Home District “ಮೂರ್ಖ CM, ಮುಟ್ಟಾಳ ಜನಪ್ರತಿನಿಧಿಗಳು” ನಾಲಿಗೆ ಹರಿಬಿಟ್ಟ ಧಾರವಾಡದ ಮನ್ಸೂರ್ ಮಠದ ಬಸವರಾಜ್ ಸ್ವಾಮೀಜಿ..!

“ಮೂರ್ಖ CM, ಮುಟ್ಟಾಳ ಜನಪ್ರತಿನಿಧಿಗಳು” ನಾಲಿಗೆ ಹರಿಬಿಟ್ಟ ಧಾರವಾಡದ ಮನ್ಸೂರ್ ಮಠದ ಬಸವರಾಜ್ ಸ್ವಾಮೀಜಿ..!

1116
0
SHARE

ಸಿಎಮ್ ಹೆಚ್ ಡಿ ಕುಮಾರಸ್ವಾಮಿ ಒಬ್ಬ ಮೂರ್ಖ. ಅವನು ನೂರಕ್ಕೆ ನೂರರಷ್ಟು ಮೂರ್ಖ , ಅವಾ ಮೂರ್ಖ. ಪದೆ ಪದೆ ಏಕವಚನದಲ್ಲಿ ಮೂರ್ಖ ಎಂದು ವಾಗ್ದಾಳಿ. ಸಿಎಮ್ ವಿರುದ್ಧ ಬಸವರಾಜದೇವರು ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಸವರಾಜ ದೇವರು ಧಾರವಾಡ ಜಿಲ್ಲೆ ಮನ್ಸೂರು ಮಠದ ಸ್ವಾಮೀಜಿಯಾಗಿದ್ದು ಉತ್ತರಕರ್ನಾಟಕದವರು ನನಗೆ ಓಟ್ ಹಾಕಿಲ್ಲ ಎಂದು ಅಪಮಾನ ಮಾಡಿದ್ದಾರೆ.

ಕುಮಾರಸ್ವಾಮಿಯಂತಹ ಅಳುವ ಮುಖ್ಯಮಂತ್ರಿ ನಮಗೆ ಬೇಕಿಲ್ಲ, ನಗುವ ಜನರ ಕಷ್ಟ ದೂರ ಮಾಡಿ ನಗಿಸುವ ಮುಖ್ಯಮಂತ್ರಿ ಬೇಕು. ಗಂಭೀರತೆಯ,ಚೈತನ್ಯ ಮೂಡಿಸುವ ಸಿಎಮ್ ಬೇಕು.
ಸಿಎಮ್ ಗೆ ಎಲ್ಲರೂ ಮತ ಹಾಕಿದ್ದಾರೆ. ಹಾಗಿದ್ದಾಗಲೂ ಪ್ರಾಂತ್ಯವಾರು ತಾರತಮ್ಯ ಮಾಡುತ್ತಿದ್ದಾರೆ. ಎಲ್ಲ ಉತ್ಸವಗಳೂ ದಕ್ಷಿಣ ಕರ್ನಾಟಕದಲ್ಲೇ ನಡೆಸುತ್ತಾರೆ.

ಮೈಸೂರು ಉತ್ಸವ ಮಾಡತಾರೆ, ಬರಚುಕ್ಕಿ ಉತ್ಸವ ಮಾಡ್ತಾರೆ. ಅವರಪ್ಪನ‌ ಉತ್ಸವ, ಅವರವ್ವನ ಉತ್ಸವ ಮಾಡ್ತಾರೆ, ಮನಿ ಉತ್ಸವ ಮಾಡ್ತಾರೆ. ಉತ್ತರ ಕರ್ನಾಟಕದಲ್ಲಿ ಬಾಗಲಕೋಟೆಯ ಐಹೊಳೆ ಪಟ್ಟದಕಲ್ಲು ಚಾಲುಕ್ಯ ಉತ್ಸವ ಯಾಕೆ ಮಾಡೋದಿಲ್ಲ. ಉತ್ತರಕರ್ನಾಟಕ ಭಾಗದ ಸಚಿವರು,ಶಾಸಕರು,ಸಂಸದರು ಮುಟ್ಟಾಳರು,ಅಯೋಗ್ಯರು,ನಾಲಾಕಯರು. ಉತ್ತರಕರ್ನಾಟಕ ಭಾಗದ ಜನಪ್ರತಿನಿಧಿಗಳು ಬೆಂಗಳೂರಿಗೆ‌ ಕತ್ತೆ ಕಾಯೋದಕ್ಕೆ ಹೋಗ್ತಾರೆ.

ಈ ಮುಟ್ಟಾಳರನ್ನು ಮಾತಾಡಿಸೋದೆ ಕಷ್ಟ. ಬೆಂಗಳೂರಿಗೆ ಕಾವೇರಿ ಬಿಸ್ಲೆರಿ ಕುಡಿಯೋಕೆ ಮಾತ್ರ ಹೋಗ್ತಾರೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಎಂದೂ ಮಾತನಾಡೋದಿಲ್ಲ. ಆದ್ದರಿಂದ ಇವರೆಲ್ಲ ನಾಲಾಯಕರು ,ಅಯೋಗ್ಯರು ಇವರನ್ನೆಲ್ಲ ಜನ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here