Home Elections 2019 ಮೂವರು ಸ್ತ್ರೀಯರಿಂದ ಕಷ್ಟಕರವಾಗಿದೆ ಮೋದಿಯ ಹಾದಿ.! ಮೋದಿ ವರ್ಚಸ್ಸಿಗೆ ಠಕ್ಕರ್ ಕೊಡುತ್ತಿದೆ ಜ್ಯೂ.ಇಂದಿರಾ ಎಂಟ್ರಿ.!

ಮೂವರು ಸ್ತ್ರೀಯರಿಂದ ಕಷ್ಟಕರವಾಗಿದೆ ಮೋದಿಯ ಹಾದಿ.! ಮೋದಿ ವರ್ಚಸ್ಸಿಗೆ ಠಕ್ಕರ್ ಕೊಡುತ್ತಿದೆ ಜ್ಯೂ.ಇಂದಿರಾ ಎಂಟ್ರಿ.!

1832
0
SHARE

ಫಿರ್ ಏಕ್ ಬಾರ್ ಮೋದಿ ಸರ್ಕಾರ್….. ಮೋದಿ ಮತ್ತೊಮ್ಮೆ… ನಮೋ ಒನ್ಸ್ ಅಗೇನ್…… ಇದು ನರೇಂದ್ರ ಮೋದಿ ಮತ್ತವರ ಟೀಂ ಇಟ್ಟುಕೊಂಡಿರೋ ಘೋಷವಾಕ್ಯ. ಇದೇ ವರ್ಷ ಅಂದ್ರೆ 2019ರಲ್ಲಿ ಎದುರಾಗಲಿರೋ ಲೋಕ ಮಹಾ ಸಮರಕ್ಕೆ ಬಿಜೆಪಿ ಪಾಳೆಯ ಇದೇ ಘೋಷವಾಕ್ಯದೊಡನೆ ಅಖಾಡಕ್ಕೆ ಇಳಿದಿದೆ.

ಮೋದಿ ವಿರುದ್ಧ ರಚನೆಯಾಗುತ್ತಿರೋ ಮಹಾ ಮೈತ್ರಿಯನ್ನ ಪುಡಿಗಟ್ಟಿ ಮತ್ತೆ ದೆಹಲಿ ಗದ್ದುಗೆಯನ್ನ ಏರಬೇಕು ಅನ್ನೋ ಆಸೆಯನ್ನ ಇಟ್ಟುಕೊಂಡಿದ್ದಾರೆ. ಆದ್ರೆ ಮೋದಿ ಪಾಲಿಗೆ ಈ ಆಸೆ ಅತಿ ಸುಲಭವಾಗಿ ಒಲಿಯುವಂತದ್ದಲ್ಲ, ಮೋದಿ ನಡೆಯುತ್ತಿರೋ 2019ರ ದಾರಿಯಲ್ಲಿ ಬೃಹದಾಕಾರವಾದ ಸವಾಲೊಂದು ಇದೆ. ಆ ಸವಾಲು ಸ್ತ್ರೀಯರ ರೂಪದಲ್ಲಿ ಕಾಡುತ್ತಿದೆ, ಅಂದ ಹಾಗೆ ನರೇಂದ್ರ ಮೋದಿಯ ಹಾದಿಯಲ್ಲಿ ಅಡ್ಡಗಾಲಾಕಿ ನಿಂತಿರೋದು ಬೇರೆ ಯಾರು ಇಲ್ಲ ಅವರೇ,, ಮಮತಾ ಬ್ಯಾನರ್ಜಿ,, ಮಾಯಾವತಿ,,, ಅಂಡ್ ಪ್ರಿಯಾಂಕ ಗಾಂಧಿ ವಾದ್ರ..ದೇಶದ ರಾಜಕೀಯ ದಿಕ್ಸೂಚಿಯಾಗಿರೋ ಉತ್ತರ ಪ್ರದೇಶದಲ್ಲಿ ಮಾಯಾವತಿ ಮೋದಿಗೆ ಚೆಕ್ ಮೇಟ್ ಇಡುತ್ತಿದ್ದಾರೆ.

ಅಖಿಲೇಶ್ ಯಾದವ್ ಜೊತೆ ಕೈ ಜೋಡಿಸಿರೋದ್ರ ಮೂಲಕ ಮೋದಿಗೆ ತೀವ್ರ ಥರವಾದ ಸವಾಲು ಒಡ್ಡುತ್ತಿದ್ದಾರೆ… ದೇಶದ ರಾಜಕೀಯದಲ್ಲಿ ಉತ್ತರಪ್ರದೇಶ ಮಹತ್ವದ ಪಾತ್ರ ವಹಿಸುತ್ತದೆ. ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಗೆದ್ದೋರೆ ಅಧಿಪತ್ಯ ಸಾಧಿಸುತ್ತಾರೆ ಅನ್ನೋ ಮಾತಿದೆ. ಆ ಕಾರಣಕ್ಕೆ ಎಲ್ಲರ ಕಣ್ಣು ಉತ್ತರ ಪ್ರದೇಶದತ್ತ ನೆಟ್ಟಿದೆ ಬಿಜೆಪಿಯಂತು ಯಾವುದೇ ಕಾರಣಕ್ಕೂ ಉತ್ತರ ಪ್ರದೇಶವನ್ನ ಲಘುವಾಗಿ ಪರಿಗಣಿಸಿಲ್ಲ. ಉತ್ತರ ಪ್ರದೇಶದಲ್ಲಿ ಇರೋದು ಬರೊಬ್ಬರಿ 80 ಲೋಕ ಸಭಾ ಕ್ಷೇತ್ರಗಳು ಕಳೆದ ಬಾರಿ ಬಿಜೆಪಿ ಸರಿ ಸುಮಾರು 71 ಸ್ಥಾನಗಳಲ್ಲಿ ಜಯಗಳಿಸಿ ಅಭೂತ ಪೂರ್ವವಾದ ಯಶಸ್ಸು ಕಂಡಿತ್ತು.

ಆ ಸಮಯದಲ್ಲಿ ಕಾಂಗ್ರೆಸ್ 80 ಸ್ಥಾನಗಳ ಪೈಕಿ ಕೇವಲು ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇನ್ನುಳಿದಂತೆ ಎಪ್ಪಿ ಐದು ಸ್ಥಾನಗಳನ್ನ ಗೆದ್ದಿದ್ರೆ, ಮಾಯಾವತಿಯ ಬಿಎಸ್ಪಿ ಸೊನ್ನೆ ಸುತ್ತಿತ್ತು. ಆದ್ರೆ ಈ ಬಾರಿ ಎಲ್ಲವೂ ಬದಲಾಗಿ ಹೋಗಿದೆ.ಸಧ್ಯ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯ ಮೈತ್ರಿ ಸದ್ದು ಮಾಡುತ್ತಿದೆ. ಕಳೆದ ಬಾರಿ ಮಾಡಿದ್ದ ತಪ್ಪನ್ನ ಮತ್ತೆ ಮಾಡೋದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿರೋ ಇಬ್ಬರು ನಾಯಕರು ಈಗಲೇ ಚುನಾವಣಾ ಮೈತ್ರಿಯನ್ನ ಮಾಡಿತೊಂಡಿದ್ದಾರೆ.

80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ- ಎಸ್‌ಪಿ ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ರಾಷ್ಟ್ರೀಯ ಲೋಕ ದಳ ಮತ್ತು ನಿಶಾದ್‌ ಪಕ್ಷಕ್ಕೆ ತಲಾ ಒಂದೊಂದು ಕ್ಷೇತ್ರ ಬಿಟ್ಟುಕೊಟ್ಟಿರುವ ಎಸ್‌ಪಿ- ಬಿಎಸ್‌ಪಿ, ಕಾಂಗ್ರೆಸ್‌ ಸ್ಪರ್ಧಿಸುವ ಎರಡು ಕ್ಷೇತ್ರಗಳಲ್ಲಿ ಮೈತ್ರಿಕೂಟ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸುವ ಕ್ಷೇತ್ರ ಅಮೇಠಿ ಮತ್ತು ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ ಓಟುಗಳು ಒಡೆದು ಅದು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ.

ಹೀಗಾಗಿ ಬಿಜೆಪಿಗೆ ಅನುಕೂಲವಾಗದಿರಲು ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ ಅಂತಾ ತೀರ್ಮಾನ ಮಾಡಲಾಗಿದೆ. ಈ ಬಾರಿ ನರೇಂದ್ರ ಮೋದಿಯನ್ನ ಸೋಲಿಸಿಯೇ ಸಿದ್ಧ ಅಂತಾ ಪಣ ತೊಟ್ಟಿರೋ ಮಾಯಾವತಿ ಉತ್ತರ ಪ್ರದೇಶದಲ್ಲಿ ಫವರ್ ಪುಲ್ ಆಟವಾಡಿದ್ದಾರೆ.ಸೋ ಮೋದಿ ಮತ್ತೊಮ್ಮೆ ಅನ್ನೋ ಕನಸಿಗೆ ಮಾಯಾವತಿ ಮೈತ್ರಿ ಮೂಲಕ ಅಡ್ಡಗಾಲಾಕುತ್ತಿದ್ದಾರೆ. ಕಾಂಗ್ರೆಸ್ ಜೊತೆಗೆ ಹೋದ್ರೆ ಲಾಭವಿಲ್ಲ ಅಂತಾ ಅರಿತಿರೋ ಮಾಯಾವತಿ, ಅಖಿಲೇಶ್ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ, ಅಷ್ಟು ಮಾತ್ರವಲ್ಲ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರೋ ಮಾಯಾ, ಈ ಬಾರಿ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಸ್ಥಾನ ಗೆದ್ದಿದ್ದೇ ಆದಲ್ಲಿ, ಪ್ರಭಲ ಪ್ರದೇಶಿಕ ಪಕ್ಷವಾಗಿ ಹೊರ ಹೊಮ್ಮಲಿದ್ದಾರೆ.

ಆ ಮೂಲಕ ಚುನಾವಣೋತ್ತರ ಮೈತ್ರಿಯಲ್ಲಿ ಆಟವಾಡಿ ತಮ್ಮ ದಾಳ ಉರುಳಿಸಲು ಕಾಯುತ್ತಿದ್ದಾರೆ. ಸೋ ಸಧ್ಯಕ್ಕೆ ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿಯ ಹಾದಿ ದೊಡ್ಡ ಮುಳ್ಳಾಗಿರೋದು ಅಂದ್ರೆ ಅದು ಆನೆ ಮೇಲೆ ಕುಳಿತಿರೋ ಮಾಯಾವತಿ ಅಂದ್ರೆ ತಪ್ಪಲ್ಲ.ಸಧ್ಯ ದೇಶದಲ್ಲಿ ಕ್ಯಾ ಚಲ್ ರಹಾ ಹೈ ಅಂದ್ರೆ ನಿಸ್ಸೇಂದೇಹವಾಗಿ, ಮಮತಾ ಮೋದಿ ಜಗಳ ಚಲ್ ರಹಾ ಹೈ ಅಂತಾ ಹೇಳಬಹುದು, ಅಷ್ಟರ ಮಟ್ಟಿಗೆ ಮೋದಿ ಮತ್ತು ಮಮತಾ ಕಾಳಗ ನಡೆಸುತ್ತಿದ್ದಾರೆ. ಶಾರದ ಚಿಟ್ ಫಂಡ್ ಕೇಸ್, ಸಿಬಿಐ ಹಾದಿಯಲ್ಲಿ ಸ್ಫೋಟಗೊಂಡಿರೋ ಮಮತಾ ಮೋದಿಯ ಜಗಳ ಬೇರೆಯದ್ದೇ ಹಂತಕ್ಕೆ ಹೋಗಿದೆ,

ಮೋದಿಯನ್ನ ಕಂಠಪಟ್ಟೆ ದ್ವೇಷಿಸುತ್ತಿರೋ ಮಮತಾ ಮೋದಿ ವಿರುದ್ಧ ಅಕ್ಷರಶಃ ಬೀದಿಗೆ ಇಳಿದಿದ್ದಾರೆ. ಕಳೆದ ಮೂರು ದಿನಗಳಿಂದ ನಡು ಬೀದಿಯಲ್ಲಿ ನಿಂತು ಸರ್ಕಾರವನ್ನ ನಡೆಸುತ್ತಿರೋ ದೀದಿ ಮೋದಿ ಪಾಲಿನ ಇನ್ನೊಂದು ಕಂಟಕ ಅಂದ್ರೆ ತಪ್ಪಾಗಲಿಕ್ಕಿಲ್ಲ.ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರದ ನಡುವಿನ ಸಂಬಂಧ ತೀರಾ ಹಳಸಿದೆ. ಕೇಂದ್ರದ ವಿರುದ್ದ ಮಮತಾ ಸಡ್ಡು ಹೊಡೆಯುತ್ತಿರುವುದು ಇದೇನು ಮೊದಲಲ್ಲ. ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಸಂಬಂಧ, ಚುನಾವಣಾ ಇಲಾಖೆಯ ಅಧಿಕಾರಿಗಳು ಕೋಲ್ಕತ್ತಾಗೆ ಹೋದಾಗಲೂ ಮಮತಾ ಸರಕಾರ ಸಹಕರಿಸಲಿರಲಿಲ್ಲ. ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಮಮತಾ, ಈ ಹಿಂದೆ ಜಿಎಸ್ಟಿ ಬಗ್ಗೆ ವಿರೋಧ ವ್ಯಕ್ತಪಡಿಸಿ, ಕೊನೆಗೆ ತಮ್ಮ ಹಠವನ್ನು ಸಡಿಲಿಸಿದ್ದರು.

ಸ್ಮಾರ್ಟ್ ಸಿಟಿ ಯೋಜನೆ, ರಿಯಲ್ ಎಸ್ಟೇಟ್ ರೆಗ್ಯುಲಾರಿಟಿ ಕಾಯ್ದೆ, ನದಿ ಜೋಡಣೆ, ಸ್ವಚ್ಚತಾ ಸರ್ವೇಕ್ಷಣೆ ಮುಂತಾದ ಕೇಂದ್ರ ಸರಕಾರದ ಯೋಜನೆಗಳಿಗೆ ಮಮತಾ ಸಡ್ಡು ಹೊಡೆದಿದ್ದರು. ಮೋದಿ ಸರಕಾರ ನಮ್ಮ ಮೇಲೆ ಹಗೆತನ ಸಾಧಿಸುತ್ತಿದೆ ಎನ್ನುವ ಆರೋಪ ಹೊರಿಸುವ ಮಮತಾ ಬ್ಯಾನರ್ಜಿ, ಈ ಹಿಂದೆ ಭದ್ರತೆಯ ನೆಪದಲ್ಲಿ ಅಮಿತ್ ಶಾರ ರಥಯಾತ್ರೆಗೆ ಅವಕಾಶ ನೀಡಿರಲಿಲ್ಲ.  ಅಷ್ಟೆ ಅಲ್ಲ ಅಮಿತ್ ಶಾ ಹೆಲಿಕಾಪ್ಟರ್ ಇಳಿಯಲೂ  ಸುತರಾಂ ಒಪ್ಪಿರಲಿಲ್ಲ.. ಈ ವಿಚಾರ ಹೈ ಕೋರ್ಟ್ ಅಂಗಳಕ್ಕೂ ತಲುಪಿತ್ತು.   ಮಮತಾರ ಬಿಜೆಪಿ ದ್ವೇಷ ಇಷ್ಟಕ್ಕೆ ಮುಗಿಯೋದಿಲ್ಲ ಉತ್ತರ ಬಂಗಾಳದ ಬಲುರ್‌ ಘಾಟ್‌ ನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಪಾಲ್ಗೊಳ್ಳಬೇಕಿತ್ತು. ಆದರೆ ಮಮತಾ ಬ್ಯಾನರ್ಜಿ ಸರಕಾರ ಅದಕ್ಕೂ ಅನುಮತಿ ನೀಡಿಲ್ಲ. ಪ್ರಧಾನಿಯವರ ಠಾಗೋರ್ ನಗರದ ಸಭೆಯಲ್ಲೂ ಭದ್ರತಾ ವೈಫಲ್ಯ ಕಂಡಿತ್ತು.

ಎರಡು ಬಾರಿ ರೈಲ್ವೆ ಸಚಿವೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಆಗಿರುವ ಮಮತಾ ಪ್ರಬುದ್ಧ ರಾಜಕಾರಣಿ ಜೊತೆಗ ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಆಗಿದ್ದಾರೆ. 34 ವರ್ಷಗಳ ಕಮ್ಯುನಿಸ್ಟ್ ಸರ್ಕಾರದ ಆಡಳಿತವನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿದ ಚತುರೆ, ರಾಜಕೀಯ ಕೌಶಲ್ಯ ಹಾಗೂ ಜಾತ್ಯಾತೀತ ನಾಯಕಿಯಾಗಿರುವ ಮಮತಾ, ಇತ್ತೀಚೆಗೆ ಕೊಲ್ಕೊತ್ತಾದಲ್ಲಿ ಬೃಹತ್ ರ್ಯಾಲಿ ನಡೆಸಿ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ,  ಅಷ್ಟೆ ಅಲ್ಲ ಎಲ್ಲಾ ಪ್ರದೇಶಿಕ ನಾಯಕರನ್ನ ಒಂದು ಗೂಡಿಸಿ ಅದಕ್ಕೆ ತಾನೇ ನಾಯಕಿ ಅಂತಾ ಬಿಂಬಿಸಿಕೊಂಡಿದ್ದಾರೆ.

ಒಂದು ವೇಳೆ ಮೋದಿ ವಿರುದ್ಧ ಪ್ರದೇಶಿಕ ಪಕ್ಷಗಳ ಝಗಮಗಿಸಿದ್ದೇ ಆದಲ್ಲಿ, ಈ ಮೈತ್ರಿ ಕೂಟದಿಂದ ನಾನೇ ಪ್ರದಾನಿ ಆಗಬಹುದು ಅನ್ನೋದು ಮಮತಾ ಸ್ಕೆಚ್ . ಅದೇ ಕಾರಣಕ್ಕೆ ನರೇಂದ್ರ ಮೋದಿಯ ಹಾದಿಯಲ್ಲಿ ಮಮತಾ ದೊಡ್ಡ ಕಂಟಕವಾಗಿರೋದು.ಉತ್ತರ ಪ್ರದೇಶವನ್ನ ಹೊರತು ಪಡಿಸಿದ್ರೆ ಅತಿ ಹೆಚ್ಚು ಲೋಕಸಭಾ ಸೀಟುಗಳು ಇರೋದು ಪಶ್ಚಿಮ ಬಂಗಾಳದಲ್ಲೇ. ಆ ಕಾರಣಕ್ಕೆ ಮೋದಿ ಕಣ್ಣು ವೆಸ್ಟ್ ಬೆಂಗಾಲ್ ಮೇಲು ಬಿದ್ದಿದೆ, ಇದನ್ನ ನೋಡಿ ಮಮತಾಗೆ ಸುಮ್ಮನಿರಲು ಸಾಧ್ಯವೇ… ನೋ ಚಾನ್ಸ್.. ಅದೇ ಕಾರಣಕ್ಕೆ ಪಶ್ಚಿಮದಲ್ಲಿ ಕಮಲ ಅರಳಲು ಬಿಡಲೇ ಬಾರದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೆ ಅಲ್ಲ ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಮಮತಾ ಪವರ್ ಏನು ಅನ್ನೋದು ಅರ್ಥವಾಗುತ್ತೆ.

2014ರಲ್ಲಿ ಎದ್ದಿದ್ದ ಮೋದಿ ಅಲೆಯ ನಡುವೆಯೂ ಮಮತಾ ಬಂಗಾಲದಲ್ಲಿ ಕಮಾಲ್ ಮಾಡಿದ್ರು 41 ಲೋಕಸಭಾ ಸ್ಥಾನದಲ್ಲಿ ದೀದಿಯ ತೃಣಮೂಲ ಪಕ್ಷ ಗೆದ್ದಿದ್ದು ಬರೋಬ್ಬರಿ 34 ಸ್ಥಾನಗಳನ್ನ, ಆಗ ಬಿಜೆಪಿ ಗೆದ್ದಿದ್ದು ಜೆಸ್ಟ್ 2 ಸ್ಥಾನಗಳನ್ನ ಮಾತ್ರ. ಆದ್ರೆ ಈ ಬಾರಿ ಫಲಿತಾಂಶ ಕೊಂಚ ಬದಲಾಗುವ ಲಕ್ಷಣ ಗೋಚರವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪನೆಗೆ ಹೊರಟಿದೆ. ಆದ್ರೆ ಬಿಜೆಪಿಯ ಆ ಆಸೆಗೆ ತಣ್ಣೀರು ಎರಚುತ್ತಿರೋ ಮಾತ್ರ ದೀದಿ ದಾದಾ…

LEAVE A REPLY

Please enter your comment!
Please enter your name here