Home District ಮೈತ್ರಿ ಸರ್ಕಾರದ 2 ವಿಕೆಟ್ ಪತನ..! ದೋಸ್ತಿ ಸರ್ಕಾರಕ್ಕೆ ಮರ್ಮಾಘಾತ..!? R.ಶಂಕರ್ ಬೆಂಬಲ ವಾಪಸ್.!

ಮೈತ್ರಿ ಸರ್ಕಾರದ 2 ವಿಕೆಟ್ ಪತನ..! ದೋಸ್ತಿ ಸರ್ಕಾರಕ್ಕೆ ಮರ್ಮಾಘಾತ..!? R.ಶಂಕರ್ ಬೆಂಬಲ ವಾಪಸ್.!

1528
0
SHARE

ಮೈತ್ರಿ ಪಕ್ಷವನ್ನು ಅಸ್ಥಿರಗೊಳಿಸಿಲು ಮೊದಲ ಹಂತದಲ್ಲಿ ಬಿಜೆಪಿ ಸಕ್ಸಸ್ ಆಗಿದೆ. ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಪಕ್ಷೇತರ ಶಾಸಕರಾದ ಶಂಕರ ಮುಳಬಾಗಲು ಮತ್ತು ನಾಗೇಶ್‌ ಮಾಧ್ಯಮದ ಎದುರೇ ಘೋಷಣೆ ಮಾಡಿದ್ದಾರೆ.ಈ ಸರಕಾರ ಜನರ ಯಾವುದೇ ನಿರೀಕ್ಷೆಗಳನ್ನೂ ಈಡೇರಿಸುವ ಸ್ಥಿತಿಯಲ್ಲಿ ಇಲ್ಲ.

ಇದರಿಂದ ಭ್ರಮ ನಿರಸನವಾಗಿದ್ದು, ಬಿಜೆಪಿ ನೇತೃತ್ವದ ಸುಭದ್ರ ಸರ್ಕಾರ ಬರಬೇಕಿದೆ. ಹೀಗಾಗಿ ಸರಕಾರಕ್ಕೆ ನೀಡಿದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಇಬ್ಬರೂ ಶಾಸಕರು ತಿಳಿಸಿದ್ದಾರೆ. ಸಮ್ಮಿಶ್ರ ಸರಕಾರಕ್ಕೆ ಬೆಂಬಲ ನೀಡಿದ್ದ ಇಬ್ಬರು ಸ್ವತಂತ್ರ ಶಾಸಕರು ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಿದ್ದಂತೆ ರಾಜ್ಯ ಸರಕಾರದಲ್ಲಿ ಸಂಚಲನ ಉಂಟಾಗಿದೆ.

ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಶಾಸಕರ ಬೆಂಬಲ ವಾಪಸ್ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್‌ ಮುಖಂಡರು ಕೆಂಡಾಮಂಡಲವಾಗಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಸಂಕ್ರಾಂತಿ ಕಹಿಯಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಬಿಜೆಪಿ ಆಪರೇಷನ್ ಕಮಲದ ಮೂಲಕ ರಾಜ್ಯ ಸರಕಾರಕ್ಕೆ ಶಾಕ್ ನೀಡಿದ್ದು, ಮೊದಲ ಹಂತದಲ್ಲಿ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿದ್ದಾರೆ.

ಇದರ ಬೆನ್ನಿಗೇ ಸಮ್ಮಿಶ್ರ ಸರಕಾರದಲ್ಲಿ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಳಿಕ ಅತೃಪ್ತಗೊಂಡಿದ್ದ ಮತ್ತು ಕುಮಾರಸ್ವಾಮಿ ನಾಯಕತ್ವ ಕುರಿತು ಅಸಮಾಧಾನ ಹೊಂದಿದ್ದ ಶಾಸಕರು ಕೂಡ ಬಿಜೆಪಿ ಸೇರಲು ಮುಂದಾಗಿದ್ದು, ರಾಜ್ಯ ಸರಕಾರಕ್ಕೆ ಸಮಸ್ಯೆಯಾಗಿದೆ.

ಬೆಂಬಲ ವಾಪಸ್ ಪಡೆಯುತ್ತಿರುವ ಕುರಿತು ಶಾಸಕ ನಾಗೇಶ್ ಮತ್ತು ಶಂಕರ್ ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದು, ರಾಜ್ಯದ ಸರಕಾರ ನಮ್ಮ ಆಶೋತ್ತರಗಳಿಗೆ, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಭ್ರಮನಿರಸನಗೊಂಡು ಬೆಂಬಲ ವಾಪಸ್ ಪಡೆಯುತ್ತಿದ್ದೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here