Home District ಮೇಯರ್ ಚುನಾವಣೆಯಲ್ಲಿ ಪಕ್ಷೇತರರ ವಿರುದ್ಧ ಗೇಮ್ ಪ್ಲಾನ್..!? ಚುನಾವಣೆ ಮುಗಿದ ಮೇಲೆ ಪಕ್ಷೇತರರಿಗೆ ಕಾದಿದೆ ಡಬಲ್...

ಮೇಯರ್ ಚುನಾವಣೆಯಲ್ಲಿ ಪಕ್ಷೇತರರ ವಿರುದ್ಧ ಗೇಮ್ ಪ್ಲಾನ್..!? ಚುನಾವಣೆ ಮುಗಿದ ಮೇಲೆ ಪಕ್ಷೇತರರಿಗೆ ಕಾದಿದೆ ಡಬಲ್ ಶಾಕ್..?!

308
0
SHARE

ಮೇಯರ್-ಉಪಮೇಯರ್ ಚುನಾವಣೆಗೆ ಸಂಖ್ಯಾ ಬಲಕ್ಕಾಗಿ, ಮೈತ್ರಿ ಪಕ್ಷಗಳು ಪಕ್ಷೇತರ ಶಾಸಕರಿಗೆ ಆಮಿಷ ಒಡ್ಡಿವೆ.. ಎಂಟು ಜನ ಪಕ್ಷೇತರರು ಷರತ್ತಿನ ಮೇಲೆ ಬೆಂಬಲ ನೀಡುತ್ತಿದ್ದು, ಎಲ್ಲರಿಗೂ ಸ್ಥಾಯಿ ಸಮಿತಿ ನೀಡೋದಾಗಿ ಬರವಸೆ ನೀಡಲಾಗಿದೆ.. ಆದ್ರೆ, ಒಳಗೊಳಗೆ ಗೇಮ್ ಪ್ಲಾನ್ ಮಾಡಲಾಗ್ತಿದ್ದು, ಯಾರ್ಯಾರಿಗೆ ಸ್ಥಾಯಿ ಸಮಿತಿ ನೀಡಬೇಕೆನ್ನೋದು ಲೆಕ್ಕಾಚಾರ ನಡೆಯುತ್ತಿದೆ.

ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರೆಸಲು ಕಾಂಗ್ರೆಸ್-ಜೆಡಿಎಸ್ ಪಕ್ಷ ಭಾರೀ ಸರ್ಕಸ್ ಮಾಡಿ, ಪಕ್ಷೇತರರನ್ನ ತಮ್ಮ ಬಳಿಯೇ ಉಳಿದುಕೊಳ್ಳುವಂತೆ ಮಾಡಿದ್ದಾರೆ.. ಇದರ ಜೊತೆಯಲ್ಲಿ ಎಂಟೂ ಜನ ಪಕ್ಷೇತರರಿಗೆ ಸ್ಥಾಯಿ ಸಮಿತಿ ನೀಡೋದಾಗಿ ಭರವಸೆ ನೀಡಿದ್ದು, ಚುನಾವಣೆ ಮುಗಿದ ಬಳಿಕ ಉಲ್ಟಾ ಹೊಡೆಯೋ ಸಾಧ್ಯತೆಯೇ ಹೆಚ್ಚಿದೆ.ಕಳೆದ ಮೂರು ವರ್ಷಗಳಿಂದ ಪಾಲಿಕೆ ಅಧಿಕಾರವನ್ನ ಉಳಿಸಿಕೊಂಡು ಬಂದಿರೋ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನ, ಮತ್ತೆ ಮುಂದುವರೆಸಲು ಪಕ್ಷೇತರರ ಮನವೊಲಿಸಲಾಗಿದೆ..

ಬಿಜೆಪಿಯತ್ತ ಹೋಗದಿರಲು ಈಗಾಗಲೇ ಮೂರು ಕೋಟಿಯಷ್ಟು ಹಣವನ್ನ ಎಂಟೂ ಪಕ್ಷೇತರರಿಗೆ ನೀಡಲಾಗಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.. ಇದರ ಜೊತೆಯಲ್ಲಿ ಸ್ಥಾಯಿ ಸಮಿತಿಯನ್ನೂ ನೀಡೋದಾಗಿ ಬರವಸೆ ನೀಡಲಾಗಿದ್ದು, 12 ಸ್ಥಾಯಿ ಸಮಿತಿ ಪೈಕಿ 8 ಸ್ಥಾಯಿ ಸಮಿತಿಯನ್ನೂ ನೀಡೋದಾಗಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬರವಸೆ ನೀಡಿದ್ದಾರೆ..

ಜೆಡಿಎಸ್ ಪಕ್ಷಕ್ಕೆ ನೀಡಿರೋ ತೆರಿಗೆ ಆರ್ಥಿಕ ಸ್ಥಾಯಿ ಸಮಿತಿ, ಬೃಹತ್ ಕಾಮಗಾರಿ ಸೇರಿದಂತೆ ಪ್ರಮುಖ ಸ್ಥಾಯಿ ಸಮಿತಿ ನೀಡೋ ಬರವಸೆ ನೀಡಿದ್ದು, ಇದಕ್ಕೆ ಜೆಡಿಎಸ್ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ..ಪಕ್ಷೇತರರೆಲ್ಲರಿಗೂ ಸ್ಥಾಯಿ ಸಮಿತಿ ನೀಡಿದ್ದೇ ಆದಲ್ಲಿ, ಉಳಿಯೋದು ಕೇವಲ ನಾಲ್ಕು ಸ್ಥಾಯಿ ಸಮಿತಿಗಳು ಮಾತ್ರ..

ಅದರಲ್ಲಿ ಕಾಂಗ್ರೆಸ್ಸಿಗೆಷ್ಟು, ಜೆಡಿಎಸ್ಸಿಗೆಷ್ಟು ಅನ್ನೋ ಗೊಂದಲ ಶುರುವಾಗಿದೆ.. ಹೀಗಾಗಿ ಮೈತ್ರಿ ಪಕ್ಷದ ಸದಸ್ಯರಲ್ಲೇ ಗೊಂದಲ ಶುರುವಾಗಿದ್ದು, ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.. ಈ ಬಗ್ಗೆ ರಾಮಲಿಂಗಾ ರೆಡ್ಡಿ ಅವರನ್ನ ಕೇಳಿದ್ರೆ, ಎಲ್ಲರಿಗೂ ಸ್ಥಾಯಿ ಸಮಿತಿ ಕೊಡ್ತೀವಿ ಅಂತ ನಾವ್ ಹೇಳೆಇಲ್ಲ..

ಚುನಾವಣೆ ಮುಗಿಲೀ ಯಾರಿಗೆ ಕೊಡಬೇಕು ಅನ್ನೋದನ್ನ ತೀರ್ಮಾನ ಮಾಡ್ತೀವಿ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ..ತಮಗೆ ಸ್ಥಾಯಿ ಸಮಿತಿ ಸಿಗಲಿದೆ ಅನ್ನೋ ಆಶಾದಾಯಕದ ಮೇಲೆ ಪಕ್ಷೇತರರು ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.. ಆದ್ರೆ, ತಮ್ಮ ಪಕ್ಷದಲ್ಲೂ ಇರೋ ಸದಸ್ಯರಿಗೂ ಅಧಿಕಾರ ಸಿಗಬೇಕೆನ್ನೋ ಹಂಬಲ ಮೈತ್ರಿ ಪಕ್ಷಕ್ಕಿದೆ.. ಹೀಗಾಗಿ ಸ್ಥಾಯಿ ಸಮಿತಿ ಗೊಂದಲ, ಪಾಲಿಕೆಯಲ್ಲಿ ಮತ್ತಷ್ಟು ಬಿಕ್ಕಟ್ಟು ಉಂಟುಮಾಡೋದ್ರಲ್ಲಿ ಅನುಮಾನವೇ ಇಲ್ಲ.

LEAVE A REPLY

Please enter your comment!
Please enter your name here