Home Crime ಮುತ್ತಿನ ಮತ್ತಿನಲ್ಲೇ ಅವನ ಕತ್ತು ಸೀಳಿ ಸೈಲೆಂಟಾಗಿದ್ದ, ಹಸಿಬಿಸಿ ಸಂಬಂಧದ ರಹಸ್ಯ..?! ಅವಳ ಕಣ್ಣೀರೇ ಹೇಳುತ್ತಿತ್ತು...

ಮುತ್ತಿನ ಮತ್ತಿನಲ್ಲೇ ಅವನ ಕತ್ತು ಸೀಳಿ ಸೈಲೆಂಟಾಗಿದ್ದ, ಹಸಿಬಿಸಿ ಸಂಬಂಧದ ರಹಸ್ಯ..?! ಅವಳ ಕಣ್ಣೀರೇ ಹೇಳುತ್ತಿತ್ತು ಆ ಭೀಕರ ಹತ್ಯೆ,?

2512
0
SHARE

ಅವೊತ್ತು ಜುಲೈ 19 ನೇ ತಾರೀಖು. ಎಂದಿನಂತೆ ಇರ್ಲಿಲ್ಲ ಕರಡಿಕೊಪ್ಪಲು ಗ್ರಾಮದ ಪರಿಸ್ಥಿತಿ. ಎಲ್ಲೆಲ್ಲೂ ನೀರವ ಮೌನ, ಬೆಳ್ಳಂಬೆಳಗ್ಗೆ ಊರೆಲ್ಲಾ ಬಿಕೋ ಅಂತಿತ್ತು. ಬೀದಿಯಲ್ಲಿ ಕಾಣ್ತಿದ್ದವರ ಮುಖದಲ್ಲಿ ಎಂತದ್ದೋ ಆತಂಕ. ಇನ್ನೊಂದಿಷ್ಟು ಮಂದಿ ಅವರವರಲ್ಲೇ ಏನನ್ನೋ ಮಾತಾಡಿಕೊಳ್ತಿದ್ರು. ಬೆಳ್ಳ್ ಬೆಳಗ್ಗೆ ಕೆಲಸ ಕಾರ್ಯಗಳು ನಡೀಬೇಕಾದ ಹಳ್ಳಿಯಲ್ಲಿ ಅಂತಾ ಚಟುವಟಿಕೆಗಳೇನು ಕಾಣ್ತಾನೆ ಇರ್ಲಿಲ್ಲ. ಊರ ಜನರೆಲ್ಲಾ ಎಲ್ಲೋದ್ರೂ ಅಂತ ನೋಡಿದ್ರೆ.ಊರಾಚೆ ಕೇಳಿಬಂದಿದ್ದು ಸಾವಿನ ಕೇಕೆ.

ಹೌದು.. ಕರಡಿಕೊಪ್ಪಲು ಗ್ರಾಮದಲ್ಲಿ ಅದ್ಯಾಕಾಗಿ ಜನ ಕಾಣ್ತಿಲ್ಲ ಅಂತ ನೋಡಿದ್ರೆ ಊರಾಚೆ ಕೇಳಿ ಬಂದಿದ್ದು ಸಾವಿನ ಆಕ್ರಂದನ. ಊರ ಮಂದಿಯೆಲ್ಲಾ ಹೊತ್ತು ಹುಟ್ಟುತ್ತಲೇ ಊರಾಚೆಗೆ ಓಡೋಡಿ ಹೋಗಿದ್ರು. ಅಲ್ಲಿ ಹೋಗ್ತಿದ್ದಂತೆ ಗೋಳಾಟ, ಚೀರಾಟ ಮುಗಿಲು ಮುಟ್ಟುತ್ತಿತ್ತು. ಆ ದೃಶ್ಯವನ್ನ ನೋಡಿ ಇಡೀ ಊರಿಗೂರೇ ಬೆಚ್ಚಿಬಿದ್ದಿತ್ತು. ಯಾಕಂದ್ರೆ ಕರಡಿಕೊಪ್ಪಲು ಗ್ರಾಮದಾಚೆ ನಡೆದಿತ್ತು ಒಂದು ಆಕ್ಸಿಡೆಂಡ್.

ಪ್ರಿಯಕರನ ಕೈಯಿಂದ ಕಟ್ಕೊಂಡ ಗಂನನ್ನ ಕೊಲ್ಲಿಸಿದ ಈ ಮಾಯಗಾಯಿ ಹೆಂಗಸು , ಗಂಡನ ಹೆಣದ ಮುಂದೆ ಕೂತು ಕಣ್ಣೀರಿಟ್ಟಿದ್ದಳು. ಒಲ್ಲದ ಗಂಡನನ್ನ ಕೊಲೆ ಮಾಡಿಸಿ, ಆ ಆರೋಪವನ್ನ ಟಾರ್ಗೆಟ್ ಮಾಡಿದ್ದವರ ಮೇಲೆ ಎತ್ತಾಕಿ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದೋದು ಇವಳ ಪ್ಲಾನ್ ಆಗಿತ್ತು. ಆದ್ರೆ.. ಸ್ಟೇಷನ್ನಿಗೆ ಕರೆಸಿ ವಿಚಾರಣೆ ಮಾಡೋವಾಗ ನನ್ನ ಹತ್ರ ಮೊಬೈಲೇ ಇಲ್ಲ ಅಂತೇಳ್ತಿದ್ದವಳು, ಅಚಾನಕ್ಕಾಗಿ ಲವರ್ ಕೊಡಿಸಿದ್ದ ಮೊಬೈಲ್ ನಂಬರ್ ಕೊಟ್ಟೇಬಿಟ್ಟಿದ್ದಳು ಅಲ್ಲಿಗೆ.. ಇವಳ ಕರಾಮತ್ತೆಲ್ಲಾ ಪೊಲೀಸ್ರ ಕೈಗೆ ಸಿಕ್ಕಾಗಿತ್ತು.

ಈಗಾಗಲೇ ಹೇಳಿದ ಹಾಗೆ , ಗಂಡನ ಜೊತೆ ಸಂಸಾರ ಮಾಡೋದಕ್ಕೆ ಆಗದೆ, ಗಂಟುಬಿದ್ದ ಪ್ರಿಯಕರ ಶಿವರಾಜನ ಸಂಗ ಬೆಳೆಸಿದ್ದ ಈ ಗರತಿ ಲಕ್ಷ್ಮಿ, ಅಮಾಯಕ ಗಂಡನಿಗೆ ಮಂಕುಬೂದಿ ಹಾಕಿ ಗಂಡ ಹೊಲಕ್ಕೆ ಹೋದಾಗ ಮಧ್ಯಾಹ್ನದ ಟೈಮಲ್ಲಿ ಮನೆಗೆ ಬರ್ತಿದ್ದ ಶಿವರಾಜನ ಜತೆ ಮಂಚ ಹತ್ತಿ ಚಕ್ಕಂದ ಆಡ್ತಿದ್ದಳು. ಯಾರಾದ್ರೂ ಕೇಳಿದ್ರೆ, ಅವನು ನನ್ನ ದೂರದ ಸಂಬಂಧಿ, ಕಸಿನ್ ಬ್ರದರ್ ಅಂತ ಸಬೂಬು ಹೇಳ್ತಿದ್ದಳು.

ಸ್ವಾಮಿಯ ತಂದೆ ಊರಗೌಡ. ಚೆನ್ನಾಗೇ ಆಸ್ತಿಪಾಸ್ತಿ ಮಾಡಿಟ್ಟಿದ್ದವರು. ಅಪ್ಪ ಮಾಡಿಟ್ಟ ಜಮೀನಿನಲ್ಲಿ ಒಕ್ಕಲು ತನ ಮಾಡ್ಕೊಂಡು, ಕಬ್ಬು ಭತ್ತ ಹೂ ಬೆಳೆ ಬೆಳ್ಕೊಂಡು ಜೀವನ ಮಾಡ್ತಿದ್ದವನು. ಆದ್ರೆ.. ಒಂದೇ ಒಂದು ದಿನವೂ ಹೆಂಡ್ತಿ ಕೈಯಿಂದ ಕೆಲಸ ಮಾಡಿಸಿರಲಿಲ್ಲ. ಇತ್ತ ಬೆಳಗಾಗುತ್ತಲೇ ದನಕರು ಹೊಡ್ಕೊಂಡು ನೇಗಿಲು ಹೊತ್ಕೊಂಡು ಗದ್ದೆ ಕಡೆ ಹೋಗ್ತಿದ್ದ ಸ್ವಾಮಿ, ಮತ್ತೆ ವಾಪಸ್ ಬರ್ತಾ ಇದ್ದದ್ದು ಹೊತ್ತು ಮುಳುಗೋ ಹೊತ್ತಲ್ಲೇ. ಅತ್ತ ಗಂಡ ಗದ್ದೆಗೆ ಹೋದ್ರೆ, ಇತ್ತ ಮಕ್ಕೂ ಕೂಡ ಶಾಲೆಗೆ ಹೋಗ್ಬಿಡ್ತಾ ಇದ್ರು.

ಆ ಟೈಮಲ್ಲೇ ಕದ್ದು ಹಾಲು ಕುಡಿಯೋ ಕಳ್ಳಬೆಕ್ಕಿನ ತರ ಮನೆ ಸೇರ್ತಿದ್ದ ಶಿವರಾಜನ ಮಧ್ಯಾಹ್ನ ಎರಡು ಮೂರು ಗಂಟೆ ಕಳೆದು ನಂತರ ವಾಪಸ್ ಹೋಗ್ತಾ ಇದ್ದ.ಈ ಲಕ್ಷ್ಮಿಯ ಕಾಮ ದಾಹ ತೀರಿಸಿಕೊಳ್ಳೋಕೆ ಗಂಡನನ್ನ ಕೊಲೆ ಮಾಡಿಸಿದ್ದೇನೋ ಸರಿ. ಹಾಗಂತ, ಸ್ವಾಮಿ ಏನೂ ಕಾಟ ಕೊಡೋ ಗಂಡನಾಗಿರಲಿಲ್ಲ. ಕುಡಿಯೋ ಸೇದೋದು ಮಾತ್ರವಲ್ಲಾ ಯಾವ ಕೆಟ್ಟ ಸಹವಾಸವೂ ಅವನಿಗಿರ್ಲಿಲ್ಲ. ಯಾವಾಗಲೂ ಹೆಂಡ್ತಿ ಮಕ್ಕಳು ಚೆನ್ನಾಗಿರ್ಲಿ ಅಂತ ಮೈಮುರಿದು ದುಡೀತಾ ಇದ್ದವನು.

ಯಾವ ಮಟ್ಟಿಗೆ ಅಂದ್ರೆ, ಹೆಂಡ್ತಿಯ ಸೀರೆ ಒಗೆಯೋದು ಮಾತ್ರವಲ್ಲಾ, ವಯಸ್ಸಾದ ಅತ್ತೆಯನ್ನ ದೂರವಿಟ್ಟಿದ್ದವಳನ್ನ ಕ್ಷಮಿಸಿ ತಾಯಿಯ ಸೇವೆಯನ್ನೂ ಮಾಡ್ತಿದ್ದ ಈ ಪಾಪದ ಬಡಪಾಯಿ.ಹೀಗೆ ಯಾವಾಗಲೂ ಹೆಂಡ್ತಿ ಮಕ್ಕಳು ನನ್ನ ಮನೆ ಸಂಸಾರ ಅಂತ ಇದ್ದವನ ಅತಿಯಾದ ಸಲುಗೆಯೇ ಅವನಿಗೆ ಮೃತ್ಯವಾಗಿತ್ತು. ಇವಳ ಆಟಾಟೋಪ ಜಾಸ್ತಿಯಾಗಿ ಹದಿನೈದು ದಿನಗಳ ಹಿಂದೆ ಶಿವರಾಜನ ಜತೆ ಸೇರಿ ಅದೆಲ್ಲಿಗೆ ಹೋಗಿ ಬಂದಿದದ್ಳೋ.. ಸೂರ್ಯ ಮುಗಳೂಗೋ ಟೈಮಲ್ಲಿ ಮನೆಗೆ ಬಂದಿದ್ದಳು. ಆಗ ಒಂಚೂರು ಜೋರು ಮಾಡಿದ್ದ ಸ್ವಾಮಿ. ಗಂಡ ಇದ್ರೆ ತನ್ನಾಟ ಏನೂ ನಡೆಯಲ್ಲ ಅಂತ ಅಂದುಕೊಂಡು ಈ ಪಾಪಿ ಹೆಂಗಸು ಮಾಡಿದ್ದೇ ಗಂಡನ ಬರ್ಬರ ಹತ್ಯೆ.

LEAVE A REPLY

Please enter your comment!
Please enter your name here