲವೇ ದಿನಗಳಲ್ಲಿ ಮೊದಲ ಗಂಡನ ವರಸೆಯನ್ನೇ ಮುಂದುವರಿಸಿದ್ದ.

ಇದಕ್ಕೆ ಮನನೊಂದ ಅಂಕಿತಾ ಪೂಜಾರ್ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಇತ್ತ ನಿನ್ನೆ ಮನೆಯವರೆಲ್ಲ ನೀಲಸಂದ್ರ ಬಳಿ ಫಂಕ್ಷನ್ ಗೆಂದು ತೆರಳಿದ್ರು. .ಯಾರು ಇಲ್ಲದ ವೇಳೆ,‌ ಮನೆಯೊಳಗೆ ತನ್ನ ಮೊದಲ ಪತಿ ಹಾಗೂ ತಂದೆ ತಾಯಿಯನ್ನ ನೆನೆದು ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾಳೆ.

ಇಂದು ಬೆಳಿಗ್ಗೆ ಪಕ್ಕದ ಮನೆಯವರು ಹೋಗಿ ನೋಡಿದಾಗ ಯುವತಿಗೆ ಆತ್ಮಹತ್ಯೆ ‌ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಸದ್ಯ ಘಟನೆ ಸಂಬಂಧ ಕೇಸು ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಅಂಕಿತಾಳ ಎರಡನೇ ಪತಿ ಸೋನಂ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here