Home District ಮುಂದಿನ ಬಜೆಟ್‌ ಒಳಗೆ ರೈತರ ಸಾಲಮನ್ನಾ ಘೋಷಣೆ..Congress ನಾಯಕರ ವಿಶ್ವಾಸ ಪಡೆದು ನಿರ್ಧಾರ ಎಂದ HDK…

ಮುಂದಿನ ಬಜೆಟ್‌ ಒಳಗೆ ರೈತರ ಸಾಲಮನ್ನಾ ಘೋಷಣೆ..Congress ನಾಯಕರ ವಿಶ್ವಾಸ ಪಡೆದು ನಿರ್ಧಾರ ಎಂದ HDK…

1503
0
SHARE

ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹೆಚ್.ಡಿ ಕುಮಾರಸ್ವಾಮಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಆಗಮಿಸಿದ ಕುಮಾರಸ್ವಾಮಿ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ…

ಇದಕ್ಕೂ ಮೊದಲ ಮಾತನಾಡಿದ ಅವರು, 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡುತ್ತೇನೆ. ಕಾಂಗ್ರೆಸ್ ಪಕ್ಷದ ವಿಶ್ವಾಸ ಪಡೆಯುವುದು ನನ್ನ ಮೊದಲ ಆದ್ಯತೆಯಾಗಿದೆ. ಸಾಲಮನ್ನಾ ಯೋಜನೆಯ ಬಗ್ಗೆ ರೈತರು ಆತಂಕ ಪಡುವುದು ಬೇಡ…

ಕಾಂಗ್ರೆಸ್‌ ನಾಯಕರ ವಿಶ್ವಾಸ ಪಡೆದು ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇನೆ.ಮುಂದಿನ ಬಜೆಟ್ ಮಂಡನೆ ಒಳಗೆ ಸಾಲಮನ್ನಾ ನಿರ್ಧಾರ ಮಾಡುತ್ತೇವೆ.ನಾನು ಪ್ರಮಾಣವಚನ ಸ್ವೀಕರಿಸುತ್ತಿರುವುದು ದೇಶದಲ್ಲಿ ಬದಲಾವಣೆ ತರಲಿದೆ.ನನ್ನ ಅಧಿಕಾರದ ಅವಧಿಯಲ್ಲಿ ವಿಧಾನಸಭೆ ಸದಾಕಾಲ ತೆರೆದಿರುತ್ತದೆ ಎಂದು ಹೇಳಿದ್ದಾರೆ…

LEAVE A REPLY

Please enter your comment!
Please enter your name here