Home KARNATAKA ಮುಹೂರ್ತದ ವೇಳೆ ಮಂಟಪಕ್ಕೆ ಎಂಟ್ರಿಕೊಟ್ಟ ಯುವತಿ ಪ್ರಿಯಕರ, ಬಳಿಕ ಪ್ರೀತಿಗೆ ಸಮ್ಮತಿಸಿ ಮಗಳನ್ನು ಧಾರೆ ಎರೆದ...

ಮುಹೂರ್ತದ ವೇಳೆ ಮಂಟಪಕ್ಕೆ ಎಂಟ್ರಿಕೊಟ್ಟ ಯುವತಿ ಪ್ರಿಯಕರ, ಬಳಿಕ ಪ್ರೀತಿಗೆ ಸಮ್ಮತಿಸಿ ಮಗಳನ್ನು ಧಾರೆ ಎರೆದ ಫೋಷಕರು..

893
0
SHARE

ವರನ ಕೈಯಲ್ಲಿ ತಾಳಿ. ಎದುರಿಗೆ ಹಸೆಮಣೆ ಮೇಲೆ ವಧು. ವರ ಇನ್ನೇನು ವಧುವಿನ ಕೊರಳಿಗೆ ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮುಹೂರ್ತದ ವೇಳೆಗೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧುವಿನ ಪ್ರಿಯಕರ, ಆ ಪ್ರಿಯಕರನನ್ನ ಕಂಡೊಡನೆ ನಿಶ್ಚಿಯಿಸಿದ್ದ ವರನೊಂದಿಗೆ ಮದುವೆ ನೋ ಅಂದ ವಧು, ಇದ್ರಿಂದ ರಣರಂಗವಾದ ಮದುವೆಯ ಮಂಟಪ, ಅಯ್ಯೋ ಸಿನಿಮಾ ಕಥೆ ಹೆಳ್ತಿದ್ದಾರೆ ಅಂದ್ಕೋಬೇಡಿ. ಇದು ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಗಲಾಟೆ ಮದುವೆ ಕಥೆ

ಈ ಘಟನೆ ನೆಡೆದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಅರಿಶಿನಕುಂಟೆಯ ಶ್ರೀ ವಿಶ್ವ ವಿಜಯ ವಿಠಲ ಪ್ರಾರ್ಥನಾ ಮಂದಿರದಲ್ಲಿ. ಈ ಪ್ರಾರ್ಥನಾ ಹಾಲ್‌ನಲ್ಲಿ ಗುರುಹಿರಿಯರು ನಿಶ್ಚಯಿಸಿದ್ದಂತೆ ನೆಲಮಂಗಲ ತಾಲ್ಲೂಕಿನ ನಂದರಾಮಯ್ಯನಪಾಳ್ಯ ಗ್ರಾಮದ ಶ್ರೀರಂಗನಾಥ್ ಮತ್ತು ಬೆಂಗಳೂರು ಕಾಮಾಕ್ಷಿಪಾಳ್ಯದ ಪದ್ಮಪ್ರಿಯಾ ಎಂಬ ವಧುವರರ ಮದುವೆ ನೆರವೇರಬೇಕಿತ್ತು. ವರ ಶ್ರೀರಂಗನಾಥ್ ಇನ್ನೇನು ಪದ್ಮಪ್ರಿಯಾ ಕೊರಳಿಗೆ ತಾಳಿ ಕಟ್ಟಬೇಕು ಅಷ್ಟರಲ್ಲೇ ಆಕೆಯ ಪ್ರಿಯಕರ ಎಂಟ್ರಿ ಕೊಟ್ಟುಬಿಟ್ಟಿದ್ದ.

ಕೂಡ್ಲೆ ವಧು ಈ ಮದುವೆಗೆ ಒಲ್ಲೆ ಅಂತ ಮಧುವೆ ಕ್ಯಾನ್ಸಲ್ ಮಾಡ್ಸೇಬಿಟ್ಲು. ವಧು ಪದ್ಮಪ್ರಿಯ ಕಳೆದೊಂದು ವರ್ಷದಿಂದ ಫೇಸ್ ಬುಕ್ನಲ್ಲಿ ಪರಿಚಯವಾಗಿದ್ದ ಸಂಜು ಎಂಬಾತನನ್ನು ಪ್ರೀತಿಸುತ್ತಿದ್ಲು. ಪದ್ಮಪ್ರಿಯ ಪ್ರಿಯಕರ ಸಂಜು ಸಿನಿಮಾ ರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ.. ಆದ್ರೆ ಈ ವಿಚಾರ ಮನೆಯಲ್ಲಿ ಗೊತ್ತಿರಲಿಲ್ಲ. ವಧುವಿನ ಪೋಷಕರು ಶ್ರೀರಂಗನಾಥ್ ಅನ್ನೋ ಯುವಕನ ಜೊತೆಗೆ ಪದ್ಮಪ್ರಿಯಾ ವಿವಾಹ ನಿಶ್ಚಯಿಸಿದ್ದರು.

ತನ್ನ ಪ್ರೀತಿಯನ್ನು ಮುಚ್ಚಿಟ್ಟಿದ್ದ ಪದ್ಮಪ್ರಿಯಾ ಇಂದು ಮದುವೆ ಮಂಟಪದಲ್ಲಿ ಪ್ರಿಯಕರ ಸಂಜುವನ್ನು ನೋಡಿದ್ದೇ ತಡ ತಾಳಿಕಟ್ಟಲು ಬಿಟ್ಟಿಲ್ಲ. ಬಳಿಕ ಇವರಿಬ್ಬರ ಪ್ರೇಮ ಕಥೆ ಕೇಳಿದ ಮಧು ಪೋಷಕರು ಸಂಜುವಿಗೆ ಥಳಿಸಿದ್ದಾರೆ. ವಿಷಯ ತಿಳಿದು ಹಾಲಿಗೆ ಬಂದ ನೆಲಮಂಗಲ ಟೌನ್ ಪೊಲೀಸರು ಸಂಜುವನ್ನು ಠಾಣೆಗೆ ಕರೆದೊಯ್ಯುದಿದ್ದಾರೆ.ಬಳಿಕ ಪೋಲಿಸರು ಸಂಧಾನ ನಡೆಸಿ ಮುಚ್ಚಳಕೆ ಬರೆಸಿಕೊಂಡಿದ್ದಾರೆ.

ಬಳಿಕ ಪ್ರೇಮಿ ಸಂಜು ಜೊತೆಯಲ್ಲೇ ವದು ಪದ್ಮಪ್ರಿಯಾರನ್ನು ನೆಲಮಂಗಲ ಉದ್ಬವ ಗಣಪತಿ ದೇವಸ್ಥಾನದಲ್ಲಿ ಒಲ್ಲದ ಮನಸ್ಸಿನಿಂದಲೇ ಪೋಷಕರು ಧಾರೆ ಎರೆದು ಕೊಟ್ಟಿದ್ದಾರೆ.ಪ್ರಿತಿ ವಿಷಯ ಮುಚ್ಚಿಟ್ಟಿದ್ದಕ್ಕೆ ಮದುವೆ ಮನೆಯಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಕೊನೆಗೂ ಜೋಡಿ ತಮ್ಮ ಪ್ರೀತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here