Home Crime ಮೊದಲನೆಯವಳು ಬೇಡ, ಮೂರನೆಯವಳು ಬೇಕು | ಎರಡನೆಯವಳನ್ನ ಸಾಯಿಸಿಬಿಡೋನಾ ಡಾರ್ಲಿಂಗ್”..??? ಇವನಿಗೆ ಬೇಕು ಸೀನನ್‌ಗೆ ಒಂದು...

ಮೊದಲನೆಯವಳು ಬೇಡ, ಮೂರನೆಯವಳು ಬೇಕು | ಎರಡನೆಯವಳನ್ನ ಸಾಯಿಸಿಬಿಡೋನಾ ಡಾರ್ಲಿಂಗ್”..??? ಇವನಿಗೆ ಬೇಕು ಸೀನನ್‌ಗೆ ಒಂದು ಹೆಂಡ್ತಿ..!?

1454
0
SHARE

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ವಡ್ಡರಹಳ್ಳಿ ಜಾಕ್ವೆಲ್ ಬಳಿ ಸೆ.24 ರಂದು ಪತ್ತೆಯಾಗಿದ್ದ ಮಹಿಳೆಯೊಬ್ಬಳ ಸಾವಿನ ಪ್ರಕರಣರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊದಲ ಪತ್ನಿ ತ್ಯಜಿಸಿ ಎರಡನೇ ಮದುವೆಯಾಗಿದ್ದ ತುಮಕೂರು ಮೂಲದ ವ್ಯಕ್ತಿಯೊಬ್ಬ ನಂತರ 3ನೇ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕೆ 2ನೇ ಪತ್ನಿಯನ್ನು ಹೇಮಾವತಿ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕೆಲವರಿಗೆ ಸೀಜನ್ ಒಂದು ಎಂಬಂತೆ ಹೆಂಡತಿಯರನ್ನು ಬದಲಾಯಿಸುವ ಖಯಾಲಿ, ಹೊಸ ನೀರು ಬಂದ ಕೂಡ್ಲೆ ಹಳೇ ನೀರನ್ನು ಬಿಡುವ ರೀತಿಯಲ್ಲಿ ಹೊಸ ಹೆಣ್ಣಿನ ಸಂಗಕ್ಕೆ ಬಿದ್ದ ತಕ್ಷಣ ಹಳೇ ಹೆಂಡತಿಯನ್ನು ಬಿಟ್ಟು ಬಿಡುತ್ತಾನೆ, ಮತ್ತೆ ಹಳೇ ಹೆಂಡ್ತಿಯ ಸಹವಾಸಕ್ಕೆ ಹೋಗಲ್ಲ, ಆದ್ರೆ ಇಲ್ಲೊಬ್ಬ 3ನೇಯವಳಿಗಾಗಿ 2ನೇ ಹೆಂಡ್ತಿಯನ್ನೇ ಕೊಲೆ ಮಾಡಿದ್ದಾನೆ.

ಹೀಗೆ ತನಗೆ ಏನೂ ತಿಳಿಯದೇ ಹಾಗೆ ಫೋಟೋದಲ್ಲಿ ಪೋಸ್ ಕೊಟ್ಟಿರೋ ಈತನ ಹೆಸರು ಶಿವಣ್ಣ, ತುಮಕೂರು ಮೂಲದ ಶಿರಾ ಜಿಲ್ಲೆಯವನು, ಓದಿರೋದು ಕೇವಲ 10ನೇ ತರಗತಿ. ಆದ್ರೆ ಬೆಂಗಳೂರಿನ ಪ್ರತಿಷ್ಠಿತ ಟೊಯೋಟಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. 15 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಶಿವಣ್ಣ, ಮೊದಲ ಪತ್ನಿಗೆ ಇಬ್ಬರು ಮಕ್ಕಳನ್ನು ಕರುಣಿಸಿದ ನಂತರ, ಕೌಟುಂಬಿಕ ಕಲ ನೆಪವೊಡ್ಡಿ ಆಕೆಯಿಂದ ದೂರವಾಗಿದ್ದ.

ಮೊದಲ ಪತ್ನಿಯಿಂದ ದೂರವಾದ 5 ವರ್ಷಗಳ ನಂತರ ಚನ್ನರಾಯಪಟ್ಟಣ ತಾಲೂಕು ನಿಂಬೇಹಳ್ಳಿ ಗ್ರಾಮದ ಸುಮಾ ಎಂಬಾಕೆಯನ್ನು ಮದುವೆಯಾಗಿದ್ದ. ಶಿವಣ್ಣ ಪತ್ನಿ ತೊರೆದಿದ್ದರೆ, ಸುಮಾಳಿಗೆ ಗಂಡ ಸತ್ತು ಹೋಗಿದ್ದ. 2 ನೇ ಬಾರಿಗೆ ಮದುವೆಯಾದ ಇಬ್ಬರೂ ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸವಾಗಿದ್ದರು. ಆದ್ರೆ ಇಬ್ಬರೂ ಬೇರೆ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ, ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಯಿತು.

ಇದೇ ಕಾರಣಕ್ಕೆ ಇಬ್ಬರ ನಡುವೆ ಅನೇಕ ಸಲ ಜಗಳ ನಡೆದಿತ್ತು. ಸುಮಾಳನ್ನು ಸುಮ್ಮನೇ ಬಿಟ್ರೆ ತನಗೇ ಖೆಡ್ಡಾ ತೋಡುತ್ತಾಳೆ ಎಂದುಕೊಂಡ ಶಿವಣ್ಣ, ತನಗೆ ಅಕ್ರಮ ಸಂಬಂಧ ಇದ್ದ ಭಾರತಿ ಎಂಬಾಕೆಯೊಂದಿಗೆ ಸೇರಿ, 2ನೇ ಪತ್ನಿಯನ್ನು ಮುಗಿಸಲು ಸಂಚು ರೂಪಿಸಿ ಹತ್ಯೆ ಮಾಡಿದ್ದಾನೆ.ಪಕ್ಕಾ ಪ್ಲಾನ್ ಮಾಡಿ 2ನೇ ಹೆಂಡತಿಯ ಹತ್ಯೆ ಮಾಡಿ ಕೃತ್ಯ ಬಯಲಾಗುತ್ತಿದ್ದಂತೆಯೇ ಶಿವಣ್ಣ ಹಾಗೂ ಭಾರತಿ ಸುಲಭವಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಸುಮಾ ಅನೇಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಬುದ್ಧಿವಾದ ಹೇಳಿದ್ರೂ ಬದಲಾಗಿರಲಿಲ್ಲ. ಇದೇ ಕಾರಣಕ್ಕೆ ನಾನೇ ಆಕೆಯನ್ನು ಪ್ಲಾನ್ ಮಾಡಿ ಕೊಲೆ ಮಾಡಿದೆ. ಎಂದು ಆರೋಪಿ ಶಿವಣ್ಣ ತಪ್ಪೊಪ್ಪಿಕೊಂಡಿದ್ದಾನೆ. ಶಿವಣ್ಣಗೆ 3ನೇ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತು ಎಂದು ಪೊಲೀಸರೇ ಹೇಳುತ್ತಿದ್ರೂ, ಕೊಲೆ ಗಡುಕ ಮಾತ್ರ ನಾನು ಸಾಚಾ ಎಂದು ಮೊಂಡು ವಾದ ಮಾಡುತ್ತಿದ್ದಾನೆ.

ಕೈ ಹಿಡಿದ ಪತಿಯಿಂದಲೇ ಸುಮಾ ಪರಲೋಕ ಸೇರಿಕೊಂಡಿದ್ದಾಳೆ. ಮಾಡಿದ ತಪ್ಪಿಗೆ ಶಿವಣ್ಣ ಜೈಲು ಸೇರಿದ್ದಾನೆ. ಆದ್ರೆ ಪೋಷಕರ ಆಸರೆಯಲ್ಲಿ ಬೆಳೆದು ಬದುಕು ರೂಪಿಸಿ ಕೊಳ್ಳಬೇಕಿದ್ದ 8 ವರ್ಷದ ಮುಗ್ಧ ಬಾಲಕಿ ತಲ್ಲದಲ್ಲದ ತಪ್ಪಿಗೆ ಅನಾಥವಾಗಿರುವುದು ಮಾತ್ರ ದುರಂತ.

LEAVE A REPLY

Please enter your comment!
Please enter your name here