Home Crime ಮಾಜಿ CM ಸಿದ್ದರಾಮಯ್ಯ ಮೇಲೆ ಮತ್ತೊಂದು ದೂರು ದಾಖಲು..?! ಮಾಜಿ ಸಚಿವೆ ಉಮಾಶ್ರೀಗೂ ಸಂಕಷ್ಟ..!?

ಮಾಜಿ CM ಸಿದ್ದರಾಮಯ್ಯ ಮೇಲೆ ಮತ್ತೊಂದು ದೂರು ದಾಖಲು..?! ಮಾಜಿ ಸಚಿವೆ ಉಮಾಶ್ರೀಗೂ ಸಂಕಷ್ಟ..!?

2008
0
SHARE

ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲು.ಎಸಿಬಿಯಲ್ಲಿ ದೂರು ದಾಖಲಿಸಿದ ಕನ್ನಡಪರ ಸಂಘಟನೆ ಮುಖಂಡ.ಎರಡು ಸಂಘಟನೆಗಳಿಗೆ ಕೋಟ್ಯಂತರ ಹಣ ನೀಡಿಕೆ.ಅಧಿಕಾರ ದುರುಪಯೋಗ ವಿರುದ್ಧ ದೂರು ದಾಖಲು.

ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಅಧಿಕಾರ ದುರುಪಯೋಗ ಆರೋಪ.ಯಾವುದೇ ದಾಖಲೆಗಳನ್ನ ಪಡೆಯದೇ ಎರಡು ಕನ್ನಡ ಸಂಘಟನೆಗಳಿಗೆ ಹಣ ಬಿಡುಗಡೆಗೆ ಶಿಫಾರಸ್ಸು.ನಾರಾಯಣ ಗೌಡ ನೇತೃತ್ವದ ಕರವೇ ವಿಶ್ವ ಕನ್ನಡ ಜಾಗೃತಿ ಸಮಾವೇಶಕ್ಕೆ.

ವಾಟಾಳ್ ನಾಗರಾಜ್ ‌ಗೆ ಕರ್ನಾಟಕ ರಾಜೋತ್ಸವ ಸಮಿತಿಗೆ ಹಣ ಬಿಡುಗಡೆ ಆರೋಪ.ವಿಶ್ವ ಜಾಗೃತಿ ಸಮಾವೇಶಕ್ಕೆ 2016-17ರಲ್ಲಿ 50ಲಕ್ಷ, 2017-18ರಲ್ಲಿ 50ಲಕ್ಷ ಬಿಡುಗಡೆ.ಕರ್ನಾಟಕ ರಾಜ್ಯೋತ್ಸವ ಸಮಿತಿಗೆ 2016-17 ರಲ್ಲಿ 50 ಲಕ್ಷ , 2017-18 ರಲ್ಲಿ 60 ಲಕ್ಷ ಹಣ ಬಿಡುಗಡೆ.ಹಣ ಬಿಡುಗಡೆಗೆ ಮುನ್ನ ಹಾಗೂ ನಂತರ ಯಾವುದೇ ದಾಖಲೆ ಪಡೆಯದೇ ಹಣ ಬಿಡುಗಡೆ ಮಾಡಿದ್ದಾರೆಂದು ಆರೋಪ..

ಕೇವಲ ಮಾಜಿ ಸಿಎಂ ಶಿಫಾರಸ್ಸಿನ ಆಧಾರದ ಮೇಲೆ ಹಣ ಬಿಡುಗಡೆ.ಯಾವ ಉದ್ಧೇಶಕ್ಕೆಂದು ಧನ ಸಹಾಯ ಪಡೆದಿದ್ದಾರೋ, ಅದಕ್ಕೆ ಬಳಕೆ ಮಾಡಿರೋ ಆ ಬಗ್ಗೆ ಯಾವುದೇ ಸೂಕ್ತ ದಾಖಲೆಗಳನ್ನ ಒದಗಿಸಿಲ್ಲ.ಹಾಗಿದ್ರೂ ಹಣ ಬಿಡುಗಡೆ ಮಾಡಿದ್ದಾರೆಂದೂ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಆರೋಪ.ಎಸಿಬಿಗೆ ದೂರು ಸಲ್ಲಿಸಿದ ಕನ್ನಡ ರಕ್ಷಣಾ ಒಕ್ಕೂಟ ನಾಗೇಶ್.

LEAVE A REPLY

Please enter your comment!
Please enter your name here