Home Elections 2019 ಮುಖ್ಯಮಂತ್ರಿ BSY ಬಗ್ಗೆ ಅನಾಮಧೇಯ ಪತ್ರ..! ವಯಸ್ಸಾಯ್ತು,ಕೆಳಗಿಳಿರಿ..! ಪರ್ಯಾಯ ಆಡಳಿತ ನಡೆಸುತ್ತಿದ್ದಾರಂತೆ BSY ಪುತ್ರ! ವಾಟ್ಸಾಪ್...

ಮುಖ್ಯಮಂತ್ರಿ BSY ಬಗ್ಗೆ ಅನಾಮಧೇಯ ಪತ್ರ..! ವಯಸ್ಸಾಯ್ತು,ಕೆಳಗಿಳಿರಿ..! ಪರ್ಯಾಯ ಆಡಳಿತ ನಡೆಸುತ್ತಿದ್ದಾರಂತೆ BSY ಪುತ್ರ! ವಾಟ್ಸಾಪ್ ಗ್ರೂಪ್ ಗಳಲ್ಲೆಲ್ಲ ಹರಿದಾಡುತ್ತಿರುವ ಸುದೀರ್ಘ ಒಕ್ಕಣೆ..

2449
0
SHARE

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅನಾಮಧೇಯ ಪತ್ರವೊಂದು ಎಲ್ಲಾ ಕಡೆ ಹರಿದಾಡುತ್ತಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ..77 ವರ್ಷ ಪೂರೈಸುತ್ತಿರುವ ಯಡಿಯೂರಪ್ಪನವರಿಗೆ ವಯಸ್ಸಾಯ್ತು,ಅವರಿಗೆ ದಿನನಿತ್ಯದ ಕೆಲಸ ಕಾರ್ಯ ಮಾಡಲು ದೇಹ ಸಹಕರಿಸುತ್ತಿಲ್ಲ, ಸಮರ್ಥರು ಮುಖ್ಯಮಂತ್ರಿ ಸ್ಥಾನದಲ್ಲಿರಬೇಕು ಅಂತ ಅವರ ನಿವೃತ್ತಿ ಬಯಸಿ ಸುದೀರ್ಘ ಒಕ್ಕಣೆ ಬರೆಯಲಾಗಿದೆ..ಇನ್ನು ಸಿಎಂ ಪುತ್ರ ದರ್ಬಾರನ್ನೂ ವರ್ಣಿಸಲಾಗಿದೆ..

ಬಿಜೆಪಿಯಲ್ಲಿ ಮತ್ತೆ ನಾಯಕರ ವಯಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ..ಬಿಜೆಪಿಯಲ್ಲಿ ಈ ಹಿಂದೆಯೂ 75 ವರ್ಷ ವಯಸ್ಸಾದ ಬಳಿಕ ಅಂಥವರಿಗೆ ಅಧಿಕಾರ ಇಲ್ಲ ಎಂಬ ಮಾತು ಕೇಳಿಬರುತ್ತಿತ್ತು..ಆದ್ರೆ ಕರ್ನಾಟಕದಲ್ಲಿ ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದು ಅನ್ವಯಿಸುವುದಿಲ್ಲ ಅಂತಾನೂ ಹೇಳಲಾಗುತ್ತಿತ್ತು.. ಅದು ಸತ್ಯವೂ ಆಗಿ ಯಡಿಯೂರಪ್ಪ ನಿರಾತಂಕವಾಗಿ ಅಧಿಕಾರ ನಡೆಸುತ್ತಿದ್ದಾರೆ..ಆದ್ರೆ ಯಡಿಯೂರಪ್ಪನವರ ನಿಷ್ಠಾವಂತ ಬಳಗದವರೇ ಅಂತ ಹೇಳಿಕೊಂಡು ಈಗ ಅನಾಮಧೇಯ ಪತ್ರ ಬರೆದು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಟ್ಟಿದ್ದಾರೆ..77 ವಸಂತಗಳನ್ನು ಪೂರೈಸುತ್ತಿರುವ ಯಡಿಯೂರಪ್ಪನವರು ವಿಶ್ರಾಂತಿ ಬಯಸುತ್ತಿದ್ದಾರೆ ಎಂದು ಒಕ್ಕಣೆ ಬರೆದು ನೀಟಾಗಿ ಟೈಪ್ ಮಾಡಿಸಿ ಹಾಕಿದ್ದಾರೆ..

ಪತ್ರದ ಸಾರಾಂಶ :ಅಪ್ರತಿಮ ನಾಯಕ ಇದೇ ತಿಂಗಳ 27ಕ್ಕೆ 77 ವಸಂತಗಳನ್ನು ಪೂರೈಸಲಿದ್ದಾರೆ..ಬಿಜೆಪಿಯ ಅಗ್ರ ನೇತಾರ ಬಿಎಸ್ ವೈ ವಿಶ್ರಾಂತಿ ಬಯಸುತ್ತಿದ್ದಾರೆ.. ನೇತ್ರಗಳು ಮಂಜಾಗಿದ್ದು ಎದುರುಗಡೆ ಇರುವವರನ್ನು ಒಮ್ಮೊಮ್ಮೆ ಗುರುತಿಸಲು ಸಾಧ್ಯವಾಗುತ್ತಿಲ್ಲ.. ಕಿವಿಗಳು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ನೆನಪಿನ ಶಕ್ತಿ ದಿನೇ ದಿನೇ ಕ್ಷೀಣಿಸುತ್ತಿದೆ..ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ದೇಹ ಸಹಕರಿಸುತ್ತಿಲ್ಲ. ಚೀಟಿಯಿಲ್ಲದೆ ಮಾತನಾಡಲು ಆಗುತ್ತಿಲ್ಲ, ಪ್ರತಿಪಕ್ಷದ ನಾಯಕರುಗಳಿಗೆ ಉತ್ತರ ನೀಡಲು ತಡವರಿಸುತ್ತಾರೆ, ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ..ವಯೋಸಹಜ ದೈಹಿಕ ಅಸಮರ್ಥತೆ ಕಾರಣದಿಂದಾಗಿ ದುರ್ಬಲ, ಅಸಹಾಯಕ, ನಿಷ್ಕ್ರಿಯ ಮುಖ್ಯಮಂತ್ರಿ ಎನಿಸಿಕೊಳ್ಳುವುದನ್ನು ನಾವು ಸಹಿಸಿಕೊಳ್ಳಲು ತುಂಬಾ ನೋವಾಗುತ್ತಿದೆ.. ಬಿಎಸ್ ವೈ ನಿಷ್ಠಾವಂತ ಬಳಗದಲ್ಲಿರುವ ನಮಗೆ ನಮಗೆ ಇದು ಆಘಾತ ತಂದಿದ್ದು ದಿಕ್ಕು ತೋಚದಂತಾಗಿದೆ..ಸವಾಲುಗಳನ್ನು ಎದುರಿಸಬೇಕಾದರೆ ಸಮರ್ಥರು ಮುಖ್ಯಮಂತ್ರಿ ಸ್ಥಾನ ಇರಬೇಕು.

ಹೀಗಂತ ಸುದೀರ್ಘವಾಗಿ ಯಡಿಯೂರಪ್ಪನವರ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.. ಈ ಒಕ್ಕಣೆ ಈಗ ಬಿಜೆಪಿಯ ವಲಯದಲ್ಲೇ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ..ಇನ್ನು ಇತ್ತೀಚಿಗೆ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿರುವ ಯಡಿಯೂರಪ್ಪ ಪುತ್ರ ವಿಜಯೇಂದ್ರರ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿ ವಿವರವಾಗಿಯೇ ಬರೆದಿದ್ದಾರೆ..ವಯೋವೃದ್ಧ ತಂದೆಗೆ ಪುತ್ರ ಸಹಾಯ ಮಾಡುವುದು ಲೋಪವೇ ಅಂತ ಪ್ರಶ್ನಿಸಿ, ವಿಜಯೇಂದ್ರ ತಂದೆಗೆ ಪರ್ಯಾಯವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದೂ ಕುಟುಕಿದ್ದಾರೆ..

ಪತ್ರದ ಸಾರಾಂಶ : ಶಿವಾನಂದ ವೃತ್ತದ ಬಳಿ ಇರುವ ಆದರ್ಶ ರೋಸ್ ಅಪಾರ್ಟ್ ಮೆಂಟ್ ಶಕ್ತಿ ಕೇಂದ್ರವಾಗಿದೆ..ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿಗೆ ಹೋದ ಸಚಿವರು,ಶಾಸಕರು,ಅಧಿಕಾರಿಗಳು,ಉದ್ಯಮಿಗಳು, ಹಾಗೂ ಪಕ್ಷದ ಮುಖಂಡರಿಗೆ ತಂದೆ ಯಡಿಯೂರಪ್ಪನವರು ,ನೀವು ಪುತ್ರ ವಿಜಯೇಂದ್ರನನ್ನು ಭೇಟಿ ಮಾಡಿ ಅಂತ ಹೇಳಿ ಕಳುಹಿಸುತ್ತಾರೆ..ಸಂಜೆಯಾದರೆ ಪಂಚತಾರಾ ಹೊಟೇಲ್ ಗಳಲ್ಲಿ ವಿಜಯೇಂದ್ರರನ್ನು ಕಾಣಬೇಕು.. ಈ ರೀತಿಯ ಗುರುತರ ಆರೋಪಗಳನ್ನು ನಂಬಲು ಸಾಧ್ಯವೆ?.. ಹೀಗಂತ ಹೇಳೋದನ್ನೆಲ್ಲ ಹೇಳಿ, ಅನುಕಂಪವನ್ನೂ ವ್ಯಕ್ತಪಡಿಸುವಂತೆ ಬರೆದಿದ್ದಾರೆ.. ತಂದೆಗೆ ನೆರವಾಗುವ ವಿಜಯೇಂದ್ರರ ಮನೋಭಾವವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ..

LEAVE A REPLY

Please enter your comment!
Please enter your name here