Home District ಮುಖ್ಯಮಂತ್ರಿ ಆಗಲು ಯಡಿಯೂರಪ್ಪ ಅಲ್ಲಾಹುವಿನ ಮೊರೆ.!!! ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್...

ಮುಖ್ಯಮಂತ್ರಿ ಆಗಲು ಯಡಿಯೂರಪ್ಪ ಅಲ್ಲಾಹುವಿನ ಮೊರೆ.!!! ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ..ಆದ್ರೆ BSY ಮಾಡಿದ್ದೇನು .!!??

1002
0
SHARE

ಸಂಜೆ ತಾನೆ ತಮ್ಮ ಪರ ತೀರ್ಪು ನೀಡುವಂತೆ ನ್ಯಾಧೀಶರೊಬ್ಬರ ಅಳಿಯನ ಜೊತೆ ಮಾಜಿ ಸಚಿವ ಶ್ರೀರಾಮುಲು ಡೀಲ್ ಮಾಡ್ತಿದ್ದ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿದೆ.ಈ ವಿಡಿಯೋ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯುಂಟು ಮಾಡಬಹುದು. ಇದು ಲೀಕ್ ಆದ ಕೆಲವೇ ಗಂಟೆಗಲ್ಲಿ ಪ್ರಜಾಟಿವಿ ಇನ್ನೊಂದು ಮೆಗಾ ಬ್ರೇಕಿಂಗ್ ನ್ಯೂಸ್ ನೀಡ್ತಿದೆ.

ಯೆಸ್, ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಶೇಷ ಪೂಜೆ ಮಾಡಿದ್ದಾರೆ. ಬಹುಷಃ ಈ ಚುನಾವಣೆಯಲ್ಲಿ ಗೆದ್ದು ತಾವು ಮುಖ್ಯಮಂತ್ರಿಯಾಗಬೇಕು ಎಂಬ ಮಹದಾಸೆಯೊಂದಿಗೆ ಯಡಿಯೂರಪ್ಪ ಪೂಜೆ ನಡೆಸಿದ್ದಾರೆ… ನಿಜ ಇದರಲ್ಲಿ ತಪ್ಪೇನು ಇಲ್ಲ… ಪೂಜೆ ಮಾಡೋದು ಸಾಮಾನ್ಯ… ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸೋದು ಚುನಾವಣೆ ವೇಳೆ ಕಾಮಾನ್… ಆದ್ರೆ ಯಡಿಯೂರಪ್ಪ ಪೂಜೆ ಮಾಡಿರೋದು ಯಾವುದೋ ದೇವಸ್ಥಾನದಲ್ಲಿ ಅಲ್ಲ… ಅಥವಾ ಇನ್ಯಾವುದೋ ಮಠದಲ್ಲಿ ಅಲ್ಲ…

ಒಂದು ಮನೆಯಲ್ಲಿ ಯಡಿಯೂರಪ್ಪ ನೆಲದ ಮೇಲೆ ಕೂತಿದ್ದಾರೆ… ಎದುರಿಗೆ ಹಸಿರು ಟೋಪಿ ಹಾಕಿ ವಿಶೇಷ ಪೂಜೆ ಸಲ್ಲಿಸುತ್ತಿರೋ ಮೌಲಿ ಕಾಣುತ್ತಿದ್ದಾರೆ… ಇವರಿಬ್ಬರ ನಡುವೆ ಮೂರನೇ ವ್ಯಕ್ತಿ ಮೌಲ್ವಿ ಹೇಳುವ ವಿಚಾರಗಳನ್ನು ಚಾಚೂ ತಪ್ಪದೆ ಯಡಿಯೂರಪ್ಪನವರಿಗೆ ವಿವರಿಸುತ್ತಿದ್ದಾರೆ…
ಸುಮಾರು ಮೂರು ನಿಮಿಷಗಳ ವಿಡಿಯೋದಲ್ಲಿ ಆಡಿಯೋ ಇಲ್ಲ… ಆದ್ರೆ ಸುಮಾರು 30 ನಿಮಿಷಗಳ ಕಾಲ ಈ ಪೂಜೆ ನಡೆದಿದೆ ಎನ್ನಲಾಗಿದೆ..

ಈ ಪೂಜೆ ಎಲ್ಲಿ ನಡೆದಿದೆ ಎಂಬುದಕ್ಕೆ ಸರಿಯಾದ ಮಾಹಿತಿ ಇಲ್ಲ.ಆದ್ರೆ ಸಿಎಂ ಆಗಲು ಯಡಿಯೂರಪ್ಪ ಅಲ್ಲಾಹುವಿನ ಮೊರೆ ಹೋಗಿದ್ದು ಮಾತ್ರ ಸತ್ಯ. ಅಲ್ಪಸಂಖ್ಯಾತರನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿರೋ ಬಿಜೆಪಿ ಇದೀಗ ಅದರ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಮೌಲ್ವಿಯನ್ನು ಮನೆಗೆ ಕರೆದು ಪೂಜೆ ಸಲ್ಲಿಸಿರೋದು ಚರ್ಚೆಗೆ ಗ್ರಾಸವಾಗಿದೆ…

ಇನ್ನೂ ಈ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ.. ಆದ್ರೆ ಸಿಎಂ ಆಗಲು ಮೌಲ್ವಿ ಬೇಕು ಯಡಿಯೂರಪ್ಪನವರಿಗೆ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ….

 

LEAVE A REPLY

Please enter your comment!
Please enter your name here