Home Crime ಮುಸ್ಲಿಂ ಸಮಾಜದಿಂದ 12ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ..! ಇಷ್ಟದೇವರನ್ನು ಪೂಜೆ ಮಾಡಿದ್ದಕ್ಕೆ ಇವರಿಗೆ ಇದೆಂಥಾ ಪರೀಕ್ಷೆ..!

ಮುಸ್ಲಿಂ ಸಮಾಜದಿಂದ 12ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ..! ಇಷ್ಟದೇವರನ್ನು ಪೂಜೆ ಮಾಡಿದ್ದಕ್ಕೆ ಇವರಿಗೆ ಇದೆಂಥಾ ಪರೀಕ್ಷೆ..!

738
0
SHARE

21ನೇ ಶತಮಾನದಲ್ಲಿದ್ರು ಇನ್ನು ನಮ್ಮಲ್ಲಿರೋ ಮೂಢನಂಬಿಕೆಗಳು ಅರ್ಥವಿಲ್ಲದ ಆಚರಣೆಗಳು ಮಾತ್ರ ನಿಂತಿಲ್ಲ. ಒಂದೇ ಧರ್ಮವಾದ್ರೂ ಆಚರಣೆಯಲ್ಲಿ ವ್ಯತ್ಯಯ ಆಗಿದ್ದಕ್ಕೆ ಬಹಿಷ್ಕಾರ ಹಾಕುವಂತಹ ಮೂಢರು ನಮ್ಮಲ್ಲಿದ್ದಾರೆ. ದೇವರ ಪೂಜೆಯಲ್ಲಿ ತಮ್ಮ ಆಚರಣೆಯನ್ನ ಅನುಸರಿಸದಿದ್ದಕ್ಕೆ 12 ಕುಟುಂಬಗಳ ಬದುಕು ಶೋಚನೀಯವಾಗಿದೆ. ಧರ್ಮವೊಂದರ ಮೂಲಭೂತವಾದಿಗಳ ದರ್ಪಕ್ಕೆ ದಣಿದ ಜನರ ಕಥೆಯಿದು.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾ. ಸದಾಶಿವಗಡದಲ್ಲಿ ಸುಮಾರು 12ಕುಟುಂಬಗಳಿಗೆ ಮುಸ್ಲಿಂ ಸಮುದಾಯ ಬಹಿಷ್ಕಾರ ಹಾಕಿದೆ. ಈ ಕುಟುಂಬಸ್ಥರ ಹಿರಿಯರು ಅನಾದಿಕಾಲದಿಂದಲೂ ಆಂಧ್ರಪ್ರದೇಶದ ಕಡಪದಲ್ಲಿರುವ ನೂರಾನಿ ಮಸೀದಿಯ ದಾವರ್ ಅಲಿ ಷಾ ಗುರುಗಳನ್ನ ಪೂಜೆ ಮಾಡ್ಕೊಂಡು ಬರ್ತಿದ್ರು. ಈ ಗುರುಗಳ ಉಪದೇಶಗಳನ್ನ ಕೇಳ್ತಿದಾರೆ ಅನ್ನೋ ಕಾರಣಕ್ಕೆ, ಸ್ಥಳೀಯ ಮಸೀದಿಗಳ ಜಮಾತ್ ಸದಸ್ಯರು ಇವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಸಮುದಾಯದಿಂದ ಬಹಿಷ್ಕಾರಕ್ಕೊಳಗಾಗಿರುವ ಕುಟುಂಬಸ್ಥರ ಮಾನಸಿಕ ನೋವು ಹೇಳತೀರದಾಗಿದೆ. ಆ ಕುಟುಂಬಗಳು ಯಾವುದೇ ಕಾರ್ಯಕ್ರಮಗಳಲ್ಲೂ ಮೌಲ್ವಿಗಳಾಗಲೀ ಅಥವಾ ಮುಸ್ಲಿಂ ಸಮುದಾಯದ ಯಾರೊಬ್ಬರೂ ಭಾಗವಹಿಸುವುದಿಲ್ಲವಂತೆ. ಮನೆಯಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ಜಮಾತ್‌ನಿಂದ ಒಪ್ಪಿಗೆ ಪತ್ರಕ್ಕೆ ಮನವಿ ಮಾಡಿದ್ರೂ ಸಹ ಯಾವೊಬ್ಬ ಸದಸ್ಯರೂ ಕ್ಯಾರೆ ಅಂತಿಲ್ಲ ಅಂತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇನ್ನು ಈ 12 ಕುಟುಂಬಗಳು ಕೂಡಾ ದರ್ಗಾಗಳಿಗೆ ತೆರಳಿ ಮುಸ್ಲಿಂ ಸಮುದಾಯದ ಎಲ್ಲಾ ಸಂಪ್ರದಾಯಗಳನ್ನ ಪಾಲನೆ ಮಾಡ್ತಾರೆ.ನಮಾಜ್, ಕುರಾನ್ ಕೂಡಾ ಓದುತ್ತಾರೆ. ಆದರೂ ಸಹ ಇವರಿಗೆ ಜಮಾತ್‌ನಲ್ಲಿ ಸೇರಿಸಿಕೊಳ್ಳದೆ ದೂರ ಇಡ್ತಿದಾರಂತೆ. ಹೀಗಾಗಿ ಈ ಕುಟುಂಬಗಳ ಯುವಕ, ಯುವತಿಯರಿಗೆ 30-35 ವರ್ಷ ವಯಸ್ಸಾದರೂ ಮದುವೆಯಾಗದೇ ಮನೆಯಲ್ಲೇ ಇರುವಂತಾಗಿದೆ.

ಕೇವಲ ಇವರಿಗೆ ಇಷ್ಟವಿಲ್ಲದ ಗುರುಗಳ ಪೂಜೆ ಮಾಡುತ್ತಿರುವುದಕ್ಕೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಎಷ್ಟು ಸರಿ ಅನ್ನೋದು ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬಸ್ಥರ ಪ್ರಶ್ನೆಯಾಗಿದೆ.ಒಟ್ಟಾರೆ ಬಹಿಷ್ಕಾರಕ್ಕೊಳಗಾಗಿ ನರಕಯಾತನೆ ಅನುಭವಿಸುತ್ತಿರುವ ಈ ಕುಟುಂಬಗಳ ಕಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ನಡೆಯತ್ತಿರುವ ಅನ್ಯಾಯಕ್ಕೆ ಬ್ರೇಕ್ ಹಾಕಬೇಕಾಬೇಕಿದೆ.

LEAVE A REPLY

Please enter your comment!
Please enter your name here