Home Crime ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಮನನೊಂದ ಕುಟುಂಬ..! 3 ಮಕ್ಕಳ ಕತ್ತು ಕೂಯ್ದು ಆತ್ಮಹತ್ಯೆಗೆ ಯತ್ನಿಸಿದ...

ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಮನನೊಂದ ಕುಟುಂಬ..! 3 ಮಕ್ಕಳ ಕತ್ತು ಕೂಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ..! ಮಕ್ಕಳ ಚೀರಾಟ ಕೇಳಿ ಸಹಾಯಕ್ಕೆ ದೌಡಾಯಿಸಿದ ಅಕ್ಕಪಕ್ಕದವರು..!

1778
0
SHARE

ಮೀಟರ್ ಬಡ್ಡಿದಂಧೆಕೋರರ ಹಾವಳಿಗೆ ಬೇಸತ್ತು ತಾಯಿಯೋರ್ವಳು ತನ್ನ ಮೂವರು ಮಕ್ಕಳನ್ನೂ ಕತ್ತು ಕೋಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಮನಕಲುಕುವ ಘಟನೆಯೊಂದು ನಡೆದಿದೆ. ಮನೆಯ ಯಜಮಾನ ಸಾಲ ಮಾಡಿದ್ದಕ್ಕೆ ಇಡೀ ಕುಟುಂಬವೇ ಕತ್ತು ಕೊಯ್ದುಕೊಂಡು ಆಸ್ಪತ್ರೆ ಪಾಲಾಗಿದ್ದಾರೆ..
ತಾಳಿ ಕಟ್ಟಿದ ಗಂಡ ಜೀವನ ಪೂರ್ತಿ ಜೊತೆಯಾಗಿರ್ತೆನೆ ಅಂತ ಪ್ರಮಾಣ ಮಾಡಿ ಮದುವೆಯಾದ ಆದ್ರೆ ಮದುವೆಯಾದ ಮೇಲೆ ಹೆಂಡತಿ ಮಕ್ಕಳನ್ನ ಸಾಕೋದಿರ್ಲಿ.ಊರ ತುಂಬಾ ಸಾಲ ಮಾಡಿ ಇಡೀ ಕುಟುಂಬವನ್ನೇ ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾನೆ..

ಆದ್ರೆ ಇದನ್ನೇ ನೆಪವಾಗಿಸಿಕೊಂಡ ಮೀಟರ್ ಬಡ್ಡಿ ಸಾಲಗಾರರು ಆತನ ಕುಟುಂಬದ ಮನೆ ಮುಂದೆ ಬೀದಿ ರಂಪಾಟ ಮಾಡಿದ್ದಾರೆ.. ಹೀಗೆ ಸಾಲಗಾರರ ಕಿರುಕುಳದಿಂದ ಮನನೊಂದು ತಾಯಿಯೊಬ್ಬಳು ತಾನೂ ಕತ್ತು ಕೂಯ್ದುಕೊಂಡು ತನ್ನ ಮೂವರು ಮಕ್ಕಳಿಗೂ ಕತ್ತು ಕೋಯ್ದು ಸಾಮೂಹಿಕ ಆತ್ಮಹತ್ಯೆ ಯತ್ನ ನಡೆಸಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.

ರಾಜಮ್ಮ, ಮಕ್ಕಳಾದ ಮನೋಜ್, ಅಮೃತ, ಭೂಮಿಕ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ತಾಯಿ ರಾಜಮ್ಮ ಬ್ಲೇಡ್ ನಿಂದ ಮಕ್ಕಳ ಕತ್ತು ಕೂಯ್ದು ಬಳಿಕ ತಾನು ಕತ್ತು ಕೋಯ್ದುಕೊಂಡಿದ್ದಾಳೆ.ಆಶ್ರಯ ಬಡಾವಣೆಯಲ್ಲಿ ರಾಜಮ್ಮಳ ಮನೆಯಲ್ಲಿ ಮಕ್ಕಳ ಚೀರಾಟ ರಂಪಾಟ ಕೇಳಿ ನೆರೆಹೊರೆಯ ಮನೆಯವರು ರಾಜಮ್ಮನ ಮನೆಗೆ ದೌಡಾಯಿಸಿ ರಕ್ತದ ಮಡುವಿನಲ್ಲಿದ್ದ ಮಕ್ಕಳು ತಾಯಿಯನ್ನು ತಕ್ಷಣ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ನಾಲ್ಕು ಜನರನ್ನುಪ್ರಾಣಾಪಾಯದಿಂದ ರಕ್ಷಿಸಿದ್ದಾರೆ..

ಖಾಸಗಿಯವರಿಂದ 3 ಲಕ್ಷ ಕೈ ಸಾಲ ಮಾಡಿಕೊಂಡಿದ್ದ ರಾಜಮ್ಮಳ ಗಂಡ ವೆಂಕಟೇಶ್ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂದ ಹೊಂದಿದ್ದ ಎನ್ನಲಾಗಿದೆ.. ಸಾಲಗಾರರ ಕಾಟಕ್ಕೆ ವೆಂಕಟೇಶ್ ಈಗಾಗಲೇ ಮನೆ ಬಿಟ್ಟು ಹೋಗಿದ್ದಾನೆ. ಇನ್ನು ಮೀಟರ್ ಬಡ್ಡಿಕೋರರ ಕಿರುಕುಳಕ್ಕೆ ತೀವ್ರ ಮನನೊಂದಿದ್ದ ರಾಜಮ್ಮ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ನಿರ್ಧರಿಸಿದ್ದಳು ಎನ್ನಲಾಗಿದೆ…

ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೊ ಶಿಕ್ಷೆ ಅನುಭವಿಸಿದ್ರು ಅನ್ನೋ ಹಾಗೆ ಗಂಡ ಮಾಡಿದ ಸಾಲದ ತಪ್ಪಿಗೆ ಹೆಂಡತಿ ಮಕ್ಕಳು ಮನನೊಂದು ಆತ್ಮಹತ್ಯೆ ಯತ್ನ ಶಿಕ್ಷೆ ಅನುಭವಿಸುವಂತಾಗಿದೆ.ಇನ್ನು ಚಿಂತಾಮಣಿಯಲ್ಲಿ ಮೀಟರ್ ಬಡ್ಡಿಕೋರರ ಹಾವಳಿ ಕಿರುಕುಳದಿಂದ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ..

LEAVE A REPLY

Please enter your comment!
Please enter your name here