Home District ಮೈಸೂರಿನಲ್ಲಿ ಮತ್ತೆ ಶುರುವಾಯ್ತು ‘ರಾಮ’ಪ್ರೇಮಿಯ ಪ್ರೇಮಾಯಣ..!ಚುನಾವಣೆಗೂ ಮುನ್ನ ಬದುಕು ಕೊಡುತ್ತೇನೆ ಎಂದು ಭರವಸೆ ನೀಡಿದ್ರು ಎಂದು...

ಮೈಸೂರಿನಲ್ಲಿ ಮತ್ತೆ ಶುರುವಾಯ್ತು ‘ರಾಮ’ಪ್ರೇಮಿಯ ಪ್ರೇಮಾಯಣ..!ಚುನಾವಣೆಗೂ ಮುನ್ನ ಬದುಕು ಕೊಡುತ್ತೇನೆ ಎಂದು ಭರವಸೆ ನೀಡಿದ್ರು ಎಂದು ರಾಮ್‌ದಾಸ್ ಕಚೇರಿ ಬಳಿ ಕಾಣಿಸಿಕೊಂಡ ಪ್ರೇಮಕುಮಾರಿ.

2791
0
SHARE

ಇಷ್ಟು ದಿನ ಸೈಲೆಂಟಾಗಿದ್ದ ಪ್ರೇಮ ಕುಮಾರಿ ಇಂದು ಮತ್ತೆ ದಿಡೀರ್ ಪ್ರತ್ಯಕ್ಷರಾಗಿದ್ದಾರೆ. ಚುನಾವಣೆ ವೇಳೆ ನಾನೂ ರಾಮದಾಸ್ ವಿರುದ್ಧ ಚುನಾವಣೆಗೆ ನಿಲ್ತೀನಿ. ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೆ ಇಲ್ಲ ಅಂತೆಲ್ಲ ಹೇಳ್ತಿದ್ದ ಪ್ರೇಮಕುಮಾರಿ ನಾಪತ್ತೆಯಾಗಿದ್ರು. ಆದ್ರೆ, ಇದೀಗ ಮತ್ತೆ ಹೊಸ ಡ್ರಾಮಾದೊಂದಿಗೆ ವಾಪಸ್ ಕಾಣಿಸಿಕೊಂಡಿದ್ದಾರೆ.. ಆ ಡ್ರಾಮಾ ಕೇಳಿದ್ರೆ.? ನೀವೂ ಕೂಡ ಶಾಕ್ ಆಗ್ತೀರಾ..? ಅಷ್ಟಕ್ಕೂ ರಾಮ-ರಾಮ ಅಂತ ಡ್ರಾಮಾ ಮಾಡಿದ ಪ್ರೇಮಳ ಆ ಕಹಾನಿ ಒಮ್ಮೆ ಓದಿ…

ಕೆಲಸ ಮಾಡುವವಳು ಇವರ ಮನೆಗೆ ಹೋಗಲು ಅನುಮತಿ ಇದೆ. ಆದ್ರೆ ಅವರ ಜೊತೆ ಜೀವನ ನಡೆಸುವ ನನಗೆ ಮನೆಗೆ ಅವರ ಮನೆಗೆ ಹೋಗುವ ಅವಕಾಶ ಇಲ್ಲವಾ..? ಇವತ್ತಿದೆ ಅವ್ರಿಗೆ ಮಾರಿಹಬ್ಬ. ಅಬ್ಬಾಬ್ಬಾ ಒಂದೊಂದು ಮಾತು ಕೇಳ್ತಾ ಇದ್ರೆ ಅರೆ ಇದೆನಪ್ಪಾ.? ಪತ್ನಿ ಗಂಡನಿಗೆ ಬಯ್ಯೊ ರೀತಿ ಇದೆಯಲ್ಲ ಅನ್ಕೊಬೇಕು.

ಆದ್ರೆ, ಇದೆಲ್ಲವೂ ಹೇಳ್ತಾ ಇರೋದು ನಾನೂ ರಾಮದಾಸ್ರ ಪತ್ನಿ ಎಂದು ಸ್ವಯಂ ಘೋಷಿಸಿಕೊಂಡಿರುವ ಪ್ರೇಮಕುಮಾರಿ.ಚುನಾವಣೆ ವೇಳೆ ನಾನೂ ರಾಮದಾಸ್ ಎದರು ನಿಲ್ತೀನಿ. ಮಾಧ್ಯಮದವ್ರು ನನ್ನ ಸಹಾಯಕ್ಕೆ ಬರಬೇಕು. ನಾನ್ನೊಬ್ಬ ಅಬಲೆ ಹೆಣ್ಣು, ನನಗೆ ಯಾರು ಇಲ್ಲ ಅಂತೆಲ್ಲ ಡ್ರಾಮಾ ಮಾಡಿ ಪ್ರೇಮಕುಮಾರಿ ಎಲೆಕ್ಷನ್ ವೇಳೆ ನಾಪತ್ತೆಯಾಗಿದ್ರು.

ಇದೀಗ ದಿಢೀರ್ ಪ್ರತ್ಯಕ್ಷವಾಗಿದ್ದು ರಾಮ್‌ದಾಸ್‍‌ಗೋಸ್ಕರ ನಾನು ಸರ್ವಸ್ವವನ್ನೇ ಧಾರೆ ಎರೆದಿದ್ದೇನೆ. ಚುನಾವಣೆಗೂ ಮುನ್ನ ನಿನಗೆ ಬದುಕು ಕೊಡುತ್ತೇನೆಂದು ಭರವಸೆ ನೀಡಿದ್ರು. ಹೀಗಾಗಿ ನಾನು ಚುನಾವಣಾ ಕಣದಿಂದ ಹಿಂದೆ ಸರಿಸಿದ್ದೆ. ಆದ್ರೆ ಈಗ ಚುನಾವಣೆ ಬಳಿಕ ನನ್ನನ್ನು ರಾಮ್‌ದಾಸ್ ದೂರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ರಾಮ್‌ದಾಸ್‌ ಜೊತೆಗೆ ಜೀವನ ಮಾಡಬೇಕು ಎಂದು ಕೂಡ ಹೇಳಿದ್ದಾರೆ.ಇನ್ನೂ ಮನೆ ಬಳಿ ಬೆಳಗ್ಗಿನಿಂದಲೂ ಕಾಯುತ್ತಿದ್ದ ಪ್ರೇಮಕುಮಾರಿಗೆ ಸಿಕ್ಕಿದ್ದು ಬೀಗ ಹಾಕಿದ್ದ ಖಾಲಿ ಮನೆ. ಈ ವೇಳೆ ಮನೆಯಲ್ಲಿ ಅವ್ರು ಇಲ್ಲ. ನಾನೂ ಬರುವುದು ಗೊತ್ತಾಗೆ ಅವ್ರು ನಾಪತ್ತೆಯಾಗಿದ್ದಾರೆಂದು ಗೊಣಗಾಡಬೇಕಾದರೆ ವಿದ್ಯಾರಣ್ಯಪುರಂ ಪೊಲೀಸ್ರು ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಈ ವೇಳೆ ಸೈಲೆಂಟ್ ಆಗಿ, ಗೊಣಗಾಡುತ್ತಲೇ ಅವ್ರಿಗೆ ಇದೆ, ನನ್ನ ಕೈಯಿಂದ ತಪ್ಪಿಸಿಕೊಳ್ಳಲು ಆಗೋದಿಲ್ಲ ಎನ್ನುತ್ತಲೇ ಬಂದ ದಾರಿಗೆ ಸುಂಕವಿಲ್ಲದಂತೆ ಕಾರು ಹತ್ತಿ ಹೋಗಿದ್ದಾರೆ.ಒಟ್ಟಾರೆ, ಪ್ರಕರಣ ಕೋರ್ಟ್‌ನಲ್ಲಿದ್ರು ಸಹ ಪ್ರೇಮಕುಮಾರಿ ದಿನಕ್ಕೊಂದು ಹೊಸ ಡ್ರಾಮಾ ಮಾಡುತ್ತಿದ್ದಾರೆ… ಇನ್ನು ಆದ್ಯಾವ್ಯಾವ ಡ್ರಾಮಗಳು ಕಾಣ ಸಿಗುತ್ತವೇ ಎಂಬುದನ್ನು ಆ ರಾಮನೇ ಬಲ್ಲ

LEAVE A REPLY

Please enter your comment!
Please enter your name here