Home District ಮೈತ್ರಿ ಸರ್ಕಾರ ಕೆಡವಲು ಕೋಟಿ-ಕೋಟಿ ಸುರಿತಿದ್ಯಾ BJP.?! ಬಿಜೆಪಿ ತಂತ್ರಕ್ಕೆ ಸೆಡ್ಡು ಹೊಡೆದಿದ್ದಾರೆ CM ಕುಮಾರಸ್ವಾಮಿ

ಮೈತ್ರಿ ಸರ್ಕಾರ ಕೆಡವಲು ಕೋಟಿ-ಕೋಟಿ ಸುರಿತಿದ್ಯಾ BJP.?! ಬಿಜೆಪಿ ತಂತ್ರಕ್ಕೆ ಸೆಡ್ಡು ಹೊಡೆದಿದ್ದಾರೆ CM ಕುಮಾರಸ್ವಾಮಿ

2117
0
SHARE

ರಾಜ್ಯ ರಾಜಕಾರಣದಲ್ಲಿ ಈಗ ಅಡ್ವಾನ್ಸ್ ಪಾಲಿಟಿಕ್ಸ್ ಶುರುವಾಗಿದೆ. ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಅಧಿಕಾರ ಹಿಡಿಯಬೇಕೆಂದು ಪ್ಲಾನ್ ಮಾಡಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು ಹಳೇ ವಿಷಯ , ಆದ್ರೆ ಈಗ ಮತ್ತೊಂದು ಸತ್ಯ ಬಯಲಾಗಿದೆ. ಪ್ರಜಾಟಿವಿ ಎಕ್ಸ್ ಕ್ಲೂಸಿವ್ ಮಾಹಿತಿಯನ್ನ ನಿಮ್ಮ ಮುಂದೆ ಇಡಲಿದೆ.

ಈಗಾಗಲೇ16 ರಿಂದ 20 ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಅಷ್ಟೊಂದು ಸಂಖ್ಯೆಯ ಶಾಸಕರ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿ ಅಡ್ವಾನ್ಸ್ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟಿದೆ ಎಂದು ತಿಳಿದು ಬಂದಿದೆ.ಯಾವಾಗ ಮನವೊಲಿಕೆ ಯತ್ನ ನಿರೀಕ್ಷಿತ ಫಲಕೊಡಲಿಲ್ಲವೋ ಆಗ ಬಿಜೆಪಿ ಶುರುಮಾಡಿದ್ದು ಅಡ್ವಾನ್ಸ್ ಪಾಲಿಟಿಕ್ಸ್..

ಶಾಸಕರಿಗೆ ಮನವೊಲಿಕೆ ಯತ್ನದ ಅಂಗವಾಗಿ ಕೋಟಿ-ಕೋಟಿ ಹಣ ಸುರಿಯಲು ಮುಂದಾಗಿದೆ. ಈಗಾಗಲೇ 6 ಮಂದಿ ಶಾಸಕರಿಗೆ ತಲಾ 3 ಕೋಟಿಯಂತೆ ಹಣ ಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ನ 5 ಮತ್ತು ಜೆಡಿಎಸ್ ನ ಒಬ್ಬರು ಶಾಸಕರು ಈಗಾಗಲೇ ಅಡ್ವಾನ್ಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರಲ್ಲಿ ಒಬ್ಬರು ಪೊಲೀಸ್ ಅಧಿಕಾರಿಯೂ ಆಗಿ , ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು,

ಇನ್ನೊಬ್ಬರು ರಾಯಚೂರು ಜಿಲ್ಲೆಯವರು ಎಂದು ತಿಳಿದುಬಂದಿದೆ. ಬಿಜೆಪಿ ಅಡ್ವಾನ್ಸ್ ಪಾಲಿಟಿಕ್ಸ್ ಶುರುವಾದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಆಪರೇಷನ್ ಶುರುಮಾಡಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಅವರು ಬಿಜೆಪಿ ಶಾಸಕರಿಗೇ ಗಾಳ ಹಾಕಿದ್ದಾರೆ.. ಮೈಸೂರು ನಗರ ಮತ್ತು ತುಮಕೂರು ಜಿಲ್ಲೆಯ ತಲಾ ಒಬ್ಬ ಶಾಸಕರ ಜೊತೆ ಮಾತನಾಡಿದ್ದಾರೆ.

ಇನ್ನು ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದವರ ಪುತ್ರಿಯ ಜೊತೆಗೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ ಇನ್ನೂ ಹಲವು ಬಿಜೆಪಿ ಶಾಸಕರಿಗೆ ಅಡ್ವಾನ್ಸ್ ತಲುಪಿಸುವ ಚಿಂತನೆ ನಡೆಸಿದ್ದಾರೆ. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಡ್ವಾನ್ಸ್ ಪಾಲಿಟಿಕ್ಸ್ ಗೆ ಎಂಟ್ರಿಕೊಟ್ಟಿದ್ದಾರೆಂದು ತಿಳಿದುಬಂದಿದೆ..

LEAVE A REPLY

Please enter your comment!
Please enter your name here