Home District ಮೈತ್ರಿ ಸರ್ಕಾರ ಇನ್ನೂ ಸೇಫ್ ಅಲ್ಲ..?! ತೆರೆಮರೆಯಲ್ಲಿ ಮುಂದುವರೆಯುತ್ತಲೇ ಇದೆ “ಆಪರೇಷನ್ ಕಮಲ” ಕಸರತ್ತು…

ಮೈತ್ರಿ ಸರ್ಕಾರ ಇನ್ನೂ ಸೇಫ್ ಅಲ್ಲ..?! ತೆರೆಮರೆಯಲ್ಲಿ ಮುಂದುವರೆಯುತ್ತಲೇ ಇದೆ “ಆಪರೇಷನ್ ಕಮಲ” ಕಸರತ್ತು…

529
0
SHARE

ಜಾರಕಿಹೊಳಿ ಸಹೋದರರ ಮುನಿಸು ಶಮನವಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಸೇಫ್ ಆಗಿದೆ ಎಂದು ಎಲ್ಲರು ಭಾವಿಸಿದ್ದಾರೆ.. ಬಿಜೆಪಿಯ ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪನವರ ಆಪರೇಷನ್ ಕಮಲ ವಿಫಲವಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.. ಸಣ್ಣಪುಟ್ಟ ಭಿನ್ನಮತಗಳಿದ್ದರೂ ಅದನ್ನು ಸರಿಪಡಿಸಿಕೊಂಡು ದೋಸ್ತಿ ಸರ್ಕಾರವನ್ನ ನಿಭಾಯಿಸಿಕೊಂಡು ಹೋಗುವ ವಿಶ್ವಾಸದಲ್ಲಿ ಸಿಎಂ ಕುಮಾರಸ್ವಾಮಿ ಇದಾರೆ…

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದೋಸ್ತಿ ಸರ್ಕಾರ ಕಾಪಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿಕೊಂಡು ನಿಂತಿದ್ದಾರೆ.. ಆದ್ರೆ ಬಿಜೆಪಿಯ ಆನೇಕ ನಾಯಕರ ಪ್ರಕಾರ ದೋಸ್ತಿ ಸರ್ಕಾರದ ಆಯಸ್ಸು ಕೇವಲ ಇನ್ನೊಂದು ವಾರ ಮಾತ್ರ… ಹೌದು, ಅರಮನೆ ಮೈದಾನದಲ್ಲಿ ನಡೆಯುತ್ತಿರೋ ಬಿಜೆಪಿ ನಾಯಕರ ಸಭೆಯಲ್ಲಿ ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ…

ಹೆಸರು ಹೇಳಲು ಇಚ್ಛಿಸದ ಶಾಸಕರು, ಸಂಸದರು, ಮತ್ತು ಹಿರಿಯ ನಾಯಕರು ಪ್ರಜಾಟಿವಿ ಜೊತೆ ಮಾತನಾಡುತ್ತ ಮೈತ್ರಿ ಸರ್ಕಾರ ಬಿದ್ದು ಹೋಗುತ್ತೆ ಅಂತಾ ವಿಶ್ವಾಸದಿಂದ ಹೇಳಿದ್ದಾರೆ… ಆದ್ರೆ ಹೇಗೆ ಪತನವಾಗುತ್ತೆ ಅನ್ನೋದ್ರ ಬಗ್ಗೆ ಅವರಲ್ಲೂ ಸ್ಪಷ್ಟತೆ ಇಲ್ಲ… ಆದ್ರೆ ಹೆಚ್ಡಿಕೆ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗುತ್ತೆ ಅಂತ ಹೇಳುತ್ತಿದ್ದಾರೆ…

ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಶಮನವಾಗಿದ್ದರೂ ದೋಸ್ತಿ ಸರ್ಕಾರ ಸೇಫ್ ಅಲ್ಲ… 15-20 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮುಂದಿನ ಒಂದು ವಾರದೊಳಗೆ ನಡೆಯಲಿದೆ…

ರಾಜ್ಯ ನಾಯಕರ ಈ ಕಾರ್ಯಚರಣೆಗೆ ಹೈಕಮಾಂಡ್ ಬೆಂಬಲ ಇದೆ ಎನ್ನಲಾಗಿದೆ.. ಇಂದಿನ ಸಭೆಯಲ್ಲಿ ಹೆಚ್ಚು ಗುಸುಗುಸು, ಚರ್ಚೆಯಾಗಿದ್ದು ಇದೇ ವಿಚಾರವಾಗಿ…. ತೆರೆಮರೆಯಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲ ಮುಂದುವರೆಸಿದ್ದಾರೆ.. ಕೈ ಮತ್ತು ಜೆಡಿಎಸ್ ಶಾಸಕರಿಗೆ ಹಣ ಮತ್ತು ಪದವಿ ಆಮಿಷಗಳನ್ನು ನೀಡುತ್ತಿದ್ದಾರೆ…

LEAVE A REPLY

Please enter your comment!
Please enter your name here