Home Crime ಮಾಜಿ ಉಪರಾಷ್ಟ್ರಪತಿ ಕುಟುಂಬದವ್ರಿಗೆ ಪೊಲೀಸ್ರಿಂದ ಕಿರುಕುಳ.?!! ಮಧ್ಯರಾತ್ರಿ ಕರೆ ಮಾಡಿ ಕಂತೆ ಕಂತೆ ಕೇಳ್ತಾರಂತೆ ACP..?!!

ಮಾಜಿ ಉಪರಾಷ್ಟ್ರಪತಿ ಕುಟುಂಬದವ್ರಿಗೆ ಪೊಲೀಸ್ರಿಂದ ಕಿರುಕುಳ.?!! ಮಧ್ಯರಾತ್ರಿ ಕರೆ ಮಾಡಿ ಕಂತೆ ಕಂತೆ ಕೇಳ್ತಾರಂತೆ ACP..?!!

407
0
SHARE

ಆಕೆ ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿಯ ಸೊಸೆ, ಅವರ ಮೇಲೆ ಅದೇನ್ ಕೋಪವಿದ್ಯೋ ಗೊತ್ತಿಲ್ಲ. ಎಸ್ ಟಿಪಿ ಕ್ಲೀನಿಂಗ್ ವೇಳೆ ಸಂಭವಿಸಿದ ಒಂದ ದುರಂತವನ್ನೆ ಬಂಡವಾಳ ಮಾಡಿಕೊಂಡು ದುಡ್ ಕೀಳ್ತಿದ್ದಾರಂತೆ. ಕೇಳಿದಾಗೆಲ್ಲ ದುಡ್ ಕೊಟ್ಟು ಕೊಟ್ಟು ಸುಸ್ತಾದ ಬಿ.ಡಿ.ಜತ್ತಿಯವ್ರ ಸೋಸೆ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ.

ಹಣಕ್ಕಾಗಿ ಪೊಲೀಸ್ರು ಸಣ್ಣ ಪುಟ್ಟವ್ರನ್ನ ಕಾಡೋದು, ಹೆದರಿಸೋದು ಕಾಮನ್. ಆದ್ರೆ ಯಾರು ಅದನ್ನ ಪ್ರಶ್ನಿಸೋದಕ್ಕೆ ಹೋಗೋದಿಲ್ಲ. ಸಾಕಪ್ಪ ಸಾಕು ಪೊಲೀಸ್ರು ಸಹವಾಸ. ಅಷ್ಟೋ ಇಷ್ಟೋ ಕೊಟ್ಟು ಸ್ಟೇಷನ್ ನಿಂದ ಹೊರ ಬಂದ್ರೆ ಸಾಕು ಅಂತ ಇರೋ ಅಲ್ಪ ಸ್ವಲ್ಪ ಕಾಸನ್ನ ಪೊಲೀಸ್ರ ಜೇಬಿಗಾಕಿ ವಾಪಸ್ಸಾಗ್ತಾರೆ.

ಆದ್ರೆ, ಇಲ್ಲೊಬ್ಬರು ಪ್ರಕರಣದಿಂದ ಹೊರ ಬರೋದಕ್ಕೆ ಕೊಟ್ಟ ಹಣವೇ ಇವತ್ತು ಅವ್ರ ಪಾಲಿಗೆ ದೊಡ್ಡ ಸಂಕಟವಾಗಿದ್ದು, ಪೊಲೀಸ್ರ ನಿರಂತರ ಕಿರುಕುಳಕ್ಕೆ ಕಾರಣವಾಗಿದೆ. ಇಷ್ಟಕ್ಕು ಕಿರುಕುಳ ಅನುಭವಿಸ್ತಿರೋ ಮಹಿಳೆಯೇ ಈ ಲಕ್ಷ್ಮಿ ಜತ್ತಿ.ಇವ್ರು ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿಯವ್ರ ಸೊಸೆ. ಬೆಂಗಳೂರಿನ ವೈಟ್ ಫೀಲ್ಡ್ ಸಮೀಪ ಇವ್ರಿಗೆ ಸೇರಿದ ವಿಲ್ಲಾ ಗಳಿದ್ದು, ಒಂದ್ರಲ್ಲಿ ಇವ್ರು ವಾಸವಾಗಿದ್ದಾರೆ.

ಇದ್ರ ಮಧ್ಯೆ ಕಳೆದ ವರ್ಷ ಎಸ್ ಟಿ ಪಿ ಘಟಕ ಕ್ಲೀನ್ ಮಾಡುವ ವೇಳೆ ಪೃಥ್ವಿರಾಜ್ ಎಂಬ ಕಾರ್ಮಿಕ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಲಕ್ಷ್ಮಿ ಜತ್ತಿಯವ್ರನ್ನು ಆರೋಪಿಯನ್ನಾಗಿ ಸೂಚಿಸಿದ್ದು, ಚಾರ್ಜ್ ಶೀಟ್ ನಿಂದ ಹೆಸ್ರು ಕೈ ಬಿಡುತ್ತೇವೆಂದು ಲಕ್ಷ್ಮಿ ಜತ್ತಿಯವ್ರ ಬಳಿ ಅಂದಿನ ಎಸಿಪಿಯಾಗಿದ್ದ ಸುಧಾಮನಾಯಕ್ 5 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದು, ಹಣವನ್ನ ಪಡೆದಿದ್ರಂತೆ.

ಬಳಿಕ ವೈಟ್ ಫೀಲ್ಡ್ ಪೊಲೀಸ್ ಸ್ಟೇಷನ್ ನ ಸಬ್ ಇನ್ಸ್ ಪೆಕ್ಟರ್ 2 ಲಕ್ಷ ರೂಪಾಯಿ ತೆಗೆದುಕೊಂಡು ಚಾರ್ಜ್ ಶೀಟ್ ನಿಂದ ಹೆಸ್ರು ಕೈ ಬಿಟ್ಟಿಲ್ಲವಂತೆ. ಸದ್ಯ ಆ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿದೆ.. ಇದರ ಮಧ್ಯೆ ಎಸಿಪಿ ಸುಧಾಮನಾಯಕ್ ರಾತ್ರಿ 11 ಗಂಟೆ ಮೇಲೆ ಫೋನ್ ಮಾಡೋದು, ಹಣ ಕೇಳೋದು ವಿಲ್ಲಾ ಒಂದ್ ಕೊಟ್ರೆ ಸುಮ್ನಾಗ್ತೇವೆ ಅಂತ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡ್ತಾ ಕಿರುಕುಳ ನೀಡ್ತಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರನ್ನ ಭೇಟಿ ಮಾಡಿದ್ದ ಲಕ್ಷ್ಮಿ ಜತ್ತಿ ಅಂಡ್ ಫ್ಯಾಮಿಲಿ, ತಾವು ಅನುಭವಿಸ್ತಿರೋ ಕಿರುಕುಳದ ಬಗ್ಗೆ ವಿವರಣೆ ನೀಡಿದ್ದಾರೆ.. ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ವಿಭಾಗ ಡಿಸಿಪಿಯವ್ರಿಗೆ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here