Home District ಮಾಲಿಕನ ಜೀವ ಉಳಿಸಲು ತನ್ನ ಪ್ರಾಣ ಬಲಿ ಕೊಟ್ಟ ನಾಯಿ..?! ನಾಯಿಗಳಿಗಿರುವ ನಿಯತ್ತು ಮನುಷ್ಯನಿಗೂ ಇರುವುದಿಲ್ಲ...

ಮಾಲಿಕನ ಜೀವ ಉಳಿಸಲು ತನ್ನ ಪ್ರಾಣ ಬಲಿ ಕೊಟ್ಟ ನಾಯಿ..?! ನಾಯಿಗಳಿಗಿರುವ ನಿಯತ್ತು ಮನುಷ್ಯನಿಗೂ ಇರುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತು…

1845
0
SHARE

ನಾಯಿಗಳಿಗಿರುವ ನಿಯತ್ತು ಮನುಷ್ಯನಿಗೂ ಇರುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ತನಗೆ ಅನ್ನಹಾಕಿ ಸಾಕಿದ ಒಡೆಯ ಸಂಕಷ್ಟದಲ್ಲಿದ್ದಾನೆ ಎಂದು ಆತನನ್ನು ಉಳಿಸಲು ಹೋದ ನಾಯಿ ಜೀವ ತೆತ್ತಿದೆ.

ಇಂತದ್ದೊಂದು ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಮಂಗಗಳ ಕಾಟ ತಾಳಲಾರದೆ ಜಮೀನು ಮಾಲೀಕ ವಿದ್ಯುತ್ ತಂತಿ ಅಳವಡಿಸಿದ್ದರು.

ಇದರ ಅರಿವಿಲ್ಲದೆ ನಿಂಗಪ್ಪ ಜುಲ್ಪಿ ವಿದ್ಯುತ್ ತಂತಿ ಸ್ಪರ್ಶಿಸಿದ್ದಾರೆ. ವಿದ್ಯುತ್ ಶಾಕ್ ನಿಂದ ಮಾಲೀಕ ಕೆಳಗೆ ಬಿದ್ದು ಒದ್ದಾಡುತ್ತಿದ್ದ. ಮಾಲೀಕ ಕೆಳಗೆ ಬಿದ್ದು ಒದ್ದಾಡುತ್ತಿದ್ದರಿಂದ ಸಾಕು ನಾಯಿ ವಿದ್ಯುತ್ ತಂತಿಯನ್ನು ಬಾಯಿಯಲ್ಲಿ ಎಳೆಯಲು ಹೋಗಿದೆ.

ಈ ವೇಳೆ ಶಾಕ್‌ನಿಂದಾಗಿ ಮಾಲೀಕ 50 ವರ್ಷದ ನಿಂಗಪ್ಪ ಜುಲ್ಫಿ ಹಾಗೂ ಸಾಕು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here