Home District ಮೈಸೂರು ದಸರಾ ಮ್ಯಾರಥಾನ್‌ನಲ್ಲಿ ಮುಗ್ಗರಿಸಿ ಬಿದ್ದ G.T.ದೇವೇಗೌಡ..!! ಓಟದಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಿಂದ ಸಚಿವರ ರಕ್ಷಣೆ…

ಮೈಸೂರು ದಸರಾ ಮ್ಯಾರಥಾನ್‌ನಲ್ಲಿ ಮುಗ್ಗರಿಸಿ ಬಿದ್ದ G.T.ದೇವೇಗೌಡ..!! ಓಟದಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಿಂದ ಸಚಿವರ ರಕ್ಷಣೆ…

342
0
SHARE

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವ 5 ನೇ ದಿನಕ್ಕೆ ಕಾಲಿಟ್ಟಿದ್ದು , ಹಲವು ಕಾರ್ಯಕ್ರಮಗಳು ದಸರಾ ಸಂಭ್ರಮವನ್ನು ಇಮ್ನಡಿಗೊಳಿಸಿವೆ. ಬೆಳಿಗ್ಗೆ ಯೋಗ ಮಾಡಿ ಸೈ ಎನಿಸಿಕೊಂಡ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಹಾಫ್ ಮ್ಯಾರಥಾನ್ ನಲ್ಲಿ ಮುಗ್ಗರಿ ಬಿದ್ರು…

ಇನ್ನು ದಸರಾ ಅಂಗವಾಗಿ ಏರ್ಪಡಿಸಿದ್ದ ಹಾಫ್ ಮ್ಯಾರಥಾನ್ ಗೆ ಚಾಲನೆ ನೀಡುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ‌.ದೇವೇಗೌಡ ಮುಗ್ಗರಿಸಿ ಬಿದ್ದ ಪ್ರಸಂಗ ನಡೆಯಿತು. ಪಂಚೆ ಎತ್ತಿಕೊಂಡು ಯುವಕರು ನಾಚುವ ರೀತಿಯಲ್ಲಿ ಸಚಿವರ ಓಟ ಕ್ರೀಡಾ ಪಡುಗಳಿಗೆ ಹುಮ್ಮಸ್ಸು ನೀಡಿತ್ತು. ಆದರೆ, ಓಡುವ ಹುಮ್ಮಸ್ಸಿನಲ್ಲಿದ್ದ ಸಚಿವ ಜಿ.ಟಿ.ಡಿ ಸ್ಕಿಡ್ ಆಗಿ ಮುಗ್ಗರಿ ಬಿದ್ದರು. ತಕ್ಷಣ ಪಕ್ಕದಲ್ಲೇ ಇದ್ದ ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಮೇಲೆತ್ತಿ ಸಮಾಧಾನ ಪಡಿಸಿದ್ರು.

ಅದೃಷ್ಟವಶಾತ್ ಯಾವುದೇ ಪೆಟ್ಟು ಆಗದೆ. ಕೆಲವೇ ಗಳಿಗೆಯಲ್ಲಿ ಸಚಿವರು ಮತ್ತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬೆರಗು ಮೂಡಿಸಿದರು.ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾಕ್ಕೆ ಯೋಗೋತ್ಸವ ವಿಶೇಷ ಮೆರಗು ನೀಡಿದೆ. ಕಳೆದ ನಾಲ್ಕು ದಿನಗಳಿಂದ ಮನೆ ಮನೆ ಯೋಗ, ಯೋಗ ಚಾರಣ ನಡೆದ ಬೆನ್ನಲ್ಲೇ ಇಂದು ಅರಮನೆ ಅಂಗಳದಲ್ಲಿ ನಡೆದ ಯೋಗೋತ್ಸವ ವಿಶೇಷ ಮೆರಗು ನೀಡಿತು. ಮುಂಜಾನೆ ನಡೆದ ಈ ಕಾರ್ಯಕ್ರಮಕ್ಕೆ ಯೋಗ ಮಾಡುವ ಮೂಲಕ ಸಚಿವರಾದ ಜಿ.ಟಿ.ದೇವೇಗೌಡ, ಸಾರಾ ಮಹೇಶ್ ಚಾಲನೆ ನೀಡಿದರು.

ಮೈಸೂರಿನ ವಿವಿಧ ಯೋಗ ತರಬೇತಿ ಕೇಂದ್ರದ ಯೋಗ ಪಟಗಳು, ಅಂಧ ವಿದ್ಯಾರ್ಥಿಗಳು ಹಾಗೂ ವಿದೇಶಿಗರು ಯೋಗದಲ್ಲಿ ಪಾಲ್ಗೊಂಡು ಸೂರ್ಯ ನಮಸ್ಕಾರ, ವಕ್ರಾಸನ, ಬುಜಂಗಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಿ ಯೋಗ ಪರಂಪರೆಯನ್ನು ಪಸರಿಸಿದರು.ಇನ್ನೂ ಅರಮನೆ ಯಲ್ಲಿ ಖಾಸಗಿ ದರ್ಬಾರ ವೈಭವ ಕಳೆಗಟ್ಟಿತ್ತು, ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಪ್ರಧಾನ ಆಚರಣೆಯಾದ ಸರಸ್ವತಿ ಪೂಜೆಯನ್ನು ಬೆಳಗ್ಗೆ 10.15 ರಿಂದ 10.45ರವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದ್ರು.

ಪಂಜಿನ ಕವಾಯತು ನಡೆಯುವ ಬನ್ನಿಮಂಟಪ ಮೈದಾನದಲ್ಲಿ ನಡೆದ ಏರ್ ಶೋ ರೋಮಾಂಚನ ಉಂಟು ಮಾಡಿತು. ಯುದ್ದ ಹೆಲಿಕಾಪ್ಟರ್ ಗಳ ಹಾರಾಟ, ಧರೆಗಿಳಿದ ಯೋಧರ ಸಾಹಸ, 8 ಸಾವಿರ ಅಡಿ ಎತ್ತರದಿಂದ ಹಾರಿ ಬಂದ ಪ್ಯಾರಾಚೂಟ್ ಗಳು ಹಾಗೂ ಆಗಸದಲ್ಲಿ ಪ್ಯಾರಾಚೂಟ್ ನಲ್ಲಿ ಹಾರಾಡಿದ ರಾಷ್ಟ್ರಧ್ವಜ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.ಇನ್ನೂ ಜಂಬೂಸವಾರಿ ಮಾದರಿಯ ಸಾಂಸ್ಕೃತಿ ಮೆರವಣಿಗೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ರು.

ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೆರವಣಿಗೆಯಲ್ಲಿ ಸುಮಾರು 78 ಕಲಾತಂಡಗಳು , ಗಜಪಡೆ ಭಾಗಿಯಾಗಿದ್ವು. ಜೊತೆಗೆ ಸಾಕು ಪ್ರಾಣಿಗಳ ಪ್ರದರ್ಶನ, ಹಾಸ್ಯ ಲಾಸ್ಯ, ಲಲಿತಕಲೆ ಮತ್ತು ಕರಕುಶಲ ಪ್ರದರ್ಶನ, ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ದಸರಾ ಸಂಭ್ರಮವನ್ನು ಇಮ್ಮಡಿ ಗೊಳಿಸಿದೆ. ಅಲ್ಲದೆ ಟೌನ್‌ ಹಾಲ್ ನಲ್ಲಿ ನಡೆಯುವ 3D ಮ್ಯಾಫಿಂಗ್ ಈ ಬಾರಿಯ ದಸರಾಕ್ಕೆ ವಿಶೇಷ ಆಕರ್ಷಣೆಯಾಗಿದೆ.

LEAVE A REPLY

Please enter your comment!
Please enter your name here