Home Crime ಮೂಟೆ ಕಟ್ಟಿ ಶವದ ಮುಂದೆ ಕೂತಿದ್ರು ಆದರ್ಶ ದಂಪತಿ..! ಎರಡೇ ಎರಡು ಲಕ್ಷಕ್ಕೆ ಹೋಗಿತ್ತು ಆಕೆಯ...

ಮೂಟೆ ಕಟ್ಟಿ ಶವದ ಮುಂದೆ ಕೂತಿದ್ರು ಆದರ್ಶ ದಂಪತಿ..! ಎರಡೇ ಎರಡು ಲಕ್ಷಕ್ಕೆ ಹೋಗಿತ್ತು ಆಕೆಯ ಪ್ರಾಣ..! ಸೈನಿಕನ ಪತ್ನಿಯ ಬಡ್ಡಿ ವ್ಯವಹಾರ ತಂದಿತ್ತು ಆಪತ್ತು..!

1532
0
SHARE

 

ತೇಜು ಮತ್ತು ರಮೇಶ್ ದಂಪತಿ ಇರೋದು ಹಾಸನದ ಬೀರನಹಳ್ಳಿ ಕೆರೆಯ ನಿವಾಸಿಗಳು. ಹಾಸನ ಇವರ ಮೂಲ ಅಲ್ಲ ಆದ್ರು ಇಲ್ಲಿ ಒಂದು ಮನೆಯನ್ನ ಲೀಸ್ ಗೆ ಹಾಕ್ಕೊಂಡು ಗಂಡ ಹೆಂಡತಿ ಸಂಸಾರ ಮಾಡ್ತಿದ್ದಾರೆ. ಈ ಆಂಟಿ ಹಾಸನದಲ್ಲಿ ಒಂದು ಟೀ ಅಂಗಡಿ ಇಟ್ಕೊಂಡಿದ್ರೆ ಇವನಿದ್ದಾನಲ್ಲ ರಮೇಶ್ ಗೂಡ್ಸ್ ಆಟೋವನ್ನ ಓಡಿಸ್ತಾನೆ.

ಇವರ ಲೈಫ್ ಹೈವೆಯಲ್ಲಿ ಹೋಗೋ ಹೈಸ್ಪೀಡ್ ಕಾರ್ ನಂತೆ ಅಲ್ಲದಿದ್ರು ಆಟೋದಂತೆ ಸರಾಗವಾಗಿಯೇ ಹೋಗ್ತಿತ್ತು. ಆದ್ರೆ ಇವತ್ತ ಇವರಿಬ್ಬರು ಮಾಡಬಾರದ ಕೆಲಸ ಮಾಡ್ಕೊಂಡು ಈಗ ಪೊಲೀಸ್ ಠಾಣೆಯಲ್ಲಿ ಪೊಲೀಸ್ರು ಕೊಡೋ ಟೀ ಬಿಸ್ಕಟ್ ತಿನ್ನೊಂದು ಕೂತಿದ್ದಾರೆ. ಗಂಡ ಹೆಂಡತಿ ಅಂದ್ರೆ ಸಂಸಾರ ನಡೆಸೋದಕ್ಕೆ, ಬದುಕು ರೂಪಿಸಿಕೊಳ್ಳೋದಕ್ಕೆ ಅವ್ರು ಜೊತೆ ಜೊತೆ ಯಾಗಿ ನಿಲ್ಲಬೇಕಿತ್ತು. ಆದ್ರೆ ಇವ್ರು ತಪ್ಪು ಮಾಡೋದಕ್ಕೂ ಕೈ ಜೋಡಿಸಿ ಇವತ್ತು ಜೈಲು ಸೇರಿದ್ದಾರೆ.ಈ ಶಶಿಕಲಾ ಮತ್ತು ತೇಜು ಅವ್ರು ಬಾಲ್ಯದಿಂದಲೂ ಸ್ನೇಹಿತೆಯರು, ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದ್ತಿದ್ರು.

ನಂತ್ರ ಇಬ್ಬರಿಗೂ ಮದುವೆಯಾದ ಮೇಲೆ ಬೇರೆ ಬೇರೆ ಊರಿಗೆ ಹೋಗಿ ಸಂಸಾರ ಕಟ್ಟಿಕೊಂಡಿದ್ರು. ಆದ್ರೆ ಒಂದಷ್ಟು ವರ್ಷವಾದ ಮೇಲೆ ಇಬ್ಬರು ಒಂದೇ ಏರಿಯಾಗೆ ಬಂದು ನೆಲಸಬೇಕಾಗಿ ಬಂದಿತ್ತು. ಇಬ್ಬರು ವರ್ಷಗಳವರೆಗೆ ಮುಖ ನೋಡದೇ ಇರೋರು ಈಗ ಒಂದೇ ಏರಿಯಾದಲ್ಲಿ ಇದ್ರು. ಹೇಗೂ ಹಳೆಯ ಪರಿಚಯ ಅಲ್ವಾ ಅಂತ ಇಬ್ರು ತುಂಬಾ ಅನ್ಯೋನ್ಯವಾಗಿದ್ರು. ಅಲ್ಲದೆ ಹಬ್ಬ ಹರಿದಿನಗಳನ್ನ ಇಬ್ಬರು ಕೂಡಿಯೇ ಮಾಡ್ತಿದ್ರು. ಇಬ್ಬರು ನೋಡೋದಕ್ಕೆ ಅಂದವಾಗಿ ಇದ್ರು. ಹೀಗಾಗಿ ಯಾವುದೇ ಹಬ್ಬ ನಡೆದ್ರು ಇವರಿಬ್ಬರು ಒಂದೇ ರೀತಿಯ ಬಟ್ಟೆಗಳನ್ನ ಹಾಕ್ಕೊಂಡು ಹಬ್ಬವನ್ನ ಮಾಡ್ತಿದ್ರು. ಏರಿಯಾದಲ್ಲಿ ಇವರಿಬ್ಬರು ನಿಜಕ್ಕೂ ಒಳ್ಳೇ ಫ್ರೆಂಡ್ಸ್ ಅಂತಾನೆ ಅಂದುಕೊಂಡಿದ್ರು.  ಇವ್ರು ಕೂಡಾ ಒಬ್ಬರ ಮನೆಗೆ ಒಬ್ಬರು ಹೋಗೋದು. ಒಬ್ಬರಿಗೆ ಒಬ್ಬರು ಸಹಾಯ ಮಾಡೋದು ಮಾಡ್ಕೊಂಡು ಚೆನ್ನಾಗಿಯೇ ಇದ್ರು.

ಇವರಿಬ್ಬರು ಹೀಗೆ ಚೆನ್ನಾಗಿ ಇದ್ದಿದ್ರೆ ನಾವು ಇವರ ಬಗ್ಗೆ ಮಾತನಾಡೋದಕ್ಕೆ ಹೋಗ್ತಿರಲಿಲ್ಲ. ಇವರಿಬ್ಬರ ಸಂಬಂಧ ಎಲ್ಲಿತನಕ ಹಣಕಾಸಿನವರೆಗೂ ಹೋಗಿರಲಿಲ್ವೋ ಅಲ್ಲಿವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅದ್ಯಾವಾಗ ಫ್ರೆಂಡ್ ಶಿಪ್ ನಲ್ಲಿ ಹಣದ ವ್ಯವಹಾರ ಮಾಡಿದ್ರೋ ಆಗ ಇವರ ಸಂಬಂಧ ಹಳಸಿ ಹೋಗಿತ್ತು. ಸ್ನೇಹಿತೆಯರೆ ಪರಮ ವೈರಿಗಳಾಗಿ ಹೋಗಿದ್ರು. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ಈಗ ಶತೃಗಳಾಗಿದ್ರು.ಶಶಿಕಲಾ ಎರಡು ಲಕ್ಷ ರೂಪಾಯಿ ಹಣವನ್ನ 20 ಪರ್ಸೆಂಟ್ ಬಡ್ಡಿಯ ಹಾಗೆ ತೇಜುಗೆ ಕೊಟ್ಟಿದ್ಲು.  ಎರಡು ತಿಂಗಳು ಬಡ್ಡಿ ಕಟ್ಟುವ ಹೊತ್ತಿಗೆ ತೇಜು ಸುಸ್ತಾಗಿ ಹೋಗಿದ್ಲು.

ಬಡ್ಡಿಯ ಹಣವನ್ನೇ ಸರಿಯಾಗಿ ಕಟ್ಟೋದಕ್ಕೆ ಆಗ್ತಿಲ್ಲ. ಇನ್ನು ಅಸಲು ಹಣವನ್ನ ತಕ್ಷಣವೇ ಕೊಡು ಅಂದ್ರೆ ಅದ್ಯಾಗೆ ಕೊಡೋದಲ್ವಾ ಅದಕ್ಕೆ ಆಕೆಗೆ ಹಣವನ್ನ ಆ ಕ್ಷಣಕ್ಕೆ ಕೊಡೋದಕ್ಕೆ ಆಗಲಿಲ್ಲ. ಆದ್ರೆ ಶಶಿ ಮಾತ್ರ ನೀನು ಈಗಲೇ ಹಣವನ್ನ ಕೊಡಬೇಕು ಅಂತ ಆಕೆ ಪಟ್ಟು ಹಿಡಿದು ಕೂತಿದ್ಲು. ನಂತ್ರ ತೇಜು ತನ್ನ ಮನೆಗೆ ಬಾ ಹಣ ಕೊಡ್ತೀನಿ ಅಂತ ಆಕೆಯನ್ನ ಭಾನುವಾರ ಮನೆಗೆ ಕರೆಸಿಕೊಂಡಿದ್ಲು. ಅಲ್ಲದೆ ಈಗ ಸ್ವಲ್ಪ ಹಣ ಇದೆ ತಗೊ ಉಳಿದ ಹಣ ಮತ್ತೆ ಕೊಡ್ತೀನಿ ಅಂತ ಹೇಳಿದ್ಲು. ಆದ್ರೆ ಶಶಿ ಮಾತ್ರ ಎಲ್ಲಾ ಹಣ ಈಗ್ಲೇ ಸೆಟ್ಲ್ ಆಗಬೇಕು ಅಂತ ಕೂತಿದ್ಲು. ಇದೇ ವಿಚಾರಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ನೀನೇನು ಅನ್ನೋದು ಗೊತ್ತು, ನೀನೇನು ಅನ್ನೋದು ಗೊತ್ತು ಅಂತ ಇಬ್ಬರು ಗಲಾಟೆ ಮಾಡಿದ್ರು.

ನಂತ್ರ ಇದೇ ಸಿಟ್ಟಿನಲ್ಲಿ ಶಶಿ ತೇಜುಗೆ ಹಲ್ಲೆ ಮಾಡಿದ್ಲು. ನನ್ನ ಹಣ ಕೊಡಲಿಲ್ಲ ಅಂದ್ರೆ ನಿನ್ನನ್ನ ಸುಮ್ಮನೆ ಬಿಡೋದಿಲ್ಲ ಅಂತ ಆಕೆಗೆ ಹೊಡೆದಿದ್ಲು. ಆಗ ತೇಜುಗೆ ಕೂಡಾ ಸಿಟ್ಟು ಬಂದಿತ್ತು. ಆಗ ತೇಜು ಆಕೆಗೆ ಸಿಟ್ಟಿನಿಂದ ಚಾಕುವಿನಿಂದ ಚುಚ್ಚಿದ್ಲು. ಸಿಟ್ಟಿನ ಭರದಲ್ಲಿ ಏನೋ ಮಾಡೋದಕ್ಕೆ ಹೋಗಿ ಇನ್ನೇನನ್ನೋ ಮಾಡಿದ್ಲು. ಅಷ್ಟೊತ್ತಿಗೆ ಆಕೆಯ ಗಂಡ ಕೂಡಾ ಅಲ್ಲಿಗೆ ಬಂದಿದ್ದಾನೆ. ಆತ ಬಂದು ನೋಡಿದಾಗ ಮನೆಯಲ್ಲಿ ಆಗಿರೋ ಅನಾಹುತ ಅವನಿಗೆ ಅರ್ಥವಾಗಿದೆ. ತಕ್ಷಣವೇ ಏನಾದ್ರು ಮಾಡಬೇಕು ಅನ್ನೋ ಕಾರಣಕ್ಕೆ ಆತ ಮನೆಯಲ್ಲಿ ಆಗಿದ್ದ ರಕ್ತವನ್ನೆಲ್ಲಾ ಒರೆಸಿದ್ದಾರೆ. ನಂತ್ರ ಪ್ಲಾಸ್ಟಿಕ್ ಚೀಲವನ್ನ ತಂದು ಅದರಲ್ಲಿ ಆಕೆಯ ಶವವನ್ನ ಹಾಕಿ ಅದನ್ನ ಬಾತ್ ರೂಂನ ಮೂಲೆಯಲ್ಲಿ ಇಟ್ಟಿದ್ರು.

ರಾತ್ರಿ ಆದ ಮೇಲೆ ಅದನ್ನ ಎಲ್ಲಾದ್ರು ತಗೊಂಡು ಹೋಗಿ ಹಾಕೋಣ ಅಂತ ಪ್ಲಾನ್ ಮಾಡಿದ್ರು. ಅಷ್ಟೊತ್ತಿಗೆ ಶಶಿ ಸಂಬಂಧಿಕರು ಇಷ್ಟು ಹೊತ್ತಾದ್ರು ಇನ್ನು ಆಕೆ ಯಾಕೆ ಮನೆಗೆ ಬಂದಿಲ್ಲ ಅಂತ ಹುಡುಕಾಡೋದಕ್ಕೆ ಶುರುಮಾಡಿದ್ರು. ತೇಜು ಮನೆಗೆ ಹೋಗಿ ಬರ್ತೀನಿ ಅಂತ ಹೋಗಿದ್ದ ಕಾರಣಕ್ಕೆ ಇಲ್ಲೇ ಇರಬಹುದು ಅಂತ ಆಕೆಯನ್ನ ಹುಡ್ಕೊಂಡು ಅಲ್ಲಿಗೆ ಬಂದಿದ್ರು. ಈ ವೇಳೆ ಆ ಮನೆಗೆ ಬಂದು ನೋಡಿದ್ರೆ ಇಲ್ಲೇನೋ ನಡೆಯಬಾರದ್ದು ನಡೆದು ಹೋಗಿದೆ ಅನ್ನೋದು ಅರಿವಾಗಿತ್ತು. ಆಗ ಅವರೆಲ್ಲಾ ಆ ಮನೆಯನ್ನ ಹುಡುಕಾಡೋದಕ್ಕೆ ಶುರುಮಾಡಿದ್ರು. ಈ ವೇಳೆ ತೇಜು ಮತ್ತು ಆಕೆಯ ಗಂಡ ರಮೇಶ ಅಲ್ಲಿಂದ ಓಡಿ ಹೋಗೋದಕ್ಕೆ ಯತ್ನಿಸಿದ್ರು.

ಅದ್ಯಾವಾಗ ಇವರು ಓಡಿ ಹೋಗೋದಕ್ಕೆ ಯತ್ನಿಸಿದ್ರೋ ಆಗ ಇವ್ರು ಶಶಿಯನ್ನ ಕೊಲೆ ಮಾಡಿದ್ದಾರೆ ಅದಕ್ಕೆ ತಪ್ಪಿಸಿಕೊಂಡು ಹೋಗ್ತಿದ್ದಾರೆ ಅಂತ ಅಂದುಕೊಂಡಿದ್ರು. ಆಕೆಯನ್ನ ಹುಡ್ಕೊಂಡು ಬಂದಿದ್ದವರು ಜೋರಾಗಿ ಕೂಗಿ ಗಲಾಟೆ ಮಾಡಿದ್ರು. ಆಗ ಊರಿನವರೆಲ್ಲಾ ಸೇರಿ ಅವರಿಬ್ಬರನ್ನ ಹಿಡ್ಕೊಂಡು ಎಳ್ಕೊಂಡು ಬಂದಿದ್ರು. ಅಲ್ಲದೆ ಪೊಲೀಸ್ರಿಗೆ ವಿಷಯವನ್ನ ತಿಳಿಸಿದ್ರು. ಇನ್ನೊಂದು ಕಡೆ ಆ ಊರಿನವರೆಲ್ಲಾ ಶಶಿ ಕೊಲೆಯಾಗಿ ಅನ್ನೋ ವಿಷಯ ತಿಳಿದು ಕೋಪವನ್ನ ನೆತ್ತಿಗೇರಿಸಿಕೊಂಡು ಬಿಟ್ಟಿದ್ರು. ಅಲ್ಲದೆ  ಆವರ ಮನೆಯ ಮುಂದೆ ನಿಲ್ಲಿಸಿದ್ದ  ಆಟೋವನ್ನ ಜಖಂಗೊಳಿಸಿದ್ರು. ಎಲ್ಲರೂ ಸೇರಿ ಅವರಿಬ್ಬರಿಗೆ ನಾಲ್ಕು ತಪರಾಕಿಯನ್ನ ಕೂಡಾ ಹಾಕಿದ್ರು.ನಂತ್ರ ಪೊಲೀಸ್ರು ಬಂದು ಅವರಿಬ್ಬರನ್ನ ಬಂಧಿಸಿ ಕರ್ಕೊಂಡು ಹೋಗಿದ್ರು.

ಪೊಲೀಸ್ರ ವಿಚಾರಣೆಯ ವೇಳೆ ತೇಜು ನಡೆದಿರೋ ಘಟನೆಯನ್ನೆಲ್ಲಾ ಅವರಿಗೆ ತಿಳಿಸಿದ್ದಾಳೆ. ಆಕೆ ನನ್ನಿಂದ ಬಡ್ಡಿ ಹಣವನ್ನ ತಗೊಳ್ತಾ ಇದ್ಲು. ಅಷ್ಟೊಂದು ಹಣ ಕೊಡೋದಕ್ಕೆ ಆಗೋದಿಲ್ಲ ಅಂತ ಹೇಳಿದ್ರು ಕೇಳದೆ ಅಸಲು ಹಣವನ್ನ ಕೊಡು ಅಂತ ಬೆನ್ನು ಬಿದ್ದಿದ್ಲು. ಅಲ್ಲದೆ ಆಕೆ ಮನೆಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ಲು. ಇದೇ ಕಾರಣಕ್ಕೆ ಸಿಟ್ಟಲ್ಲಿ ನಾನು ಆಕೆಯನ್ನ ಕೊಲೆ ಮಾಡಿಬಿಟ್ಟಿದ್ದೆ ಅಂತ ಪೊಲೀಸ್ರ ಮುಂದೆ ಹೇಳಿದ್ಲು.

ಇದೀಗ ಪೊಲೀಸ್ರು ತೇಜು, ರಮೇಶ್ ಮತ್ತು ಅವರ ಸಂಬಂಧಿಯನ್ನ ಬಂಧಿಸಿದ್ದಾರೆ. ಕೇವಲ ಎರಡೇ ಎರಡು ಲಕ್ಷ ರೂಪಾಯಿಗೆ ಆ ಮನೆಯಲ್ಲಿ ಆಗಬಾರದ್ದು ಆಗಿ ಹೋಗಿತ್ತು. ಆಕೆ ಈ ವಿಷಯವನ್ನ ನಾಲ್ಕು ಜೊತೆ ಕೂತು ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು. ಹಣ ಕೊಟ್ಟಿದ್ದೀನಿ ಅನ್ನೋ ಕಾರಣಕ್ಕೆ ಆಕೆ ತೇಜು ಮೇಲೆ ದರ್ಪ ತೋರಿಸೋದಕ್ಕೆ ಹೋಗಿ ಹೆಣಾಗಿದ್ದಾಳೆ. ತಗೊಂಡ ಹಣವನ್ನ ಹಾಗೆ ಮರ್ಯಾದೆಯಿಂದ ವಾಪಸ್ ಕೊಟ್ಟು ಆಕೆ ತನ್ನ ಸ್ನೇಹವನ್ನ ಉಳಿಸಿಕೊಂಡು ಮರ್ಯಾದೆಯಿಂದ ಜೀವನ ನಡೆಸಿದ್ರೆ ಈಗ ಜೈಲು ಸೇರೋ ಹಾಗೆ ಆಗ್ತಿರಲಿಲ್ಲ.

LEAVE A REPLY

Please enter your comment!
Please enter your name here