Home Crime ಮೊಬೈಲ್‌ನಲ್ಲಿ ಸೆಕ್ಸ್ ವಿಡಿಯೋ ತೋರಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿ ಗುಪ್ತಾಂಗ ಸುಟ್ಟ ಪಾಪಿ...

ಮೊಬೈಲ್‌ನಲ್ಲಿ ಸೆಕ್ಸ್ ವಿಡಿಯೋ ತೋರಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿ ಗುಪ್ತಾಂಗ ಸುಟ್ಟ ಪಾಪಿ ಪತಿ..!?

49011
0
SHARE

ಸಪ್ತಪದಿ ತುಳಿದ ಹೆಂಡತಿಯನ್ನೇ ಪ್ರಾಣಿಯಂತೆ ಹಿಂಸಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಚಿತ್ರ ಹಿಂಸೆ ಕೊಟ್ಟಿದ್ದಾನೆ ಇಲ್ಲೊಬ್ಬ ಪಾಪಿ ಪತಿರಾಯ. ಹೌದು, ತನ್ನ ಹೆಂಡತಿಗೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳ ವಿಡಿಯೋ ತುಣುಕುಗಳನ್ನು ತೋರಿಸಿ ಬಲವಂತವಾಗಿ ಅದು ಅಸ್ವಾಭಾವಿಕ ಲೈಗಿಂಕ ಕ್ರಿಯೆಗೆ ಯತ್ನಿಸಿದ್ದಾನೆ.

ತನ್ನ ಪತಿ ಕ್ರೂರತ್ವವನ್ನು ನೋಡಿದ ಪತ್ನಿ ಇದಕ್ಕೆ ನಿರಾಕರಿಸಿದ್ದಾಳೆ. ಆದರೂ ಬಲವಂತದಿಂದ ಅವಳ ಮೇಲೆ ಕ್ರೂರಿಯಂತೆ ವರ್ತಿಸಿದ್ದಾನೆ. ಪ್ರತಿರೋಧವೊಡ್ಡಿದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಇವನ ಕ್ರೂರತ್ವ ಎಲ್ಲಿಯವರೆಗೂ ತಲುಪಿದೆ ಎಂದರೆ ಅಸಹಾಯಕ ಹೆಂಡತಿಯ ಗುಪ್ತಾಂಗಗಳಿಗೆ ಕಾದ ಚಾಕುವಿನಿಂದ ಸುಟ್ಟು ಹಾಕಿ ವಿಕೃತಿ ಮೆರೆದಿದ್ದಾನೆ ಕಿರಾತಕ ಪತಿ ಜಾವೇದ್.

ಈ ಘಟನೆ ಬೆಂಗಳೂರಿನ ಕೆ.ಆರ್.ಪುರ ಸಮೀಪದ ಮೇಡಹಳ್ಳಿಯಲ್ಲಿ ನಡೆದಿದೆ. ಆದರೆ ಹಲ್ಲೆಗೊಳಗಾದ ಹೆಣ್ಣು ಹತ್ತಿರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದಾಳೆ. ಆದರೆ ಆ ಪೊಲೀಸರೂ ಸಹ ಆ ಆರೋಪಿ ಪರವಾಗೆ ನಿಂತು ಕಂಪ್ಲೇಂಟ್ ತೆಗೆದುಕೊಳ್ಳಲು ನಕಾರ ಮಾಡಿದ್ದಾರೆ.

ಮಹಿಳೆ ಪರವಾಗಿ ಅವರ ಸೋದರ ದೂರು ನೀಡಲು ಹೋದಾಗ ಅವನ ಮೇಲೆ ದೂರು ದಾಖಲಿಸಿದ್ದಾರೆ. ನಂತರ ಶಿವಾಜಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ…

LEAVE A REPLY

Please enter your comment!
Please enter your name here