Home Crime ಮಾನಸಿಕ ಅಸ್ವಸ್ಥಳ ಮೇಲೆ ಎರಗಿದ 65 ವರ್ಷದ ಕಾಮುಕ..! ಒಂದು ವರ್ಷಗಳ ಕಾಲ ನಿರಂತರ...

ಮಾನಸಿಕ ಅಸ್ವಸ್ಥಳ ಮೇಲೆ ಎರಗಿದ 65 ವರ್ಷದ ಕಾಮುಕ..! ಒಂದು ವರ್ಷಗಳ ಕಾಲ ನಿರಂತರ ರೇಪ್ ಮಾಡಿದ ಮುದುಕ..!

1303
0
SHARE

ಆತ 65 ವರ್ಷದ ಮುದುಕನಾದ್ರು ಚಪಲ ತೀರಿಸಿಕೊಳ್ಳುವುದರಲ್ಲಿ ಮಾತ್ರ ನಾಟ್ ಔಟ್. ಮುದುಕ ಚಪಲ ಚೆನ್ನಿಗರಾಯನ ಕಾಮದ ದೃಷ್ಟಿಯಿಂದಾಗಿ 35 ವರ್ಷದ ಮಾನಸಿಕ ಅಸ್ವಸ್ತೆ ಈಗ 9 ತಿಂಗಳ ತುಂಬು ಗರ್ಭಿಣಿ.

ಈ ಪೋಟೋದಲ್ಲಿ ಅಮಾಯಕನ ರೀತಿ ಕುಳಿತಿರುವ ಈತನ ಹೆಸರು ಬೋಜೇಗೌಡ. ನೋಡೊಕೆ ಅಮಾಯಕನ ರೀತಿ ಕಾಣೋ ಈತ ಮಾಡಿರೋದು ಮಾತ್ರ ಹಲ್ಕಾ ಕೆಲಸ… ಈ ಮುದಿ ಕಾಮುಕನ ಚಪಲದಿಂದಾಗಿ 35 ವರ್ಷದ ಮಾನಸಿಕ ಅಸ್ವಸ್ಥೆ ಈಗ 9 ತಿಂಗಳ ತುಂಬು ಗರ್ಭಣಿ… ಮಾಡೊದೆಲ್ಲ ಮಾಡಿ ವಿಷಯ ಪೋಲೀಸ್ರಿಗೆ ಗೊತ್ತಾಗುತ್ತಿದ್ದಂತೆ ಭೋಜೆಗೌಡ ತಲೆ ಮರೆಸಿಕೊಂಡಿದ್ದಾನೆ.

ಕನಕಪುರ ತಾಲ್ಲೂಕಿನ ಕೊರಟಗೆರೆದೊಡ್ಡಿ ನಿವಾಸಿಯಾಗಿರುವ ಭೋಜೆಗೌಡ, ಅದೇ ಊರಿನಲ್ಲಿ ಕುರಿ ಮೇಕೆಗಳನ್ನ ಮೇಯಿಸಿಕೊಂಡಿದ್ದ. ಅದೇ ಊರಿನ ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆಯೊಬ್ಬಳು ಸಹ ಕುರಿ ಮೇಯಿಸಿಕೊಂಡಿದ್ದಳು. ಆಕೆಯ ಅಮಾಯಕತೆಯನ್ನ ಬಳಸಿಕೊಂಡಿರುವ ಈ ಮುದಿ ಕಾಮುಕ ಆಕೆಯನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಇನ್ನೂ ಮುದುಕನ ಚಪಲದಿಂದಾಗಿ ಸಂತ್ರಸ್ಥೆ ಗರ್ಭಿಣಿಯಾಗಿದ್ದಾಳೆ. ಇನ್ನೂ ಊರಿನ ಕೆಲವರು ಸೇರಿ ದೂರು ನೀಡುವುದು ಬೇಡವೆಂದು, ರಾಜಿ ಪಂಚಾಯ್ತಿ ಮಾಡಿ ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ. ಆದ್ರೀಗ ಮಹಿಳೆ 9 ತಿಂಗಳ ಗರ್ಭಿಣಿಯಾಗಿದ್ದು, ಯಾವುದೇ ಪರಿಹಾರ ಸಿಕ್ಕಿಲ್ಲ.

ಸದ್ಯ ಪೋಷಕರು ಕೋಡಿಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಬೋಜೆಗೌಡ ಪರಾರಿಯಾಗಿದ್ದಾನೆ..

ಸದ್ಯ ಪ್ರಕರಣ ದಾಖಲಿಸಕೊಂಡಿರುವ ಪೋಲೀಸ್ರು ಆರೊಪಿಗಾಗಿ ಬಲೆ ಬೀಸಿದ್ದು, ಭೋಜೆಗೌಡ ಕುಟುಂಬಸ್ಥರು ಮಾತ್ರ ಸಂತ್ರಸ್ಥೆಯ ಕುಂಟುಂಬಕ್ಕೆ ಕೇಸ್ ವಾಪಸ್ಸು ಪಡೆಯುವಂತೆ ಧಮ್ಕಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here