Home Latest ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಇಲ್ಲದಂತಾಗಿದೆ…!?

ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಇಲ್ಲದಂತಾಗಿದೆ…!?

122
0
SHARE

ಕಳೆದ ಒಂದು ತಿಂಗಳಿನಿಂದ ಸ್ಕ್ಯಾನಿಂಗ್ ಮೆಷಿನ್ ಕೆಟ್ಟುಹೋಗಿದ್ದು, ಅದನ್ನ ರಿಪೇರಿ ಮಾಡಿಸಲು ಬಿಎಂಆರ್‌ಸಿಎಲ್ ಹಿಂದೇಟು ಹಾಕುತ್ತಿದೆ.. ಹೀಗಾಗಿ ಜಯನಗರದ ಸೌತ್ಎಂಟ್ ಮೆಟ್ರೋ ನಿಲ್ದಾಣದಲ್ಲಿ, ಬೇಕಾಬಿಟ್ಟಿ ತಪಾಸಣೆ ಮಾಡಲಾಗ್ತಿದೆ.. ಮ್ಯಾನ್ಯುವೆಲ್ ಚೆಕಪ್ ಅಂತ ಬ್ಯಾಕ್ ಮೇಲೆ ನೆಪಮಾತ್ರಕ್ಕೆ ಮೆಟಲ್ ಡಿಟೆಕ್ಟರ್‌ನಿಂದ ತಪಾಸಣೆ ಮಾಡಲಾಗ್ತಿದೆ.. ಬ್ಯಾಗ್‌ಗಳನ್ನ ಸ್ಕ್ಯಾನ್ ಮಾಡಬೇಕಾದ ಮೆಟಲ್ ಡಿಟೆಕ್ಟರ್ ಕೆಟ್ಟಿದ್ದು, ಅದನ್ನ ನೀವು ರಿಪೇರಿ ಮಾಡ್ಸಿ ಅಂತ ಸೆಕ್ಯುರಿಟಿ ಏಜೆನ್ಸಿ sis ಸಂಸ್ಥೆಗೆ ಸೂಚಿಸಿದೆ.. ಅದೇ sis ಸಂಸ್ಥೆ ನೀವೇ ಮಾಡ್ಸಿ ಅಂತ ಬಿಎಂಆರ್‌ಸಿಎಲ್ ಗೆ ತಿಳಿಸಿದೆ..

ಹೀಗಾಗಿ ಒಬ್ಬರಿಗೊಬ್ಬರು ಬೊಟ್ಟುಮಾಡಿ ತೋರಿಸುತ್ತಿದ್ದು, ಮೆಟ್ರೋ ಸೆಕ್ಯೂರಿಟಿಗೆ ಹೊಡೆತ ಬಿದ್ದಿದೆ.. ಇದನ್ನ ಪ್ರಶ್ನಿಸೋ ಸಾರ್ವಜನಿಕರಿಗೆ ನಿಮಗ್ಯಾಕೆ ಅಂತ ಬೇಕಾಬಿಟ್ಟಿ ಉತ್ತರವನ್ನ ಕೊಡ್ತಿದ್ದಾರೆ.. ಹೀಗಾಗಿ ಪ್ರಯಾಣಿಕರು ಆಗಬಹುದಾದ ಅನಾಹುತವನ್ನ ತಡೆಯಿರಿ ಅಂತ ಮನವಿ ಮಾಡಿದ್ರೂ, ನೋ ರೆಸ್ಪಾನ್ಸ್..

LEAVE A REPLY

Please enter your comment!
Please enter your name here