Home Crime ಮೇಷ್ಟ್ರು ಮಾಡ್ತಿದ್ರು ನಿತ್ಯ ತನ್ನ ಪತ್ನಿಗೆ ಕಾಮಪಾಠ, ಮದುವೆಯಾದಾಗಿನಿಂದ ಆಕೆಗೆ ಬ್ಲೂಫಿಲಂದೇ ಕಾಟ..! ಅಮ್ಮನ ಕಾಮ...

ಮೇಷ್ಟ್ರು ಮಾಡ್ತಿದ್ರು ನಿತ್ಯ ತನ್ನ ಪತ್ನಿಗೆ ಕಾಮಪಾಠ, ಮದುವೆಯಾದಾಗಿನಿಂದ ಆಕೆಗೆ ಬ್ಲೂಫಿಲಂದೇ ಕಾಟ..! ಅಮ್ಮನ ಕಾಮ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಲು ಪುತ್ರಿ..!

3098
0
SHARE

 

 

ಒಂದು ಸಂಸಾರ ಚೆನ್ನಾಗಿ ನಡಿಬೇಕು ಅಂದ್ರೆ, ಆ ಸಂಸಾರ ಹಾಲು ಜೇನಿನಂತೆ ಇರಬೇಕು ಅಂದ್ರೆ ಅಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಎಲ್ಲವೂ ಇರಬೇಕು. ಆದ್ರೆ ಇಲ್ಲೊಂದು ಸಂಸಾರದಲ್ಲಿ ಇದೆಲ್ಲವನ್ನ ಬಿಟ್ಟು ಬೇರೆಯದ್ದೇ ಇತ್ತು, ಪ್ರೀತಿ ಮಾಡಿ ಮದುವೆಯಾದವರು ಈಗ ಒಂದೇ ಮನೆಯಲ್ಲಿದ್ದುಕೊಂಡೇ ವಿಲನ್ ಗಳಾಗಿ ಹೋಗಿದ್ರು.

ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳನ್ನ ಹೊಂದಿದ ಮೇಲೆ ಈ ಸಂಸಾರದಲ್ಲಿ ಸಾರವಿಲ್ಲ ಅನ್ನೋದು ಗೊತ್ತಾಗಿದೆ. ಅವತ್ತು ಒಬ್ಬರನ್ನ ಒಬ್ಬರು ಬಿಟ್ಟು ಇರಲಾರದವರು ಇವತ್ತು ಯಾಕಪ್ಪಾ ಒಟ್ಟಿಗೆ ಇದ್ದೀವಿ ಅಂತ ಅಂದುಕೊಳ್ತಿದ್ದಾರೆ. ಅವರಿಬ್ಬರ ನಡುವೆ ಕಾಣೆಯಾದ ಪ್ರಾಮಾಣಿಕತೆ ಇವರಿಬ್ಬರನ್ನ ಬೀದಿಗೆ ತಂದು ನಿಲ್ಲಿಸಿದೆ. ಪ್ರೀತಿಯೊಂದಿಗೆ ನಂಬಿಕೆಯನ್ನ ಕಳೆದುಕೊಂಡವರು ಈಗ ಒಬ್ಬರನ್ನೊಬ್ಬರು ನೋಡಿದ್ರೆ ದ್ವೇಷ ಕಾರ್ತಿದ್ದಾರೆ.ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡು ನರಳಾಡ್ತಿರೋ ಮಹಿಳೆ ಕನಕ ಅಂತ. ಈಕೆ ತುಮಕೂರಿನ ಮೂಲದವಳು.

ಇವಳು ಸುಮಾರು 15 ವರ್ಷದ ಹಿಂದೆ ವಸಂತ್ ಕುಮಾರ್ ಅನ್ನೋ ವ್ಯಕ್ತಿಯನ್ನ ಪ್ರೀತಿಸಿ ಮದುವೆಯಾಗಿದ್ಲು. ವಸಂತ್ ಮತ್ತು ಕನಕ ಇಬ್ಬರು ಒಂದೇ ಕಾಲೇಜಿನಲ್ಲಿ ಓದ್ತಿದ್ರು. ಆಗ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿಯಾಗಿದೆ. ನಂತ್ರ ಜಾತಿಯ ವಿಚಾರಕ್ಕೆ ಮದುವೆಯಾಗಬೇಕೋ ಬೇಡ್ವೋ ಅಂತ ಯೋಚನೆ ಮಾಡಿದ್ದಾರೆ. ಆದ್ರೆ ಇಬ್ಬರು ಒಬ್ಬರನ್ನ ಒಬ್ರು ಬಿಟ್ಟು ಇರಲಾರದ ಸ್ಥಿತಿಯಲ್ಲಿ ಇದ್ದ ಕಾರಣ ಅವ್ರು ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ರು. ಕನಕನ ಮನೆಯವರು ಆತನ ಜಾತಿ ಬೇರೆ ಇದ್ರು ಕೂಡಾ ಮದುವೆಗೆ ಒಪ್ಪಿದ್ರು. ಅಲ್ಲದೆ ವರನಿಗೆ ಏನೆಲ್ಲಾ ಉಪಚಾರ ಮಾಡಬೇಕೋ ಅದನ್ನ ಮಾಡಿದ್ರು.

ನೀವಿಬ್ರು ಚೆನ್ನಾಗಿ ಇರಿ ನಿಮ್ಮ ಸಂಸಾರ ಸುಖವಾಗಿರಲಿ ಅಂತ ತಲೆ ಮೇಲೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ರು. ಹೊಸದರಲ್ಲಿ ಎತ್ತಿ ಎತ್ತಿ ಒಗೆದ್ರು ಅನ್ನೋ ಗಾದೆ ಮಾತಿದೆಯಲ್ಲ ಹಾಗೆ ಇವ್ರು ಕೂಡಾ ಆರಂಭದಲ್ಲಿ ಚೆನ್ನಾಗಿಯೇ ಇದ್ರು. ಗಂಡೆ ಹೆಂಡ್ತಿ ಅಂದ್ರೆ ಹೀಗರಬೇಕು ಅನ್ನೋ ಹಾಗೆ ಮಾದರಿಯಾಗಿದ್ರು. ಪ್ರೀತಿಸಿ ಮದುವೆಯಾದ ಕಾರಣ ಇಬ್ಬರಲ್ಲಿ ಅನ್ಯೋನ್ಯತೆಯಿತ್ತು. ಹಾಗೆ ಇಬ್ಬರ ಪ್ರೀತಿಗೆ ಎರಡು ಮಕ್ಕಳು ಕೂಡಾ ಆಗಿತ್ತು. ಅಲ್ಲವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅಲ್ಲಿಂದಲೇ ಶುರುವಾಗಿದ್ದು ನೋಡಿ ಅವರಿಬ್ಬರ ನಡುವಿನ ಜಗಳ. ದ್ವೇಷ.

ಅವರಿಬ್ಬರ ನಡುವೆ ಅದಾಗ್ಲೇ ಸಣ್ಣ ಬಿರುಕು ಕಾಣಿಸಿಕೊಳ್ಳೋದಕ್ಕೆ ಶುರುವಾಗಿತ್ತು. ಯಾಕಂದ್ರೆ ಮದುವೆಯಾಗಿ ಸುಮಾರು ವರ್ಷಗಳು ಕಳೆದಿತ್ತು. ಹೀಗಾಗಿ ಇಬ್ಬರಿಗು ಒಬ್ಬರ ಮೇಲೆ ಒಬ್ಬರಿಗೆ ಸ್ಪರ್ಶ ಸುಖ ಹೊರಟು ಹೋಗಿತ್ತು. ಅದೇ ಹೆಂಡ್ತಿ ಅದೇ ಗಂಡ ದಿನ ಅವರ ಮುಖವನ್ನ ಅವರೇ ನೋಡ್ಕೊಂಡು ಬೋರಾಗಿತ್ತು.ಹೀಗಾಗಿ ಮನೆ ಅನ್ನೋದು ನೆಪ ಮಾತ್ರಕ್ಕೆ ಆಗಿ ಹೋಗಿತ್ತು. ಇಬ್ಬರಿಗೂ ಇರೋದೆಲ್ಲಾ ಬಿಟ್ಟು ಇನ್ನೇನು ಬೇಕು ಅನಿಸೋದಕ್ಕೆ ಶುರುವಾಗಿತ್ತು. ಅಲ್ಲೇ ನೋಡಿ ಈ ಸಂಸಾರ ದಾರಿ ತಪ್ಪಿ ಬೀದಿಗೆ ಬೀಳೋದಕ್ಕೆ ದಿನಗಣನೆ ಶುರುವಾಗಿದ್ದು. ಈ ಕನಕ ಮತ್ತು ವಸಂತ್ ಆರಂಭದಲ್ಲಿ ಚೆನ್ನಾಗಿಯೇ ಇದ್ರು ಅಂತ ಹೇಳಿದ್ವಿ ಅಲ್ವಾ.

ಆಗ ಇಬ್ಬರು ಕಾಮ ಮತ್ತು ಕಾಮನೆಯ ವಿಚಾರದಲ್ಲಿ ಮುಕ್ತವಾಗಿದ್ರು. ಗಂಡ ಹೆಂಡ್ತಿ ಸಂಸಾರ ಮಾಡುವಾಗ ಅದ್ರಲ್ಲೂ ಒಂದು ಹೊಸದನ್ನ ಪ್ರಯತ್ನಿಸೋಣ ಅನ್ನೋ ಮುಕ್ತಭಾವನೆ ಹೊಂದಿದ್ರು. ಅಗ ಇಬ್ಬರು ಸೇರಿ ಒಂದಷ್ಟು ಬ್ಲೂ ಫಿಲಂ ಸಿಡಿಯನ್ನ ಮನೆಗೆ ತಂದು ಅದನ್ನ ನೋಡಿ ತಮ್ಮ ಬಯಕೆಗಳನ್ನ ತೀರಿಸಿಕೊಳ್ತಿದ್ರು. ಅದು ತಪ್ಪು ಕೂಡಾ ಅಲ್ಲ ಬಿಡಿ ಯಾಕಂದ್ರೆ ಅವರಿಬ್ಬರು ಗಂಡ ಹೆಂಡ್ತಿ. ತನ್ನ ದೈಹಿಕ ಬಯಕೆಗಳನ್ನ ಅವರಿಷ್ಟದಂತೆ ಪೂರೈಸಿಕೊಳ್ತಿದ್ರು. ಅದ್ರಲ್ಲಿ ಅನೈತಿಕತೆಯ ಪ್ರಶ್ನೆ ಬರ್ತಿರಲಿಲ್ಲ. ಅಲ್ಲದೆ ಅವ್ರು ತಮ್ಮಿಬ್ಬರ ನಡುವೆಯೇ ಆ ಬಯಕೆಗಳನ್ನ ಈಡೇರಿಸಿಕೊಳ್ತಿದ್ದರಿಂದ ಅದರ ಬಗ್ಗೆ ಯಾರ ಪ್ರಶ್ನೆಯೂ ಇರಲಿಲ್ಲ.

ಆದ್ರೆ ಮುಂದೊಂದು ದಿನ ತಾವು ಮನೆಯಲ್ಲಿ ತಂದಿಟ್ಟುಕೊಂಡಿರೋ ಸಿಡಿಗಳೇ ಸಂಸಾರವನ್ನ ಒಡೆಯುತ್ತೆ. ಇವತ್ತು ಪೂರೈಸಿಕೊಳ್ಳುತ್ತಿರೋ ದೈಹಿಕ ಆಸೆಗಳು ಮುಂದೊಂದು ದಿನ ನಮ್ಮಿಬ್ಬರನ್ನ ಇನ್ನೆಲ್ಲೋ ತಗೊಂಡು ಹೋಗಿ ನಿಲ್ಲಿಸುತ್ತೆ ಅನ್ನೋದು ಗೊತ್ತೇ ಇರಲಿಲ್ಲ. ಯಾಕಂದ್ರೆ ಇವತ್ತಿಗೆ ವಿಪರೀತ ಸುಖ ಕೊಟ್ಟಿದ್ದ ಸಂಗತಿ ಮುಂದೊಂದು ದಿನ ಅವರಿಬ್ಬರಿಗೆ ಆರೋಪ ಮಾಡೋದಕ್ಕೆ ಒಂದು ಪ್ರಬಲ ಅಸ್ತ್ರವಾಗಿತ್ತು. ಇಲ್ಲಿ ಇಬ್ಬರು ಹಾದಿ ತಪ್ಪಿದ್ರು. ಅಲ್ಲದೆ ಇಬ್ಬರು ನಂಬಿಕೆಯನ್ನ ಕಳ್ಕೊಂಡಿದ್ರು. ಅದ್ಯಾವುದನ್ನು ಕೂಡಾ ನಾವು ಹೇಳ್ತಿಲ್ಲ ಅವರಿಬ್ಬರೇ ತಮ್ಮ ಮೇಲೆ ತಾವು ಹ್ಯಾಗೆ ಚಪ್ಪಡಿ ಕಲ್ಲು ಎಳ್ಕೊತ್ತಿದ್ದಾರೆ ನೋಡಿ.

ಇದು ಆಕೆ ವಸಂತ್ ಕುಮಾರ್ ಮೇಲೆ ಮಾಡ್ತಿರೋ ಆರೋಪ. ನನ್ನ ಗಂಡ ವಿಪರೀತ ಕಾಮುಕ. ಆತನನ್ನ ಪ್ರೀತಿಸಿ ಮದುವೆಯಾಗಿ ತಪ್ಪು ಮಾಡಿಬಿಟ್ಟೆ. ಅವನಿಗೆ ಹಣ ಅಂದ್ರೆ ಹೆಚ್ಚು ವ್ಯಾಮೋಹ ನನಗೆ ಹಣ ತಗೊಂಡು ಬಾ ಅಂತ ಕಾಟ ಕೊಡ್ತಿದ್ದ ಅಂತ ಆಕೆ ಕಣ್ಣೀರು ಹಾಕ್ತಿದ್ಲು. ಆಕೆಯ ಕಣ್ಣೀರಿಗೆ ಕರಗದೇ ಇದ್ದವರು ಯಾರು ಇರಲಿಲ್ಲ. ಯಾಕಂದ್ರೆ ಹೆಣ್ಣು ಮಕ್ಕಳ ಸ್ಟ್ರಾಂಗ್ ವೆಪನ್ ಕಣ್ಣೀರು ಅಲ್ವಾ. ಆಕೆ ಹೇಳಿದ್ದು ನಿಜವೋ ಸುಳ್ಳೋ ಗೊತ್ತಿಲ್ಲ. ಆದ್ರೆ ಆಸ್ಪತ್ರೆಯಲ್ಲಿ ಮಾತ್ರ ಆಕೆ ಟ್ರೀಟ್ ಮೆಂಟ್ ತಗೊಂಡು ತನ್ನ ಪತಿಯ ವಿರುದ್ಧ ಅಂತಹದ್ದೊಂದು ಆರೋಪವನ್ನ ಮಾಡ್ತಿದ್ಲು. ಪತ್ನಿಯೇ ಹೀಗೆ ಆರೋಪ ಮಾಡಿದ ಮೇಲೆ ಗಂಡ ಸುಮ್ಮನಿರ್ತಾನಾ.

ಅವನು ಕೂಡಾ ತನ್ನ ವರ್ಶನ್ ಹೇಳೋದಕ್ಕೆ ಶುರುಮಾಡಿದ್ದ.ಆಕೆ ಹೇಳ್ತಿರೋದೆಲ್ಲಾ ಸುಳ್ಳು. ನನ್ನನ್ನ ತುಳಿಬೇಕು ಅನ್ನೋ ಕಾರಣಕ್ಕೆ ಆಕೆ ಹೀಗೆಲ್ಲಾ ಆರೋಪ ಮಾಡ್ತಿದ್ದಾಳೆ. ನಾವಿಬ್ರು ಪ್ರೀತಿಸಿ ಮದುವೆಯಾಗಿದ್ವಿ. ಆದ್ರೆ ಅವಳು ಹಾದಿ ತಪ್ಪಿದ್ಲು. ನಾನು ಪೊಲೀಸ್ರಿಗೆ ದೂರು ಕೊಟ್ಟಿದ್ದಕ್ಕ ಅವಳು ಈ ರೀತಿಯಾಗಿ ಆರೋಪ ಮಾಡ್ತಿದ್ದಾಳೆ. ನನ್ನನ್ನ ಬೀದಿಗೆ ತರೋದಕ್ಕೆ ಇದೆಲ್ಲಾ ಪ್ಲಾನ್ ಮಾಡಿದ್ದಾಳೆ ಅಂತ ಅವನು ಕೂಡಾ ತನ್ನ ಪತ್ನಿಯ ವಿರುದ್ಧ ಸಮರಕ್ಕೆ ನಿಂತಿದ್ದ.ಅವಳು ಅಷ್ಟಕ್ಕೆ ಸುಮ್ಮನಾಗಿರಲಿಲ್ಲ ತನ್ನ ಗಂಡನ ವಿರುದ್ಧ ದೂರನ್ನ ಕೊಟ್ಟಿದ್ಲು. ಅಲ್ಲದೆ ಅವರಿಬ್ಬರ ನಡುವೆ ನಡೆದಿದ್ದ ಇನ್ನೊಂದು ಘಟನೆಯನ್ನ ಕೂಡಾ ಆಕೆ ಹೊರಗೆ ಹಾಕಿದ್ಲು.

ಅವನು ನನ್ನನ್ನ ಮೇಲ್ಜಾತಿಯವನು ಅಂತ ಮದುವೆಯಾಗಿದ್ದ. ಆದ್ರೆ ಮದುವೆಯಾದ ಮೇಲೆ ನನಗೆ ವಿಷಯ ಗೊತ್ತಾಯ್ತು ಅಂತ ಹೇಳಿದ್ಲು. ಅಲ್ಲದೆ ನಾನೂ ದೂರು ಕೊಡ್ತೀನಿ ಅಂದ್ರೆ ನನಗೆ ಎಂಪಿ ಎಂಎಲ್ ಎಗಳು ಗೊತ್ತು ಅಂತ ಹೆದರಿಸ್ತಾನೆ. ಅಲ್ಲದೆ ಪೊಲೀಸ್ರ ಹತ್ತಿರ ಹೋದ್ರೆ ಪೆಟ್ರೋಲ್ ಹಾಕಿ ಸುಟ್ಟಕ್ತಾನೆ ಅಂತಾನು ಹೇಳಿದ್ದ. ಅಲ್ಲಿಗೆ ಅವನ ವೀಕ್ನೆಸ್ ಗಳೇನಿದೆ ಅದೆಲ್ಲವನ್ನ ಕೂಡಾ ಆಕೆ ಈಗ ಆರೋಪ ಮಾಡೋದಕ್ಕೆ ಯೂಸ್ ಮಾಡಿಕೊಂಡಿದ್ಲು. ಗಂಡನೇ ಅಲ್ಲ ಇವನು ಇವನಿಂದ ನನಗೆ ನೆಮ್ಮದಿಯೇ ಇಲ್ಲ ಅಂತ ಆಕೆ ಅವತ್ತು ಆಸ್ಪತ್ರೆಯಲ್ಲಿ ಮಲಗಿಕೊಂಡು ಕಣ್ಣೀರು ಹಾಕುತ್ತಾ ಹೇಳ್ತಿದ್ಲು.

ಕನಕ ಹೇಳ್ತಿರೋದು ನಿಜವೋ ಸುಳ್ಳೋ ಒಂದು ಗೊತ್ತಾಗಲಿಲ್ಲ. ಗಂಡನಿಂದ ದೂರ ಆಗಬೇಕು ಅನ್ನೋ ಕಾರಣಕ್ಕೆ ಹಾಗೆ ಹೇಳ್ತಿದ್ದಾಳ. ಅಥವಾ ಆಕೆಗೆ ನಿಜವಾಗಿಯು ಆತ ತೊಂದರೆ ನೀಡಿದ್ದಾನ ಅನ್ನೋದು ಗೊತ್ತೇ ಆಗಲಿಲ್ಲ. ಆಕೆ ಇಷ್ಟೆಲ್ಲಾ ಆರೋಪಗಳನ್ನ ಮಾಡುವ ಹೊತ್ತಿಗೆ ಗಂಡ ಮಾತ್ರ ಯಾರ ಕಣ್ಣಿಗೂ ಬೀಳಲೇ ಇಲ್ಲ. ಅವನಿಗೆ ಹೆಂಡ್ತಿ ನನಗೊಂದು ಗತಿ ಕಾಣಿಸ್ತಾಳೆ ಅನ್ನೋದು ಮಾತ್ರ ಗೊತ್ತಿತ್ತು. ಹೆಣ್ಣಿನ ಕಣ್ಣೀರಿಗೆ ಕಾನೂನು ಕರಗುತ್ತೆ ಅನ್ನೋದು ಗೊತ್ತಿಲ್ಲದ ದಡ್ಡನೇನು ಆತ ಆಗಿರಲಿಲ್ಲ. ಅಲ್ಲದೆ ಈ ಬಾರಿ ಆಕೆ ಆತನನ್ನ ಸಂಪೂರ್ಣವಾಗಿ ಮುಗಿಸಿಯೇ ತೀರಬೇಕು ಇನ್ನೊಮ್ಮೆ ನಮ್ಮದು ಅವನದ್ದು ಗಂಡ ಹೆಂಡತಿಯ ಸಂಬಂಧವಾಗಿರಬಾರದು ಅಂತ ತೀರ್ಮಾನಿಸಿದ್ಲು.

ಆಕೆ ತನ್ನ ಗಂಡ ಅನ್ನೋದನ್ನ ಮರೆತು ಎಷ್ಟು ಆಗುತ್ತೋ ಅಷ್ಟು ಕೆಟ್ಟವನನ್ನಾಗಿ ಮಾಡೋದಕ್ಕೆ ತೀರ್ಮಾನಿಸಿಬಿಟ್ಟಿದ್ಲು. ಯಾವ ಹಂತದಲ್ಲಾದ್ರು ಸರಿ ನನ್ನ ಗಂಡ ಇನ್ನು ನನ್ನ ಜೊತೆ ಇರಬಾರದು ಅನ್ನೋದು ಅವಳ ತೀರ್ಮಾನವಾಗಿತ್ತು. ಹೀಗಾಗಿ ಆಕೆ ಅವತ್ತು ಆಸ್ಪತ್ರೆ, ಪೊಲೀಸ್ ದೂರು ಅಂತೆಲ್ಲಾ ಹೊರಟಿದ್ಲು. ಅದು ಅವಳ ಪಾಲಿಗೆ ಅಂತಿಮ ಘಟ್ಟವಾಗಿತ್ತು. ಅದ್ರಲ್ಲಿ ಅವಳ ಸ್ವಾರ್ಥವೆಷ್ಟು, ನೈಜತೆ ಎಷ್ಟು ಅನ್ನೋದು ಆಕೆಗೆ ಮಾತ್ರವೇ ಗೊತ್ತಿತ್ತು. ಅಲ್ಲದೆ ಅತ್ತ ಗಂಡನಿಗೆ ಕೂಡ ಹೆಂಡ್ತಿ ಈ ಸಾರಿ ನನಗೊಂದು ಗತಿ ಕಾಣಿಸೋದೆ ಬಿಡೋದಿಲ್ಲ ಅನ್ನೋದು ಗೊತ್ತಾಗಿತ್ತು. ಯಾವುದು ಒಂದು ಹಂತವನ್ನ ಮೀರಿ ಹೋಗಬಾರದಿತ್ತೋ ಅದು ಮೀರಿ ಹೋಗಿತ್ತು. ಹೀಗಾಗಿ ಆತ ಕೂಡಾ ಹೆದರಿ ಕಂಗಲ್ಲಾಗಿ ಹೋಗಿದ್ದ. ಇವಳನ್ನ ನಾನು ಇಷ್ಟು ಪ್ರೀತಿಸಿ ಮದುವೆಯಾಗಿದ್ದು ಅನ್ನೋ ಅನುಮಾನವು ಅವನನ್ನ ಕಾಡುತ್ತಿತ್ತು.

 

ಕನಕ ತನ್ನ ಗಂಡನ ವಿರುದ್ಧ ಹಾಗೆ ನಾನ್ ಸ್ಟಾಪ್ ಆರೋಪವನ್ನ ಮಾಡ್ತಿದ ಮೇಲೆ ಅದಕ್ಕೆ ಇನ್ನೊಂದು ವರ್ಷನ್ ಇರಲೇ ಬೇಕಲ್ವಾ. ಯಾವುದೇ ವಿಷಯಕ್ಕಾದ್ರು ಎರಡು ಮುಖಗಳಿರುತ್ತೆ. ಆದ್ರೆ ಅವರೆಡು ಸತ್ಯ ಅಂತ ಹೇಳೋದಕ್ಕೆ ಆಗೋದಿಲ್ಲ. ಹಾಗೆ ಅವತ್ತು ತನ್ನ ಹೆಂಡತಿ ಮಾಡಿದ ಆರೋಪಕ್ಕೆ ಉತ್ತರ ಕೊಡೋದಕ್ಕೆ ಅಂತಾನೆ ವಸಂತ್ ಕುಮಾರ್ ಕಣ್ಣೀರು ಹಾಕ್ಕೊಂಡು ಬಂದಿದ್ದ. ಆಕೆ ಹೇಳಿದ ಮದುವೆ ಕಥೆಯನ್ನ ಈತನು ಹೇಳಿದ್ದ. ಎಲ್ಲವೂ ಸರಿಯಿತ್ತು. ಯಾಕಂದ್ರೆ ಅಲ್ಲಿತನಕ ಇಬ್ಬರದ್ದು ಒಂದು ದೃಷ್ಠಿಕೋನವಿತ್ತು. ಹೀಗಾಗಿ ಅವ್ರು ಸತ್ಯವನ್ನೇ ಹೇಳಿದ್ರು. ಆದ್ರೆ ಅದರ ನಂತರ ನಡೆದ ಘಟನೆಗಳಿಗೆ ಎರಡೆರಡು ಮುಖಗಳಿತ್ತು. ಯಾಕಂದ್ರೆ ಇಲ್ಲಿ ಇಬ್ಬರು ಬೇರೆ ಬೇರೆ ರೀತಿಯಾಗಿ ಯೋಚಿಸೋದಕ್ಕೆ ಶುರುಮಾಡಿದ್ರು. ಅಲ್ಲಿ ಆಕೆ ಗಂಡ ಸರಿಯಿಲ್ಲ ಅಂತ ಹೇಳಿದ್ರೆ. ಇಲ್ಲಿ ಗಂಡ ತನ್ನ ಹೆಂಡತಿಯೇ ಸರಿಯಿಲ್ಲ ಇದು ನಾನು ಮಾತ್ರ ಹೇಳ್ತಿರೋದಲ್ಲ ನನ್ನ ಮಗಳನ್ನ ಬೇಕಾದ್ರು ಕೇಳಿ ನೋಡಿ ಅಂತ ಹೇಳಿದ್ದ.

ಅವಳು ನನ್ನ ಗಂಡ ಮನೆಯಲ್ಲಿ ಸೆಕ್ಸ್ ಸಿಡಿಯನ್ನ ಇಟ್ಕೊಂಡು ನನಗೆ ಟಾರ್ಚರ್ ಮಾಡ್ತಾನೆ ಅಂತ ಆರೋಪಿಸಿದ್ಲು. ಅದಕ್ಕೆ ಗಂಡ ತನ್ನ ಹಳೆಯ ಕಥೆಯನ್ನ ಹೇಳೋದಕ್ಕೆ ಶುರುಮಾಡಿದ್ದ. ಏನ್ರೀ ಸ್ವಾಮಿ ನೀವೊಬ್ಬ ಟೀಚರ್ ಆಗಿದ್ದುಕೊಂಡು ಇಂಥದ್ದನ್ನೆಲ್ಲಾ ಮನೆಯಲ್ಲಿ ಇಟ್ಕೊಂಡಿದ್ದೀರಾ ಅಂದ್ರೆ ಅದಕ್ಕೆ ಆತನ ಹತ್ತಿರ ಒಂದು ಕಾರಣವಿತ್ತು. ಸ್ವಾಮಿ ಹೊಸದಾಗಿ ಮದುವೆಯಾದಾಗ ಅದನ್ನ ಆಕೆಯೇ ತರಿಸಿಕೊಂಡಿದ್ಲು. ಆದ್ರೆ ಅದ್ಯಾವುದನ್ನ ನಾವು ಈಗ ನೋಡ್ತಿಲ್ಲ. ಆಕೆಗೆ ಮದುವೆಯ ಆರಂಭದ ದಿನಗಳಲ್ಲಿ ನೋಡೋ ಆಸೆಯಿತ್ತು. ಅದಕ್ಕಾಗಿ ನನ್ನ ಹತ್ತಿರ ತರಿಸಿಕೊಂಡಿದ್ಲು ಅಂತ ಹೇಳಿದ್ದ. ಆದ್ರೆ ಆ ಸಿಡಿಗಳೆಲ್ಲಾ ಈಗ ಎಲ್ಲಿಗೆ ಅನ್ನೋದು ಗೊತ್ತಿಲ್ಲ. ಅದನ್ನೆಲ್ಲಾ ಆಕೆಯೇ ತೆಗೆದಿಟ್ಟಿದ್ದಾಳೆ ಅಂತಾನು ಹೇಳಿದ್ದ. ಅಲ್ಲದೆ ನನ್ನ ಹತ್ತಿರ ಇತ್ತೀಚಿನವರೆಗೆ ಯಾವುದೇ ಸ್ಮಾರ್ಟ್ ಫೋನ್ ಇರಲಿಲ್ಲ. ಮೊಬೈಲ್ ಇಲ್ಲ ಅಂದ ಮೇಲೆ ನಾನು ಹ್ಯಾಗೆ ಅವಳಿಗೆ ಬ್ಲೂ ಫಿಲಂ ತೋರಿಸಲಿ ಅಂತ ಪ್ರಶ್ನೆ ಮಾಡ್ತಾನೆ.

ಆಕೆ ಏನೆಲ್ಲಾ ಆರೋಪವನ್ನ ಮಾಡಿದ್ಲೋ ಅದೇ ರೀತಿ ಈತ ಕೂಡಾ ತನ್ನ ಪತ್ನಿಯ ಬಗ್ಗೆ ಆರೋಪಗಳ ಪಟ್ಟಿಯನ್ನೇ ರೆಡಿ ಮಾಡ್ಕೊಂಡಿದ್ದ. ಆಕೆ ಕಣ್ವಾ ಪ್ರಾಜೆಕ್ಟ್ ಅಂತ ಸೇರಿಕೊಂಡಿದ್ಲು. ಅಲ್ಲಿ ಗಂಡಸರ ಜೊತೆ ಓಡಾಡೋದಕ್ಕೆ ಶುರುಮಾಡಿದ್ಲು. ಇದೆಲ್ಲಾ ಬೇಡ ಸರಿಯಿರಲ್ಲ ಅಂತ ಹೇಳಿದ್ರೆ ನಾನು ಮಾಡೋ ಕೆಲಸನೇ ಇದು ಅಂತ ಆಕೆ ಗಂಡನ ವಿರುದ್ಧ ತಿರುಗಿಬಿದ್ದಿದ್ಲು. ಇಲ್ಲಿಂದಲೇ ನೋಡಿ ಅವರಿಬ್ಬರ ಮಧ್ಯೆ ಗಲಾಟೆ ಶುರುವಾಗೋದಕ್ಕೆ ಪ್ರಾರಂಭವಾಗಿದ್ದು. ಅದೇ ವಿಚಾರವನ್ನ ಮತ್ತೆ ಆತ ಹೇಳೋದಕ್ಕೆ ಶುರುಮಾಡಿದ. ಅವಳು ಸರಿಯಿದ್ದಿದ್ರೆ ನಾನ್ಯಾಕೆ ಹಾಗೆ ಮಾಡ್ತಿದ್ದೆ ಅಂತಾನು ಪ್ರಶ್ನೆ ಮಾಡ್ತಾನೆ.

ಕನಕ ಅದಾದ್ಲೇ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿ ಹೋಗಿದ್ಲು. ಆಕೆ ಅಲ್ಲೇ ಇನ್ನೊಬ್ಬನ ಜೊತೆ ಲವ್ವಿಡವ್ವಿ ಆಟ ಆಡೋದಕ್ಕೆ ಶುರುಮಾಡಿದ್ಲು. ಇದು ಮಕ್ಕಳಿಗೂ ಗೊತ್ತಾಗಿತ್ತು. ಅಲ್ಲದೆ ಅಮ್ಮನ ಮೊಬೈಲ್ ನಲ್ಲಿ ಗೇಮ್ ಆಡೋಣ ಅಂತ ಮೊಬೈಲ್ ತಗೊಂಡ್ರೆ ಅಲ್ಲಿ ಅಮ್ಮ ಬೇರೆಯದ್ದೇ ಗೇಮ್ ಆಡ್ತಿರೋದನ್ನ ಮಕ್ಕಳು ನೋಡಿದ್ರು. ಮಕ್ಕಳು ಅದ್ಯಾವಾಗ ಅದನ್ನ ನೋಡಿದ್ರೋ ಆಗ ಅದನ್ನೆಲ್ಲಾ ಡಿಲಿಟ್ ಮಾಡಿದ್ಲು. ಅಂದ್ರೆ ಆಕೆ ಸಂಸಾರ ಮರೆತು ತುಂಬಾ ದಿನ ಆಗಿದೆ ಅನ್ನೋದು ಮಕ್ಕಳ ಅನುಭವಕ್ಕೂ ಬಂದಿತ್ತು.

ಇಲ್ಲಿ ಕನಕ ಅದೇನೋ ಮಾಡೋದಕ್ಕೆ ಹೋಗಿ ಮತ್ತಿನ್ನೆನೋ ಮಾಡೋದಕ್ಕೆ ಹೊರಟಿದ್ಲು. ಗಂಡ ಬೇಡ ಅಂದ್ರೆ ಅದನ್ನ ಡೈರೆಕ್ಟ್ ಆಗಿ ಹೇಳಬಹುದಿತ್ತು. ಆದ್ರೆ ಆಕೆ ಗಂಡನನ್ನ ಹಣಿಯೋದಕ್ಕೆ ವಿಕೃತ, ಕಾಮುಕ ಅಂತೆಲ್ಲಾ ಹೇಳಿ ಆತನ ಮರ್ಯಾದೆಯನ್ನ ತೆಗೆಯೋದಕ್ಕೆ ಹೋಗಿ ತನ್ನ ಬಣ್ಣ ಬಯಲು ಮಾಡಿಕೊಂಡಿದ್ದಾಳೆ. ಅಲ್ಲದೆ ತನಗೆ ವಯಸ್ಸಿಗೆ ಬಂದಿರೋ ಮಕ್ಕಳಿದ್ದಾರೆ ಅವರ ಎದರು ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನ ಮರೆತು ಬಿಟ್ಟಿದ್ಲು. ಆದ್ರೆ ಇವರಿಬ್ಬರ ಜಗಳ ಇಲ್ಲಿಗೆ ನಿಲ್ಲೋ ಹಾಗೆ ಕಾಣ್ತಿಲ್ಲ. ಇನ್ನು ಅವರಿಬ್ಬರು ಜೊತೆಗೆ ಬದುಕೋದು ಕನಸಿನ ಮಾತು. ಇವರಿಬ್ಬರ ಜಗಳದಿಂದಾಗಿ ಪಾಪ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯ ಮಸುಕಾಗತೊಡಗಿದೆ. ಆ ಮಕ್ಕಳ ಬದುಕು ಈಗ್ಲೇ ಹಾಳಾಗೋದಕ್ಕೆ ಏನು ಆಗಬೇಕೋ ಅದನ್ನ ಅಪ್ಪ ಅಮ್ಮ ಇಬ್ಬರು ಸೇರಿ ಮಾಡ್ತಿದ್ದಾರೆ.

LEAVE A REPLY

Please enter your comment!
Please enter your name here