Home Crime ಮಿಸ್‌ಕಾಲ್‌ನಿಂದ ಆರಂಭವಾಗಿತ್ತು ಲವ್ | ಲವ್ವಿಡವ್ವಿ ಬಳಿಕ ಪ್ರಿಯಕರ ಎಸ್ಕೇಪ್ | ಇನಿಯನನ್ನು ಹುಡುಕಿ ಮದುವೆಯಾದ...

ಮಿಸ್‌ಕಾಲ್‌ನಿಂದ ಆರಂಭವಾಗಿತ್ತು ಲವ್ | ಲವ್ವಿಡವ್ವಿ ಬಳಿಕ ಪ್ರಿಯಕರ ಎಸ್ಕೇಪ್ | ಇನಿಯನನ್ನು ಹುಡುಕಿ ಮದುವೆಯಾದ ಛಲವಂತೆ

350
0
SHARE


ಆತ ಪೊಲೀಸ್ ಪೇದೆ.ಆಕೆ ಗ್ರಾಮ ಲೆಕ್ಕಾಧಿಕಾರಿ. ಇಬ್ಬರಿಗೂ ಫೋನ್‌ನಲ್ಲೇ ಪ್ರೇಮಾಂಕುರವಾಗಿತ್ತು. ತಿಂಗಳುಗಟ್ಟಲೇ ಅವರಿಬ್ಬರು ಮರ ಸುತ್ತಿದ್ದೇ ಸುತ್ತಿದ್ದು.ಆದ್ರೆ,ಆಕೆಗೆ ಕೈಕೊಟ್ಟ ಪೊಲೀಸಪ್ಪ ನಾಪತ್ತೆಯಾಗಿದ್ದ.

ಆದ್ರೆ, ಆ ಹುಡಗಿ ಬೇಕಲ್ಲ.ಪಾತಾಳದಲ್ಲಿದ್ದರೂ ಸರಿ ಆತನನ್ನು ಕರೆತಂದು ಮದುವೆಯಾಗಬೇಕೆಂಬ ದೃಢ ನಿರ್ಧಾರ ಕೈಗೊಂಡಳು.ಕೊನೆಗೆ ಪರಾರಿಯಾಗಿದ್ದ ಪೇದೆಯೊಂದಿಗೆ ಮದುವೆಯಾಗಿ ತಾನು ಅಂದುಕೊಂಡಂತೆ ಸಾಧಿಸಿ ತೋರಿಸಿದ್ದಾಳೆ ಆ ನಾರಿ…

ಈತ ಶಿವಮೊಗ್ಗ ಜಿಲ್ಲೆಯ ಕುಂಸಿಯ ಪೊಲೀಸ್ ಪೇದೆ ಮಂಜುನಾಥ್. ಈಕೆ ಗ್ರಾಮಲೆಕ್ಕಾಧಿಕಾರಿ ಮಂಜುಳಾ.ಒಂದೇ ಒಂದು ಮಿಸ್ ಕಾಲ್‌ನಿಂದಾಗಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಎಲ್ಲಾ ಪ್ರೇಮಿಗಳಂತೆ ಇವರು ಸುತ್ತಿದ ಜಾಗವಿಲ್ಲ, ಹರಟೆ ಹೊಡೆಯದ ದಿನವಿಲ್ಲ. ಒಂದು ದಿನ ಮದುವೆ ಪ್ರಸ್ತಾಪವನ್ನು ಮಂಜುಳಾ ಮುಂದಿಟ್ಟಿದ್ದಾಳೆ. ಆದ್ರೆ, ಪೊಲೀಸಪ್ಪ ಮಂಜುನಾಥ್‌ಲವ್ ಓಕೆ, ಮದುವೆ ಯಾಕೆ ಅಂತಾ ಪ್ರೀತಿಸಿದವಳನ್ನು ನಿರಾಕರಿಸಿ ಎಸ್ಕೇಪ್ ಆಗಿದ್ದನು. ಆದರೆ ಮಂಜುಳಾ ಮಾತ್ರ ಪ್ರಿಯಕರನಿಗಾಗಿ ಪಟ್ಟು ಹಿಡಿದು ಪೊಲೀಸರ ಮೊರೆ ಹೋಗಿದ್ದಳು…

ಯುವತಿಯ ದೂರಿನನ್ವಯ ನಾಪತ್ತೆಯಾಗಿದ್ದ ಪ್ರಿಯಕರ ಮಂಜುನಾಥನನ್ನು ಪೊಲೀಸರು ಪತ್ತೆ ಹಚ್ಚಿದರು. ನಂತರ ದಾವಣಗೆರೆ ಜಿಲ್ಲೆಯ ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ ಕುಟುಂಬದವರು ಹಾಗೂ ಏಕತಾ ವೇದಿಕೆ ಕಾರ್ಯಕರ್ತರು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಪ್ರೇಮಿಗಳಿಬ್ಬರು ಹೊಸ ಕನಸಿನೊಂದಿಗೆ ಹಾರ ಬದಲಾಯಿಸಿಕೊಳ್ಳುವ ಮೂಲಕ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

.

ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಬೇಕಿದ್ದ ಪೇದೆಯೇ ಪ್ರೀತಿಸಿ ಮೋಸಮಾಡಲು ಹೊರಟಿದ್ದು ಎಷ್ಟು ಸರಿ. ಮದುವೆಯಾಗುವುದಾಗಿ ನಂಬಿಸಿ ಅದೆಷ್ಟೋ ಯುವಕರು ಹೆಣ್ಣು ಮಕ್ಕಳ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಆ ಅಮಾಯಕ ಹೆಣ್ಣುಮಕ್ಕಳಿಗೆ ಈ ಮಂಜುಳಾ ನಿಜಕ್ಕೂ ಮಾದರಿ…

 

LEAVE A REPLY

Please enter your comment!
Please enter your name here