Home Crime ಮೈದುನನ ಮೈಚಳಿಗೆ ಅತ್ತಿಗೆಯದ್ದೇ ‘ಮೈ’ ದಾನ..?! ಅಮ್ಮನಾಗಬೇಕಿದ್ದ ಅತ್ತಿಗೆ ಮಚ್ಚನ ಜೊತೆ ಮಂಚಕ್ಕೆ ಬಂದಿದ್ದಳು ಮೆಲ್ಲಗೆ..!

ಮೈದುನನ ಮೈಚಳಿಗೆ ಅತ್ತಿಗೆಯದ್ದೇ ‘ಮೈ’ ದಾನ..?! ಅಮ್ಮನಾಗಬೇಕಿದ್ದ ಅತ್ತಿಗೆ ಮಚ್ಚನ ಜೊತೆ ಮಂಚಕ್ಕೆ ಬಂದಿದ್ದಳು ಮೆಲ್ಲಗೆ..!

8257
0
SHARE

ಮದ್ವೆ ಮಾಡ್ಕೊಂಡು ಹೆಂಡ್ತಿಯನ್ನ ಕರ್ಕೊಂಡು ಬೆಂಗಳೂರಿಗೆ ಬಂದಿದ್ದ ವಿಜಯ್ ಕುಮಾರ್ , ಬಾಣಸವಾಡಿಯ ಲಿಂಗರಾಜಪುರಂನಲ್ಲಿ ಮನೆ ಮಾಡ್ಕೊಂಡು ವಾಸ ಮಾಡ್ತಿದ್ದ. ಮದ್ವೆಯಾಗಿ ಇನ್ನೂ ಒಂದು ವರ್ಷ ಕೂಡ ಆಗಿರ್ಲಿಲ್ಲ. ಹೀಗಿರ್ಬೇಕಾದ್ರೆ, ಅದೊಂದು ದಿನ ಕೆಲಸಕ್ಕೆ ಹೋಗ್ತೀನಿ ಅಂತೇಳಿದ್ದವನು.. ಮನೆಗೆ ವಾಪಸ್ ಬರಲೇ ಇಲ್ಲ. ಬಂದಿದ್ದು ಮಾತ್ರ ಒಂದು ಫೋನ್ ಕಾಲ್. ವಿಜಯ್ ಕುಮಾರ್ಗೆ ನೈಟ್ ಶಿಫ್ಟಲ್ಲಿದ್ರು. ಸ್ವಲ್ಪ ಕೆಲಸ ಇದೆ ಬೇಗ ಹೋಗ್ತೀನಿ ಅಂತೇಳಿ ಸಂಜೆ ಹೊತ್ತಿಗೆ ಹೆಂಡ್ತಿಗೆ ಕರೆ ಮಾಡಿದ್ದ…

ಆದ್ರೆ ಸ್ವಲ್ಪ ಹೊತ್ತು ಕಳೆಯೋದ್ರೊಳಗಾಗಿ ಮತ್ತೊಂದು ಕಾಲ್ ಬಂದಿದ್ದು. ನಿನ್ನ ಗಂಡ ಮಾಡಬಾರದ ಕೆಲಸ ಮಾಡಿದ್ದಾನೆ. ಅವನನ್ನ ಹಿಡ್ಕೊಂಡಿದ್ವಿ, ಕೂಡಲೇ ಬನ್ನೇರುಘಟ್ಟಕ್ಕೆ ಬಾ ಅಂತ ಪೊಲೀಸ್ರ ಹೆಸರೇಳಿ ಹೇಳಿದ್ದ. ಆದ್ರೆ.. ಏನು ಎತ್ತ ಅಂತ ವಿಚಾರಿಸಿವಷ್ಟರಲ್ಲಿ ನಾನು ಬನ್ನೇರುಘಟ್ಟ ರುದ್ರೇಶ ಅಂತೇಳಿದ್ದ. ಗಂಡನಿಗೆ ಕೇಳಿದ್ರೆ.. ಹೌದು ನಾನು ಬನ್ನೇರುಘಟ್ಟಕ್ಕೆ ಬಂದಿದ್ದೀನ ಕಣೇ ಅಂತೇಳ್ತಿದ್ದ ಹಾಗೆ ಫೋನ್ ಕಾಲ್ ಕಟ್ಟಾಗಿತ್ತು. ಆ ಮೇಲೆ ಫೋನೂ ಆನ್ ಆಗ್ಲಿಲ್ಲ. ಗಂಡ ವಿಜಯ್ ಕುಮಾರ್ ಸಹ ಮನೆಗೆ ಬರ್ಲೇ ಇಲ್ಲ…

ಹೀಗೆ ಅಚಾನಕ್ಕಾಗಿ ನಡೆದ ಘಟನೆಯಿಂದ ಆತಂಕಗೊಂಡ ವಿಜಯ್ ಕುಮಾರ್ ಪತ್ನಿ ಶ್ವೇತ, ತನ್ನ ತವರು ಮನೆಯವರಿಗೆಲ್ಲಾ ಫೋನ್ ಮೇಲೆ ಫೋನ್ ಮಾಡಿದ್ಳು. ಆದ್ರೆ ನಡೆದ ಘಟನೆಯಿಂದಾಗಿ ಎಲ್ಲರೂ ಆತಂಕಗೊಂಡಿದ್ರು. ಬನ್ನೇರುಘಟ್ಟ ರುದ್ರೇಶ ಯಾರು ಅಂತ ನೆನಪು ಮಾಡ್ಕೊಂಡಾಗ ಆತ ಇವರ ದೂರದ ಸಂಬಂಧಿನೇ ಆಗಿದ್ದ. ಹಾಗಾಗಿ ರುದ್ರೇಶನಿಗೂ ಕಾಲ್ ಮಾಡಿದ್ರೆ.. ಹೌದಾ ನನಗೆ ಗೊತ್ತಿಲ್ಲವಲ್ಲಾ. ನಾನು ಫೋನಲ್ಲಿ ಮಾತೇಡೆ ಇಲ್ಲವಲ್ಲಾ ಅಂತೇಳಿದ್ದ. ಹೀಗಾಗಿ ಶ್ವೇತಾಗೆ ಮತ್ತಷ್ಟು ಗಾಭರಿಯಾಗಿತ್ತು.ಮಾರನೆಯ ದಿನವೂ ಕೂಡ ಗಂಡನ ಸುಳಿವೇ ಇರ್ಲಿಲ್ಲ…

ಹೀಗಾಗಿ ಏನೋ ಹೆಚ್ಚು ಕಡಿಮೆ ಆಗಿರ್ಬೇಕು ಅಂದುಕೊಂಡು ಬಾಣಸವಾಡಿ ಪೊಲೀಸ್ ಠಾಣೆಗೆ ಹೋಗಿ ಕಿಡ್ನಾಪ್ ಕೇಸ್ ಫೈಲ್ ಮಾಡಿದ್ರು. ಹೀಗೆ ವಿಜಯ್ ಕುಮಾರನ ಸಂಬಂಧಿ, ರುದ್ರೇಶ್ ಅನ್ನೋವನನ್ನ ಕರೆಸಿ ವಿಚಾರಿಸಿದಾಗ ಯಾವ ಮಾಹಿತಿಯೂ ಸಿಕ್ಕರಲಿಲ್ಲ. ಹೀಗಿರ್ಬೇಕಾದ್ರೆ.. ತನಿಖೆ ನಡೆಸ್ತಿದ್ದ ಬಾಣಸವಾಡಿ ಪೊಲೀಸರಿಗೆ ಅದೊಂದು ಮಾಹಿತಿ ಸಿಕ್ಕೇಬಿಡ್ತು. ಆ ಮಾಹಿತಿ ಕರ್ಕೊಂಡೋಗಿದ್ದು ಬನ್ನೇರುಘಟ್ಟ ಫಾರೆಸ್ಟ್ ಏರಿಯಾದೊಳಗೆ. ಆ ಕಾಡಲ್ಲಿ ಅಲ್ಲಿ ಕಂಡಿದ್ದು.. ಅರೆಬರೆ ಬೆಂದ ವಿಜಯ್ ಕುಮಾರನ ಡೆಡ್ಬಾಡಿ.

ಹೆಂಡ್ತಿ ಜೊತೆ ಅದ್ಯಾಕಾಗಿ ಸುಳ್ಳು ಹೇಳಿದ್ನೋ ಏನು ಕಥೆನೋ.. ಈ ವಿಜಯ್ ಕುಮಾರ್ ಕೆಲಸಕ್ಕೆ ಹೋಗ್ತೀನೆ ಅಂತೇಳಿದವನು ಸೀದಾ ಬನ್ನೇರುಘಟ್ಟದ ಕಡೆ ಹೋಗಿಬಿಟ್ಟಿದ್ದ. ಇತ್ತ ಆತನ ಪತ್ನಿ ಶ್ವೇತಾಗೆ ಶಾಕ್ ಆಗುಂತ ಕಾಲ್ ಬಂದು , ನಿನ್ನ ಗಂಡ ಮಾಡಬಾರದ್ದ ತಪ್ಪು ಮಾಡಿದ್ದಾನೆ ಅನ್ನೋ ಸುದ್ದಿ ಹೊತ್ತು ತಂದಿತ್ತು ಆ ಫೋನ್ ಕರೆ. ಏನ್ ಹೀಗಾಯ್ತಲ್ಲಾ ಅಂತ ಗಂಡನಿಗಾಗಿ ಇನ್ನಿಲ್ಲದೆ ಹುಡುಕಾಡಿ, ಕಡೆಗೆ ಬಾಣಸವಾಡಿ ಠಾಣೆಗೆ ಹೋಗಿ ದೂರು ಕೊಟ್ಟಿದ್ರು. ಆಗ್ಲೇ ನೋಡಿ ಕೇಸ್ ಫೈಲ್ ಮಾಡ್ಕೊಂಡು ಇನ್ವೆಸ್ಟಿಗೇಟ್ ಶುರುಮಾಡಿದ್ದ ಪೊಲೀಸರಿಗೆ ನಾಪತ್ತೆಯಾಗಿದ್ದ ವಿಜಯ್ ಕುಮಾರ್ ಕೊಲೆಯಾಗಿದ್ದಾನೆ, ಅವನನ್ನ ಕೊಲೆ ಮಾಡಿ, ಬನ್ನೇರುಘಟ್ಟ ಫಾರೆಸ್ಟಲ್ಲಿ ಸುಟ್ಟಾಕಲಾಗಿದೆ ಅನ್ನೋ ಸುದ್ದಿ ಗೊತ್ತಾಗಿತ್ತು.

ಸೋ.. ಆ ಮಾಹಿತಿಯ ಜಾಡು ಹಿಡಿದ ಪೊಲೀಸರಿಗೆ ಬನ್ನೇರುಘಟ್ಟ ಕಾಡಲ್ಲಿ ಕಂಡಿದ್ದು ವಿಜಯ್ ಕುಮಾರನ ಅರೆಬೆಂದ ಹೆಣ.ನಾಪತ್ತೆಯಾಗಿದ್ದ ವಿಜಯ್ ಕುಮಾರ್ ಕೊಲೆ ಆಗಿದ್ದಾನೆ, ಅವನನ್ನ ಕೊಂದು ಬನ್ನೇರುಘಟ್ಟ ಕಾಡಿನ ಇಂತದ್ದೇ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಇಟ್ಟಿದ್ದಾರೆ ಅಂತ ಬಾಣಸವಾಡಿ ಪೊಲೀಸರಿಗೆ ಗೊತ್ತಾಗಿ ಹೋಗಿತ್ತು. ಯಾಕಂದ್ರೆ, ಆ ಕೃತ್ಯ ಎಸಗಿದ್ದ ಆರೋಪಿ ಆಸಾಮಿಯನ್ನ ಪೊಲೀಸರು ಅದಾಗಲೇ ಅರೆಸ್ಟ್ ಮಾಡಿ, ಎತ್ತಾಕೊಂಡು ಸ್ಪಾಟ್ ಮಹಜರ್ ನಡೆಸಿದ್ರು. ಇವನೇ ನೋಡಿ ಆ ಕಿರಾತಕ. ರುದ್ರ ಅಲಿಯಾಸ್ ಬನ್ನೇರುಘಟ್ಟ ರುದ್ರೇಶ.

ನಿನ್ನ ಗಂಡ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ ಅಂತ ಅವೊತ್ತು ಶ್ವೇತಾ ಜೊತೆ ಮಾತಾಡಿದ್ದು ಇದೇ ರುದ್ರೇಶಾನೇ. ಮೇಲಾಗಿ ವಿಜಯ್ ಕುಮಾರ್ಗೆ ಸಂಬಂಧಿಯೇ ಆಗಿದ್ದ ರುದ್ರೇಶ ವರಸೆಯಲ್ಲಿ ಅಣ್ಣನಾಗಬೇಕಿದ್ದವನು. ಪೊಲೀಸ್ ಸ್ಟೇಷನ್ನಲ್ಲಿ ದೂರು ಕೊಟ್ಟು, ತಾನು ಕಡೆಯದಾಗಿ ಮಾತಾಡಿದ್ದು ರುದ್ರೇಶ್ ಅನ್ನೋವ್ರ ಜೊತೆ ಅಂತ ಮಾಹಿತಿ ಕೊಟ್ಟಿದ್ರು ಶ್ವೇತಾ. ಅಷ್ಟೇ ಅಲ್ಲಾ ಆತನ ಮೊಬೈಲ್ ನಂಬರ್ಗೂ ಕಾಲ್ ಮಾಡಿ ಮಾತಾಡಿದಾಗ ಕೆಟ್ಟದಾಗಿ ಮಾತಾಡಿ, ಅನುಮಾನ ಬರೋತರ ನಡ್ಕೊಂಡ ಅಂತಾನೂ ಇನ್ಫರ್ಮೇಶನ್ ಕೊಟ್ಟಿದ್ದಳು.

ಆ ಫೋನ್ ಕಾಲ್ ಜಾಡು ಹಿಡಿದ ಪೊಲೀಸರು ರುದ್ರೇಶನನ್ನ ಸ್ಟೇಷನ್ನಿಗೆ ಕರೆಸಿ ಏನಪ್ಪಾ ನಿನ್ನ ಕಥೆ ಅಂತ ಕೇಳಿದ್ದರು. ಆದ್ರೆ, ವಿಜಿ ನನ್ನ ಭೇಟಿ ಆಗಿದ್ದೇನೋ ನಿಜ. ಅವನನ್ನ ಬಸ್ ಹತ್ತಿಸಿ ನಾನೇ ಕಳಿಸಿಕೊಟ್ಟೆ. ಆದ್ರೆ, ಮುಂದೇನಾಯ್ತೋ ಏನೋ ದೇವ್ರಾಣೆ ನನಗೇನು ಗೊತ್ತಿಲ್ಲ ಅಂದಿದ್ದ.ಆಯ್ತು.. ಬಿಡಪ್ಪಾ ಎಂದಿದ್ದ ಪೊಲೀಸರು, ಅಗತ್ಯಬಿದ್ರೆ ಮತ್ತೆ ಕರೀತೇವೆ. ಸ್ಟೇಷನ್ನಿಗೆ ಬರ್ಬೇಕು ಅಂತೇಳಿ ಕಳಿಸಿದ್ದರು. ಆದ್ರೆ.. ರುದ್ರೇಶನ ಮೇಲೆ ಒಂದು ಕಣ್ಣು ಇಟ್ಟೇ ಇದ್ರು.

ಮೂರು ದಿನ ಕಳೆದ್ಮೇಲೆ ವಿಚಾರಣೆ ಇದೆ, ಸ್ಟೇಷನ್ನಿಗೆ ಬಂದೋಗು ಅಂತ ಮತ್ತೆ ಕರೆಸಿದ ಬಾಣಸವಾಡಿ ಪೊಲೀಸರು, ತಮ್ಮದೇ ಸ್ಟೈಲಲ್ಲಿ ಒಂಚೂರು ಬಿಸಿ ಮುಟ್ಟಿಸಿದಾಗ ಬೇರೆ ದಾರಿ ಇಲ್ಲದೆ ಸತ್ಯವನ್ನ ಬಾಯಿಬಿಟ್ಟಿದ್ದ. ಅದೇನೆಂದ್ರೆ, ಅವೊತ್ತು ಬನ್ನೇರುಘಟ್ಟಕ್ಕೆ ವಿಜಯ್ ಬರ್ತಾನೆ ಅಂತ ಚೆನ್ನಾಗಿ ಗೊತ್ತಿತ್ತು.. ಹೀಗಾಗಿ ನಾನು ಮತ್ತೆ ನನ್ನ ಫ್ರೆಂಡ್ ಕಾದು ಕೂತಿದ್ವಿ. ಅಂದುಕೊಂಡಂತೆ ಬಂದವನ್ನ ಹೊಡೆದು ಬಡೆದ್ವಿ. ಆದ್ರೆ, ಕೊಲೆ ಮಾಡೋ ಉದ್ದೇಶ ಇರ್ಲಿಲ್ಲ. ಅದು ಅಚಾನಕ್ಕಾಗಿ ನಡೆದೋಯ್ತು.

ಮುಂದೆ ಏನ್ ಮಾಡ್ಬೇಕು ಅಂತ ಗೊತ್ತಾಗದೆ, ಸತ್ಯ ಮುಚ್ಚಾಕೋ ಉದ್ದೇಶದಿಂದ ನಾಲ್ಕು ಲೀಟರ್ ಪೆಟ್ರೋಲ್ ತೆಗೆದುಕೊಂಡು ಕತ್ತಲಾದ್ಮೇಲೆ ಡೆಡ್ಬಾಡಿಯನ್ನ ಬನ್ನೇರುಘಟ್ಟ ಕಾಡೊಳಗೆ ಸಾಗಿಸಿ ಬೆಂಕಿ ಹಾಕಿ ಬಂದ್ವಿ ಅಂತ ಸತ್ಯ ಒಪ್ಪಿಕೊಂಡಿದ್ದ ಈ ರುದ್ರೇಶ.ಈ ರುದ್ರೇಶ ಮತ್ತವನ ಗೆಳೆಯ ಕೊಲೆ ಮಾಡ್ಲೇಬೇಕು ಅಂತ ಕರೆಸಿದ್ರೋ ಇಲ್ಲಾ ಸರಿಯಾಗಿ ಬುದ್ದಿ ಕಲಿಸ್ಬೇಕು ಅಂತ ವಿಜಯ್ ನನ್ನ ಕರೆಸ್ಕೊಂಡ್ರೋ ಅದೇನ್ ಕಥೆನೋ.. ಆದ್ರೆ, ಕೊಲೆ ಮಾಡಿರೋದಂತೂ ಕಣ್ಣೆದುರಿಗರೋ ಸತ್ಯ. ಅಂದ ಹಾಗೆ.. ಅವೊತ್ತು ವಿಜಯ್ ಕುಮಾರನನ್ನ ಮಂಚಕ್ಕೆ ಆಹ್ವಾನಿಸಿದ್ದು .. ಕೋಮಲಾಂಗಿಯೊಬ್ಬಳು ಮಾಡಿದ್ದ ಮೆಸೇಜ್.

LEAVE A REPLY

Please enter your comment!
Please enter your name here