Home Crime ಮೂರನೇ ಕ್ಲಾಸ್‌ನಲ್ಲೇ ಅವಳ ಮೇಲೆ ಕಣ್ಣಾಕಿದ್ದ ಈ ಪಾಗಲ್ ಪ್ರೇಮಿ ಪ್ರೈಮರಿ,ಮಿಡಲ್ ಕ್ಲಾಸ್ ಆದಮೇಲೆ ಲವ್‌ಗಾಗಿ...

ಮೂರನೇ ಕ್ಲಾಸ್‌ನಲ್ಲೇ ಅವಳ ಮೇಲೆ ಕಣ್ಣಾಕಿದ್ದ ಈ ಪಾಗಲ್ ಪ್ರೇಮಿ ಪ್ರೈಮರಿ,ಮಿಡಲ್ ಕ್ಲಾಸ್ ಆದಮೇಲೆ ಲವ್‌ಗಾಗಿ ಮುಂದೆ ಮಾಡಿದ್ದೇನು ಗೊತ್ತಾ..?!

2386
0
SHARE

ಅವೊತ್ತು ಜೂನ್ ನಾಲ್ಕನೇ ತಾರೀಕು. ತಾವಂಶಿ ಊರಿನ ಜನ ಊರಿನ ಸರ್ಕಾರಿ ಹೈಸ್ಕೂಲ್ ಕಡೆ ದೌಡಾಯಿಸಿ ಜಮಾಯಿಸಿದ್ದರು. ಎಂದಿನಂತೆ ಬೆಳಂಬೆಳಗ್ಗೆ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದರು. ಆ ಸುದ್ದಿ ತಿಳಿದ ಊರಿನ ಜನ ಒಬ್ಬೊಬ್ಬರಾಗೇ ಶಾಲೆಯತ್ತ ಓಡಿ ಬಂದಿದ್ರು. ಅತ್ತ ಸ್ಕೂಲ್ ಹೆಡ್ ಮಾಸ್ಟರ್ ಅಥಣಿ ಪೊಲೀಸ್ ಸ್ಟೇಷನ್ ಗೆ ಓಡೋಗಿದ್ದರು. ಅಷ್ಟಕ್ಕೂ ತಾಂವಶಿ ಗ್ರಾಮದಲ್ಲಿ ನಡೆದಿದ್ದೇನು ಗೊತ್ತಾ.. ಊರಿನ ಶಾಲೆಗೆ ಬಿದ್ದಿತ್ತು ಬೆಂಕಿ.ಸುದ್ದಿ ತಿಳಿದು ಶಾಲೆಗೆ ಹೋಗಿದ್ದವರಿಗೆ ಕಂಡಿದ್ದು ನಮ್ಮೂರ ಶಾಲೆ ಸುಟ್ಟೋಗಿದ್ದ ದೃಶ್ಯ..

ಮೊದ ಮೊದಲಿಗೆ ಎಲ್ಲರೂ ಕೂಡ ವಿದ್ಯುತ್ ಶಾರ್ಟ್ ಸರ್ಕ್ಯೂಟಿಂದ ಬೆಂಕಿ ಕಾಣಿಸಿಕೊಂಡಿರ್ಬೇಕು ಅಂದುಕೊಂಡಿದ್ರು. ಆದ್ರೆ.. ಅದು ಆಕಸ್ಮಿಕವಾಗಿ ನಡೆದ ಘಟನೆ ಅಲ್ಲಾ.. ಯಾರೋ ಕಿಡಿಗೇಡಿಗಳು ಬೇಕಂತಲೇ ಎಸಗಿರೋ ದುಷ್ಕೃತ್ಯ ಅಂತ ಗೊತ್ತಾಗಿತ್ತು. ಯಾಕಂದ್ರೆ.. ಬೆಂಕಿ ಬಿದ್ದ ಶಾಲೆಯ ಬೋರ್ಡ್ ಮೇಲೆ ರಾಜಾಜಿಸ್ತಾ ಇತ್ತು.. ಪ್ರೇಮ ಬರಹ.ಐ ಲವ್ ಯೂ ವೀಣಾ.. ವೀಣಾ ಲವ್ಸ್ ಉಮೇಶ್.. ವೀಣಾ ನೀನೆ ನನ್ನ ಬಜಾರಿ, ನಾ ನಿನ್ನ ಪ್ರೇಮ ಪೂಜಾರಿ.. ಮೋಸ ಮಾಡಿದ ಹುಡುಗಿ ವೀಣಾ, ಮೋಸ ಹೋದ ಹುಡುಗ ಉಮೇಶ.. ಇದನ್ನೆಲ್ಲಾ ಬರೆದಿದ್ದು ವೀಣಾಳಿಗೋಸ್ಕರ, ಇದನ್ನ ಬರೆದಿರೋದು ಉಮೇಶ…

ಇದು.. 2015 2016 ನೇ ಲವ್ ಸ್ಟೋರಿ … ಹೀಗೆ ಉಮೇಶ್ ಹಾಗೂ ವೀಣಾ ಹೆಸರಿನಲ್ಲಿ ಕ್ಲಾಸ್ ರೂಮ್ ಬೋರ್ಡ್ ಮೇಲೆ ಪ್ರೇಮ ಬರಹವನ್ನೇ ಹಚ್ಚೆ ಇಳಿಸಲಾಗಿತ್ತು.ಶಾಲೆಯಲ್ಲಿ ನಡೆದ ಈ ವಿಚಿತ್ರ ಘಟನೆ ಊರ ಮಂದಿಗೆ ಅಚ್ಚರಿ ತಂದಿತ್ತು.ಶಾಲೆಗೆ ಬೆಂಕಿ ಇಟ್ಟು.. ನಾನವನಲ್ಲಾ ನಾನವನ್ಲಾ ಅಂತ ಡ್ರಾಮಾ ಉಮೇಶನೇ ನಮ್ಮೂರ ಸ್ಕೂಲನ್ನ ಸುಟ್ಟಿದ್ದಾ ಅಂತ ತಾಂವಶಿ ಊರ ಜನ ಅಚ್ಚರಿ ಪಟ್ಟಿದ್ರು. ಜೊತೆ ಜೊತೆಗೆ ಉಮೇಶನ ಮೇಲೆ ಕಣ್ಣು ಕೆಂಪಗೆ ಮಾಡ್ಕೊಂಡು ಎಗರಾಡಿದ್ರು.  ಊರೋವ್ರ ಕೈಗೆ ಸಿಕ್ಕಾಕೊಂಡ್ರೆ ಈ ಪಡ್ಡೆ ಹುಡ್ಗ ಉಮೇಶನಿಗೆ ಒಂದು ಗತಿ ಕಾಣಿಸ್ತಿದ್ರು. ಬಟ್..   ಅಷ್ಟೊತ್ತಿಗಾಗಲೇ ಪೊಲೀಸರು ಅವನನ್ನ ಎತ್ತಾಕೊಂಡು ಬಂದು ಸ್ಟೇಷನ್ ಒಳಗೆ ಕೂರಿಸಿಬಿಟ್ಟಿದ್ರು…

ಅಷ್ಟಕ್ಕೂ ಈ ಪಾಪಿ ಯಾಕೆ.. ಶಾಲೆಗೆ ಕಿಚ್ಚು ಹಚ್ಚಿದ ಅಂತ ನೋಡಿದ್ರೆ.. ಅಲ್ಲಿ ಕಾಣೋದು ಉಮೇಶ ಅನ್ನೋ ವಿಲಕ್ಷಣ ಹಾಗೂ ಪಾಗಲ್ ಪ್ರೇಮಿಯ ಮನಸ್ಸಲ್ಲಿದ್ದ ಪ್ರೇಮಾಗ್ನಿ..!! ಈ ಕೇವಲ 19 ಪ್ರಾಯದ ಪಡ್ಡೆ ಹೈದನ ಮನಸ್ಸಲ್ಲಿ ಪ್ರೇಮಾಗ್ನಿ ಧಗಧಗ ಉರಿತೀದೆ.. ಅದೂ ಕೂಡ ಒಂದಲ್ಲಾ ಎರಡಲ್ಲಾ ಬರೋಬ್ಬರಿ 12 ವರ್ಷಗಳಿಂದ ಅಂದ್ರೆ ನಂಬಲೇಬೇಕು ಕಣ್ರಿ. ಆ ಪ್ರೇಮಾಗ್ನಿಯೇ ತಾವಂಶಿ ಶಾಲೆಯನ್ನ ಧಗಧಗ ಅನ್ನಿಸಿತ್ತು. ಆ ಪ್ರೇಮ ಜ್ವಾಲೆಯ ಮಂದ ಬೆಳಕಲ್ಲಿ ಕಾಣುತ್ತೆ ಈ ಭಗ್ನ ಪ್ರೇಮಿಯ ಫಸ್ಟ್ ಟೈಮ್ ಲವ್ ಸ್ಟೋರಿ.ಉಮೇಶನ ಜೊತೆ ಕ್ಲಾಸ್ ರೂಂ ಬೋರ್ಡ್ ಮೇಲೆ ಏರಿರೋ ವೀಣಾ ಅನ್ನೋ ಹೆಣ್ಮಗಳು…

ಇದೇ ಉಮೇಶನ ಊರಿನವಳೇನೆ. ಸಣ್ಣ ವಯಸ್ಸಿಂದ ಒಟ್ಟಿಗೆ ಆಡಿ ಬೆಳೆದವರೇ ಆಗಿದ್ದರು. ಆದ್ರೆ.. ಈ ಅಮರ ಪ್ರೇಮಿ ಉಮೇಶನಿಗೆ.. ವೀಣಾಳ ಮೇಲೆ ಮೊದಲ ಸಲ ಲವ್ ಆಗಿದ್ದು ಯಾವಾಗ ಗೊತ್ತೇ.. ಜಸ್ಟ್ ಮೂರನೇ ಕ್ಲಾಸಲ್ಲಿ ಅಂದ್ರೆ ಶಾಕ್ ಆಗುತ್ತೆ.ಮೂರನೇ ತರಗತಿಯಲ್ಲಿ ಕೂತು ಪಾಠ ಕೇಳ್ದಿದ್ದಾಗ ಎಲ್ಲ ಮಕ್ಕಳು ಅ ಆ ಇ ಈ ಅಕ್ಷರ ಮಾಲೆಯನ್ನ ಜೋಡಿಸ್ತಿದ್ದಾಗ ಚಡ್ಡಿ ಹಾಕಿದ್ದ ಉಮೇಶ ವೀಣಾಳ ಮೇಲೆ ಕಣ್ಣಾಕಿದ್ದ. ಅಕ್ಷರ ಮಾಲೆಯೇ ನೆಟ್ಟಗೆ ಬರದ ವಯಸ್ಸಲ್ಲಿ ಈ ಉಮೇಶನ ಮನಸ್ಸಲ್ಲಿ ಪ್ರೇಮಾಕ್ಷರ ಹುಟ್ಟಿತ್ತು. ಆಗಿಂದ ವೀಣಾಳ ಜೊತೆ ಒಟ್ಟೊಟ್ಟಿಗೇ ಇರ್ತಿದ್ದ. ಪ್ರೈಮರಿ ಸ್ಕೂಲ್ ಆಯ್ತು ಮಿಡ್ಲ್ ಸ್ಕೂಲ್ ಮುಗೀತು…

ಹೈಸ್ಕೂಲ್ ಗೆ ಬಂದಾಗಲೂ ಇವನ ಲವ್ ಸ್ಟೋರಿ ಕಂಟಿನ್ಯೂ ಆಗ್ತಿತ್ತಂತೆ. ಬಟ್.. ಅದು ಓನ್ಲೀ ಒನ್ ಸೈಡ್ ಲವ್.ಯಾವಾಗ.. ತಾವಂಶಿಯ ಹೈಸ್ಕೂಲ್ ಮೆಟ್ಟಿಲು ಹತ್ತಿ ಎಸ್ ಎಸ್ ಎಲ್ಸಿ ಕ್ಲಾಸಲ್ಲಿ ಕೂತ್ನೋ ನೋಡಿ.. ಇವನ ದಿಕ್ಕಿ ದಿಶೆ ಎಲ್ಲಾ ಉಲ್ಟಾಪಲ್ಟಾ ಆಗೋಯ್ತು. ಯಾವಾಗಲೂ ಪೋಲಿ ಬಿದ್ಕೊಂಡು ವಯಸ್ಸಲ್ಲದ ವಯಸ್ಸಲ್ಲಿ ಲವ್ವು ಲವ್ವು ಅಂತ ಸುತ್ತಾಡ್ತಾದ್ನೋ ಅತ್ತ ಶಾಲೆಗೆ ನೆಟ್ಟಗೆ ಹೋಗೋದನ್ನೇ ಬಿಟ್ಟುಬಿಟ್ಟಿದ್ದ. ಅತ್ತ ವೀಣಾ ಇದ್ಯಾವುದರ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ಓದುತ್ತಾ ಒಳ್ಳೆ ಪರ್ಸೆಂಟೇಜ್ ತಗೊಂಡು ಉಮೇಶನಿಗೆ ಟಾ ಟಾ ಹೇಳಿ ಕಾಲೇಜು ಮೆಟ್ಟಿಲು ಹತ್ತಿದ್ಳು…

ಬಟ್.. ಉಮೇಶನಿಗೆ ಅಟೆಂಡ್ ನೆಸ್ ಜಾರ್ಟೇಜಾಗಿ ಹಾಲ್ ಟಿಕೆಟ್ ಕೈ ತಪ್ಪಿತ್ತು. ಅಲ್ಲಿಗೆ ಮುಗೀತು ಉಮೇಶನ ಕಥೆ. ಪರೀಕ್ಷೆ ಬರೆಯೋದಕ್ಕೆ ಆಗದೆ, ಕಾಲೇಜು ಕನ್ನಸನ್ನ ಹಾಳು ಮಾಡಿಕೊಂಡಿದ್ದ. ಆದ್ರೆ.. ವೀಣಾ ಮಾತ್ರ ಟಿಪ್ ಟಾಪಾಗಿ ಕಾಲೇಜಿಗೆ ಹೋಗ್ತಾ ಬರ್ತಾ ಇದದ್ದನ್ನ ನೋಡ್ತಿದ್ದ ಕುರಿಗಾಯಿ ಉಮೇಶ.. ಕೈ ಕೈ ಹಿಚುಕಿ ಕೊಳ್ತಾ ಕಣ್ಣೀರಾಕ್ತಿದ್ದ. ಅವಾಗ್ಲೂ ಹೇಗೋ ಸಮಾಧಾನದಿಂದಲೇ ಇದ್ದ. ಆದರೆ ಯಾವಾಗ.. ವೀಣಾಳ ಮನೆಯಲ್ಲಿ ಗಂಡು ಹುಡುಕೋದಕ್ಕೆ ಶುರು ಮಾಡಿದ್ರೋ…

ಆಗ್ಲೇ ಈ ಓನ್ ಸೈಡ್ ಲವ್ವರ್ ಬಾಯ್ ಉಮೇಶನ ಹಾರ್ಟ್ ಪೀಸ್ ಪೀಸ್ ಆಗೋಯ್ತು.  ನನ್ನ ಈ ಪರಿಸ್ಥಿಗೆ ಕಾರಣ ಆಗಿದ್ದು.. ಪರೀಕ್ಷೆ ಬರೆಸದ ತನ್ನ ಶಾಲೆಯೇ ಅಂತ ಸಿಟ್ಟಿನಿಂದ ಬೆಂಕಿ ಇಟ್ಟಿದ್ದ. ತನ್ನ ವೀಣಾಳ ಲವ್ ಸ್ಟೋರಿಗೆ ಒಂದಷ್ಟು ಮಸಾಲೆ ಹಾಕಿದ್ರೆ.. ಅವಳ ಮದುವೆ ಮುರಿದೋಗುತ್ತೆ ಅನ್ನೋ ಕಾರಣಕ್ಕೆ.. ಐಡಿಯಾ ಮಾಡಿ ಪ್ರೇಮ ಪತ್ರ, ಪ್ರೇಮ ಬರಹಗಳನ್ನ ಬರೆಡಿದ್ದ. ಆದ್ರೆ..ಓವರ್ ಸ್ಮಾರ್ಟ್ ಆಗೋದಕ್ಕೆ ಹೋಗಿ ಇದೀಗ ತಗಲಾಕೊಂಡು ಕಂಬಿ ಎಣಿಸೋಕೆ ಹೋಗುವಂತಾಗಿದೆ. ಇದೇ ಪಾಗಲ್ ಪ್ರೇಮಿ ಉಮೇಶನ .. ಮೈ ಆಟೋಗ್ರಾಫ್ ಬ್ಯಾಡ್ ಮೆಮೋರಿಸ್ ಸ್ಟೋರಿ…

LEAVE A REPLY

Please enter your comment!
Please enter your name here