Home Crime ಮುದುಕರ ಗ್ಯಾಂಗ್ ಮಾಡಿತ್ತು ಜಗತ್ತಿನ ಅತ್ಯಂತ ದೊಡ್ಡ ದರೋಡೆ.! ಬಾಲಿವುಡ್ ಧೂಮ್ ಸಿನಿಮಾಕ್ಕೂ ಸೆಡ್ಡು ಹೊಡೆಯುತ್ತೆ...

ಮುದುಕರ ಗ್ಯಾಂಗ್ ಮಾಡಿತ್ತು ಜಗತ್ತಿನ ಅತ್ಯಂತ ದೊಡ್ಡ ದರೋಡೆ.! ಬಾಲಿವುಡ್ ಧೂಮ್ ಸಿನಿಮಾಕ್ಕೂ ಸೆಡ್ಡು ಹೊಡೆಯುತ್ತೆ ಈ ರಿಯಲ್ ರೋಚ“ಕಥೆ”!

178
0
SHARE

ಇದು ಇಂಗ್ಲೇಂಡ್ ದೇಶದ ಲಂಡನ್ ನಲ್ಲಿ ನಡೆದ ರಿಯಲ್ ರೋಚಕ ರಾಬರಿ ಕಹಾನಿ, ಇಂಗ್ಲೇಂಡ್ ನ ಲಂಡನ್ ನಗರದ ಹ್ಯಾಟನ್ ಗಾರ್ಡನ್ ಎಂಬ ಸ್ಟ್ರೀಟ್ ನಲ್ಲಿರುವ ಹ್ಯಾಟನ್ ಗಾರ್ಡನ್ ಸೇಫ್ ಡೆಪಾಸಿಟ್ ಲಿಮಿಟೆಡ್ ನ ಸೀಕ್ರೇಟ್ ಲಾಕರ್ ಗಳಲ್ಲಿದ್ದ ಸಾವಿರಾರು ಕೋಟಿ ಬೆಲೆ ಬಾಳುವ ವಜ್ರ ವೈಡೂರ್ಯ ಗಳನ್ನು ಅನಾಮತ್ತಾಗಿ ಕದ್ದೊಯ್ದ ಥ್ರಿಲ್ಲಿಂಗ್ ಕಹಾನಿ ಈ ಸ್ಟೋರಿ.ಬ್ರಿಟೀಷರು ಭಾರತದ ಮೇಲೆ ದಬ್ಬಾಳಿಕೆ ಮಾಡಿ ಭಾರತೀಯರನ್ನು ಗುಲಾಮಗಿರಿಯಲ್ಲಿ ದೂಡಿ ಎರಡು ಶತಮಾನಗಳ ಕಾಲ ಅದೆಷ್ಟು ಸಂಪತ್ತನ್ನು ಲೂಟಿ ಮಾಡಿ ತಮ್ಮ ದೇಶಕ್ಕೆ ವರ್ಗಾಯಿಸದ್ದಾರೆ ಎಂಬುದು ಲೆಕ್ಕಕ್ಕಂತೂ ಸಿಕ್ಕುವುದಿಲ್ಲ ಬಿಡಿ.

ಬ್ರಿಟೀಷರು ಹಾಗೆ ದೋಚಿಕೊಂಡು ಹೋದ ವಜ್ರ, ವೈಡೂರ್ಯ, ಮುತ್ತು ರತ್ನ ಗಳನ್ನು ಇಂಗ್ಲೇಂಡ್ ನ ಲಂಡನ್ ನಗರದ ಹ್ಯಾಟನ್ ಗಾರ್ಡನ್ ಎಂಬ ಸ್ಟ್ರೀಟ್ ನಲ್ಲಿದ್ದ ವ್ಯಾಪಾರಿಗಳಿಗೆ ಮಾರಾಟ ಮಾಡಿಬಿಟ್ಟರು. ಅತ್ತ ಭಾರತೀಯ ಶೈಲಿಯಲ್ಲಿದ್ದ ಚಿನ್ನಾಭರಣಗಳನ್ನು ಕರಗಿಸಿ ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡುಗೊಳಿಸಿದ ಆ ವ್ಯಾಪಾರಿಗಳು ಬ್ರಿಟನ್ ನ ಚಿನ್ನ ಮತ್ತು ವಜ್ರ ಪ್ರಿಯರಿಗೆ ದೊಡ್ಡ ದೊಡ್ಡ ಮೊತ್ತಕ್ಕೆ ಮಾರುತ್ತಾ ಕಾಸು ಮಾಡಿಕೊಳ್ಳುತ್ತಾ ಬಂದರು.

ತಾವು ಮೊದಲೇ ಪ್ಲಾನ್ ಮಾಡಿಕೊಂಡ ಹಾಗೆ ‘ಮಿಸ್ಟರ್ ಬಿ’ ಎಲ್ಲರಿಗಿಂತಲೂ ಮೊದಲೇ ಆ ಹ್ಯಾಟನ್ ಗಾರ್ಡನ್ ಇದ್ದ ಜಾಗದ ತುಸು ದೂರದ ಮರೆಯಲ್ಲಿ ನಿಂತು ಮಿಕ್ಕ ನಾಲ್ವರಿಗೆ ಮೆಸೇಜ್ ಪಾಸ್ ಮಾಡಲು ಬಂದು ನಿಲ್ಲುತ್ತಾನೆ, ಸ್ವಲ್ಪ ಹೊತ್ತು ಕಳೆಯುತ್ತದೆ, ಒಬ್ಬ ಸೆಕ್ಯೂರಿಟಿ ಮುಖ್ಯ ದ್ವಾರದ ಬಾಗಿಲನ್ನು ಲಾಕ್ ಮಾಡಿಕೊಂಡು ಹೊರ ನಡೆಯುತ್ತಾನೆ, ತಕ್ಷಣವೇ ‘ಮಿಸ್ಟರ್ ಬಿ” ತನ್ನ ಮೆಸೇಜ್ ಗಾಗಿ ಕಾಯುತ್ತಿದ್ದ ಮಿಸ್ಟರಿ ಮ್ಯಾನ್ ಅರ್ಥಾತ್ ಬೆಸಿಲ್ ಗೆ ವಾಕಿಟಾಕಿಯಲ್ಲಿ ಮೆಸೇಜ್ ಪಾಸ್ ಮಾಡುತ್ತಾನೆ.

ಮೊದಲ ಹಂತದ ಅತೀ ದೊಡ್ಡ ಸವಾಲೊಂದನ್ನು ನಿರಾಯಾಸವಾಗಿ ಫೇಸ್ ಮಾಡಿ ಒಳಹೊಕ್ಕ ಅವರು ನಿಟ್ಟುಸಿರು ಬಿಟ್ಟು ಕ್ಷಣವೂ ತಡಮಾಡದೇ ತಮ್ಮ ಪ್ಲಾನ್ ಅನ್ನು ಕಾರ್ಯರೂಪಗೊಳಿಸಲು ಸಜ್ಜಾಗಿ ಮುನ್ನಡೆಯುತ್ತಾರೆ, ನೇರವಾಗಿ ಲಿಫ್ಟ್ ಬಳಿ ತೆರಳಿದ ಗ್ಯಾಂಗ್, ಲಿಫ್ಟ್ ಅನ್ನು ಎರಡನೇ ಮಹಡಿಗೆ ಹೋಗಿ ನಿಲ್ಲುವಂತೆ ಮಾಡುತ್ತಾರೆ.  ನಂತರದಲ್ಲಿ ಲಿಫ್ಟ್ ನ ಶಾಫ್ಟ್ ಅನ್ನು ಬಳಸಿ ನೇರವಾಗಿ ಅಂಡರ್ ಗ್ರೌಂಡ್ ಗೆ ಇಳಿದು ಬಿಡುತ್ತಾರೆ, ಅಲ್ಲಿಗೆ ಜಗತ್ತು ಕಂಡ ಅತ್ಯಂತ ದೊಡ್ಡ ದರೋಡೆಯ ಮುನ್ನದ ಎರಡನೇ ಸವಾಲನ್ನು ಮೀರಿ ತಮ್ಮ ಗುರಿಯತ್ತ ಮುನ್ನಡೆಯುತ್ತಾರೆ.

ಡ್ರಿಲ್ಲಿಂಗ್ ಮಾಡಲು ಶುರುಮಾಡಿದ ಬರೊಬ್ಬರಿ ಒಂದೂವರೆ ಘಂಟೆಯ ನಂತರದಲ್ಲಿ ಮೂರೂ ರಂಧ್ರಗಳನ್ನು ಕೊರೆಯುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನೇನು ಲಾಕರ್ ಗಳತ್ತ ಧಾವಿಸಲು ಕಣ್ಣು ಹಾಯಿಸಿದರೆ ಮತ್ತೊಂದು ಸವಾಲು ಎದುರಾಗುತ್ತೆ, ಎಸ್, ಆ ಗೋಡೆಯ ನಂತರದಲ್ಲಿ ಮತ್ತೊಂದು ಬೃಹತಾಕಾರದ ಸ್ಟೀಲ್ ಗೋಡೆಯನ್ನು ನಿಲ್ಲಿಸಲಾಗಿರುತ್ತದೆ. ಅದನ್ನು ಕೊರೆಯುವುದು ಅಸಾಧ್ಯವಾದ ವಿಚಾರ ಎಂಬುದನ್ನು ಅರಿತ ಅವರು ಕೆಳಗೆ ಬೀಳಿಸಲು ಪ್ರಯತ್ನಿಸುತ್ತಾರೆ, ಆದರೆ ಸಾಧ್ಯವೇ ಆಗುವುದಿಲ್ಲ. ಆ ಮೆಟಲ್ ಗೋಡೆಯನ್ನು ಕೆಳಗೆ ಉರುಳಿಸಲು ಅನುಕೂಲವಾಗುವಂತಹ ಸಾಧನವೊಂದನ್ನು ತೆಗೆದುಕೊಂಡು ನಾಳೆ ಮತ್ತೆ ಬರಲು ತೀರ್ಮಾನಿಸಿ ಅಲ್ಲಿಂದ ವಾಪಾಸ್ಸಾಗುತ್ತಾರೆ.

ಎಸ್, ಕದ್ದ ಮಾಲನ್ನು ಅಂದು ಹಂಚಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಿಳಿದು ‘ಮಿಸ್ಟರ್ ಬಿ” ಯ ಕಾರನ್ನು ಫಾಲೋ ಮಾಡಿ ಆ ಡಕಾಯಿತರನ್ನು ಬಲೆಗೆ ಬೀಳಿಸುತ್ತಾರೆ, ಆದರೆ ಕದ್ದ ಮಾಲು ಸಿಕ್ಕಿತು ಎಂದು ನಿಟ್ಟುಸಿರು ಬಿಡುತ್ತಿದ್ದ ಪೋಲೀಸರಿಗೆ ಶಾಕ್ ಕಾದಿರುತ್ತದೆ, ಅವರು ಹಂಚಿಕೊಳ್ಳಲು ತಂದಿದ್ದ ಆ ಮಾಲು ಕೇವಲ ಮೂವತ್ತು ಭಾಗದಷ್ಟಿರುತ್ತದೆ, ಅರ್ಥಾತ್ ಒಂದೂವರೆ ಸಾವಿರ ಕೋಟಿ ಗಳಲ್ಲಿ ಅಲ್ಲಿದ್ದದು ಕೇವಲ ಐನೂರು ಕೋಟಿಗಳಷ್ಟಿರುತ್ತದೆ. ಈ ಮಾಹಿತಿಯನ್ನು ಅವರಿಂದ ಬಾಯಿ ಬಿಡಿಸಿದಾಗ ಅವರಿಗೆ ಒಂದು ಅಚ್ಚರಿಯ ವಿಚಾರ ತಿಳಿಯುತ್ತದೆ.

ಎಸ್, ನಾವು ನಿಮಗೆ ಮೊದಲೇ ಪರಿಚಯಿಸಿದ ಹಾಗೆ, ಮಿಸ್ಟರಿ ಮ್ಯಾನ್ ಕೊನೆಗೂ ಮಿಸ್ಟರಿಯಾಗಿಯೇ ಉಳಿದುಬಿಡುತ್ತಾನೆ, ಏಕೆಂದರೆ ಆತ ಮುಕ್ಕಾಲು ಭಾಗದಷ್ಟು ಕದ್ದ ಮಾಲನ್ನು ಅಪರಿಚಿತ ಸ್ಥಳಕ್ಕೆ ಹೊತ್ತೊಯ್ದಿರುತ್ತಾನೆ, ಅದಕ್ಕಿಂತಲೂ ಹೆಚ್ಚಾಗಿ ಆ “ಮಿಸ್ಟರ್ ಎಕ್ಸ್” ಅಥವಾ ಮಿಸ್ಟರಿ ಮ್ಯಾನ್ ಗೆ ಆ ಹ್ಯಾಟನ್ ಗಾರ್ಡನ್ ನ ಮುಂಭಾಗಿಲಿನ ಕೀಲಿಕೈ ಸಿಕ್ಕಿದ್ದಾದರೂ ಹೇಗೆ ಎಂಬುದು ಪೋಲೀಸರಿಗೆ ಕಾಡಲು ಶುರುವಾಗುತ್ತದೆ. ವಿಪರ್ಯಾಸಕ್ಕೆ ಇಂದಿಗೂ ಕೂಡ ಆ ಮಿಸ್ಟರಿ ಮ್ಯಾನ್ ನನ್ನಾಗಲೀ ಆತ ಹೊತ್ತೊಯ್ದಿದ್ದ ಕದ್ದ ಮಾಲನ್ನಾಗಲೀ ವಶಪಡಿಸಿಕೊಳ್ಳಲು ಸಾಧ್ಯವೇ ಆಗಿಲ್ಲ , ಆದರೆ ಮಿಕ್ಕ ನಾಲ್ಕು ಮಂದಿಗೆ ಮಾತ್ರ ಶಿಕ್ಷೆ ಯಾಗಿ ತಮ್ಮ ವೃದ್ದಾಪ್ಯವನ್ನು ಜೈಲಿನಲ್ಲಿ ಕಳೆಯುವಂತಾಗಿದೆ.

 

LEAVE A REPLY

Please enter your comment!
Please enter your name here