Home Cinema ಮುನಿಸನ್ನು ಮರೆತಿರುವ ದರ್ಶನ್-ವಿಜಯಲಕ್ಷೀ ಹೋಗ್ತಾರಾ ಲಾಂಗ್ ಡ್ರೈವ್..?! ದರ್ಶನ್‌ಗಾಗಿ ಅಭಿಮಾನಿಗಳು ಕಟ್ಟುತ್ತಿರುವುದ್ಯಾಕೆ ಗೊತ್ತಾ ದೇವರಲ್ಲಿ ಹರಕೆ..!?

ಮುನಿಸನ್ನು ಮರೆತಿರುವ ದರ್ಶನ್-ವಿಜಯಲಕ್ಷೀ ಹೋಗ್ತಾರಾ ಲಾಂಗ್ ಡ್ರೈವ್..?! ದರ್ಶನ್‌ಗಾಗಿ ಅಭಿಮಾನಿಗಳು ಕಟ್ಟುತ್ತಿರುವುದ್ಯಾಕೆ ಗೊತ್ತಾ ದೇವರಲ್ಲಿ ಹರಕೆ..!?

268
0
SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಆರಡಿ ಕಟೌಟ್ ಗಳಲ್ಲಿ ಒಬ್ಬರು. ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಬ್ಯಾಕ್ ಟು ಬ್ಯಾಕ್ ಹಿಟ್ ಮತ್ತು ಫ್ಲಾಪ್ ಎರಡನ್ನೂ ಕೊಡ್ತಿರೋ ಸ್ಯಾಂಡಲ್‌ವುಡ್ನ ತೂಗುದೀಪ. ಕಷ್ಟದಿಂದ ಮೇಲೆ ಬಂದು ಕನ್ನಡ ಚಿತ್ರರಂಗದ ನಂಬರ್ ಒನ್ ನಟನಾಗಿರೋ ದರ್ಶನ್ ಇತ್ತೀಚೆಗೆ ತಮ್ಮ ಪತ್ನಿಯ ಜೊತೆಗಿನ ಹಳೆಯ ಮುನಿಸುಗಳನ್ನು ಮರೆತು ಒಂದಾಗಿರೋ ಲಕ್ಷಣಗಳು ಕಂಡು ಬಂದಿದ್ದವು.

ಈ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದ ದಚ್ಚು- ವಿಜಯಲಕ್ಷ್ಮೀ ಬಗ್ಗೆ ಈಗ ಮತ್ತೊಂದು ಲೇಟೆಸ್ಟ್ ನ್ಯೂಸ್ ಕೇಳಿಬಂದಿದೆ. ಹೌದು.. ಸ್ಯಾಂಡಲ್‌ವುಡ್‌ನ ಮರಿಟೈಗರ್ ವಿನೋದ್ ಪ್ರಭಾಕರ್ ದಂಪತಿಗಳು ಇತ್ತೀಚೆಗೆ ಐಶಾರಾಮಿ ಕಾರನ್ನು ಖರೀದಿಸಿದ್ರು. ಬರೋಬ್ಬರಿ ೧ ಕೋಟಿ ಬೆಲೆಬಾಳುವ ಕಾರಿದು.ಕಡು ನೀಲಿ ಬಣ್ಣದ ಆಡಿ ಕ್ಯೂ ೭ ಕಾರನ್ನು ವಿನೋದ್ ಪ್ರಭಾಕರ್ ದಂಪತಿಗಳು ಖರೀದಿ ಮಾಡಿ ಸಂತಸಗೊಂಡಿದ್ರು.

ಡಿ ಬಾಸ್ ಕೂಡ ವಿನೋದ್ ಪ್ರಭಾಕರ್ ಕಾರನ್ನು ಖರೀದಿಸಿರುವ ಸುದ್ದಿ ಕೇಳಿ ಸಂಭ್ರಮಿಸಿದ್ರು. ಅದೇ ಖುಷಿ ಮತ್ತು ಸಂಭ್ರಮವನ್ನು ದುಪ್ಪಟ್ಟು ಮಾಡಲು ಹೊಸ ಕಾರಿನಲ್ಲಿ ದರ್ಶನ್, ವಿಜಯಲಕ್ಷ್ಮೀ ದಂಪತಿ ಮತ್ತು ವಿನೋದ್ ಪ್ರಭಾಕರ್ ಜೋಡಿ ಶಿರಡಿ ಸಾಯಿ ಬಾಬಾರ ದರ್ಶನ ಮಾಡಿ ಬಂದಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಹಿಡಿದು ರಾಜರಾಜೇಶ್ವರಿ ನಗರದವರೆಗೂ ತೂರಿಬಂದಿದೆ.ಯಸ್.. ಇತ್ತೀಚೆಗಷ್ಟೇ ಯಜಮಾನ ಸೆಟ್‌ನಲ್ಲಿ ಯಜಮಾನ್ತಿಯನ್ನು ಕಂಡು ಡಿ- ಫ್ಯಾನ್ಸ್ ಒಂದು ವಾರಕ್ಕೆ ಮುಂಚೇನೇ ಹಬ್ಬವನ್ನು ಸೆಲಬ್ರೇಟ್ ಮಾಡಿದ್ರು.

ವಿಜಯಲಕ್ಷ್ಮೀ ಮತ್ತು ದರ್ಶನ್ ಒಟ್ಟಿಗೆ ಮಾತನಾಡ್ತಿರುವ ಪೋಟೋಗಳನ್ನು ನೋಡಿ ಫುಲ್ ಖುಷಿ ಪಟ್ಟಿದ್ರು . ಸದ್ಯ  ಫ್ಯಾನ್ಸ್ ಸಂಭ್ರಮ ಈಗ ಇನ್ನಷ್ಟು ಹೆಚ್ಚಾಗುವ ವಿಷಯ ಗಾಂಧೀನಗರ ಪಂಡಿತರಿಂದ ಕೇಳಿಬಂದಿದ್ದು. ಯಜಮಾನ ಸೆಟ್‌ನಲ್ಲಿ ಒಟ್ಟಾಗಿರುವ ದಚ್ಚು-ವಿಜಯ ಅವರ ಲಾಂಗ್ ಡ್ರೈವ್ ಹೇಗಿರಬಹುದೆಂದು ಕೂತಲ್ಲೇ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.ಸದ್ಯ ಕಷ್ಟದ ದಿನಗಳನ್ನು, ಕಹಿ ಘಟನೆಗಳನ್ನೆಲ್ಲಾ ಮರೆತು ಪತ್ನಿ ವಿಜಯಲಕ್ಷ್ಮೀ- ದರ್ಶನ್ ಒಂದಾಗಿದ್ದಾರೆ.

ಐರಾವತ ಚಿತ್ರದ ನಂತ್ರ ಅಪ್ಪನ ಚಿತ್ರದಲ್ಲಿ ಮಗ ವಿನೀಶ್ ಕೂಡ ನಟಿಸುತ್ತಿದ್ದು. ಯಜಮಾನ ಚಿತ್ರದ ಮೂಲಕ ಡಬಲ್ ಸಂಭ್ರಮವನ್ನು ಅಭಿಮಾನಿಗಳಿಗೆ ನೀಡಲು ಸಜ್ಜಾಗಿದ್ದಾರೆ.ಅದೇನೇ ಇದ್ರು.. ದರ್ಶನ್ ಮತ್ತು ವಿಜಯಲಕ್ಷ್ಮೀ ಮೊದಲಿನಂತೆ ಅನ್ಯೋನ್ಯವಾಗಿದ್ದಾರೆಂಬ ಸುದ್ದಿಯ ಜೊತೆಗೆ ಅಣ್ಣ ಮತ್ತು ಅತ್ತಿಗೆ ಲಾಂಗ್ ಡ್ರೈವ್ ಹೋಗಿರುವ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಆದಷ್ಟು ಬೇಗ ಇಬ್ಬರೂ ಎಲ್ಲರ ಮುಂದೆ ಒಟ್ಟಿಗೆ ದರ್ಶನ ನೀಡ್ಲಿ ಅಂತ ಡಿ- ಬಾಸ್ ಭಕ್ತಗಣ ದೇವರಲ್ಲಿ ಹರಕೆ ಕಟ್ಟುತ್ತಿದ್ದಾರೆ.

LEAVE A REPLY

Please enter your comment!
Please enter your name here