Home Elections 2019 ಮೈತ್ರಿ ಸರ್ಕಾರ ನಾನು ಮಾಡಿದ್ದಲ್ಲ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಸರ್ಕಾರ ರಚನೆ ಆಗಿದ್ದು- H.D.DEVEGOWDA

ಮೈತ್ರಿ ಸರ್ಕಾರ ನಾನು ಮಾಡಿದ್ದಲ್ಲ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಸರ್ಕಾರ ರಚನೆ ಆಗಿದ್ದು- H.D.DEVEGOWDA

6972
0
SHARE

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ವಿಶ್ವನಾಥ್ ಮನವೊಲಿಸುತ್ತೇನೆ. ಜೆಡಿಎಸ್ ಅಧ್ಯಕ್ಷರು ಪಕ್ಷ ಬಿಡಲ್ಲ. ಆದ್ರೆ ಅಧ್ಯಕ್ಷ ಸ್ಥಾನದಲ್ಲಿ ಇರಲ್ಲ ಎಂದಷ್ಟೇ ಹೇಳಿದ್ದಾರೆ.

ಇಂದು ಹಿಂದುಳಿದ ವರ್ಗಗಳ ಸಭೆ ಇದೆ. ಸಭೆಗೆ ವಿಶ್ವನಾಥ್ ಬರುತ್ತಾರೆ. ಅಲ್ಲಿ ಅವರ ಮನವೊಲಿಸುವ ಪ್ರಯತ್ನ ಮಾಡ್ತೇನೆ. ಆ ಬಳಿಕ ಮುಂದಿನ ತೀರ್ಮಾನ ಎಂದು ಹೇಳಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ರಾಜಕೀಯದ ಬಗ್ಗೆ ಮಾತಾಡಿಲ್ಲ. ನಾವು ನಮ್ಮ ಕಡೆಯ ಒಂದು ಸಚಿವ ಸ್ಥಾನವನ್ನು ಪಕ್ಷೇತರಿಗೆ ನೀಡಿದ್ದೇವೆ ಅಂತ ಹೇಳಿದ್ದೇನೆ. ನಾಯಕರು ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ ನೀಡಲು ರಾಹುಲ್ ಗೆ ತಿಳಿಸಿದ್ದೇನೆ.ಪಕ್ಷದ ಬಗ್ಗೆ ಯಾರು ಮಾತಾಡದಂತೆ ಕ್ರಮವಹಿಸಲು ಹೇಳಿದ್ದೇನೆ. ಬಹಿರಂಗವಾಗಿ ಮಾತಾಡಿದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಹೀಗಾಗಿ ಅದನ್ನ ಕಂಟ್ರೋಲ್ ಮಾಡಲು ಹೇಳಿದ್ದೇನೆ ಅಷ್ಟೇ ಎಂದು ಹೇಳಿದ್ರು.

ಇದರ ಜೊತೆಗೆ ಜೆಡಿಎಸ್ ಜೊತೆ ಸರ್ಕಾರ ನಡೆಸಿದ್ರೆ ಕಾಂಗ್ರೆಸ್ ಗೆ ಡ್ಯಾಮೇಜ್ ಆಗುತ್ತೆ ಅಂತ ಕೆಲವು ನಾಯಕರು ಹೇಳಿದ್ದಾರೆ. ಆದ್ರೆ ಮೈತ್ರಿ ಸರ್ಕಾರ ನಾನು ಮಾಡಿದ್ದಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಸರ್ಕಾರ ರಚನೆ ಆಗಿದ್ದು. ನಾನು ಅವತ್ತೆ ಕಾಂಗ್ರೆಸ್ ನಾಯಕರಿಗೆ ಸರ್ಕಾರ ರಚನೆ ಬೇಡ ಅಂತ ಹೇಳಿದ್ದೆ. ಆದ್ರೆ ಗುಲಾಂನಬಿ ಅಜಾದ್ ಕೈ ಹಿಡಿದು ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಹೇಳಿದ್ರು. ನಾನು ಆಗೊಲ್ಲ ಅಂತ ಹೇಳಿ ಬಂದೆ. ಆದ್ರೆ ಬೆಳಗ್ಗೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಅಂತ ಒತ್ತಾಯಿಸಿದ್ರು. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರ ಬಂದಿದೆ.

ನಮ್ಮಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗೋ ರೀತಿ ನಾನು, ನಮ್ಮ ಪಕ್ಷದವರು ಮಾತಾಡೊಲ್ಲ. ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲದಂತೆ ನಡೆದುಕೊಳ್ತೀವಿ. ಮುಂದಿನ ಚುನಾವಣೆಗಳಿಗೆ ಪಕ್ಷ ರೆಡಿ ಮಾಡೋ ಕೆಲಸ ನಾನು ಮಾಡ್ತೀನಿ ಅಷ್ಟೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here