Home Home ಮಹೇಂದ್ರ ಸಿಂಗ್ ಧೋನಿಯನ್ನು ಸಾಕ್ಷಿ ಸಿಂಗ್ ಆರು ತಿಂಗಳು ಆಟ ಆಡಿಸಿದ್ದು ಯಾಕೆ….!!?

ಮಹೇಂದ್ರ ಸಿಂಗ್ ಧೋನಿಯನ್ನು ಸಾಕ್ಷಿ ಸಿಂಗ್ ಆರು ತಿಂಗಳು ಆಟ ಆಡಿಸಿದ್ದು ಯಾಕೆ….!!?

406
0
SHARE

ರಾಂಚಿಯ ರಾಂಬೊ ಭಾರತ ತಂಡದ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರು, ಇದರಿಂದ ವಿಶ್ವದ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಬೇಸರ ಉಂಟುಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಜೀವನ ಎಷ್ಟು ರೋಚಕವೂ ಅಷ್ಟೇ ರೋಚಕ ಅವರ ಖಾಸಗಿ ಜೀವನ ಕೂಡ. ಉದ್ದನೆಯ ಕೂದಲಿನ ಹುಡುಗ, ಹಾಲುಗೆನ್ನೆಯ ಮುಖದ ಸುಂದರಾಂಗ ಮಹೇಂದ್ರ ಸಿಂಗ್ ಧೋನಿ ಭಾರತ ತಂಡಕ್ಕೆ ವಿಕೆಟ್ ಕೀಪರ್ ಆಗಿ ಪಾದಾರ್ಪಣೆ ಮಾಡಿದಾಗ ತನ್ನ ಚಾಕಚಕ್ಯತೆಯ ಮೂಲಕ ಚಿರತೆಯಂತೆ ಭಾರತ ತಂಡದಲ್ಲಿ ಭರವಸೆಯನ್ನು ಮೂಡಿಸಿದರು.

ಅಷ್ಟೇ ಅಲ್ಲದೆ ಭಾರತದ ಕ್ರಿಕೆಟರ್ ಜೀವನ ಕೂಡ ಅಷ್ಟೇ ರೋಮಾಂಚನ, ಧೋನಿ ಹಾಗೂ ಪತ್ನಿ ಸಾಕ್ಷಿ ಸಿಂಗ್ ಬೇಟಿಯಾಗಿದ್ದು ಹೇಗೆ ಅವರ ಲವ್ ಸ್ಟೋರಿ ಹೇಗೆ ಒಂದು ಸಿನಿಮಾ ಸ್ಟೋರಿ ಆಗಿತ್ತು ಎಂಬುದನ್ನು ನಾವು ಹೇಳುತ್ತೇವೆ.ಧೋನಿ ಹುಟ್ಟಿದ್ದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ. ಒಂದು ಮಧ್ಯಮ ಕುಟುಂಬದಲ್ಲಿ ಜನಿಸಿದ ಮಹೇಂದ್ರ ಸಿಂಗ್ ಧೋನಿ, ಬಾಲ್ಯದ ಜೀವನ ಹಾಗೂ ಶಿಕ್ಷಣವನ್ನ ಕಳೆದಿದ್ದು ರಾಂಚಿಯ ಗಲ್ಲಿಗಲ್ಲಿಗಳಲ್ಲಿ.. ಇನ್ನು ಸಾಕ್ಷಿ ಸಿಂಗ್ ಜನಿಸಿದ್ದು ಅಸ್ಸಾಂ ರಾಜ್ಯದಲ್ಲಿ. ಸಾಕ್ಷಿ ಅವರ ಕುಟುಂಬ ಅಲ್ಲೇ ನೆಲೆಸಿತ್ತು ತಂದೆ ಟೀ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸಾಕ್ಷಿ ಸಿಂಗ್ ತಮ್ಮ ಬಾಲ್ಯದ ಶಾಲೆಯ ದಿನಗಳನ್ನು ಅಸ್ಸಾಂನ ರಾಜಧಾನಿ ಗುವಾಹಟಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ಓದಿದರು. ಪ್ರಮುಖ ವಿಚಾರ ಎಂದರೆ ಭಾರತದ ಖ್ಯಾತ ಚಿತ್ರನಟಿ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಧರ್ಮಪತ್ನಿ ಅನುಷ್ಕಾ ಶರ್ಮಾ ಕೂಡ ಒಟ್ಟಿಗೆ ಓದುತ್ತಿದ್ದರು.

ಅನುಷ್ಕಾ ಶರ್ಮ ಒಂದರಿಂದ ನಾಲ್ಕನೇ ತರಗತಿಯವರೆಗೆ ಶಾಲಾ ಸಹಪಾಠಿಗಳು ಎಂಬುದು ಗಮನಾರ್ಹವಾದ ವಿಚಾರ.ನಾಲ್ಕನೇ ತರಗತಿಯವರೆಗೆ ಅಸ್ಸಾಂನಲ್ಲಿ ಓದಿದ ಸಾಕ್ಷಿ ಸಿಂಗ್ ಮುಂದೆ ಸೇರಿದ್ದು ರಾಂಚಿಯ ವಿದ್ಯಾಮಂದಿರ ಶಾಲೆಗೆ, ಇಲ್ಲಿ ಇವರ ಸೀನಿಯರ್ ಮಹೇಂದ್ರ ಸಿಂಗ್ ಧೋನಿ, ಆದರೆ ಆ ಶಾಲೆಯಲ್ಲಿ ಇವರಿಬ್ಬರೂ ಪರಿಚಿತರಾಗಲಿಲ್ಲ.ದಿನಕಳೆದಂತೆ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದಲ್ಲಿ ಸ್ಥಾನ ಪಡೆದರು, ಭಾರತದ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ಅವರ ಹೆಸರು ಕೂಡ ವಿಶ್ವಕ್ರಿಕೆಟ್ ಭೂಪಟದಲ್ಲಿ ಕಾಣಿಸಿಕೊಳ್ಳತೊಡಗಿತ್ತು.

ಇತ್ತ ಸಾಕ್ಷಿ ಸಿಂಗ್ ಹೈಸ್ಕೂಲ್ ಶಿಕ್ಷಣವನ್ನು ತಾತನ ಊರಾದ ಡೆಹ್ರಾಡೂನ್ ನಲ್ಲಿ ಮುಗಿಸಿ ಅಲ್ಲೇ ಪಿಯು ಓದಿ, ಔರಂಗಾಬಾದ್ ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಸೇರ್ಪಡೆಯಾದ ಸಾಕ್ಷಿ ,ಇಂಟರ್ನ್ಶಿಪ್ ಗಾಗಿ ಕೋಲ್ಕತ್ತಾದ ಹೋಟೆಲ್ ತಾಜ್ ನಲ್ಲಿ ಸೇರಿದರು. ಇಲ್ಲಿಂದ ಆರಂಭವಾಯಿತು ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿಯ ಲವ್ ಸ್ಟೋರಿ.

2007 ರಲ್ಲಿ ಭಾರತದ ಪ್ರವಾಸ ಮಾಡಿದ್ದ ಪಾಕಿಸ್ತಾನದ ವಿರುದ್ಧ ಪಂದ್ಯ ಆಡಲು ಕೋಲ್ಕತ್ತಾಗೆ ಬಂದು ಭಾರತ ತಂಡ ಉಳಿದುಕೊಂಡಿದ್ದು ಬಂಗಾಳದ ಪಂಚತಾರಾ ಹೋಟೆಲ್ ತಾಜ್. ಸುರ ಸುಂದರ ಮುಖದ ಗುಳಿ ಕೆನ್ನೆಯ ತೆಳ್ಳಗಿನ ಬೆಳ್ಳಗಿನ ಹುಡುಗಿ ಹೋಟೆಲ್ ರಿಸೆಪ್ಷನ್ ನಲ್ಲಿ ಭಾರತ ತಂಡವನ್ನು ಬರಮಾಡಿಕೊಂಡಳು. ಮಹೇಂದ್ರ ಸಿಂಗ್ ಧೋನಿಗೆ ತಿಲಕ ಇಡುವಾಗ ಮೊದಲ ನೋಟದಲ್ಲೇ, ಸಾಕ್ಷಿಯ ಮೊದಲ ನೋಟಕ್ಕೆ ಮಹೇಂದ್ರ ಸಿಂಗ್ ಧೋನಿ ಬೋಲ್ಡ್ ಆದರು.ಟೆಸ್ಟ್ ಪಂದ್ಯ ಆಡಲು ಬಂದಿದ್ದ ಭಾರತ ತಂಡ ಆರು ದಿನಗಳ ಕಾಲ ಉಳಿದುಕೊಂಡಿತ್ತು. ದಿನವೂ ಕ್ರಿಕೆಟ್ ಆಟದ ನಂತರ ಹೋಟೆಲ್ ಕೊಠಡಿಗೆ ಬಂದ ಧೋನಿ ಸಾಕ್ಷಿಯ ಬೆನ್ನ ಹಿಂದೆಯೇ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಧೋನಿಯ ಗೆಳೆಯ ತಾಜ್ ಹೋಟೆಲ್ ನ ಮ್ಯಾನೇಜರ್ ಯುದ್ಧಜಿತ್ ಸಿಂಗ್ ಮಹೇಂದ್ರ ಸಿಂಗ್ ಧೋನಿಯ ತೊಳಲಾಟವನ್ನು ಕಂಡು ಸಾಕ್ಷಿ ಸಿಂಗ್ ರನ್ನು ಪರಿಚಯ ಮಾಡಿಕೊಟ್ಟರು.

ಮೊದಲ ಪರಿಚಯದಲ್ಲಿ ನಂಬರ್ ತೆಗೆದುಕೊಂಡ ಧೋನಿ ನಂತರ ಸಾಕ್ಷಿಗೆ ಮೆಸೇಜ್ ಮಾಡಲು ಆರಂಭಿಸಿದರು. ಮೊದಮೊದಲು ಸಾಕ್ಷಿ ಮಹೇಂದ್ರ ಸಿಂಗ್ ಧೋನಿಯ ಮೆಸೇಜ್ಗೆ ಉತ್ತರಿಸುತ್ತಿರಲಿಲ್ಲ, ಇದನ್ನು ತಮ್ಮ ಸ್ನೇಹಿತ ಯುದ್ಧಜಿತ್ ಸಿಂಗ್ ರ ಬಳಿ ಧೋನಿ ತೋಡಿಕೊಂಡರು. ಸ್ನೇಹಿತನ ಪ್ರೀತಿಯ ತೊಳಲಾಟವನ್ನು ಕಂಡ ಯುದ್ಧಜಿತ್ ಒಂದು ಉಪಾಯ ಮಾಡಿ ಸಾಕ್ಷಿ ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ಒಂದು ಪಾರ್ಟಿ ಏರ್ಪಾಟು ಮಾಡಿ ಪಾರ್ಟಿಗೆ ಮಹೇಂದ್ರಸಿಂಗ್ ಧೋನಿಯನ್ನು ಕೂಡ ಕರೆದರು. ಹುಟ್ಟುಹಬ್ಬದ ಪಾರ್ಟಿಯಿಂದ ಆರಂಭವಾಯಿತು ಧೋನಿ ಹಾಗೂ ಸಾಕ್ಷಿಯ ಸ್ಟೋರಿ ಇವರಿಬ್ಬರೂ ಕೂಡ ಭಾರತದ ಬೆಸ್ಟ್ ಕಪಲ್ ಗಳಾಗಿ ಮುಂದೆ ಮದುವೆಯಾಗಿ ಸುಖ ಸಂಸಾರದ ನೊಗವನ್ನು ಎಳೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here