Home Crime ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ಎರಡು ವರ್ಷ ಜೈಲುಶಿಕ್ಷೆ…

ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ಎರಡು ವರ್ಷ ಜೈಲುಶಿಕ್ಷೆ…

183
0
SHARE

ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ಹಾಗೂ ಆತನ ಸೋದರ ಎರಡು ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ದೆಹಲಿಯ ಪಟಿಯಾಲ ಕೋರ್ಟ್ ಈ ತೀರ್ಪು ನೀಡಿದೆ.

ಈ ತೀರ್ಪು ನೀಡಿದ ಕೆಲವೇ ನಿಮಿಷಗಳಲ್ಲಿ ಮೆಹಂದಿ ಜಾಮೀನು ಪಡೆದಿದ್ದಾರೆ. ದಲೇರ್ ಮೆಹಂದಿ ಹಾಗೂ ಆತನ ಸೋದರ ಸಂಷೇರ್ ಸಿಂಗ್ 1998 ಮತ್ತು 1999ರಲ್ಲಿ ನಡೆದ ಎರಡು ಪ್ರಕರಣಗಳಲ್ಲಿ  10 ಮಂದಿಯನ್ನು ಅಮೆರಿಕಾಗೆ ಕರೆದೊಯ್ದಿದ್ದರು. 1998ರಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರೋ ನಟಿಯೊಬ್ಬರ ಕಂಪನಿಗೆ ದಲೇರ್ ಮೆಹಂದಿ ಗಾಯನ ಟ್ರೂಪ್‌ನಲ್ಲಿದ್ದವರನ್ನ ಕರೆದೊಯ್ಯಲಾಗಿತ್ತು. ಆದ್ರೆ, ಮೂವರು ಯುವತಿಯರನ್ನ ಅಲ್ಲಿಯೇ ಬಿಟ್ಟು ಬಂದಿದ್ದರು. 1999ರ ಅಕ್ಟೋಬರ್ ಮತ್ತೊಂದು ತಂಡವನ್ನ ಕರೆದೊಯ್ಯಲಾಗಿತ್ತು. ಮೂರು ಮಂದಿ ಯುವಕರನ್ನ ನ್ಯೂಜರ್ಸಿಯಲ್ಲಿಯೇ ಬಿಟ್ಟು ಬರಲಾಗಿತ್ತು. 2003ರಲ್ಲಿ ಬಕ್ಷಿಸ್ ಸಿಂಗ್ ಎಂಬಾತ ಪಟಿಯಾಲಾ ಪೊಲೀಸ್ ಠಾಣೆಯಲ್ಲಿ ದಲೇರ್ ಮಹಂದಿ ಹಾಗೂ ಶಮ್ಶೇರ್ ವಿರುದ್ಧ ದೂರು ದಾಖಲಿಸಿದ್ದರು.ನಂತರ  ಮೆಹಂದಿ ಸಹೋದರರ ವಿರುದ್ಧ ಕನಿಷ್ಠ 35 ವಂಚನೆ ದೂರುಗಳು ದಾಖಲಾಗಿದ್ವು. ಅಕ್ರಮವಾಗಿ ಅಮೆರಿಕಾಗೆ ವಲಸೆ ಹೋಗಲು ದಲೇರ್ ಮಹೆಂದಿ ಸಹೋದರರು ಹಣ ಪಡೆದಿದ್ದರು ಎಂದು ದೂರಲಾಗಿತ್ತು.2006ರಲ್ಲಿ ದಲೇರ್ ಮೆಹಂದಿ ಅಮಾಯಕ ಎಂದು  ಪಟಿಯಾಲಾ ಪೊಲೀಸರು ಬಿಟ್ಟುಕಳುಹಿಸಿದ್ರು. ಆದ್ರೆ, ಕೋರ್ಟ್ ಮಾತ್ರ ಗಾಯಕನ ಪ್ರಾಸಿಕ್ಯೂಷನ್‌‌ನನ್ನು ಎತ್ತಿ ಹಿಡಿತ್ತು. ದಲೇರ್ ವಿರುದ್ಧ  ಅಗತ್ಯವಿರೋ ಸಾಕ್ಷ್ಯಗಳಿದ್ದು, ಮುದಿನ ತನಿಖೆಗೆ ಸೂಚನೆ ನೀಡಿತ್ತು. ಸುಧೀರ್ಘ 15 ವರ್ಷಗಳ ಬಳಿಕ ದಲೇರ್ ಮೆಹಂದಿ ತಪ್ಪಿತಸ್ಥ ಎಂದು ತೀರ್ಪು ಮಾಡಿದೆ….

LEAVE A REPLY

Please enter your comment!
Please enter your name here