Home Latest ಮುಂಬೈ ವಿರುದ್ಧ ತ್ರಿವಿಕ್ರಮನಾದ ಕನ್ನಡಿಗ ಕೃಷ್ಣಪ್ಪ ಗೌತಮ್ , ರಾಯಲ್ಸ್ ತಂಡಕ್ಕೆ ಗೆಲುವು ತಂದುಕೊಟ್ಟು...

ಮುಂಬೈ ವಿರುದ್ಧ ತ್ರಿವಿಕ್ರಮನಾದ ಕನ್ನಡಿಗ ಕೃಷ್ಣಪ್ಪ ಗೌತಮ್ , ರಾಯಲ್ಸ್ ತಂಡಕ್ಕೆ ಗೆಲುವು ತಂದುಕೊಟ್ಟು ರಿಯಲ್ ಹಿರೋ

546
0
SHARE

ಅದು ರಾಜಸ್ತಾನ್ ತಂಡದ ಸೋಲಿನ ಸನಿಹ… ಇನ್ನೇನು ತವರಿನಲ್ಲಿ ಸೋತು ಅವಮಾನಕ್ಕೆ ತುತ್ತಾಗಬೇಕು ಅನ್ನೋ ಆತಂಕ.. ಸೋಲಿನಿಂದ ಕಂಗೆಟ್ಟಿದ್ದ ರಹಾನೆ ಪಡೆ ಗೆಲುವಿಗಾಗಿ ಹಂಬಲಿಸುತ್ತಿದ್ದ ಕ್ಷಣ…. ಅಲ್ಲದೇ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಹಣಾಹಣಿಯಲ್ಲಿ ರಾಯಲ್ಸ್ 3ನೇ ವಿಕೆಟ್ ಗಳಿಂದ ದಿಗ್ವಿಜಯ ಸಾಧಿಸಿತ್ತು. ಕನ್ನಡಿಗ ಗೌತಮ್ ವೀರಾವೇಶದಿಂದ ಬೆಚ್ಚಿಬಿದ್ದ ರೋಹಿತ್ ಪಡೆ ಅನಿರೀಕ್ಷಿತವಾಗಿ ಬಂದ ಸೋಲಿಗೆ ಮಂಡಿಯೂರಿತ್ತು.

ಇದಕ್ಕೂ ಮೊದ್ಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡ್ರು. ಆದ್ರೆ ಮುಂಬೈ ಆರಂಭದಲ್ಲೆ ಎವಿನ್ ಲಿವಿಸ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯ್ತು.
ಸೂರ್ಯಕುಮಾರ್-ಕಿಶನ್ ಬ್ಯಾಟಿಂಗ್ ದರ್ಬಾರ್…
ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಇಶನ್ ಕಿಶನ್ ಆಸರೆಯಾದ್ರು. ಆರಂಭದಿಂದಲೇ ರಾಯಲ್ಸ್ ಬೌಲರ್ ಗಳನ್ನ ಮನಸೋಇಚ್ಛೆ ದಂಡಿಸಿದ ಈ ಜೋಡಿ ಜೈಪುರ್ ಅಂಗಳದಲ್ಲಿ ರನ್ ಕಹಳೆ ಊದಿದ್ರು.ಇನ್ನು ಬಿರುಸಿನ ಬ್ಯಾಟಿಂಗ್ ನಡೆಸಿದ ಕಿಶನ್ 58 ರನ್ ಚಚ್ಚಿದ್ರೆ, ಸೂರ್ಯಕುಮಾರ್ ಯೂದವ್ 74 ರನ್ ಸಿಡಿಸಿದ್ರು.

ಸೂರ್ಯಕುಮಾರ್ ಹಾಗೂ ಕಿಶನ್ ಔಟಾಗುತ್ತಿದಂತೆ ಮುಂಬೈ ಇಂಡಿಯನ್ಸ್, ಜೊಫ್ರಾ ಅರ್ಚೆರ್ ಬೌಲಿಂಗ್ ದಾಳಿಗೆ ತತ್ತರಿಸಿತು. ಕೃನಾಲ್ ಪಾಂಡ್ಯಾ 07, ಹಾರ್ದಿಕ್ ಪಾಂಡ್ಯಾ 04 ರನ್ ಹಾಗೂ ಮೆಕ್ಲಾಘಾನ್ ಶೂನ್ಯಕ್ಕೆ ಅರ್ಚೆರ್ ಗೆ ವಿಕೆಟ್ ಒಪ್ಪಿಸಿದ್ರು. ಇನ್ನು ರೋಹಿತ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದ್ರು. ಅಂತಿಮವಾಗಿ ಮುಂಬೈ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

168 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ್ ಕೂಡ ಆರಂಭಿಕ ಆಘಾತಕ್ಕೆ ತುತ್ತಾಯ್ತು, ಅಜಿಂಕ್ಯಾ ರಹಾನೆ 14 ಹಾಗೂ ರಾಹುಲ್ ತ್ರಿಪಾಠಿ 09 ರನ್ ಗಳಿಸಿ ಔಟಾದ್ರು. ಬಳಿಕ ಒಂದಾದ ಬೆನ್ ಸ್ಟೋಕ್ಸ್ ಹಾಗೂ ಸಂಜು ಸಮ್ಸನ್ ತಂಡಕ್ಕೆ ಆಧಾರವಾಗಿ ಬ್ಯಾಟ್ ಬೀಸಿದ್ರು. ಕೆಲಕಾಲ ಮುಂಬೈ ಬೌಲರ್ ಗಳನ್ನ ಕಾಡಿದ ಸ್ಟೋಕ್ಸ್ 40 ರನ್ ಗಳಿಸಿದ್ರೆ, ಸಂಜು ಸಮ್ಸನ್ 52 ರನ್ ಬಾರಿಸಿದ್ರು.

ಕನ್ನಡಿಗ ಗೌತಮ್ ವೀರವೇಶಕ್ಕೆ ಮಣ್ಣುಮುಕ್ಕಿದ ಮುಂಬೈ…

ರಾಯಲ್ಸ್ ಪ್ರಮುಖ ಎಲ್ಲ ವಿಕೆಟ್ ಗಳನ್ನ ಕಳೆದುಕೊಂಡು ಇನ್ನೇನು ಸೋಲಿಗೆ ಶರಣಾಗುತ್ತೆ ಅನ್ನೋ ಆತಂಕ ಅಭಿಮಾನಿಗಳಲ್ಲಿ ಉಂಟಾಗಿತ್ತು. ಆದ್ರೆ ಇದೇ ವೇಳೆ ಕ್ರಿಸ್ ಗೆ ಬಂದ ಕನ್ನಡಿಗ ಕೃಷ್ಣಪ್ಪ ಗೌತಮ್ ದೊಡ್ಡ ದೊಡ್ಡ ಹೊಡೆತಗಳ ಮೂಲಕ ಪಂದ್ಯದ ದಿಕ್ಕನ್ನೆ ಬದಲಾಯಿಸಿದ್ರು. ಅಲ್ಲದೇ ಕೇವಲ 11 ಎಸೆತಗಳಲ್ಲಿ 33 ರನ್ ಗಳಿಸಿ ರಾಜಸ್ತಾನ್ ತಂಡಕ್ಕೆ ಇನ್ನು 2 ಎಸೆತ ಬಾಕಿ ಇರುವಾಗ್ಲೆ ರೋಚಕ ಗೆಲುವು ತಂದುಕೊಟ್ಟರು.

ಅಂತಿಮವಾಗಿ ರಾಜಸ್ತಾನ್ ರಾಯಲ್ಸ್ 19.4 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ, 3 ವಿಕೆಟ್ ಗಳ ರೋಚಕ ದಿಗ್ವಿಜಯ ಸಾಧಿಸಿತು.ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.

LEAVE A REPLY

Please enter your comment!
Please enter your name here