ಕ್ಷುಲ್ಲಕ ವಿಚಾರಕ್ಕೆ ರಾಜಕೀಯ ರಣಾಂಗಣವಾಗಿದ್ದ ತುರುವೇಕೆರೆ ಕ್ಷೇತ್ರದಲ್ಲಿ ಪ್ರತಿಭಟನೆಯ ಹೈಡ್ರಾಮಾ ಸುಖಾಂತ್ಯವಾಗಿದೆ..144 ಸೆಕ್ಷನ್ ನಡುವೆಯೇ ತೊಡೆ ತಟ್ಟಿ ನಿಂತಿದ್ದ ಮಾಜಿ ಶಾಸಕರು,ಪ್ರತಿಭಟನೆ, ಪಾದಯಾತ್ರೆ ಕೈಬಿಟ್ಟು ಮನವಿ ಪತ್ರ ನೀಡೋ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.. ಒಂದೆಡೆ ಖಾಕಿ ಸರ್ಪಗಾವಲಿನ ಮೂಲಕ ತುರುವೇಕೆರೆಯನ್ನ ಭದ್ರಕೋಟೆ ಮಾಡಿಕೊಂಡಿದ್ದ ಪೊಲೀಸರು…
ಇನ್ನೊಂದೆಡೆ ಪ್ರತಿಭಟನೆಗೆ ಸಜ್ಜಾಗಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು…. ಕೊನೆಗೂ ಹೆಚ್ಡಿಕೆ ಮಧ್ಯಸ್ಥಿಕೆ ಮೂಲಕ, ಕಾದ ಕೆಂಡದಂತಾಗಿದ್ದ ತುರುವೇಕೆರೆ ಪ್ರಕರಣ ಸುಖಾಂತ್ಯಗೊಂಡಿದೆ. ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದಲ್ಲಿ ಒತ್ತುವರಿ ಜಮೀನಿನಲ್ಲಿ ಬೆಳೆದಿದ್ದ 300 ಕ್ಕೂ ಹೆಚ್ಚು ತೆಂಗಿನ ಸಸಿಯನ್ನ ತುರುವೇಕೆರೆ ಪಟ್ಟಣ ಪಂಚಾಯ್ತಿ ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು.
ಇದನ್ನು ಖಂಡಿಸಿ ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಲಿ ಶಾಸಕ ಮಸಾಲಾ ಜಯರಾಂ ವಿರುದ್ಧ ಪ್ರತಿಭಟನಾ ರ್ಯಾಲಿಗೆ ಕರೆ ನೀಡಿದ್ದರು.ಪ್ರತಿಭಟನಾ ರ್ಯಾಲಿಯ ಸಂಬಂಧ ತುರುವೇಕೆರೆ ನಗರದಲ್ಲಿ ಪ್ಲೆಕ್ಸ್ ಅಳವಡಿಸಿದ್ದರು..ಅದರಲ್ಲಿ ಕೊಲೆಗಡುಕ ಶಾಸಕ ಮಸಾಲೆ ಜಯರಾಂ ಎಂದು ನಮೂದಿಸಲಾಗಿತ್ತು.. ಇದೇ ವಿವಾದಕ್ಕೆ ಕಾರಣವಾಗಿ ಹಾಲಿ ಶಾಸಕ ಮಸಾಲೆ ಜಯರಾಂ ಫ್ಲೆಕ್ಸ್ ತೆರವುಗೊಳಿಸಿದ್ದರು..ಇದು ಎರಡೂ ಬಣದ ಜನರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಪ್ರತಿಭಟನೆಗೆ ತಿರುಗಿಕೊಂಡಿತ್ತು.
ಇದಕ್ಕೆ ತುಪ್ಪ ಸುರಿಯುವಂತೆ ತುರುವೇಕೆರೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಗೆ ಅನುಮತಿ ನೀಡದ ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿ ಗೊಳಿಸಿದ್ರು.. ಖುದ್ದು ಮಾಜಿ ಸಿಎಂ ಕುಮಾರಸ್ವಾಮಿಯೇ ತುರುವೇಕೆರೆಗೆ ಆಗಮಿಸೋ ಮೂಲಕ ವಿವಾದ ಮತ್ತೊಂದು ಸ್ವರೂಪಕ್ಕೆ ತಿರುಗುವಂತೆ ಮಾಡಿದ್ರು.ಕೊರೋನಾದಿಂದಾಗಿ ವೈದ್ಯರ ಸಲಹೆ ಮೇರೆಗೆ ಜನರ ಸಂಪರ್ಕ ದಿಂದ ದೂರ ಇದ್ದೆ,ಇವತ್ತು ಅನಿವಾರ್ಯವಾಗಿ ತುರುವೇಕೆರೆಗೆ ಬಂದಿದ್ದೇನೆ. ನಾನು ನನ್ನ ಕ್ಷೇತ್ರಕ್ಕೂ ಹೋಗಲು ಆಗ್ತಿಲ್ಲ, ಇಂಥ ಸಂದರ್ಭದಲ್ಲಿ ತುರುವೇಕೆರೆಗೆ ಬಂದಿದ್ದೇನೆ ಅಂದರೆ ಇಲ್ಲಿಯ ಸಮಸ್ಯೆ ದೊಡ್ಡದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಗುಡ್ಡೇನಹಳ್ಳಿ ರೈತರ ತೋಟವನ್ನು ನಾಶಪಡಿಸಿ ಒಕ್ಕಲೆಬ್ಬಿಸಿದ್ದಾರೆ, ಇಲ್ಲಿಯ ಶಾಸಕರು ರೈತರ ನೆರವಿಗೆ ಬಂದಿಲ್ಲ ಮತ್ತು ಸ್ಪಂಧಿಸಿಲ್ಲ, ಶಾಸಕರು ತಾಳ್ಮೆಯಿಂದ ಜವಾಬ್ದಾರಿ ನಿರ್ವಹಿಸಿದರೆ ಏನೂ ಆಗುತ್ತಿರಲಿಲ್ಲ. ರೈತರ ಮೇಲಿನ ದಬ್ಬಾಳಿಕೆ ವಿರುದ್ದ ಪ್ರತಿಭಟನೆ ಮಾಡಲು ಜೆಡಿಎಸ್ ಸಜ್ಜಾಗಿತ್ತು, ಆದರೆ ೧೪೪ ಸೆಕ್ಸನ್ ಜಾರಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂಡಿಯಾ ಪಾಕಿಸ್ತಾನ ಗಡಿಯ ರೀತಿ ವಾತಾವರಣ ಸೃಷ್ಟಿ ಮಾಡಿದ್ದಾರೆ.ಪೊಲೀಸರು ಪರೇಡ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಆದರೂ ಕಾನೂನು ಉಲ್ಲಂಘನೆ ಮಾಡುವ ಉದ್ದಟತನ ನಾವು ಮಾಡಲ್ಲ.. ಪ್ರತಿಭಟನಾ ರ್ಯಾಲಿ ಮಾಡಲ್ಲ… ಪಾದಯಾತ್ರೆ ನಿಲ್ಲಿಸಿದ್ದೇನೆ. ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಬಂದಿದ್ದಾರೆ ಶಾಂತಿಯುತವಾಗಿ ಮನವಿ ಕೊಡುತ್ತೇವೆ. ಇಲ್ಲಿ ಪೊಲೀಸರು ಬಂಧೋಬಸ್ತ್ ಮಾಡೋದು ಬಿಟ್ಟು ಡಿಜೆಹಳ್ಖಿಯಲ್ಲಿ ಸರಿಯಾಗಿ ಬಂದೋಬಸ್ತ್ ಮಾಡಬಹುದಿತ್ತು. ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ಜನರಿಂದ ಸೋತಿಲ್ಲ, ನಮ್ಮ ಪಕ್ಷದವರಿಂದಲೇ ಸೋತಿದ್ದಾರೆ.
ಶಾಸಕ ಮಸಾಲೆ ಜಯರಾಮ್ ಗೆ ಅನುಭವದ ಕೊರತೆ ಇದೆ, ಕಮಿಷನ್ ಪಡೆದು ಕಾಮಗಾರಿ ಗುದ್ದಲಿ ಪೂಜೆ ಮಾಡಲು ಹೋಗುವ ಅನುಭವ ಅವರು ಪಡೀಬಾರದು. ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ನಾವು ನಿಂತಿದ್ದೇವೆ, ೪ ನಿಮಿಷದಲ್ಲಿ ಬಗೆಹರಿಸುವ ಸಮಸ್ಯೆಯನ್ನು ಅಧಿಕಾರಿಗಳೇ ಬೆಟ್ಟ ಮಾಡಿಕೊಂಡಿದ್ದಾರೆ.. ಬಿಜೆಪಿ ಸರ್ಕಾರ ದೇಶದ ಆಸ್ತಿನಾ ಮಾರಾಟ ಮಾಡುತ್ತಿದೆ,ಇದೇ ರೀತಿ ರೈತರ ಭೂಮಿನೂ ಉಳ್ಳವರ ಪಾಲಾಗುವ ಕಾನೂನು ತಂದಿದೆ.
ಇದೇ ಸಂದರ್ಭದಲ್ಲಿ ಡ್ರಗ್ ಮಾಫಿಯಾ ಕುರಿತು ಮಾತನಾಡಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಡ್ರಗ್ ಮಾಫಿಯಾ ಹಣ ಬಳಸಿಕೊಂಡಿತ್ತು. ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಹಣನೂ ಬಳಸಿಕೊಂಡಿತ್ತು. ಮೈತ್ರಿ ಸರ್ಕಾರದ ನನ್ನ ಅವಧಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದೆ. ಮಾಧ್ಯಮದಲ್ಲಿ ಈ ವಿಚಾರ ಹೆಚ್ವಿಗೆ ಚರ್ಚೆ ಆಗಬಾರದು, ಇದರಿಂದ ಚಿಕ್ಕ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ಕುರಿತು ಇರುವುದರ ಕುರಿತು ಮಾತನಾಡಿದ ಕುಮಾರಸ್ವಾಮಿ ನಾನು ಚಿತ್ರನಿರ್ಮಾಪಕ ನಾಗಿದ್ದ ಕಾಲದಲ್ಲಿ ಡ್ರಗ್ ಮಾಫಿಯಾ ಇದ್ದುದ್ದರ ಕುರಿತು ನನಗೆ ತಿಳಿದಿಲ್ಲ ಎಂದಿದ್ದಾರೆ.ಇದೇ ವೇಳೆ ಶಿರಾ ಕ್ಷೇತ್ರದ ಉಪ ಚುನಾವಣೆ ಕುರಿತು ಮಾತನಾಡಿದ ಕುಮಾರಸ್ವಾಮಿ ಶಿರಾ ವಿಧಾನಸಭಾ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ.ಶಾಸಕ ಸತ್ಯನಾರಾಯಣ ಅವರ ಸಾವಿನಿಂದ ನಮ್ಮ ಪಕ್ಷಕ್ಕೆ ಬಹು ದೊಡ್ಡ ನಷ್ಟವಾಗಿದೆ, ಆ ಕ್ಷೇತ್ರದಲ್ಲಿ ಅವರ ಗೌರವ ಉಳಿಸುವ ನಿಟ್ಟಿನಲ್ಲಿ ನಮ್ಮ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸತ್ಯನಾರಾಯಣ ಕುಟುಂಬಕ್ಕೆ ನಮ್ಮ ಪಕ್ಷ ಮೊದಲ ಆದ್ಯತೆ ನೀಡುತ್ತದೆ ಮತ್ತು ಅವರ ಕುಟುಂಬವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ..
ಸಿಎಂ ಪುತ್ರ ವಿಜಯೇಂದ್ರ ಅವರ ಮೇಲೆ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ೫ ಸಾವಿರ ಕೋಟಿ ಹಗರಣ ಸಿಎಂ ಪುತ್ರನ ಮೇಲೆ ಯಾಕೆ ಬಂತು ನನಗೆ ಗೊತ್ತಿಲ್ಲ ಮತ್ತು ಈ ದೇಶದಲ್ಲಿ ಯಾರೂ ಭ್ರಷ್ಟಾಚಾರದ ಬಗ್ಗೆ ಮಾತಾಡೋ ಹಾಗಿಲ್ಲ.. ಜನ ಕೊರೋನಾದಿಂದ ಸಾಯುತಿದ್ದಾರೆ, ಭ್ರಷ್ಟಾಚಾರ ಕಟ್ಟಿಕೊಂಡು ನಾನು ಏನ್ ಮಾಡಲಿ.. ನೆರೆ ಪರಿಹಾರದಲ್ಲಿ ಸರ್ಕಾರ ಎಡವಿದೆ ಎಂದು ಪತ್ರಕರ್ತರ ಪ್ರೆಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.