Home Crime ಮೊದಲನೆ ಲವರ್ ಬಿಟ್ಲು, ಎರಡನೇ ಲವರ್ ಜೊತೆ ಮದುವೆ ಆದ್ಲು..! ಹಳೆ ಲವರ್ ಕಾಟಕ್ಕೆ ಬೇಸತ್ತು...

ಮೊದಲನೆ ಲವರ್ ಬಿಟ್ಲು, ಎರಡನೇ ಲವರ್ ಜೊತೆ ಮದುವೆ ಆದ್ಲು..! ಹಳೆ ಲವರ್ ಕಾಟಕ್ಕೆ ಬೇಸತ್ತು ಯುವತಿ ನೇಣಿಗೆ ಶರಣಾದ್ಲು..!

1691
0
SHARE

ಕಾಲೇಜು ಲೈಫ್ ಅಂದ್ಮೇಲೆ ಯುವಕ ಯುವತಿಯರು ಸುತ್ತಾಡೋದೇನು ಹೊಸದಲ್ಲ. ಆದ್ರೆ ಮಂಜಿನ ನಗರಿಯ ಯುವತಿ ಲವರ್ ಜೊತೆ ಸುತ್ತಾಡಿ ಬಳಿಕ ಮತ್ತೊಂದು ಮದುವೆಯಾಗಿ ಈಗ ಜೀವವನ್ನೆ ಕಳೆದುಕೊಂಡಿದ್ದಾಳೆ. ಹೊಸ ಬದುಕು ಕಟ್ಟಿಕೊಳ್ತೇನೆ ಎಂದು ಸಂಸಾರ ಆರಂಭಿಸಿದ್ದ ಯುವತಿ ನೇಣಿಗೆ ಕೊರಳೊಡ್ಡಿದ್ದಾಳೆ. ಹಳೆ ಲವರ್ ಗೆ ಕೈ ಕೊಟ್ಟು ಹೊಸ ಲವರ್ ಜೊತೆ ಗುಟ್ಟಾಗಿ ಮದುವೆಯಾಗಿದ್ದೆ ಈಕೆಯ ಜೀವ ತೆಗೆದಿದೆ.

ಹೀಗೆ ಮುದ್ದು ಮುದ್ದಾಗಿ ಇರೋ ಈ ಹುಡುಗಿ ದಿವ್ಯಜ್ಯೋತಿ ಅಂತಾ, ಎಲ್ಲರಂತೆ ನಾನೂ ಕೂಡ ಪದವಿ ಓದಿ ಒಂದೊಳ್ಳೆ ಲೈಫ್ ನಡೆಸ್ತೇನೆ ಅಂತಾ ಇದ್ದವಳು ನೇಣಿಗೆ ಕೊರಳೊಡ್ಡಿ ಬದುಕು ಕಳೆದುಕೊಂಡಿದ್ದಾಳೆ. ಅಂದ ಹಾಗೆ ಈಕೆ ಆತ್ಮಹತ್ಯೆ ದಾರಿ ಹಿಡಿದಿದ್ದಾದ್ರೂ ಯಾಕೆ ಗೊತ್ತಾ..? ಅದು ಒಂದಲ್ಲಾ ಎರಡೆರಡು ಲವ್ ಮಾಡಿದ್ದೇ ಆಕೆ ಜೀವನ ಅಂತ್ಯವಾಗೋದಕ್ಕೆ ಕಾರಣವಾಗಿ ಹೋಗಿದೆ.ಹೌದು.. ಮಡಿಕೇರಿಯ ಡೈರಿ ಫಾರಂನ ನಿವಾಸಿ ಹರೀಶ್ ದಂಪತಿಯ ಒಬ್ಬಳೇ ಮುದ್ದಿನ ಮಗಳು ದಿವ್ಯಜ್ಯೋತಿ. ಕಳೆದ ಎರಡು ವರ್ಷಗಳ ಹಿಂದೆಯೇ ಪವನ್ ಎಂಬಾತನನ್ನ ಲವ್ ಮಾಡಿ ಆತನೊಂದಿಗೆ ಬೆಂಗಳೂರಿಗೆ ಹೋಗಿ ನೆಲಸಿದ್ದಳು. ಬಳಿಕ ಮನೆಯವರ ಒತ್ತಾಯಕ್ಕೆ ಮಣಿದು ವಾಪಾಸ್ ಮಡಿಕೇರಿಗೆ ಬಂದಿದ್ದಾಳೆ. ಹೀಗೆ ಬೆಂಗಳೂರಿನಿಂದ ವಾಪಸ್ ಆದ ಬಳಿಕ ಪವನ್ ಹಾಗೂ ದಿವ್ಯ ಜ್ಯೋತಿ ಲವ್ ಬ್ರೇಕ್ ಆಗಿದೆ.

ಇದೇ ವೇಳೆಗೆ ದಿವ್ಯ ಜ್ಯೋತಿ ಬಾಳಿನಲ್ಲಿ ಬ್ರಿಜೇಶ್ ಎಂಬಾತ ಎಂಟ್ರಿ ಕೊಟ್ಟಿದ್ದಾನೆ. ಬಳಿಕ ಬ್ರಿಜೇಶ್ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡ ದಿವ್ಯ ಜ್ಯೋತಿ ಗುಟ್ಟಾಗಿ ಮದುವೆಯಾಗಿದ್ದಾಳೆ. ಈ ವಿಷಯ ಹಳೆ ಲವರ್ ಪವನ್ ಗೆ ತಿಳಿದಿದೆ. ಇದರಿಂದ ಕೋಪಗೊಂಡ ಪವನ್ ಕಾಟ ಕೊಟ್ಟಿದ್ದಾನೆ. ಪವನ್ ಕಾಟಕ್ಕೆ ಬೆದರಿದ ದಿವ್ಯ ಜ್ಯೋತಿ ನೇಣಿಗೆ ಶರಣಾಗಿದ್ದಾಳೆ.ಮದುವೆಯಾದ್ರೆ ಹಳೆ ಪ್ರೇಮಿ ಪವನ್ ದೂರ ಆಗ್ತಾನೆ ಅಂತಾ ಅಂದುಕೊಂಡಿದ್ದ ದಿವ್ಯಜ್ಯೋತಿಗೆ ಆತನ ಟಾರ್ಚರ್ ಹೆಚ್ಚಾಗಿತ್ತು. ಪ್ರೇಯಸಿ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದ ಪವನ್, ನಿನ್ನನ್ನ ನೆಮ್ಮದಿಯಾಗಿ ಬದುಕೋಕೆ ಬಿಡೋದಿಲ್ಲಾ ಅಂತಾ ಧಮ್ಕಿ ಹಾಕಿದ್ನಂತೆ. ಪ್ರತಿನಿತ್ಯ ಕಾಲ್ ಮಾಡಿ, ಮೆಸೇಜ್ ಮಾಡಿ ಟಾರ್ಚರ್ ಮಾಡ್ತಿದ್ದನಂತೆ. ಇದ್ರಿಂದ ನೆಮ್ಮದಿ ಕಳೆದುಕೊಂಡ ದಿವ್ಯಜ್ಯೋತಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ.

ಒಟ್ಟಿನಲ್ಲಿ, ಓದಬೇಕಾದ ವಯಸ್ಸಿನಲ್ಲಿ ಸರಿಯಾಗಿ ಓದದೆ, ಲವ್ ಅಂತಾ ತಲೆಕೆಡಿಸಿಕೊಂಡು ತಾನೂ ಬದುಕದೆ, ಪೋಷಕರನ್ನು ನೆಮ್ಮದಿಯಾಗಿರಿಸದೆ ಈಕೆ ಸಾವಿನ ದಾರಿ ಹಿಡಿದಿದ್ದಾಳೆ. ಆದ್ರೆ ಮಗಳು ದೊಡ್ಡವಳಾಗಿ ಒಳ್ಳೆ ಬದುಕು ಕಟ್ಟಿಕೊಳ್ತಾಳೆ ಅನ್ನೊ ಕನಸು ಕಂಡಿದ್ದ ಈ ಪೋಷಕರ ಬಾಳಲ್ಲಿ ಶೂನ್ಯ ಆವರಿಸಿದೆ.

LEAVE A REPLY

Please enter your comment!
Please enter your name here