Home District ಮೆಚ್ಚಬೇಕು ; ಮಮ್ಮೀ ಡಾಟರ್ ಮರ್ಡರ್ ಮಾಡಿ ಆಡಿದ್ದ ನವರಂಗಿ ನಾಟಕಕ್ಕೆ.!

ಮೆಚ್ಚಬೇಕು ; ಮಮ್ಮೀ ಡಾಟರ್ ಮರ್ಡರ್ ಮಾಡಿ ಆಡಿದ್ದ ನವರಂಗಿ ನಾಟಕಕ್ಕೆ.!

665
0
SHARE

ಕೊಲೆಯಾಗಿರೋ ಈತನ ಹೆಸರು ಶಿವಕುಮಾರ್ ಅಂತ. ವೃತ್ತಿಯಲ್ಲಿ ಕೂಲಿಕಾರನಾಗಿದ್ದ ಶಿವಕುಮಾರ್ ತುಂಬಾನೇ ಒಳ್ಳೆಯ ಹುಡುಗನಾಗಿದ್ದ.. ಆದ್ರೆ ಇವತ್ತಿನ ಹುಡುಗ ಹುಡುಗಿಯರಿಗೇ ಅದೇನು ಮಂಕು ಕವಿದಿದೆಯೋ ಏನೋ.. ತಪ್ಪು ದಾರಿಯಲ್ಲಿ ಹೋಗುತ್ತಿದ್ದೀರಿ ತಿದ್ದಿಕೊಳ್ಳಿ ಅಂತ ಮನೆಯವರು ಬುದ್ದಿ ಹೇಳೋದೇ ತಪ್ಪು ಅನ್ನಿಸಿಬಿಟ್ಟಿದೆ.

ಯೆಸ್..  ಆತ ತುಂಬಾ ಒಳ್ಳೆಯ ಹುಡುಗ.., ಆತನಿಗೆ ಹೀಗೆ ಆಗಬಾರದಿತ್ತು, ಅಂತಾ ಮಮ್ಮಲ ಮರುಗುತ್ತಿರೋ ಊರ ಜನ.. ಮೊಮ್ಮಗ ನನ್ನ ಬಿಟ್ಟು ಹೋದ ಅಂತಾ ಮನೆ ಮುಂದೆ ಕುಳಿತು ಕಣ್ಣಿರು ಹಾಕ್ತೀರೋ ಇಳಿ ವಯಸ್ಸಿನ ಅಜ್ಜಿ…. ಅಷ್ಟಕ್ಕೂ ಇಲ್ಲಿ ಒಬ್ಬ ಅಮಾಯಕ ಹುಡುಗನ ಜೀವ ಹೋಗಿತ್ತು… ಕೊಂದಿದ್ಯಾರು ಅಂತಾ ಗೊತ್ತಾದ್ರೆ ಅರೆ ಕ್ಷಣ ಬಾಯಿ ಮೇಲೆ ಬೆರಳಿಟ್ಟುಕೊಳ್ಳೊದಂತೂ ಗ್ಯಾರಂಟಿ.. ಎಸ್ .. ಈ ಪೋಟೋ ದಲ್ಲಿರೋ ಅಮಾಯಕನೇ ತನ್ನ ಚಿಕ್ಕಮ್ಮ, ಹಾಗೂ ತಂಗಿಯಿಂದ ಬರ್ಬರ ವಾಗಿ ಕೊಲೆಯಾಗಿದ್ದ ಶಿವಕುಮಾರ್. ಅಂದಹಾಗೆ ಶೌರ್ಯಕ್ಕೆ ಹೆಸರಾದ ಕೊಡಗು ಜಿಲ್ಲೆ ಇದು.. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದಲ್ಲಿ ನಡೆಯಬಾರದ್ದು ನಡೆದು ಹೊಗಿತ್ತು.

ಮನೆಯಲ್ಲಿದ್ದ ತಾಯಿ ಮಗಳು ಸೇರಿ ಮನೆಯಲ್ಲಿಯೇ ಇದ್ದ ಅನಾಥ ಯುವಕನೊಬ್ಬನನ್ನ ಕೊಂದು ಮಂಚದ ಅಡಿಯಲ್ಲಿಟ್ಟಿದ್ರು… ಈ ಘಟನೆ ಸದ್ಯಕ್ಕೆ ಕೊಡಗು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಕೊಲೆಗೆ ಕಾರಣ ಏನೂ ಅಂತಾ ಹುಡುಕ ಹೊರಟ್ರೆ ಅಲ್ಲಿ ಮನೆತನದ ಮರ್ಯಾದೆ, ಹಣ ಎಲ್ಲವೂ ಸದ್ದು ಮಾಡಿತ್ತು.ತಾಯಿ ಮಗಳಿಂದ ಹೀಗೆ ಕೊಲೆಯಾದ ಶಿವಕುಮಾರ್  ವಯಸ್ಸು 35 ಆದ್ರೂ ಆತನಿಗೆ ಇನ್ನೂ ಮದುವೆಯಾಗಿರಲಿಲ್ಲ.. ಬಾಲ್ಯದಲ್ಲೇ ತಂದೆ ತಾಯಿಯನ್ನ ಕಳೆದುಕೊಂಡಿದ್ದ ಈ ಶಿವಕುಮಾರ್..ಅಜ್ಜಿ ಲಕ್ಷ್ಮಮ್ಮ ಅವ್ರ ಆಶ್ರಯದಲ್ಲಿ ಇದೇ ಮನೆಯಲ್ಲಿ ವಾಸವಾಗಿದ್ದ.. ಹೊಟ್ಟೆ ಪಾಡಿಗಾಗಿ ಕಾಫಿ ಕ್ಯೂರಿಂಗ್ ಕೆಲಸ ಮಾಡುತ್ತಿದ್ದ ಶಿವಕಯಮಾರ್ ತನ್ನ ಅಜ್ಜಿಯನ್ನ ಚೆನ್ನಾಗಿಯೇ ನೋಡಿಕೊಂಡಿದ್ದ.. ಅಷ್ಟೇ ಅಲ್ಲದೇ ಒಂದಷ್ಟು ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದ.

ಶಿವಕುಮಾರ್ ಮೊದಲೇ ಅನಾಥ, ತಂದೆ ತಾಯಿಯ ಪ್ರೀತಿ ಎಂದರೇನೇ ಏನು ಅಂತ ಗೊತ್ತಿಲ್ಲದ ಈತನಿಗೆ ಎಲ್ಲವೂ ಅಜ್ಜಿಯೇ ಆಗಿದ್ದಳು. ನೆರೆ ಹೊರೆಯವರೊಂದಿಗೂ ತುಂಬಾ ಅನ್ಯೋನ್ಯತೆಯಿಂದ ಅಣ್ಣಾ ಅಕ್ಕ ಎಂದು ಕೊಂಡಿದ್ದ. ಹಾಗಾಗಿ ಇವತ್ತು ಆತನ ಜೀವಂತವಾಗಿಲ್ಲದಿದ್ದರೂ ಆತನನ್ನ ಎಲ್ಲರೂ ಕೊಂಡಾಡ್ತಾರೆ.ಇದಕ್ಕೆಲ್ಲ ಕಾರಣ ಶಿವಕುಮಾರ್ ನ ನಡತೆ. ಆದ್ರೆ ಇದೇ ಸನ್ನಡತೆಯೇ ಶಿವಕುಮಾರ್ ಜೀವಕ್ಕೆ ಮುಳುವಾಯ್ತೇನೋ ಅಂತ ಮತ್ತೊಂದು ಕಡೆ ಅನ್ನಿಸುತ್ತೆ. ಯಾಕಂದ್ರೆ ಮನೆಯಲ್ಲಿ ಈತನೊಂದಿಗೆ ವಾಸವಿದ್ದ ಆ ತಾಯಿ ಮಗಳಿಗೆ ಈತ ನಡತೆ ಶುದ್ಧವಾಗಿಟ್ಟುಕೊಳ್ಳಬೇಕು ಅಂತ ಹೇಳುತ್ತಿದ್ದುದೇ ಇವತ್ತು ಹೀಗೆ ಈತ ಕೊಲೆಯಾಗಿ ಹೋಗೋದಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ..

ಹೌದು ಶಿವಕುಮಾರ್ ಇಷ್ಟೊಂದು ಪ್ರೀತಿ ವಿಸ್ವಾಸ ಸಂಪಾದನೆ ಮಾಡೋದಕ್ಕೆ ಆತನ ಈ ಗುಣ ಹೇಗೆ ಕಾರಣವಾಗಿತ್ತೋ, ಇದಜೇ ಗುಣವೇ ಆತನ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.. ತಾನಾಯ್ತು ತನ್ನ ಕೆಲಸವಾಯ್ತು ಅಂತ ಸುಮ್ಮನೇ ಇದ್ದಿದ್ದರೆ ಇವತ್ತು ಹೀಗೆ ಭರ್ಭರವಾಗಿ ಕೊಲೆಯಾಗಿ ಹೋಗ್ತಿರಲಿಲ್ಲ. ಆದ್ರೆ ಮನೆಯಲ್ಲಿರೋ ಹೆಂಗಸು ಹಾದಿ ತಪ್ಪಿದ್ರೆ, ಯಾವ ಗಂಡಸು ತಾನೇ ನೋಡಿಕೊಂಡು ಸುಮ್ಮನಿರುತ್ತಾನೆ ಹೇಳಿ.. ಇಲ್ಲಿ ಶಿವಕುಮಾರ್ ಕೂಡ ಮಾಡಿದ್ದೇ ಅದನ್ನೇ.. ಆದ್ರೆ ಅಪಾರ್ಥ ಮಾಡಿಕೊಂಡ ಆ ತಾಯಿ ಮಗಳು ಈತನನನ್ನೇ ಮುಗಿಸುವ ಮಟ್ಟಕ್ಕೆ ಹೋಗಿದ್ದು ಮಾತ್ರ ದುರಂತ.. ಯೆಸ್.. ಒಂದೊಂದ್ ಸಾರಿ ಹೆತ್ತವರು ಯಾವತ್ತಿದ್ರೂ ಹೆತ್ತವರೇ,,… ಅವರ ಸ್ಥಾನವನ್ನ ಯಾರೂ ತುಂಬೋದಕ್ಕೆ ಸಾಧ್ಯವಿಲ್ಲ ಅಂತಾರಲ್ಲ ಅದು ನಿಜ ನೋಡಿ..

ಇಲ್ಲಿ ವರಸೆಯಲ್ಲಿ ಶಿವಕುಮಾರ್ ಗೆ ಹರಿಣಿ ಸಹೋದರಿ ಆಗಬೇಕಾದ್ರೆ ಹರಿಣಿ ತಾಯಿ ಯಶೋಧ‌‌ ಚಿಕ್ಕಮ್ಮ ಆಗಬೇಕಿತ್ತು.. ಲಕ್ಷ್ಮಮ್ಮ ಅವ್ರಿಗೆ ಈ ಯಶೋಧ ಮಗನ ಹೆಂಡತಿ. ಲಕ್ಷ್ಮಮ್ಮ ಅವ್ರ ಮತ್ತೊಬ್ಬ ಮಗನ ಪುತ್ರನೇ ಈ ಶಿವಕುಮಾರ್.. ಆತನಿಗೆ ಯಾರೂ ದಿಕ್ಕಿಲ್ಲದ ಹಿನ್ನಲೆ ಈ ನಾಲ್ಕು ಮಂದಿ ಕೂಡಿಗೆಯಲ್ಲಿದ್ದ ಈ ಭೋಗ್ಯದ ಮನೆಯಲ್ಲಿಯೇ ವಾಸವಾಗಿದ್ರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಅನಾರೋಗ್ಯ ಕಾರಣದಿಂದ ಯಶೋಧ ಪತಿ ತೀರಿಹೋದ ಮೇಲೆ ಈ ಶಿವಕುಮಾರ್ ಮೇಲೆ ಈ ಮನೆಯ ಸಂಪೂರ್ಣ ಜವಬ್ದಾರಿ ಬಿದ್ದಿತ್ತು. ತಾನೂ ಮಾಡೋ ಕೂಲಿ ಕೆಲಸದಲ್ಲಿ ಮನೆಯ ಜವಬ್ದಾರಿ ನೊಡಿಕೊಳ್ಳುತ್ತಿದ್ದ. ಮನೆ ಭೋಗ್ಯ ಕ್ಕೆ ಮಾಡೋ ವೇಳೆ ಈ ಶಿವಕುಮಾರ್ ಕೂಡ ಒಂದು ಲಕ್ಷ ಕೂಟ್ಟಿದ್ದ. ಯಶೋಧ ಕೂಡ ಒಂದು ಲಕ್ಷ ಕೊಟ್ಟು ಎರಡು ಲಕ್ಷಕ್ಕೆ ಮನೆ ಭೋಗ್ಯ ಮಾಡಿಕೊಂಡು ಅರಾಮಾಗಿಯೇ ಇದ್ದ ಚಿಕ್ಕ ಕುಟುಂಬ ಅದು.

ಆದ್ರೆ ಮನೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇದ್ರೆ ಸೆರಗಿನಲ್ಲಿ ಬೆಂಕಿ ಕಟ್ಟಿಕೊಂಡ  ಹಾಗೆ ಅನ್ನೋ ಮಾತು ಅಕ್ಷರಶಃ ಸತ್ಯ ಅನ್ನೋದು ಈ ಘಟನೆಯಲ್ಲಿ ಸತ್ಯವಾಗಿಬಿಟ್ಟಿದೆ ಅನ್ನಸತ್ತೆ.. ಯಾಕಂದ್ರೆ ಅದು ಒದುತ್ತೇನೆ, ಇದು ಓದುತ್ತೀನಿ ಅಂತಾ ಎಲ್ಲಂದರಲ್ಲಿ ಸುತ್ತಾಡಿಕೊಂಡಿದ್ಲು ಈ ಹರಿಣಿ… ಮನೆಯಲ್ಲಿದ್ದ ತಂಗಿ ಮನೆಗೆ ಲೇಟಾಗಿ ಬರ್ತಾಳೆ ಅಂದ್ರೆ ಮನೆಯಲ್ಲಿದ್ದ ಗಂಡಸಿಗೆ ಸಿಟ್ಟು ಬಂದೆ ಬರತ್ತೆ ಅಲ್ವಾ .. ಅಂತೆಯೇ ಮನೆತನದ ಮರ್ಯಾದೆ ಹೋಗುತ್ತೆ ಅಂತಾ ಎಚ್ಚೆತ್ತುಕೊಂಡಿದ್ದ ಶಿವಕುಮಾರ್ ದಾರಿ ತಪ್ಪುತ್ತಿದ್ದ ಈ ಹರಿಣಿಯನ್ನ ಕಂಟ್ರೋಲ್ ಮಾಡೋಕೆ ಮುಂದಾಗಿದ್ದ…ಈ ಯಮ್ಮ ಹೇಳೋ ಮಾತಲ್ಲಿ ಸತ್ಯ ಇದೆ ನೋಡಿ. ಆದ್ರೆ ಗಂಡಸು ಮಕ್ಕಳಾಗಲಿ ಹೆಂಗಸು ಮಕ್ಕಳಾಗಲೀ ಹಾದಿ ತಪ್ಪಿದ್ರೆ ಬುದ್ದಿ ಹೇಳಬೇಕಾದದ್ದು ಮನೆಯಲ್ಲಿನ ಹಿರಿಯರ ಕರ್ತವ್ಯ. ಆದ್ರೆ ಹಿರಿಯರೇ ನೆಟ್ಟಗಿಲ್ಲದಿದ್ರೆ ಏನ್ ಮಾಡೋದಕ್ಕಾಗುತ್ತೆ. ಇಲ್ಲಿ ಆಗಿದ್ದೂ ಅದೇ.. ಓದುತ್ತೇನೆ ಎಂದು ಚೆಂಗುಲು ಬಿದ್ದಿದ್ದ ಮಗಳಿಗೆ ಬುದ್ದಿ ಹೇಳ ಬೇಕಾದ ಯಶೋದ ಮಗಳ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ್ದಳು.

ಆದ್ರೆ ಶಿವಕುಮಾರನಿಗೆ ಇದೆಲ್ಲವನ್ನೂ ಕಂಡು ಸಹಿಸಿಕೊಳ್ಳೋದಕ್ಕಾಗ್ತಿರ್ಲಿಲ್ಲ. ಅಲ್ಲದೇ ಶಿವಕುಮಾರ ಎಂದೂ ಹರಿಣಿಯನ್ನ ಬೇರೆಯವಳು ಅಂತ ಭಾವಿಸಿರಲಿಲ್ಲ. ಸ್ವಂತ ತಂಗಿ ಅಂತಲೇ ಭಾವಿಸಿದ್ದ. ಹೀಗಾಗಿ ದಾರಿ ತಪ್ಪುತ್ತಿರೋ ತಂಗಿಗೆ ಬುದ್ದಿವಾದ ಹೇಳೋದಕ್ಕೆ ಮುಂದಾಗಿದ್ದ. ಆದ್ರೆ ವಯಸ್ಸಿಗೆ ಬಂದು ಅದಾಗಲೇ ಹೊರ ಪ್ರಪಂಚವನ್ನ ಕಂಡಿದ್ದ ಹರಿಣಿಗೆ ಶಿವಕುಮಾರನ ಬುದ್ದಿವಾದದ ಮಾತಗುಳು ಹಿಡಿಸಲಿಲ್ಲ. ಇದ್ರಿಂದ ಶಿವಕುಮಾರನ ಮೇಲೆ ತಾಯಿಗೂ ಕೆಟ್ಟ ಭಾವನೆ ಬರುವಂತೆ ತಾಯಿ ಯಶೋಧಳಿಗೂ ಹರಿಣಿ ಕಿವಿ ಚುಚ್ಚಿ ಬಿಡ್ತಾಳೆ..ಹೀಗೆ ಮನೆ ಮಗಳನ್ನ ಕಂಟ್ರೋಲ್ ಮಾಡೋಕೆ ಮುಂದಾಗಿದ್ದ ಶಿವಕುಮಾರ್ ಕೆಲ ತಿಂಗಳ ಹಿಂದೆ ಹರಿಣಿಗೆ ಎಚ್ಚರಿಕೆ ನೀಡಿದ್ದ. ನೀನು ಮನೆಗೆ ಯಾಕೆ ಲೇಟಾಗಿ ಬರ್ತೀಯಾ .. ಹೀಗೆ ಟೈಂ ಇಲ್ಲದ ಟೈಂಗೆ ಬಂದ್ರೆ ಮನೆ ಮರ್ಯಾದೆ ಉಳಿಯುತ್ತಾ ಅಂತಾ ಪ್ರಶ್ನೆ ಮಾಡಿದ್ದ.. ಇಷ್ಟೇ ಸಾಕಾಗಿತ್ತು. ಈ ಹರಿಣಿ ಹಾಗೂ ಆಕೆಯ ತಾಯಿಗೆ.‌‌. ಮಗಳನ್ನ ಹಿಡಿದುಕೊಳ್ಳೊಕೆ ಶಿವಕುಮಾರ್ ಬಂದ ಅಂತಾ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ತಾಯಿ ಮಗಳು ಆತನ ವಿರುದ್ಧ ಕಂಪ್ಲೇಟ್ ಕೊಟ್ಟಿದ್ರು..

ಶಿವಕುಮಾರ್ ಮೇಲೆ ಅದ್ಯಾವಾಗ ದೂರು ಕೊಟ್ಟಿದ್ರೋ ಅದಾಗ್ಲೇ ಊರಿನ ಜನ ಒಟ್ಟಾಗಿದ್ರು. ಈ ಶಿವಕುಮಾರ್ ಅಂತಹ ಹುಡುಗ ಅಲ್ಲವೇ ಅಲ್ಲ.. ಆತನನ್ನ ಬಿಡಿ ಅಂತಾ ಪೊಲೀಸರಿಗೆ ವಿಷ್ಯ ತಿಳಿಸಿ ಶಿವಕುಮಾರ್ ನನ್ನ ಮನೆಗೆ ಕರೆತಂದಿದ್ರು. ಘಟನೆ ಆದ ಬಳಿಕ ಶಿವಕುಮಾರ್ ಗೂ ಈ ತಾಯಿ ಮಗಳಿಗೂ ದ್ವೇಷ ಆರಂಭವಾಗಿತ್ತು. ಬಳಿಕ ಶಿವಕುಮಾರ್ ನಿಮ್ಮ ಸಹವಾಸ ಸಾಕು ಅಂತಾ ಇದೇ ಮನೆಯ ರೂಂ ನಲ್ಲಿ ಅಜ್ಜಿ ಲಕ್ಷ್ಮಮ್ಮ ಜೊತೆ ಪ್ರತ್ಯೇಕವಾಗಿ ವಾಸ ಮಾಡ್ತಿದ್ರು.. ಅಜ್ಜಿಗೆ ಕ್ಯಾನ್ಸರ್ ಖಾಯಿಲೆ ಬಂದ ಸಂದರ್ಭ ದಲ್ಲಿ ಆಕೆಯನ್ನು ಗುಣಪಡಿಸಲು ಸಾಕಷ್ಟು ಕಷ್ಟಪಟ್ಟು ಈ ಅಜ್ಜಿಯನ್ನ ಬದುಕಿಸಿಕೊಂಡಿದ್ದ ಶಿವಕುಮಾರ್…ಹೌದು..ಶಿವಕುಮಾರ್ ಕೊಲೆಯ ಹಿಂದೆ ಮರ್ಯಾದೆ ಜೊತೆಗೆ ಮನೀ ಮ್ಯಾಟ್ರು ಕೂಡ ಸದ್ದು ಮಾಡ್ತಿದೆ. ಕೂಲಿ ಮಾಡುವವನ ಬಳಿ ಅದೇನು ಹಣವಿರುತ್ತೆ ಅಂತ ನೀವು ಅಂದ್ಕೋಳ್ಬಹುದು. ಆದ್ರೆ ಈ ಹಿಂದೆ ಈ ಯಶೋಧಮ್ಮ ಮತ್ತು ಶಿವಕುಮಾರ್ ಮನೆಯೆಂದನ್ನ ಭೋಗ್ಯಕ್ಕೆ ಹಾಕಿಕೊಂಡಿದ್ರು ಅನ್ನೋ ವಿಚಾರ ಹೇಳಿದ್ವಿ.

ಆಗ ಈ ಇಬ್ಬರೂ ತಲಾ ಒಂದೊಂದು ಲಕ್ಷ ರೂಪಾಯಿ ಹಣ ಕೊಟ್ಟು ಮನೆಯನ್ನ ಭೋಗ್ಯಕ್ಕೆ ಪಡೆದಿದ್ರು. ಆದ್ರೆ ಈ ಮಧ್ಯೆ ಮನೆಯನ್ನ ಮನೆ ಮಾಲೀಕ ಮತ್ಯಾರಿಗೋ ಮಾರಾಟ ಮಾಡಿದ್ರು. ಪರಿಣಾಮ ಮನೆ ಖಾಲಿ ಮಾಡೋ ಪ್ರಮೇಯ ಕೂಡ ಬಂದಿತ್ತು. ಹೇಗಿದ್ರೂ ಮನೆಗೆ ಎರಡು ಲಕ್ಷ ಕೊಟ್ಟಿದ್ದೀವಿ ಎರಡು ಲಕ್ಷ ಸಿಕ್ಕಿದ್ರೆ ಬೆಂಗಳೂರಿಗೆ ಹೋಗಿ ಸೆಟ್ಲ್ ಆಗೋ ಪ್ಲಾನ್ ಕೂಡ ತಾಯಿ ಮಗಳಿಗೆ ಇತ್ತು. ಹೀಗಾಗಿಯೇ ಇಬ್ಬರೂ ಸೇರಿ ಅಜ್ಜಿ ಬಳಿ ಆ ಒಂದು ಲಕ್ಷವನ್ನ ಕೀಳೋ ಪ್ಲಾನ್ ಮಾಡಿಕೊಂಡಿದ್ರೆ.. ಶಿವಕುಮಾರ್ ಇದ್ರೆ ನಾನ್ ಫ್ರೀ ಆಗಿ ಇರೋಕಾಗಲ್ಲ.‌. ಜೊತೆಗೆ ಒಂದು ಲಕ್ಷ ಕೂಡ ಸಿಗಲ್ಲ ಅಂತಾ ತಿಳಿದುಕೊಂಡಿದ್ದ ತಾಯಿ ಮಗಳು ಶಿವಕುಮಾರ್ ನನ್ನ ಮುಗಿಸೋ ಪ್ಲಾನ್ ಮಾಡಿದ್ರು.

ತಾಯಿ ಮಗಳು ಮಾಡಿದ್ದ ಪ್ಲಾನ್ ವರ್ಕೌಟ್ ಆಗೋ ಹಂತ ತಲುಪಿತ್ತು. ಅಂದಹಾಗೆ ಅಜ್ಜಿ ಲಕ್ಷ್ಮಮ್ಮ ಕೂಡ ಅಂದು ದೂರ ನೆಂಟರ ಮನೆಗೆ ಹೋಗಿದ್ರು. ಶಿವಕುಮಾರ್ ಒಬ್ಬನೇ ಇದ್ದ. ಇದೇ ಸರಿಯಾದ ಟೈಂ ಅಂದುಕೊಂಡ ತಾಯಿ ಮಗಳು ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದ ಶಿವಕುಮಾರ್ ಜೊತೆಗೆ ಖ್ಯಾತೆ ತೆಗೆದಿದ್ರು. ಭೋಗ್ಯದ ಹಣ ಕೊಡು ಅಂತಾ ಗಲಾಟೆಗೆ ಇಳಿದಿದ್ರು… ಆದ್ರೆ ಏಕಾ ಏಕಿ ಭೋಗ್ಯದ ಹಣ ಕೊಡು ಅಂದ್ರೆ ಕೊಡೋದಾದ್ರೂ ಹೇಗೆ,? ಸ್ವಲ್ಪ ದಿನ ಸಮಯ ಕೊಡಿ ಹೇಗಾದ್ರೂ ಮಾಡಿ ಅಡ್ಜೆಸ್ಟ್ ಮಾಡಿಕೊಡ್ತೇನೆ ಅಂತ ಶಿವಕುಮಾರ್ ಸಮಜಾಯಿಶಿ ನೀಡಿದ್ದ. ಆದ್ರೆ ಅಷ್ಟಕ್ಕೆ ತೃಪ್ತರಾಗದ ತಾಯಿ ಮಗಳು. ಜೊರಾಗಿ ಗಲಾಟೆ ಮಾಡಿದ್ರು. ಆಗ ಸಮಯ ಸಂಜೆ ಏಳು ಗಂಟೆ… ಎಲ್ಲಾ ಜನ್ರು ತಮ್ಮ ತಮ್ಮ ಕೆಲಸ ಮುಗಿಸಿ ಊಟ ಮಾಡಿ ಮಲಗೋ ಸಮಯ ಹತ್ತಿರ ಬಂದಿತ್ತು. ಈ ವೇಳೆಯಲ್ಲಿಯೇ ಈ ಮನೆಯಿಂದ ಶಿವಕುಮಾರ್ ಕಿರುಚಿಕೊಳ್ಳೊ ಶಬ್ಧ ಕೇಳಿ ಬಂದಿತ್ತು…

ಯೆಸ್… ಹೌದು… ಯಾವಾಗ ಮನೆಯಲ್ಲಿ ಶಿವಕುಮಾರ್ ಕಿರುಚಿಕೊಂಡ ಶಬ್ಧ ಬಂತೋ ಈ ವೇಳೆಯಲ್ಲಿ ಸುತ್ತ ಮುತ್ತಲಿನ ಜನ ಈ ಮನೆ ಮುಂದೆ ಜಮಾಯಿಸಿ ಬಂದಿದ್ರು.. ಹೇಯ್ .. ಯಶೋಧ … ಹರಿಣಿ ಏನ್ ನಡಿತಿದೆ ಮನೆಯಲ್ಲಿ ..ಯಾಕೆ ಶಿವಕುಮಾರ್ ಕಿರುಚಿಕೊಳ್ಳುತ್ತಿದ್ದಾನೆ ಅಂತಾ ಜನ್ರು ಹೊರಗಿನಿಂದ ಪ್ರಶ್ನೆ ಮಾಡಿದ್ರು.. ಜನ ಕೇಳುತ್ತಿದ್ದಂತೆ ಮಗಳು ರೂಂ ನಲ್ಲಿ ಸ್ಯಾರಿ ಹಾಕೋತಿದ್ದಾಳೆ ಅಂತಾ ಹಾರಿಕೆ ಉತ್ತರ ನೀಡಿದ್ಲು ಯಶೋಧ… ಈ ಟೈಂ ನಲ್ಲಿ ಜನ್ರಿಗೆ ಡೌಟ್ ಬಂದು ಒಳಗೆ ಬಂದು ನೋಡಿದ್ದಾಗಲೇ ಗೊತ್ತಾಗಿದ್ದು ಶಿವಕುಮಾರ್ ಡೆತ್ ಆಗಿದ್ದಾನೆ ಅನ್ನೋದು…ಶಿವು ಎಲ್ಲಿ ಅಂತಾ ಕೇಳಿದ್ದಕ್ಕೆ ಯಶೋಧ ನನಗೆ ಹೊಡೆದು ಓಡಿ ಹೋದ ಅಂತಾ ಕಥೆ ಕಟ್ಟಿದ್ಲು.. ಸಾಲದು ಅನ್ನೊವಂತೆ ಶಿವಕುಮಾರ್ ಮೈಮೇಲಿದ್ದ ರಕ್ತವನ್ನ ತನ್ನ ಮೈಗೆ ಸವರಿಕೊಂಡು ನಾಟಕ ಶುರುಮಾಡಿದ್ಲು. ಅಜ್ಜಿ ಮನೆಯಲ್ಲಿ ಇಲ್ಲ ಅಂತಾ ಹೋಟೆಲ್ ನಿಂದ ಊಟ ಪಾರ್ಸಲ್ ತಂದಿದ್ದ.

ಆದ್ರೆ ಊಟ ಮಾಡೋ ಮೊದಲೇ ಖ್ಯಾತೆ ತೆಗೆದ ತಾಯಿ ಮಗಳು ಶಿವಕುಮಾರ್ ಮೇಲೆ ದೀಪದ ಕಂಬದಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಂದು ಮುಗಿಸಿದ್ರು. ಘಟನೆ ಗೊತ್ತಾಗ ಬಾರದು ಅಂತಾ ರೂಂ ನ ಮಂಚದ ಅಡಿಯಲ್ಲಿ ಶಿವಕುಮಾರ್ ಶವ ಸುತ್ತಿ ಇಟ್ಟಿದ್ರು.ಶಿವಕುಮಾರ್ ಹುಡುಕಿದ ಊರ ಜನರಿಗೆ ಮಂಚದ ಅಡಿಯಲ್ಲಿದ್ದ ಶವ ಕಂಡಿತ್ತು.. ತಕ್ಷಣ ನೋಡಿದ ಜನ ಆತನನ್ನ ಹೊರಗೆ ತಂದು ಬದುಕಿಸೋ ಪ್ರಯತ್ನ ಮಾಡಿದ್ರು ಅದು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಶಿವಕುಮಾರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಮನೆಯಲ್ಲಿ ಇಬ್ಬರನ್ನ ಕೂಡಿ ಹಾಕಿ ಪೊಲೀಸರಿಗೆ ಪೋನ್ ಹಾಯಿಸಿದ್ರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಕಲಿಸಿಕೊಂಡಿರೋ ಪೋಲೀಸರು ವಶಕ್ಕೆ ಪಡೆದಿರೋ ಆರೋಪಿಗಳ ಮೂಲಕ ಕೊಲೆಗೆ ನಿಖರ ಕಾರಣ ಹೇಳ್ತೇವೇ ಅಂತಿದ್ದಾರೆ..

LEAVE A REPLY

Please enter your comment!
Please enter your name here