Home Home ಮುನಿರತ್ನ ಅವರು ಈ ಹಿಂದೆ ಅಮಿತ್ ಶಾ ಅವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು. ಈಗ ಶಾ...

ಮುನಿರತ್ನ ಅವರು ಈ ಹಿಂದೆ ಅಮಿತ್ ಶಾ ಅವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು. ಈಗ ಶಾ ಕಾಲಿಗೆ ಬೀಳುತ್ತಿದ್ದಾರೆ, 50 ಕೋಟಿ ರೂ.ಗಳಿಗೆ ಅವರು ಬಿಜೆಪಿಗೆ ಮಾರಾಟವಾಗಿದ್ದಾರೆ-ಸಿದ್ದರಾಮಯ್ಯ

374
0
SHARE

ಬೆಂಗಳೂರು: ಮತದಾರರಿಗೆ ಹಂಚಲು ಮುನಿರತ್ನ ಅವರಿಗೆ ಹಣ ಎಲ್ಲಿಂದ ಬಂತು. ಅದು ಲೂಟಿ ಹೊಡೆದ ಹಣ. 50 ಕೋಟಿ ರೂ.ಗಳಿಗೆ ಅವರು ಬಿಜೆಪಿಗೆ ಮಾರಾಟವಾಗಿದ್ದಾರೆ. ಲೂಟಿಕೋರರಿಗೆ ಮತದಾರರು ಅವಕಾಶ ಮಾಡಿಕೊಡಬಾರದು ಎಂದು ಕಳಕಳಿಯ ಮನವಿ ಮಾಡುತ್ತೇನೆ. ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಾರೆ ಮುನಿರತ್ನ. ಅನುದಾನ ಕೊಟ್ಟವರು ಯಾರು. ಈ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿದ್ದು ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಎಂಬುದನ್ನು ಮತದಾರರು‌ ಮರೆಯಬಾರದು.

ಮುನಿರತ್ನ ಅವರು ಈ ಹಿಂದೆ ಅಮಿತ್ ಶಾ ಅವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು. ಈಗ ಶಾ ಕಾಲಿಗೆ ಬೀಳುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಪಳಗಿರುವ ಅದರಲ್ಲಿಯೇ ಮುಳುಗಿ ಹೋಗಿರುವ ವ್ಯಕ್ತಿ ಶಾಸಕರಾಗಬೇಕೇ ಅಥವಾ ಸುಸಂಸ್ಕೃತ ಹೆಣ್ಣು ಮಗಳು ಕುಸುಮಾ ಆಯ್ಜೆಯಾಗಬೇಕೇ ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ನೆಮ್ಮದಿ ನೆಲೆಯೂರಬೇಕಾದರೆ, ಕ್ರಿಮಿನಲ್ ಚಟುವಟಿಕೆಗಳು ಅಂತ್ಯವಾಗಬೇಕಾದರೆ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬೀಳಬೇಕು ಎಂದಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರಿಗೆ ಆಶೀರ್ವಾದ ಮಾಡಿ.. ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಮತದಾರರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಡಿಕೊಂಡ ಮನವಿ ಇದು. ಯಶವಂತಪುರ ವಾರ್ಡ್ ನಲ್ಲಿ ಇಂದು ಕುಸುಮಾ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ತೀವ್ರ ವಾಗ್ಸಾಳಿ ನಡೆಸಿದರು.‌ಮುನಿರತ್ನ ಅವರು ಶಾಸಕರಾದ ಮೇಲೆ ಕ್ಷೇತ್ರದ ಮತದಾರರು ನೆಮ್ಮದಿ ಕಳೆದುಕೊಂಡಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ಮತದಾರರಿಗೆ ಮುನಿರತ್ನ ನಾನಾ ಆಮಿಷ ಒಡ್ಡುತ್ತಿದ್ದಾರೆ. ಕೇಬಲ್ ಕನೆಕ್ಷನ್ ಕೊಡಿಸುತ್ತಿದ್ದಾರೆ.‌ ಮತದಾರರ ಗುರುತಿನ ಚೀಟಿ ಪಡೆದು ಒಬ್ಬೊಬ್ಬರಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎಂದರು.ಜೆಸಿಬಿಯಲ್ಲಿ ದೋಚುತ್ತಿದ್ದಾರೆ: ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮಗ, ಮೊಮ್ಮಗ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದ್ದಾರೆ. ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ ಎಂದರು.ಬಿಜೆಪಿ ಹಿಂದುಳಿದವರು, ದಲಿತರು, ಬಡವರು, ಅಲ್ಪಸಂಖ್ಯಾತರ ಪರ ಇರುವ ಪಕ್ಷ ಅಲ್ಲ. ಈ ವರ್ಗದ ಬಗ್ಗೆ ಕಾಳಜಿ ಇರುವುದು ಕಾಂಗ್ರೆಸ್ ಗೆ ಮಾತ್ರ ಎಂದು ಹೇಳಿದರು.ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ನಸೀರ್ ಅಹಮದ್ ಮತ್ತಿತರರು ಪ್ರಚಾರದಲ್ಲಿ ಭಾಗಿಯಾದರು.

LEAVE A REPLY

Please enter your comment!
Please enter your name here