Home Crime ಮೆಟ್ರೋ ರೈಲು ಬರ್ತಾ ಇದ್ದಂತೆ ಯುವಕ ಆತ್ಮಹತ್ಯೆಗೆ ಯತ್ನ ..! 750 ವೋಲ್ಟ್ ಕರೆಂಟ್ ಪ್ರವಹಿಸುತ್ತಿದ್ದರೂ...

ಮೆಟ್ರೋ ರೈಲು ಬರ್ತಾ ಇದ್ದಂತೆ ಯುವಕ ಆತ್ಮಹತ್ಯೆಗೆ ಯತ್ನ ..! 750 ವೋಲ್ಟ್ ಕರೆಂಟ್ ಪ್ರವಹಿಸುತ್ತಿದ್ದರೂ ಅಪಾಯದಿಂದ ಪಾರು..!

469
0
SHARE

ಆತ ಮೆಟ್ರೋ ರೈಲಿನಲ್ಲಿ ಪ್ರಯಾಣಿಸೋಕೆ ಅಂತ ಬಂದಿದ್ದ. ಇನ್ನೇನು ಮೆಟ್ರೋ ರೈಲು ಸಮೀಪಿಸ್ತಾ ಇದ್ದಂತೆ ಆತ ಹಳಿಯ ಮೇಲೆ ಹಾರಿಯೇ ಬಿಟ್ಟ. ರೈಲು ಓಡಿಸುತ್ತಿದ್ದ ಪೈಲಟ್‌ಗೆ ಏನ್ ಮಾಡಬೇಕೆಂದು ತೋಚಲಿಲ್ಲ. ಮುಂದೇನಾಯ್ತು, ಅಷ್ಟಕ್ಕು ಆತ ಮೆಟ್ರೋ ಹಳಿ ಮೇಲೆ ಹಾರಿದ್ಯಾಕೆ?ಮೆಟ್ರೋ ಹಳಿ ಮೇಲೆ ಹಾರಿ ಯುವಕ ಆತ್ಮಹತ್ಯೆ ಯತ್ನ- 750 ವೋಲ್ಟ್ ಕರೆಂಟ್ ಪ್ರವಹಿಸುತ್ತಿದ್ದರೂ ಅಪಾಯದಿಂದ ಪಾರು ಬೆಂಗಳೂರಿನ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಕೆಲಕಾಲ ಆತಂಕ.

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆ ನಿಜಕ್ಕೂ ಎದೆ ಝಲ್ ಎನಿಸಿ ಬಿಡಿಸುತ್ತದೆ. ಎಂದಿನಂತೆ ಈ ನಿಲ್ದಾಣದಲ್ಲಿ ಪ್ರಯಾಣಿಕರು ಮೆಟ್ರೋ ರೈಲಿಗಾಗಿ ಕಾಯುತ್ತಿದ್ದರು. ಬೆಳಗ್ಗೆ 11 ಗಂಟೆ ವೇಳೆಗೆ ಅದೆಲ್ಲಿ ನಿಂತಿದ್ದನೋ ವೇಣುಗೋಪಾಲ್ ಎಂಬ ಯುವಕ ಏಕಾಏಕಿ 750 ವೋಲ್ಟ್ ಕರೆಂಟ್ ಪ್ರವಹಿಸೋ ಹಳಿ ಮೇಲೆ ಹಾರಿದ್ದಾನೆ.ಮೆಟ್ರೋ ಹಳಿ ಮೇಲೆ ವೇಣುಗೋಪಾಲ್ ಹಾರುತ್ತಿದ್ದಂತೆ ಸ್ಟೇಷನ್‌ನಲ್ಲಿ ನಿಂತಿದ್ದ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದಾರೆ.

ವೇಣುಗೋಪಾಲ್ ಹಾರಿದ್ದನ್ನ ಕಂಡ ಯಲಚೇನಹಳ್ಳಿ ಕಡೆಗೆ ತೆರಳುತ್ತಿದ್ದ ಮೆಟ್ರೋ ರೈಲಿನ ಪೈಲಟ್ ಬ್ರೇಕ್ ಹಾಕಲು ಯತ್ನಿಸಿದ್ದಾರೆ. ಆದ್ರೆ, ಅಷ್ಟರಲ್ಲಾಗಲೇ ಹಳಿಗಳ ಮೇಲೆ ಹಾದು ಹೋಗಿತ್ತು. ವೇಣುಗೋಪಾಲ್ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣಿಸುತ್ತೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತತಕ್ಷಣ ಬಿಎಂಆರ್‌ಸಿಎಲ್ ಸಿಬ್ಬಂದಿ ಹಾಗೂ ಆಟೋ ಚಾಲಕರು ವೇಣುಗೋಪಾಲ್‌ನನ್ನು ರಕ್ಷಿಸಿದ್ದಾರೆ.ತಲೆಗೆ ಪೆಟ್ಟಾಗಿದ್ರಿಂದ ಕೂಡಲೇ ವೇಣುಗೋಪಾಲ್‌ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು.

ವಿಷಯ ತಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ವೇಣುಗೋಪಾಲ್ ಆರೋಗ್ಯ ವಿಚಾರಿಸಿದರು. ಆತ್ಮಹತ್ಯೆಗೆ ಯತ್ನಿಸಿದ ವೇಣುಗೋಪಾಲ್ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆಗಿದ್ದ. ಅಲ್ಲದೇ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ. ತಾಯಿ ಬೈದಿದ್ದಕ್ಕೆ ವೇಣುಗೋಪಾಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.ಯುವತ ಆತ್ಮಹತ್ಯೆಗೆ ಯತ್ನಿಸಿದ್ರಿಂದ ಹಸಿರು ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು. ಯಲಚೇನಹಳ್ಳಿಯಿಂದ ನಾಗಸಂದ್ರಕಡೆಗೆ ಸಂಚರಿಸುವ ಪ್ರಯಾಕರಂತೂ ಪರದಾಡಿದರು. ಒಂದು ತಾಸಿನ ಬಳಿಕ ಮೆಟ್ರೋ ಸಂಚಾರ ಸಹಜ ಸ್ಥಿತಿಗೆ ಮರಳಿತು.

LEAVE A REPLY

Please enter your comment!
Please enter your name here