Home Cinema “ಮಾಸ್ತಿಗುಡಿ ಚಿತ್ರಕ್ಕೆ ದುಡ್ಡು ಕೊಟ್ಟಿದ್ದೀನಿ ಅನ್ನೋದು ಸುಳ್ಳು, ಕೇವಲ ವದಂತಿ” ದುನಿಯಾದಲ್ಲಿ ಹರಿದಾಡ್ತಿದ್ದ ವದಂತಿಗಳಿಗೆ ಪಾನಿಪುರಿ...

“ಮಾಸ್ತಿಗುಡಿ ಚಿತ್ರಕ್ಕೆ ದುಡ್ಡು ಕೊಟ್ಟಿದ್ದೀನಿ ಅನ್ನೋದು ಸುಳ್ಳು, ಕೇವಲ ವದಂತಿ” ದುನಿಯಾದಲ್ಲಿ ಹರಿದಾಡ್ತಿದ್ದ ವದಂತಿಗಳಿಗೆ ಪಾನಿಪುರಿ ಕಿಟ್ಟಿ ಬ್ರೇಕ್..!

583
0
SHARE

ಇಂದು ಬೆಳಗಿನಿಂದ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿಯ ನಡುವೆ ಕೆಲವೊಂದಿಷ್ಟು ಗಾಸಿಪ್ ಗಳು ಹರಿದಾಡ್ತಿದ್ವು. ಮಾಸ್ತಿಗುಡಿಯಗೆ ಕಿಟ್ಟಿ ಸಾಥ್ ನೀಡಿದ್ರು ಅಂತ ಹೇಳಲಾಗಿತ್ತು. ಸುಳಿ ಇಲ್ಲದೆ ಸುಳಿದಾಡ್ತಿದ್ದ ರೂಮರ‍್ಸ್‌ಗಳಿಗೆ ಸ್ವತಃ ಪಾನಿಪುರಿ ಕಿಟ್ಟಿ ತೆರೆ ಎಳೆದಿದ್ದಾರೆ. ಮಾಸ್ತಿಯ ಹಿಂದಿನ ಅಸಲಿ ಕಹಾನಿಯನ್ನು ತೆರೆದಿಟ್ಟಿದ್ದಾರೆ.

ದುನಿಯಾವಿಜಿ ಹಾಗೂ ಪಾನಿಪೂರಿ ಕಿಟ್ಟಿ ಜಗಳಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಬ್ಬರ ಜಗಳದಲ್ಲಿ ಈಗ ಮಾಸ್ತಿಗುಡಿ ಸಿನಿಮಾ ಹೆಸರು ಕೇಳಿ ಬಂದಿದೆ. ಹೌದು ಮಾಸ್ತಿಗುಡಿ ಸಿನಿಮಾಗೆ ಪಾನಿಪೂರಿ ಕಿಟ್ಟಿ ಫೈನಾನ್ಸ್ ಮಾಡಿದ್ರಂತೆ, ಈ ಹಣದ ವಿಚಾರಕ್ಕೆ ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕ ಸುಂದರ್ ಪಿ ಗೌಡ ಹಾಗೂ ಪಾನಿಪೂರಿ ಕಿಟ್ಟಿ ನಡುವೆ ಈಗಾಗಲೇ ಹಲವು ಬಾರಿ ಮಾತುಕತೆಯೂ ಆಗಿತ್ತಂತೆ,

ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡುವೆ ಜಗಳವಾಗಿತ್ತು ಎಂಬ ಸುದ್ದಿ ಹರಿದಾಡ್ತಿತ್ತು, ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಿಟ್ಟಿ ನಾನು ಮಾಸ್ತಿಗುಡಿ ಚಿತ್ರಕ್ಕೆ ಫೈನಾನ್ಸ್ ಮಾಡಿಲ್ಲ ಎಂದು ಖಚಿತಪಡಿಸಿದ್ರು. ಫೈನಾನ್ಸ್ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಅನ್ನೊ ವಿಷಯ ಜಸ್ಟ್ ರೂಮರ್ ಎಂದು ಕಿಟ್ಟಿ ಈ ಮಾತನ್ನು ಸಂಪೂರ್ಣ ಅಲ್ಲ ಗೆಳೆದಿದ್ದಾರೆ.
ಅಲ್ಲದೆ .

ನಾನು 40 ಲಕ್ಷ ಕೊಟ್ಟು ಚಿತ್ರ ನಿರ್ಮಾಣ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ. ಯಾರೋ ಸುಮ್ಮನೆ ಸುಳ್ಳು ಸುದ್ದಿ ಹರಡಿಸುತ್ತಿದ್ಧಾರೆ. ಆದ್ರೆ ನನ್ನ ಮಗನಿಗೆ ಹೊಡೆದ ಕಾರಣಕ್ಕೆ ಗಲಾಟೆ ಸಂಭವಿಸಿದೆ. ಹೊರತು ಇದ್ಯಾವುದು ಕಾರಣವಲ್ಲ.. ಅನಿಲ್ ಮತ್ತು ಉದಯ್ ಇಬ್ಬರು ನನ್ನ ಒಳ್ಳೆಯ ಶಿಷ್ಯರು ಅದಕ್ಕಿಂತ ಹೆಚ್ಚಾಗಿ ಉತ್ತಮ ಸ್ನೇಹಿತರೆಂದ್ರು.

ಇದೇ ವೇಳೆ ಮಾರುತಿ ಗೌಡ ಅವ್ರ ಆರೋಗ್ಯ ಸುದಾರಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆರ್ಯುವೇದಿಕ್ ಟ್ರಿಟ್ ಮೆಂಟ್ ಕೊಡಿಸಲಾಗ್ತಿದೆ. ತುಟಿಗೆ ಆಗಿದ್ದ ಗಾಯ ಸದ್ಯ ಒಣಗ್ತಿದೆ. ಸದ್ಯದಲ್ಲೇ ಮಾರುತಿ ಚೇತರಿಸಿಕೊಳ್ಳುವ ಭರವಸೆಯನ್ನು ನೀಡಿದ್ರು.

ಇನ್ನು ದುನಿಯಾ ವಿಜಿಯವರು ಮಾರುತಿಗೌಡ ಅವರಿಗೆ ಕೇವಲ 2 ಹೊಲಿಗೆಗಳು ಮಾತ್ರ ಬಿದ್ದಿದೆ ಎಂದಿರುವ ವಿಜಿ ಮಾತಿಗೆ ಉತ್ತರಿಸಿರುವ ಕಿಟ್ಟಿ.ನಾವು 20 ಹೋಲಿಗೆ ಹಾಕಿದ್ದಾರೆ ಎಂದು ಹೇಳ್ತಿಲ್ಲ.. ಇನ್ನು ವಿಜಿ ಜೊತೆ ಯಾವುದೇ ರೀತಿಯ ರಾಜಿ ಸಂಧಾನ ಮಾಡಿಕೊಳ್ಳುವುದಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿ ಪಾನಿಪುರಿ ಕಿಟ್ಟಿ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here