Home Cinema ಮೆಗಾಫ್ಯಾನ್ಸ್ ನ ರೋಮಾಂಚನಗೊಳಿಸಿದೆ “ಸೈರಾ ನರಸಿಂಹ ರೆಡ್ಡಿ” ಟೀಸರ್! ಹಿಸ್ಟಾರಿಕಲ್ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡಿ...

ಮೆಗಾಫ್ಯಾನ್ಸ್ ನ ರೋಮಾಂಚನಗೊಳಿಸಿದೆ “ಸೈರಾ ನರಸಿಂಹ ರೆಡ್ಡಿ” ಟೀಸರ್! ಹಿಸ್ಟಾರಿಕಲ್ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡಿ ಶುರುಮಾಡುತ್ತಾ ಹೊಸ ಟ್ರೆಂಡು?

587
0
SHARE

ಅಗಸ್ಟ್ 22, ಮೆಗಾಸ್ಟಾರ್ ಚಿರಂಜೀವಿ ಬರ್ತ್ ಡೇ. ಅದಕ್ಕೂ ಒಂದು ದಿನ ಮುನ್ನ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಆ ಮೂಲಕ ಬರ್ತ್ ಡೇ ಗೂ ಮುನ್ನವೇ ಫ್ಯಾನ್ಸ್ ಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಹಿಸ್ಟಾರಿಕಲ್ ಪಿರಿಯಡ್ ಸಿನಿಮಾ ಆಗಿರೋ ಸೈರಾ ನರಸಿಂಹ ರೆಡ್ಡಿಯ ಟೀಸರ್ ಅಂತೂ ಅಭಿಮಾನಿಗಳನ್ನ ಪುಳಕಿತರಾಗಿಸಿದೆ.ಸೈರಾ ನರಸಿಂಹ ರೆಡ್ಡಿ ಟೀಸರ್ ನೋಡಿದ್ರೆ ಇದು ಬಾಹುಬಲಿ ಬಳಿಕ ಸೌತ್ ಸಿನಿದುನಿಯಾದಲ್ಲಿ ಮೂಡಿಬರಲಿರೋ ಮತ್ತೊಂದು ಮೆಗಾ ಸಿನಿಮಾ ಅನ್ನೋದು ಖಚಿತವಾಗುತ್ತೆ.

ಮೇಕಿಂಗ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ. ಸೆಟ್, ವಿಷ್ಯುವಲ್ ಎಫೆಕ್ಟ್ಸ್ ಎಲ್ಲವೂ ಅದ್ಧೂರಿಯಾಗಿವೆ.ಯೆಸ್ ಮೆಗಾಸ್ಟಾರ್ ಚಿರಂಜೀವಿಯ 151ನೇ ಸಿನಿಮಾ ಹಲವು ವಿಚಾರಗಳಲ್ಲಿ ವಿಶೇಷವಾದದ್ದು,. ಉಯ್ಯಾಲವಾಡದ ನರಸಿಂಹ ರೆಡ್ಡಿ ಅನ್ನೋ ಪಾಳೆಗಾರನ ಐತಿಹಾಸಿಕ ಕಥೆ ಇಲ್ಲಿದೆ. 1846ರಲ್ಲಿ ಉಯ್ಯಾಲವಾಡದ ನರಸಿಂಹ ರೆಡ್ಡಿ ಪ್ರಜೇಗಳ ಸೇನೆ ಕಟ್ಟಿಕೊಂಡು ಬ್ರಿಟಿಷರ ವಿರುದ್ದ ಸಮರ ಸಾರಿರ್ತಾನೆ. ಮೊದಲ ಸ್ವಾತಂತ್ರ ಸಮರಕ್ಕೂ ಮೊದಲೇ ಬ್ರಿಟಿಷರ ವಿರುದ್ದ ಈ ಆಂಧ್ರದ ಪಾಳೆಗಾರ ಹೋರಾಡಿರ್ತಾನೆ.

ಈ ಐತಿಹಾಸಿಕ ಕಥೆಯನ್ನೇ ಈಗ ಬೆಳ್ಳಿತೆರೆ ಮೇಲೆ ತರಲಾಗ್ತಿದೆ.ಅಂದಹಾಗೆ ಈ ಅದ್ಧೂರಿ ಪ್ರಾಜೆಕ್ಟ್ ಗೆ ಬಂಡವಾಳ ಹೂಡಿರೋದು ಬೇರಾರೂ ಅಲ್ಲ ಖುದ್ದು ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ. ಸೈರಾ ಸಿನಿಮಾದ ಬಜೆಟ್ ಬರಿಒಬ್ಬರಿ 150 ಕೋಟಿ. ರಿಲೀಸ್ ಹೊತ್ತಿಗೆ ಈ ಬಜೆಟ್ ಇನ್ನೂ ಹೆಚ್ಚಾದ್ರೂ ಅಚ್ಚರಿಯೇನಿಲ್ಲ.ಬಿಡುಗಡೆಯಾಗಿರೋ ಸೈರಾ ನರಸಿಂಹ ರೆಡ್ಡಿ ಟೀಸರ್ ಅಧ್ದೂರಿತನವನ್ನಷ್ಟೆ ಅಲ್ಲ ವೃತ್ತಿಪರ ತಂತ್ರಜ್ಞರ ಕೆಲಸವನ್ನ ಎತ್ತಿ ತೋರಿಸ್ತಾ ಇದೆ. ಅದ್ರಲ್ಲೂ ಕೋಟೆ ಮೇಲೆ ಮೊದಲ ಬಾರಿ ಚಿರಂಜೀವಿ ಲುಕ್ ರಿವೀಲ್ ಮಾಡಿರೋದು ಅಭಿಮಾನಿಗಳ ಎದೆಬಡಿತ ಹೆಚ್ಚಿಸ್ತಾ ಇದೆ.

ಇನ್ನೂ ಕುರುರೆ ಸವಾರಿ ಮಾಡ್ತಾ ಸೈನಿಕರ ಮೇಲೆ ಹಠಾತ್ತನೇ ಎಗರುವ ಇನ್ನೊಂದು ಸೀನ್ ಕೂಡ ರೋಚಕವಾಗಿದೆ.ಚಿರಂಜೀವಿ ರಾಜಕೀಯ ಪ್ರವೇಶಕ್ಕೂ ಮುನ್ನ ನಟಿಸಿದ ಕೊನೆಯ ಸಿನಿಮಾ ಶಂಕರ್ ದಾದಾ ಜಿಂದಾಬಾದ್. ಅದು ಬಾಲಿವುಡ್ ನ ಲಗೇರಹೋ ಮುನ್ನಾಭಾಯ್   ರಿಮೇಕ್. ಈ ಸಿನಿಮಾ ಬಳಿಕ ಚಿರು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಅದಾಗಲೇ ಪ್ರಜಾರಾಜ್ಯಂ ಪಕ್ಷದ ರೂಪುರೇಷೆ ರೂಪಿಸೋದ್ರಲ್ಲಿ ಚಿರಂಜೀವಿ ಬ್ಯುಸಿಯಾಗಿದ್ರು.2008ರಲ್ಲಿ ಪಕ್ಷ ಸ್ಥಾಪನೆ ಆದ ಬಳಿಕ ರಾಜಕೀಯದಲ್ಲೇ ಚಿರಂಜಿವಿ ಬ್ಯುಸಿಯಾಗಿಬಿಟ್ರು. ಈ ನಡುವೆ ಚಿರುವನ್ನ ಬಣ್ಣ ಹಚ್ಚುವಂತೆ ಮಾಡಿದ್ದು ಅವರ ಪುತ್ರನೇ.

ರಾಮ್ ಚರಣ್ ನಟನೆಯ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾದಲ್ಲಿ ಚಿರಂಜೀವಿ ಪುಟ್ಟ ಕೆಮಿಯೋ ಪಾತ್ರದಲ್ಲಿ ನಟಿಸಿದ್ರು.ಈ ಪುಟ್ಟ ಪಾತ್ರ ಚಿತ್ರಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ಸುಳ್ಳಲ್ಲ. ಮಗಧಿರ ಬಳಿಕ ಬರೊಬ್ಬರಿ 6 ವರ್ಷ ಚಿರು ಮತ್ತೆ ನಟಿಸಿರಲಿಲ್ಲ. ಒನ್ಸ್ ಅಗೇನ್ ಮೆಗಾಸ್ಟಾರ್ ನ ಬಣ್ಣ ಹಚ್ಚುವಂತೆ ಮಾಡಿದ್ದು ರಾಮ್ ಚರಣ್ ತೇಜಾ. ತಮ್ಮ ಬ್ರೂಸ್ಲಿ ಸಿನಿಮಾದಲ್ಲಿ ಮತ್ತೆ ತಂದೆಯಿಂದ ಕೆಮಿರೋ ರೋಲ್ ಮಾಡಿಸಿದ್ರು ಚೆರ್ರಿ.ಬ್ರೂಸ್ಲಿ ಸಿನಿಮಾದಲ್ಲಿ ಚಿರಂಜೀವಿ ಫೈಟ್ ಮಾಡಿದ್ದನ್ನ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ರು. ಆಗಲೇ ಮತ್ತೆ ನಾಯಕನಾಗಿ ನಟಿಸುವಂತೆ ಒತ್ತಾಯ ಮಾಡತೋಡಗಿದ್ರು.

ಅಷ್ಟೋತ್ತಿಗೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಚಿರಂಜೀವಿ ಕೂಡ ಒಂದೊಳ್ಳೆ ಕಥೆ ಮೂಲಕ ಮತ್ತೆ ಕಂಬ್ಯಾಕ್ ಮಾಡೋದಕ್ಕೆ ಯೋಚಿಸ್ತಾ ಇದ್ರು. ಆಗ ಸಿಕ್ಕಿದ್ದೇ ಖೈದಿ ನಂಬರ್ 150ಕಥೆ.ಅಸಲಿಗೆ ಇದು ತಮಿಳಿನ ಕತ್ತಿ ಸಿನಿಮಾದ ರಿಮೇಕ್. ತಮಿಳಿನಲ್ಲಿ ಯಶಸ್ಸು ಕಂಡ ಕಥೆಯನ್ನ ಇಷ್ಟ ಪಟ್ಟು ರಿಮೇಕ್ ಮಾಡಿ ನಟಿಸಿದ್ರು ಚಿರಂಜೀವಿ. ಅಭಿಮಾನಿಗಳು ಮೆಗಾಸ್ಟಾರ್ ನ 150 ಚಿತ್ರವನ್ನ ಅದ್ಧೂರಿಯಾಗಿ ಬರಮಾಡಿಕೊಂಡ್ರು.ಖೈದಿ ನಂಬರ್ 150 ಕಮರ್ಷಿಯಲ್ ಆಗಿ ಸಕ್ಸಸ್ ಕಂಡರೂ ಅಭಿಮಾನಿಗಳಿಗೆ ಪೂರ್ಣ ಖುಷಿಯನ್ನ ಕೊಡ್ಲಿಲ್ಲ.

ಚಿರಂಜೀವಿ 150ನೇ ಸಿನಿಮಾ ಅಂದ್ರೆ ಇನ್ನೂ ದೊಡ್ಡ ಮಟ್ಟದ ಸಿನಿಮಾ ಆಗಿರಬೇಕಿತ್ತು. ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಂತ ಬೇಸರಿಸಿಕೊಂಡಿದ್ರು ಫ್ಯಾನ್ಸ್. ಆ ಬೇಸರವನ್ನ ಕಳೆಯಬೇಕು ಅಂತಲೇ ಶುರುವಾಗಿದ್ದು ಸೈರಾ ನರಸಿಂಹ ರೆಡ್ಡಿ.ಖುದ್ದು ರಾಮ್ ಚರಣ್ ಈ ಸಿನಿಮಾವನ್ನ ನಿರ್ಮಿಸ್ತಾ ಇದಾರೆ. ಸ್ವಾತಂತ್ರ ಹೋರಾಟದ ಕಥೆ. 18ನೇ ಶತಮಾನದ ಪಾಳೆಗಾರನಾಗಿ ಚಿರಂಜೀವಿ ನಟಿಸ್ತಾ ಇದಾರೆ.

ಬರೊಬ್ಬರಿ 150ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಿದೆ. ಎಲ್ಲಾ ಸಿನಿಇಂಡಸ್ಟ್ರಿಗಳ ದಿಗ್ಗಜರು ಈ ಸಿನಿಮಾದಲ್ಲಿದಾರೆ.ಅಲ್ಲಿಗೆ ಚಿರಂಜೀವಿ ಅಭಿಮಾನಿಗಳ ನಿರೀಕ್ಷೆ ಮೀರಿಸುವಂತೆ ಸೈರಾ ನರಸಿಂಹ ರೆಡ್ಡಿ ರೆಡಿಯಾಗ್ತಿದೆ. ಈ ನಡುವೆ ಮೆಗಾಸ್ಟಾರ್ 63ನೇ ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ಕೂಡ ಬಿಡುಗಡೆಯಾಗಿದೆ.ಒಟ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಈ ವರ್ಷ ಅಭಿಮಾನಿಗಳಿಗೆ ಮೆಗಾಗಿಫ್ಟ್ ಕೊಡಲಿದ್ದಾರೆ. ಹತ್ತು ವರ್ಷ ಬೆಳ್ಳಿತೆರೆಯಿಂದ ದೂರವಿದ್ದಾಗ, ಫ್ಯಾನ್ಸ್ ಪಟ್ಟ ಬೇಸರ ಹತ್ತು ಪಟ್ಟು ಕರಗಿ ಹೋಗಬೇಕು ಹಾಗಿರುತ್ತೆ ಈ ಸಿನಿಮಾ.

LEAVE A REPLY

Please enter your comment!
Please enter your name here