Home District ಮೈಸೂರಿನಲ್ಲಿ ನೋಟಿನಿಂದ ಬಾಲ ತ್ರಿಪುರ ಸುಂದರಿಗೆ ಅಲಂಕಾರ..! ದೇವರ ಅಲಂಕಾರಕ್ಕೆ ಏಳು ಮುಕ್ಕಾಲು ಲಕ್ಷ ಗರಿಗರಿ...

ಮೈಸೂರಿನಲ್ಲಿ ನೋಟಿನಿಂದ ಬಾಲ ತ್ರಿಪುರ ಸುಂದರಿಗೆ ಅಲಂಕಾರ..! ದೇವರ ಅಲಂಕಾರಕ್ಕೆ ಏಳು ಮುಕ್ಕಾಲು ಲಕ್ಷ ಗರಿಗರಿ ನೋಟು ಬಳಕೆ..!

393
0
SHARE

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದ್ದು, ವಿವಿಧ ದೇವಾಲಯಗಳಲ್ಲಿ ಧನಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಅಮೃತೇಶ್ವರ ದೇವಸ್ಥಾನದ ಬಾಲ ತ್ರಿಪುರ ಸುಂದರಿ ದೇವಿಯನ್ನು ಗರಿಗರಿ ನೋಟುಗಳಿಂದ ಅಲಂಕಾರ ಮಾಡಲಾಗಿದ್ದು, ದೇವಾಲಯ ಗಮನ ಸೆಳೆಯುತ್ತಿದೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಲಿಪಾಡ್ಯಮಿ ಮುನ್ನ ದಿನವಾದ ಇಂದು ಧನಲಕ್ಷ್ಮಿ ಹಬ್ಬವನ್ನು ಮೈಸೂರಿನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನದ ಬಾಲ ತ್ರಿಪುರ ಸುಂದರಿ ದೇವಿಯನ್ನು ಗರಿಗರಿ ನೋಟುಗಳಿಂದ ಅಲಂಕಾರ ಮಾಡಲಾಗಿದೆ.

ಒಂದು ರೂಪಾಯಿ ಯಿಂದ ಹಿಡಿದ ಎರಡು ಸಾವಿರ ರೂಗಳ ಒಟ್ಟು ಏಳು ಲಕ್ಷದ ಎಪ್ಪತೈದಯ ಸಾವಿರ ರೂಗಳ ನೋಟುಗಳನ್ನು ಅಲಂಕಾರಕ್ಕೆ ಬಳಸಲಾಗಿದೆ.ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಧನಲಕ್ಷ್ಮಿ ಹಬ್ಬದಂದು ಈ ರೀತಿ ನೋಟುಗಳಿಂದ ಅಲಂಕಾರ ಮಾಡಲಾಗುತ್ತಿದೆ. ನೋಟುಗಳನ್ನು ಭಕ್ತರೇ ನೀಡುತ್ತಾರೆ.

ಇಂದು ದಿನಪೂರ್ತ ನೋಟಿನ ಅಲಂಕಾರ ಇರಲಿದ್ದು, ನಾಳೆ ಹಣವನ್ನು ಭಕ್ತರಿಗೆ ವಾಪಸ್ ನೀಡಲಾಗುತ್ತದೆ. ನೋಟುಗಳಿಂದ ಅಲಂಕಾರಗೊಂಡ ದೇವಿಯನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.ಧನಲಕ್ಷ್ಮಿಯನ್ನು ಆರಾಧಿಸಿದರೆ ಧನ ದಾನ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದ್ದು, ದೇವರನ್ನು ನೋಟಿನಿಂದಲೇ ಅಲಂಕರಿಸಿ ಕಣ್ತುಂಬಿಕೊಳ್ಳಲಾಗುತ್ತಿದೆ.

LEAVE A REPLY

Please enter your comment!
Please enter your name here