Home Crime ಮಾಡಬಾರದ ವಯಸ್ಸಲ್ಲಿ ಪ್ರೀತಿಯ ಬಲೆಗೆ ಬಿದ್ದಾಕೆ ಮದ್ವೆಗೆ ದುಡ್ಡಿಲ್ಲ ಅಂತ ಪ್ರಿಯಕರನ ಜೊತೆ ಸೇರಿ ಉಂಡ...

ಮಾಡಬಾರದ ವಯಸ್ಸಲ್ಲಿ ಪ್ರೀತಿಯ ಬಲೆಗೆ ಬಿದ್ದಾಕೆ ಮದ್ವೆಗೆ ದುಡ್ಡಿಲ್ಲ ಅಂತ ಪ್ರಿಯಕರನ ಜೊತೆ ಸೇರಿ ಉಂಡ ಮನೆಗೆ ಖನ್ನಾ ಹಾಕಿ ಜೈಲು ಪಾಲು…

699
0
SHARE

ಆಕೆ ಹೊಟ್ಟೆಪಾಡಿಗಾಗಿ ಮನೆಯೊಂದ್ರಲ್ಲಿ ಕೆಲ್ಸ ಮಾಡ್ತಿದ್ಲು. ಆಕೆಯ ಮೇಲೆ ಮನೆಯೊಡತಿಯೂ ಸಾಕಷ್ಟು ನಂಬಿಕೆ ಇಟ್ಕೊಂಡಿದ್ಲು. ಆದ್ರೆ, ಮಾಡಬಾರದ ವಯಸ್ಸಲ್ಲಿ ಪ್ರೀತಿಯ ಬಲೆಗೆ ಬಿದ್ದಾಕೆ ಮದ್ವೆಗೆ ದುಡ್ಡಿಲ್ಲ ಅಂತ ಪ್ರಿಯಕರನೊಂದಿಗೆ ಸೇರಿ ಉಂಡ ಮನೆಗೆ ಕನ್ನ ಹಾಕಿ, ಜೈಲು ಪಾಲಾಗಿದ್ದಾರೆ…

ಮ್ಯಾರೇಜ್ ಆಗೋದಕ್ಕೆ ಮಾಲೀಕರ ಮನೆಯನ್ನ ದೋಚಿದ್ರು.ಸಂಸಾರ ನಡೆಸಬೇಕಿದ್ದವ್ರು ಸೆರೆಮನೆ ಸೇರಿದ್ರು.ಪೊಲೀಸ್ರ ಕೋಳಕ್ಕೆ ಕೈ ವೊಡ್ಡಿ ನಡೆದು ಬರ್ತಿರೋ ಈ ಖದೀಮರ ಹೆಸ್ರು ಮಂಜುನಾಥ್ ಮತ್ತು ಅಭಿಷೇಕ್. ಮದ್ವೆಯಾಗೋದಕ್ಕೆ ದುಡ್ಡಿಲ್ಲ ಅಂತ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾಡಿದ ದೌರ್ಜನ್ಯ ಹಾದೂ ದರೋಡೆ ಪ್ರತಿಫಲವೇ ಇದು…

 

 ಈ ಮಂಜುನಾಥನ ಪ್ರಿಯತಮೆ ಹೆಚ್.ಎಸ್.ಆರ್ ಲೇಔಟ್ ನ ಶಾಂತಮ್ಮ ಎಂಬುವವರ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಮನೆಕೆಲ್ಸ ಮಾಡ್ತಿದ್ಲು. ಅದೇ ಗ್ಯಾಪ್ ನಲ್ಲಿ ಈ ಮಂಜುನಾಥನ ಪ್ರೇಮ ಪಾಶಕ್ಕೆ ಸಿಲುಕಿಕೊಂಡು ಮದ್ವೆಯಾಗೋ ಪ್ಲಾನ್ ಮಾಡಿದ್ದಾರೆ. ಆದ್ರೆ, ಮದ್ವೆಗೆ ದುಡ್ಡಿನ ಪ್ರಾಬ್ಲಂ ಎದುರಾಗಿತ್ತು. ಅದಕ್ಕೆ ಅವ್ರು ಮಾಡಿದ್ದು, ಅನ್ನ ತಿಂದ ಮನೆಗೆ ಕನ್ನ ಹಾಕೋ ಕೆಲ್ಸ…

 

ಅದಕ್ಕಾಗಿ ಮೊದ್ಲೇ ಪ್ಲಾನ್ ಮಾಡಿದ್ದ ಈ ಕಿಲಾಡಿ ಜೋಡಿ ಸಿಸಿಟಿವಿ ರೆಕಾರ್ಡಿಂಗ್ ಆಫ್ ಮಾಡಿದ್ದಾರೆ. ನಂತರ ಮನೆಯಲ್ಲಿ ವೃದ್ಧೆ ಶಾಂತಮ್ಮ ಒಬ್ಬರೇ ಇರೋ ಟೈಮ್ ನೋಡಿ ಮನೆಗೆ ನುಗ್ಗಿದ್ದಾರೆ. ಇದಕ್ಕೆಲ್ಲ ಸಾಥ್ ನೀಡಿದ್ದು ಈ ಮಂಜನ ಪ್ರಿಯತಮೆಯಾದ ಅಪ್ರಾಪ್ತ ಕೆಲ್ಸದಾಕೆ. ಹಾಗೆ ಮನೆಗೆ ನುಗ್ಗಿದ ಈ ಕಿಲಾಡಿಗಳು ವೃದ್ಧೆಯ ಮೇಲೆ ಹಲ್ಲೆ ಮಾಡಿ, 20 ಸಾವಿರ ನಗದು ಸೇರಿ ಸುಮಾರು 450 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ರು.

 

ಸದ್ಯ ಮಾಡಿದ ತಪ್ಪಿಗೆ ಮಾಡಿದ್ದುಣ್ಣೋ ಮಾರಾಯ ಅಂತ ಕಳ್ಳತನಕ್ಕೆ ಸಹಕರಿಸಿದ ಅಪ್ರಾಪ್ತೆ ರಿಮ್ಯಾಂಡ್ ರೂಂ ಸೇರಿದ್ರೆ, ಗೆಳತಿ ಮಾತನ್ನ ಕೇಳಿ ಕನ್ನ ಹಾಕಿದ ಮಂಜುನಾಥ ತನ್ನ ಗೆಳೆಯ ಅಭಿಷೇಕ್ ಜೊತೆ ಪರಪ್ಪನ ಅಗ್ರಹಾರ ಜೈಲ್ ಪಾಲಾಗಿ ಮುದ್ದೆ ಮುರಿತಿದ್ದಾರೆ…

LEAVE A REPLY

Please enter your comment!
Please enter your name here